translationCore-Create-BCS_.../translate/grammar-connect-time-sequen.../01.md

11 KiB

ಸಮಯ ಸಂಬಂಧಗಳು

ಕೆಲವು ಸಂಪರ್ಕಿಸುವ ಪದಗಳು ಎರಡು ನುಡಿಗಟ್ಟುಗಳು, ಖಂಡಗಳು, ವಾಕ್ಯಗಳು ಅಥವಾ ಪಠ್ಯದ ತುಂಡುಗಳ ನಡುವೆ ಸಮಯ ಸಂಬಂಧಗಳನ್ನು ಸ್ಥಾಪಿಸುತ್ತವೆ.

ಅನುಕ್ರಮ ಖಂಡ

ವಿವರಣೆ

ಒಂದು ಘಟನೆ ಸಂಭವಿಸಿದ ನಂತರ ಮತ್ತೊಂದು ಘಟನೆ ಸಂಭವಿಸುತ್ತದೆ; ಅನುಕ್ರಮ ಖಂಡ ಈ ಎರಡೂ ಘಟನೆಗಳನ್ನು ಸಂಪರ್ಕಿಸುವ ಸಮಯ ಸಂಬಂಧವಾಗಿದೆ.

ಕಾರಣ ಇದು ಭಾಷಾಂತರ ಸಂಚಿಕೆ

ಭಾಷೆಗಳು ಘಟನೆಗಳ ಅನುಕ್ರಮಗಳನ್ನು ವಿಭಿನ್ನ ರೀತಿಯಲ್ಲಿ ಸೂಚಿಸುತ್ತವೆ; ಕೆಲವು ಆದೇಶ ಬಳಸುತ್ತವೆ, ಕೆಲವು ಸಂಪರ್ಕಿಸುವ ಪದಗಳನ್ನು ಬಳಸುತ್ತವೆ, ಕೆಲವು ಸಾಪೇಕ್ಷ ಕಾಲವನ್ನು ಸಹ ಬಳಸುತ್ತವೆ (ಸಾಪೇಕ್ಷ ಕಾಲ ಸನ್ನಿವೇಶದಲ್ಲಿ ಪರಿಗಣಿಸಲಾಗುತ್ತಿರುವ ಕ್ಷಣಕ್ಕೆ ಸಂಬಂಧಿಸಿದ ಸಮಯವನ್ನು ಉಲ್ಲೇಖಿಸುತ್ತದೆ.) ಅನುಕ್ರಮವನ್ನು ಸೂಚಿಸಬಹುದಾದ ಸಂಪರ್ಕಿಸುವ ಪದಗಳು ಯಾವುದೆಂದರೆ "ಅನಂತರ," "ನಂತರ," "ತದನಂತರ," "ಮೊದಲು," ಮತ್ತು "ಯಾವಾಗ." ಘಟನೆಗಳ ಕ್ರಮವನ್ನು ತಮ್ಮ ಭಾಷೆಯಲ್ಲಿ ಸ್ವಾಭಾವಿಕವಾದ ರೀತಿಯಲ್ಲಿ ಸಂವಹನ ಮಾಡುತ್ತಿದ್ದಾರೆ ಎಂದು ಅನುವಾದಕರು ಖಚಿತಪಡಿಸಿಕೊಳ್ಳಬೇಕು. ಇದಕ್ಕೆ ಮೂಲ ಭಾಷೆಗಳಿಗಿಂತ ಭಿನ್ನವಾಗಿ ಆದೇಶಿಸುವ ಖಂಡಗಳ ಅಗತ್ಯ ಬೀಳಬಹುದು.

OBS ಮತ್ತು ಸತ್ಯವೇದದಿಂದ ಉದಾಹರಣೆಗಳು

ಯಾವಾಗ ಯೋಸೇಫನು ತನ್ನ ಸಹೋದರರ ಬಳಿಗೆ ಬಂದನೋ, ಅವರು ಅವನನ್ನು ಅಪಹರಿಸಿ ಕೆಲವು ಗುಲಾಮ ವ್ಯಾಪಾರಿಗಳಿಗೆ ಮಾರಾಟ ಮಾಡಿದರು. (OBS Story 8 Frame 2)

ಮೊದಲು ಯೋಸೇಫನು ತನ್ನ ಸಹೋದರರ ಬಳಿಗೆ ಬಂದನು, ಮತ್ತು ನಂತರ ಅವರು ಅವನನ್ನು ಅಪಹರಿಸಿ ಮಾರಾಟ ಮಾಡಿದರು. "ಯಾವಾಗ" ಎಂಬ ಸಂಪರ್ಕ ಪದದಿಂದಾಗಿ ಇದು ನಮಗೆ ತಿಳಿದಿದೆ. ಈ ಅನುಕ್ರಮವನ್ನು ಸ್ಪಷ್ಟವಾಗಿ ಮತ್ತು ಸರಿಯಾಗಿ ಸಂವಹನ ಮಾಡಲು ಅನುವಾದಕನು ಉತ್ತಮ ಮಾರ್ಗವನ್ನು ನಿರ್ಧರಿಸಬೇಕಾಗಿದೆ.

ಅದು ನನ್ನ ಬಾಯಿಯಲ್ಲಿ ಜೇನುತುಪ್ಪದಷ್ಟು ಸಿಹಿಯಾಗಿತ್ತು, ಆದರೆ ನಂತರ ನಾನು ಅದನ್ನು ತಿಂದೆ, ನನ್ನ ಹೊಟ್ಟೆ ಕಹಿಯಾಯಿತು. (ಪ್ರಕಟನೆ 10:10b ULT)

ಮೊದಲನೆಯ ಕಲಮಿನ ಘಟನೆಯು ಮೊದಲು ಸಂಭವಿಸುತ್ತದೆ, ಮತ್ತು ಕೊನೆಯ ಕಲಮಿನ ಘಟನೆಯು ನಂತರ ಸಂಭವಿಸುತ್ತದೆ."*ನಂತರ ಎಂಬ ಸಂಪರ್ಕ ಪದದಿಂದಾಗಿ ನಮಗೆ ಇದು ತಿಳಿದಿದೆ. ಈ ಅನುಕ್ರಮವನ್ನು ಸ್ಪಷ್ಟವಾಗಿ ಮತ್ತು ಸರಿಯಾಗಿ ಸಂವಹನ ಮಾಡಲು ಅನುವಾದಕನು ಉತ್ತಮ ಮಾರ್ಗವನ್ನು ನಿರ್ಧರಿಸಬೇಕಾಗಿದೆ.

ಆ ಮಗುವು ಕೆಟ್ಟದ್ದು ಬೇಡ, ಒಳ್ಳೇದು ಬೇಕು ಅನ್ನುವಷ್ಟು ಬಲ್ಲವನಾಗುವ ಮೊದಲು, ಯಾವ ಇಬ್ಬರು ರಾಜರಿಗೆ ನೀನು ಹೆದರಿ ನಡುಗುತ್ತೀಯೋ ಅವರ ದೇಶವು ನಿರ್ಜನವಾಗುವುದು (ಯೆಶಾಯ 7:16 ULT)

ಮೊದಲನೆಯ ಕಲಮಿನ ಘಟನೆಯು ಎರಡನೆಯ ಕಲಮಿನ ಘಟನೆಯ ನಂತರ ಸಂಭವಿಸುತ್ತದೆ. ಮೊದಲು ಅವರು ಭಯಪಡುವ ಭೂಮಿ ನಿರ್ಜನವಾಗಿರುತ್ತದೆ, ಮತ್ತು ನಂತರ ಮಗುವಿಗೆ ಕೆಟ್ಟದ್ದನ್ನು ನಿರಾಕರಿಸಲು ಮತ್ತು ಒಳ್ಳೆಯದನ್ನು ಆಯ್ಕೆ ಮಾಡಲು ತಿಳಿಯುತ್ತದೆ. "ಮೊದಲು ಎಂಬ ಸಂಪರ್ಕ ಪದದಿಂದಾಗಿ ನಮಗೆ ಇದು ತಿಳಿದಿದೆ. ಆದಾಗ್ಯೂ, ನಿಮ್ಮ ಭಾಷೆಯಲ್ಲಿ ಈ ಕ್ರಮದಲ್ಲಿನ ಕಲಮುಗಳನ್ನು ಹೇಳುವುದು ಘಟನೆಗಳ ತಪ್ಪು ಕ್ರಮವನ್ನು ಸಂವಹನ ಮಾಡಬಹುದು. ಭಾಷಾಂತರಕಾರನು ಕ್ರಮವನ್ನು ಬದಲಾಯಿಸಬೇಕಾಗಬಹುದು, ಇದರಿಂದ ಕಲಮುಗಳು ಸಂಭವಿಸುವ ಕ್ರಮದಲ್ಲಿ ಬರುತ್ತವೆ, ಅಥವಾ ಓದುಗರಿಗೆ ಸ್ಪಷ್ಟವಾಗುವಂತೆ ಮೂಲ ಭಾಷಾ ಪಠ್ಯ ಮತ್ತು ಅನುಕ್ರಮದ ಕ್ರಮಾಂಕವನ್ನು ಗುರುತಿಸಿ ಹಾಗೆಯೇ ಇರಿಸಬಹುದು. ಈ ಅನುಕ್ರಮವನ್ನು ಸ್ಪಷ್ಟವಾಗಿ ಮತ್ತು ಸರಿಯಾಗಿ ಸಂವಹನ ಮಾಡಲು ನೀವು (ಅನುವಾದಕರು) ಉತ್ತಮ ಮಾರ್ಗವನ್ನು ನಿರ್ಧರಿಸಬೇಕು.

ಆ ಕಾಲದಲ್ಲಿ ಮರಿಯಳು ಎದ್ದು ಮಲೆನಾಡಿಗೆ ಹೊರಟು ಯೆಹೂದದಲ್ಲಿರುವ ಒಂದು ಊರಿಗೆ ಹೋದಳು, ಮತ್ತು ಅವಳು ಜಕರೀಯನ ಮನೆ ಪ್ರವೇಶಿಸಿದಳು ಮತ್ತು ಎಲಿಸಬೇತಳನ್ನು ವಂದಿಸಿದಳು. (ಲೂಕ 1:39-40 ULT)

ಇಲ್ಲಿ ಸಾಮಾನ್ಯ ಸಂಪರ್ಕಿಸುವ ಪದ "ಮತ್ತು" ನಾಲ್ಕು ಘಟನೆಗಳನ್ನು ಸಂಪರ್ಕಿಸುತ್ತದೆ. ಇವು ಅನುಕ್ರಮ ಘಟನೆಗಳು— ಪ್ರತಿಯೊಂದೂ ಅದರ ಹಿಂದಿನ ಘಟನೆಗಳ ನಂತರ ಸಂಭವಿಸುತ್ತದೆ. ಇದು ನಮಗೆ ಹೇಗೆ ತಿಳಿಯುತ್ತದೆಂದರೆ ಅದುವೇ ಈ ಘಟನೆಗಳು ಸಂಭವಿಸುವ ಏಕೈಕ ಮಾರ್ಗ. ಆದ್ದರಿಂದ ಇಂಗ್ಲಿಷ್ ನಲ್ಲಿ ಈ ರೀತಿಯ ಘಟನೆಗಳ ಅನುಕ್ರಮವನ್ನು ಸ್ಪಷ್ಟಪಡಿಸಲು ಸಾಮಾನ್ಯ ಸಂಪರ್ಕಿಸುವ ಪದ "ಮತ್ತು" ಸಾಕಾಗುತ್ತದೆ. ಈ ಅನುಕ್ರಮವನ್ನು ನಿಮ್ಮ ಭಾಷೆಯಲ್ಲಿ ಸ್ಪಷ್ಟವಾಗಿ ಮತ್ತು ಸರಿಯಾಗಿ ಇದು ಸಂವಹನ ಮಾಡುತ್ತದೆಯೇ ಎಂದು ನೀವು ನಿರ್ಧರಿಸಬೇಕಾಗುತ್ತದೆ.

ಅನುವಾದ ತಂತ್ರಗಳು

ಘಟನೆಗಳ ಅನುಕ್ರಮವು ನಿಮ್ಮ ಭಾಷೆಯಲ್ಲಿ ಸ್ಪಷ್ಟವಾಗಿದ್ದರೆ, ಅನುಕ್ರಮವನ್ನು ಹಾಗೆಯೇ ಅನುವಾದಿಸಿ.

  1. ಸಂಪರ್ಕ ಪದವು ಸ್ಪಷ್ಟವಾಗಿಲ್ಲದಿದ್ದರೆ, ಅನುಕ್ರಮವನ್ನು ಹೆಚ್ಚು ಸ್ಪಷ್ಟವಾಗಿ ಸಂವಹನ ಮಾಡುವ ಸಂಪರ್ಕ ಪದವನ್ನು ಬಳಸಿ.

(2) ಅನುಕ್ರಮವನ್ನು ಅಸ್ಪಷ್ಟಗೊಳಿಸುವ ಕ್ರಮದಲ್ಲಿ ಕಲಮುಗಳು ಇದ್ದರೆ, ಕಲಮುಗಳನ್ನು ಹೆಚ್ಚು ಸ್ಪಷ್ಟವಾದ ಕ್ರಮದಲ್ಲಿ ಇರಿಸಿ.

ಅನ್ವಯಿಸಲಾದ ಅನುವಾದ ತಂತ್ರಗಳ ಉದಾಹರಣೆಗಳು

(1) ಸಂಪರ್ಕ ಪದವು ಸ್ಪಷ್ಟವಾಗಿಲ್ಲದಿದ್ದರೆ, ಅನುಕ್ರಮವನ್ನು ಹೆಚ್ಚು ಸ್ಪಷ್ಟವಾಗಿ ಸಂವಹನ ಮಾಡುವ ಸಂಪರ್ಕ ಪದವನ್ನು ಬಳಸಿ.

ಆ ಕಾಲದಲ್ಲಿ ಮರಿಯಳು ಎದ್ದು ಮಲೆನಾಡಿಗೆ ಹೊರಟು ಯೆಹೂದದಲ್ಲಿರುವ ಒಂದು ಊರಿಗೆ ಹೋದಳು, ಮತ್ತು ಅವಳು ಜಕರೀಯನ ಮನೆ ಪ್ರವೇಶಿಸಿದಳು ಮತ್ತು ಎಲಿಸಬೇತಳನ್ನು ವಂದಿಸಿದಳು. (ಲೂಕ 1:39-40 ULT)

ಆ ಕಾಲದಲ್ಲಿ ಮರಿಯಳು ಎದ್ದು ಮಲೆನಾಡಿಗೆ ಹೊರಟು ಯೆಹೂದದಲ್ಲಿರುವ ಒಂದು ಊರಿಗೆ ಹೋದಳು, ನಂತರ ಅವಳು ಜಕರೀಯನ ಮನೆ ಪ್ರವೇಶಿಸಿದಳು ನಂತರ ಎಲಿಸಬೇತಳನ್ನು ವಂದಿಸಿದಳು. (ಲೂಕ 1:39-40 ULT)

ಆ ಮಗುವು ಕೆಟ್ಟದ್ದು ಬೇಡ, ಒಳ್ಳೇದು ಬೇಕು ಅನ್ನುವಷ್ಟು ಬಲ್ಲವನಾಗುವ ಮೊದಲು, ಯಾವ ಇಬ್ಬರು ರಾಜರಿಗೆ ನೀನು ಹೆದರಿ ನಡುಗುತ್ತೀಯೋ ಅವರ ದೇಶವು ನಿರ್ಜನವಾಗುವುದು (ಯೆಶಾಯ 7:16 ULT)

ಮಗುವಿಗೆ ಕೆಟ್ಟದ್ದು ಬೇಡ, ಒಳ್ಳೇದು ಬೇಕು ಅನ್ನುವಷ್ಟು ಬಲ್ಲವನಾಗುವ ಸಮಯ ಬರುತ್ತದೆ, ಆದರೆ ಆ ಸಮಯಕ್ಕೂ ಮೊದಲೇ ನೀವು ಹೆದರುವ ಇಬ್ಬರು ರಾಜರ ದೇಶವು ನಿರ್ಜನವಾಗಿರುತ್ತದೆ.

(2) ಅನುಕ್ರಮವನ್ನು ಅಸ್ಪಷ್ಟಗೊಳಿಸುವ ಕ್ರಮದಲ್ಲಿ ಕಲಮುಗಳು ಇದ್ದರೆ, ಕಲಮುಗಳನ್ನು ಹೆಚ್ಚು ಸ್ಪಷ್ಟವಾದ ಕ್ರಮದಲ್ಲಿ ಇರಿಸಿ.

ಆ ಮಗುವು ಕೆಟ್ಟದ್ದು ಬೇಡ, ಒಳ್ಳೇದು ಬೇಕು ಅನ್ನುವಷ್ಟು ಬಲ್ಲವನಾಗುವ ಮೊದಲುನೀವು ಹೆದರುವ ಇಬ್ಬರು ರಾಜರ ದೇಶವು ನಿರ್ಜನವಾಗುತ್ತದೆ.

ಘಟನೆಗಳ ಅನುಕ್ರಮಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ನೋಡಿ ಘಟನೆಗಳ ಅನುಕ್ರಮ.