translationCore-Create-BCS_.../translate/grammar-connect-time-backgr.../01.md

17 KiB

ಸಮಯದ ಸಂಬಂಧ

ಕೆಲವು ಜೋಡಣೆಗಳು ಎರಡು ಪದಗುಚ್ಛಗಳನ್ನು ಮದ್ಯದಲ್ಲಿ ಸಮಯ ಸಂಬಂಧಗಳನ್ನು ಸ್ಥಾಪಿಸುತ್ತವೆ, ಷರತ್ತುಗಳು, ವಾಕ್ಯಗಳು ಅಥವಾ ಪಠ್ಯದ ಭಾಗಗಳು.

ಷರತ್ತುಗಳ ಹಿನ್ನಲೆ

ವಿವರಣೆ

ನಡೆಯುತ್ತಿರುವ ಯಾವುದನ್ನಾದರೂ ಕುರಿತು ವಿವರಿಸುವದೆ ಹಿನ್ನೆಲೆ ಷರತ್ತು. ನಂತರ, ಅದೇ ವಾಕ್ಯದಲ್ಲಿ, ಮತ್ತೊಂದು ಷರತ್ತು ಆ ಸಮಯದಲ್ಲಿ ಸಂಭವಿಸಲು ಪ್ರಾರಂಭವಾಗುವ ಘಟನೆಯನ್ನು ಸೂಚಿಸುತ್ತದೆ. ಈ ಘಟನೆಗಳು ಏಕಕಾಲಿಕ ಘಟನೆಗಳಾಗಿವೆ, ಆದರೆ ಅವುಗಳು ಹಿನ್ನೆಲೆ ಘಟನೆ ಮತ್ತು ಮುಖ್ಯ ಘಟನೆಯ ಹೆಚ್ಚಿನ ಸಂಬಂಧವನ್ನು ಹೊಂದಿವೆ ಏಕೆಂದರೆ ಈಗಾಗಲೇ ನಡೆಯುತ್ತಿರುವ ಘಟನೆಗಳು ಇತರ ಘಟನೆಯ ಹಿನ್ನೆಲೆಯಾಗಿ ಕಾರ್ಯನಿರ್ವಹಿಸುತ್ತದೆ, ಇದು ಕೇಂದ್ರೀಕೃತವಾಗಿದೆ. ಹಿನ್ನೆಲೆ ಘಟನೆಗಳು ಮುಖ್ಯ ಘಟನೆ ಅಥವಾ ಘಟನೆಗಳಿಗೆ ಸಮಯದ ಚೌಕಟ್ಟು ಅಥವಾ ಇತರ ಸಂದರ್ಭವನ್ನು ಒದಗಿಸುತ್ತದೆ.

ಕಾರಣ ಇದೊಂದು ಅನುವಾದ ಸಮಸ್ಯೆ

ಭಾಷೆಗಳು ಸಮಯದ ಬದಲಾವಣೆಯನ್ನು ವಿಭಿನ್ನ ರೀತಿಯಲ್ಲಿ ಸೂಚಿಸುತ್ತವೆ. ನಿಮ್ಮ ಸ್ವಂತ ಭಾಷೆಯಲ್ಲಿ ಸ್ಪಷ್ಟವಾಗಿ ಸಂವಹನ ನಡೆಸಲು ಈ ಬದಲಾವಣೆಗಳನ್ನು ಮೂಲ ಭಾಷೆಗಳಲ್ಲಿ ಹೇಗೆ ಸೂಚಿಸಲಾಗುತ್ತದೆ ಎಂಬುದನ್ನು ನೀವು (ಅನುವಾದಕ) ಅರ್ಥಮಾಡಿಕೊಳ್ಳಬೇಕು. ಹಿನ್ನೆಲೆ ಷರತ್ತುಗಳು ಹೆಚ್ಚಾಗಿ ಕೇಂದ್ರೀಕೃತವಾಗಿರುವ ಘಟನೆಗೆ ಬಹಳ ಹಿಂದೆಯೇ ಪ್ರಾರಂಭವಾದ ಸಮಯವನ್ನು ಸೂಚಿಸುತ್ತವೆ. ಮೂಲ ಭಾಷೆ ಮತ್ತು ಉದ್ದೇಶಿತ ಭಾಷೆ ಎರಡೂ ಹಿನ್ನೆಲೆ ಘಟನೆಗಳನ್ನು ಹೇಗೆ ಸಂವಹನ ಮಾಡುತ್ತವೆ ಎಂಬುದನ್ನು ಅನುವಾದಕರು ಅರ್ಥಮಾಡಿಕೊಳ್ಳಬೇಕು. ಹಿನ್ನೆಲೆ ಘಟನೆಗಳನ್ನು ಸೂಚಿಸುವ ಕೆಲವು ಇಂಗ್ಲಿಷ್ ಪದಗಳು “ಈಗ,” “ಯಾವಾಗ,” “ಇರುವಾಗ,” ಮತ್ತು “ಸಮಯದಲ್ಲಿ”. ಆ ಪದಗಳು ಏಕಕಾಲಿಕ ಘಟನೆಗಳನ್ನು ಸಹ ಸೂಚಿಸಬಹುದು. ವ್ಯತ್ಯಾಸವನ್ನು ಹೇಳಲು, ಎಲ್ಲಾ ಘಟನೆಗಳು ಪ್ರಾಮುಖ್ಯತೆಗೆ ಸಮಾನವೆಂದು ತೋರುತ್ತದೆಯೇ ಮತ್ತು ಅದೇ ಸಮಯದಲ್ಲಿ ಪ್ರಾರಂಭವಾಗಿದೆಯೇ ಎಂದು ನಿಮ್ಮನ್ನು ಕೇಳಿಕೊಳ್ಳಿ. ಹಾಗಿದ್ದಲ್ಲಿ, ಅವು ಬಹುಶಃ ಏಕಕಾಲಿಕ ಘಟನೆಗಳು. ಆದರೆ ಘಟನೆ (ಗಳು) ನಡೆಯುತ್ತಿದ್ದರೆ ಮತ್ತು ಮತ್ತೊಂದು ಘಟನೆ (ಗಳು) ಇದೀಗ ಪ್ರಾರಂಭವಾಗಿದ್ದರೆ, ನಡೆಯುತ್ತಿರುವ ಘಟನೆ (ಗಳು) ಬಹುಶಃ ಇತರ ಘಟನೆ (ಗಳ)ಗೆ ಹಿನ್ನೆಲೆಯಾಗಿರಬಹುದು. ಹಿನ್ನೆಲೆ ಘಟನೆಗಳನ್ನು ಸೂಚಿಸುವ ಕೆಲವು ಸಾಮಾನ್ಯ ನುಡಿಗಟ್ಟುಗಳು “ಆ ದಿನಗಳಲ್ಲಿ” ಮತ್ತು “ಆ ಸಮಯದಲ್ಲಿ”.

ಒಬಿಎಸ್ ಮತ್ತು ಸತ್ಯವೇದದಿಂದ ಉದಾಹರಣೆಗಳು

ಯಾವಾಗಸೊಲೊಮೋನನು ವೃದ್ಧನಾದನು, ಅವನು ಸಹ ಅವರ ದೇವರುಗಳನ್ನೂ ಆರಾಧಿಸಿದನು. (ಒಬಿಎಸ್ ಕಥೆ18 ಚೌಕಟ್ಟು 3)

ಸೊಲೊಮೋನನು ವೃದ್ಧನಾದ ಸಮಯದಲ್ಲಿ ಅನ್ಯ ದೇವರುಗಳನ್ನು ಪೂಜಿಸಲು ಪ್ರಾರಂಭಿಸಿದನು. ವಯಸ್ಸಾಗಿರುವುದು ಹಿನ್ನೆಲೆ ಘಟನೆ. ಅನ್ಯ ದೇವರುಗಳನ್ನು ಪೂಜಿಸುವುದು ಮುಖ್ಯ ಘಟನೆ.

ಮತ್ತು ಅವನ ಹೆತ್ತವರು ಪ್ರತಿವರ್ಷ ಯೆರೂಸಲೇಮಿಗೆ ಪಸ್ಕ ಹಬ್ಬಕ್ಕೆ ಹೋಗುತ್ತಿದ್ದರು. ಮತ್ತು ಅವನಿಗೆ 12 ವರ್ಷ ವಯಸ್ಸಾಗಿದ್ದಾಗ, ಅವರು ಹಬ್ಬದ ಪದ್ಧತಿಯ ಪ್ರಕಾರ ಮೇಲಕ್ಕೆ ಹೋದರು. (ಲೂಕ 2:41-42 ಯು ಎಲ್ ಟಿ)

ಮೊದಲಣೆಯ ಘಟನೆ___ಯೆರೂಸಲೇಮಿಗೆ ಹೋಗುವುದು___ನಡೆಯುತ್ತಿರುವ ಮತ್ತು ಬಹಳ ಹಿಂದೆಯೇ ಪ್ರಾರಂಭವಾಗಿರುವ. “ಪ್ರತಿವರ್ಷ” ಎಂಬ ಪದಗಳಿಂದಾಗಿ ನಮಗೆ ಇದು ತಿಳಿದಿದೆ. ಯೆರೂಸಲೇಮಿಗೆ ಹೋಗುವುದು ಹಿನ್ನೆಲೆ ಘಟನೆ. ನಂತರ "ಅವನು ಹನ್ನೆರಡು ವರ್ಷದವನಾಗಿದ್ದಾಗ" ಪ್ರಾರಂಭವಾದ ಒಂದು ಘಟನೆ ಪ್ರಾರಂಭವಾಗುತ್ತದೆ. ಆದ್ದರಿಂದ ಮುಖ್ಯ ಘಟನೆಯೆಂದರೆ ಯೇಸು ಮತ್ತು ಅವನ ಕುಟುಂಬವು ಪಸ್ಕ ಹಬ್ಬಕ್ಕಾಗಿ ಯೆರೂಸಲೇಮಿಗೆಪ್ರಯಾಣಿಸಿದ ನಿರ್ದಿಷ್ಟ ಸಮಯ ಅವನಿಗೆ ಹನ್ನೆರಡು ವರ್ಷದವನಿದ್ದಾಗ.

ಮತ್ತು ಅದು ಬಂದಿತು, ಹಾಗೆಯೇ ಅವರು ಅಲ್ಲಿದ್ದಾಗ, ಆಕೆಗೆ ಜನ್ಮ ನೀಡುವ ದಿನಗಳು ತುಂಬಿದವು. (ಲೂಕ 2:6 ಯು ಎಲ್ ಟಿ)

ಬೇತ್ಲೆಹೇಮಿನಲ್ಲಿರುವುದು ಹಿನ್ನೆಲೆ ಘಟನೆ. ಮಗುವಿನ ಜನನವು ಮುಖ್ಯ ಘಟನೆಯಾಗಿದೆ.

ಮತ್ತು ತಿಬೇರಿಯಸ್ ಸೀಸರನ ಆಳ್ವಿಕೆಯ ಹದಿನೈದನೇ ವರ್ಷದಲ್ಲಿ —ಹಾಗೆಯೇ ಪೊಂತ್ಯ ಪಿಲಾತನು ಯೆಹೂದದ ಅಧಿಪತಿಯು ಆಗಿದ್ದನು, ಮತ್ತು ಹೆರೋದನು ಗಲಿಲಾಯದ ಉಪರಾಜನೂ ಆಗಿದ್ದನು, ಮತ್ತು ಅವನ ಸಹೋದರ ಫಿಲಿಪ್ಪನು ಇತುರಾಯ ಮತ್ತು ತ್ರಕೋನೀತಿ ಪ್ರದೇಶದ ಉಪರಾಜನಾಗಿದ್ದನು, ಮತ್ತು ಲುಸನ್ಯನು ಅಬಿಲೇನೆಗೆ ಉಪರಾಜರೂ ಆಗಿರುವಲ್ಲಿ ಅನ್ನನೂ ಕಾಯಫನು ಮಹಾಯಾಜಕರು—ಆಗಿರುವ ಸಮಯದಲ್ಲಿ ದೇವರ ವಾಕ್ಯವು ಜಕರ್ಯನ ಮಗನಾದ ಯೋಹಾನನಿಗೆ ಅಡವಿಯಲ್ಲಿ ಬಂದಿತು. (ಲೂಕ 3:1-2 ಯು ಎಲ್ ಟಿ)

ಈ ಉದಾಹರಣೆಯು ಐದು ಹಿನ್ನೆಲೆ ಷರತ್ತುಗಳೊಂದಿಗೆ ಪ್ರಾರಂಭವಾಗುತ್ತದೆ (ಅಲ್ಪವಿರಾಮದಿಂದ ಗುರುತಿಸಲಾಗಿದೆ), ಇದನ್ನು “ಹಾಗೆಯೇ” ಮತ್ತು “ಸಮಯದಲ್ಲಿ” ಪದಗಳಿಂದ ಹಿನ್ನೆಲೆ ಎಂದು ಸಂಕೇತಿಸುತ್ತದೆ. ನಂತರ ಮುಖ್ಯ ಘಟನೆ ನಡೆಯುತ್ತದೆ: “ದೇವರ ವಾಕ್ಯವು ಯೋಹಾನನಿಗೆ ಬಂದಿತು.”

ಅನುವಾದ ತಂತ್ರಗಳು

ಹಿನ್ನೆಲೆ ಷರತ್ತುಗಳನ್ನು ಗುರುತಿಸಿದ ವಿಧಾನವು ನಿಮ್ಮ ಭಾಷೆಯಲ್ಲಿಯೂ ಸ್ಪಷ್ಟವಾಗಿದ್ದರೆ, ಹಿನ್ನೆಲೆ ಷರತ್ತುಗಳನ್ನು ಅವು ಇದ್ದಂತೆ ಭಾಷಾಂತರಿಸಿ.

(1) ಸಂಪರ್ಕಿಸುವ ಪದವು ಹಿನ್ನೆಲೆ ಷರತ್ತು ಎಂದು ಸ್ಪಷ್ಟಪಡಿಸದಿದ್ದರೆ, ಇದನ್ನು ಹೆಚ್ಚು ಸ್ಪಷ್ಟವಾಗಿ ಜೋಡಣೆ ಮಾಡುವ ಸಂಪರ್ಕಿಸುವ ಪದವನ್ನು ಬಳಸಿ.

(2) ಸಂಪರ್ಕಿಸುವ ಪದಗಳನ್ನು ಬಳಸುವುದಕ್ಕಿಂತ (ವಿಭಿನ್ನ ಕ್ರಿಯಾಪದ ರೂಪಗಳನ್ನು ಬಳಸುವುದರ ಮೂಲಕ) ನಿಮ್ಮ ಭಾಷೆ ಹಿನ್ನೆಲೆ ಷರತ್ತುಗಳನ್ನು ಬೇರೆ ರೀತಿಯಲ್ಲಿ ಗುರುತಿಸಿದರೆ, ಆ ರೀತಿಯಲ್ಲಿ ಬಳಸಿ.

ಅನುವಾದ ತಂತ್ರಗಳ ಉದಾಹರಣೆಗಳನ್ನು ಅನ್ವಯಿಸಲಾಗಿದೆ

ಮತ್ತು ತಿಬೇರಿಯಸ್ ಸೀಸರನ ಆಳ್ವಿಕೆಯ ಹದಿನೈದನೇ ವರ್ಷದಲ್ಲಿ —ಹಾಗೆಯೇ ಪೊಂತ್ಯ ಪಿಲಾತನು ಯೆಹೂದದ ಅಧಿಪತಿಯು ಆಗಿದ್ದನು, ಮತ್ತು ಹೆರೋದನು ಗಲಿಲಾಯದ ಉಪರಾಜನೂ ಆಗಿದ್ದನು, ಮತ್ತು ಅವನ ಸಹೋದರ ಫಿಲಿಪ್ಪನು ಇತುರಾಯ ಮತ್ತು ತ್ರಕೋನೀತಿ ಪ್ರದೇಶದ ಉಪರಾಜನಾಗಿದ್ದನು, ಮತ್ತು ಲುಸನ್ಯನು ಅಬಿಲೇನೆಗೆ ಉಪರಾಜರೂ ಆಗಿರುವಲ್ಲಿ ಅನ್ನನೂ ಕಾಯಫನು ಮಹಾಯಾಜಕರು—ಆಗಿರುವ ಸಮಯದಲ್ಲಿ ದೇವರ ವಾಕ್ಯವು ಜಕರ್ಯನ ಮಗನಾದ ಯೋಹಾನನಿಗೆ, ಅಡವಿಯಲ್ಲಿ ಬಂದಿತು. (ಲೂಕ 3:1-2 ಯು ಎಲ್ ಟಿ)

(1) ಸಂಪರ್ಕಿಸುವ ಪದವು ಹಿನ್ನೆಲೆ ಷರತ್ತು ಎಂದು ಸ್ಪಷ್ಟಪಡಿಸದಿದ್ದರೆ, ಇದನ್ನು ಹೆಚ್ಚು ಸ್ಪಷ್ಟವಾಗಿ ಸಂವಹನ ಮಾಡುವ ಸಂಪರ್ಕಿಸುವ ಪದವನ್ನು ಬಳಸಿ.

ಈ ಕಾರ್ಯವು ಸಂಭವಿಸಿದ ಕಾಲ ಯಾವುದೆಂದರೆ ಪೊಂತ್ಯ ಪಿಲಾತನು ಯೆಹೂದದ ಅಧಿಪತಿಯು ಆಗಿದ್ದನು, ಮತ್ತು ಆ ಕಾಲದಲ್ಲಿ ಹೆರೋದನು ಗಲಿಲಾಯದ ಉಪರಾಜನೂ ಆಗಿದ್ದನು, ಮತ್ತು ಆ ಕಾಲದಲ್ಲಿಅವನ ಸಹೋದರ ಫಿಲಿಪ್ಪನು ಇತುರಾಯ ಮತ್ತು ತ್ರಕೋನೀತಿ ಪ್ರದೇಶದ ಉಪರಾಜನಾಗಿದ್ದನು, ಮತ್ತು ಆ ಕಾಲದಲ್ಲಿ ಲುಸನ್ಯನು ಅಬಿಲೇನೆಗೆ ಉಪರಾಜರೂ ಆಗಿರುವಲ್ಲಿ, ಮತ್ತು ಆ ಕಾಲದಲ್ಲಿ ಅನ್ನನೂ ಕಾಯಫನು ಮಹಾಯಾಜಕರು ಆಗಿರುವಾಗ ಆ ಸಮಯದಲ್ಲಿ ದೇವರ ವಾಕ್ಯವು ಜಕರ್ಯನ ಮಗನಾದ ಯೋಹಾನನಿಗೆ ಅಡವಿಯಲ್ಲಿ ಬಂದಿತು.

(2) ವಿಭಿನ್ನ ಕ್ರಿಯಾಪದ ರೂಪಗಳೊಂದಿಗೆ ಸಂಪರ್ಕಿಸುವ ಪದಗಳನ್ನು ಬಳಸುವುದಕ್ಕಿಂತ ನಿಮ್ಮ ಭಾಷೆ ಹಿನ್ನೆಲೆ ಷರತ್ತುಗಳನ್ನು ಬೇರೆ ರೀತಿಯಲ್ಲಿ ಗುರುತಿಸಿದರೆ, ಆ ರೀತಿಯಲ್ಲಿ ಬಳಸಿ.

ಪೊಂತ್ಯ ಪಿಲಾತನು ಯೆಹೂದದ ಅಧಿಪತಿಯು ಆಗಿದ್ದನು ಮತ್ತು ಹೆರೋದನು ಗಲಿಲಾಯದ ಉಪರಾಜನೂ ಆಗಿದ್ದನು* ಮತ್ತು ಅವನ ಸಹೋದರ ಫಿಲಿಪ್ಪನು ಇತುರಾಯ ಮತ್ತು ತ್ರಕೋನೀತಿ ಪ್ರದೇಶದ ಉಪರಾಜನಾಗಿದ್ದನು ಲುಸನ್ಯನು ಅಬಿಲೇನೆಗೆ ಉಪರಾಜರೂ ಆಗಿರುವಲ್ಲಿ **ಮತ್ತು ಅನ್ನನೂ ಕಾಯಫನು ಮಹಾಯಾಜಕರು ಆಗಿರುವಾಗ ದೇವರ ವಾಕ್ಯವು ಜಕರ್ಯನ ಮಗನಾದ ಯೋಹಾನನಿಗೆ ಅಡವಿಯಲ್ಲಿ ಬಂದಿತು.

ಪದಗಳನ್ನು ಸಂಪರ್ಕಿಸುವ ಸಮಯ ಸಂಬಂಧದಲ್ಲಿನ ವ್ಯತ್ಯಾಸಗಳ ಉದಾಹರಣೆ:

                      |                                              |

| ------------------------ | -------------------------------------------- | ಹಿನ್ನೆಲೆ ಕ್ರಮಪಡಿದು | ಆ ದಿನಗಳಲ್ಲಿ ಯೆಹೋವನ ಮಾತು ವಿರಳವಾಗಿತ್ತು; | | ಹಿನ್ನೆಲೆ ಪುನರಾವರ್ತನೆ | ಅಲ್ಲಿ ಪುನಃಸ೦ಭವಿಸುವ ಪ್ರವಾದನ ದರ್ಶನ ಇರಲಿಲ್ಲ. | | ಮುಖ್ಯ ಘಟನೆಯ ಪರಿಚಯ | ಆ ಸಮಯದಲ್ಲಿ, ಯಾವಾಗ ಏಲಿ | | ಹಿನ್ನೆಲೆ | ಯಾವಾತನ ದೃಷ್ಟಿ ಮಂದವಾಗಲು ಪ್ರಾರಂಭಿಸಿತ್ತು, ಇದರಿಂದ ಅವನು ಚೆನ್ನಾಗಿ ಕಾಣಿಸಲಿಲ್ಲ,| | ಏಕಕಾಲಿಕ ಹಿನ್ನೆಲೆ | ತನ್ನ ಸ್ವಂತ ಹಾಸಿಗೆಯಲ್ಲಿ ಮಲಗಿದ್ದನು. | ಏಕಕಾಲಿಕ ಹಿನ್ನೆಲೆ | ದೇವರ ದೀಪ ಇನ್ನೂ ಹೋಗಲಿಲ್ಲ ಹೊರಗೆ, | | ಏಕಕಾಲಿಕ ಹಿನ್ನೆಲೆ | ಮತ್ತು ಸಮುವೇಲನು ಯೆಹೋವನ ದೇವಾಲಯದಲ್ಲಿ ನಿದ್ರಿಸಲು ಮಲಗಿದ್ದನು, | | ಏಕಕಾಲಿಕ ಹಿನ್ನೆಲೆ | ಇಲ್ಲಿ ದೇವರ ಮಂಜೂಷದ ಇತ್ತೋ ಅಲ್ಲಿಯೇ, | | ಮುಖ್ಯ ಘಟನೆ | ** ಯೆಹೋವನು ಸಮುವೇಲನನ್ನು ಕರೆದನು **, | | ಅನುಕ್ರಮ ಘಟನೆ | "ನಾನು ಇಲ್ಲಿದ್ದೇನೆ" ಎಂದು ಯಾರು ಹೇಳಿದರು. (1 ಸಮು 3: 1-4 ಯು ಎಲ್ ಟಿ) |

ಮೇಲಿನ ಉದಾಹರಣೆಯಲ್ಲಿ, ಮೊದಲ ಎರಡು ಸಾಲುಗಳು ದೀರ್ಘಕಾಲದವರೆಗೆ ನಡೆಯುತ್ತಿರುವ ಸ್ಥಿತಿಯ ಬಗ್ಗೆ ಮಾತನಾಡುತ್ತವೆ. ಇದು ಸಾಮಾನ್ಯ, ದೀರ್ಘಕಾಲೀಕ ಹಿನ್ನೆಲೆ. "ಆ ದಿನಗಳಲ್ಲಿ" ಎಂಬ ಪದಗುಚ್ಛದಿಂದ ನಾವು ಇದನ್ನು ತಿಳಿದಿದ್ದೇವೆ. ಮುಖ್ಯ ಘಟನೆಯ ಪರಿಚಯದ ನಂತರ (“ಆ ಸಮಯದಲ್ಲಿ,”), ಏಕಕಾಲಿಕ ಹಿನ್ನೆಲೆಯ ಹಲವಾರು ಸಾಲುಗಳಿವೆ. ಮೊದಲನೆಯದನ್ನು “ಯಾವಾಗ,” ಪರಿಚಯಿಸಲಾಗುತ್ತದೆ ಮತ್ತು ನಂತರ ಇನ್ನೂ ಮೂರು ಅನುಸರಿಸುತ್ತದೆ, ಕೊನೆಯದಾಗಿ “ಮತ್ತು” ಮೂಲಕ ಸಂಪರ್ಕಿಸಲಾಗಿದೆ. “ಎಲ್ಲಿ” ಪರಿಚಯಿಸಿದ ಹಿನ್ನೆಲೆ ಷರತ್ತು ಅದರ ಹಿಂದಿನ ಹಿನ್ನೆಲೆ ಷರತ್ತಿನ ಬಗ್ಗೆ ಸ್ವಲ್ಪ ಹೆಚ್ಚು ವಿವರಿಸುತ್ತದೆ. ನಂತರ ಮುಖ್ಯ ಘಟನೆ ನಡೆಯುತ್ತದೆ, ನಂತರ ಹೆಚ್ಚಿನ ಘಟನೆಗಳು ನಡೆಯುತ್ತವೆ. ಭಾಷಾಂತರಕಾರರು ತಮ್ಮ ಭಾಷೆಯಲ್ಲಿ ಈ ಸಂಬಂಧಗಳನ್ನು ತೋರಿಸಲು ಉತ್ತಮ ಮಾರ್ಗದ ಬಗ್ಗೆ ಯೋಚಿಸುವ ಅಗತ್ಯವಿದೆ.