translationCore-Create-BCS_.../translate/grammar-connect-condition-h.../01.md

11 KiB

ಷರತ್ತುಬದ್ಧ ಸಂಬಂಧಗಳು

ಷರತ್ತುಬದ್ಧ ಸಂಪರ್ಕ ಪದಗಳು ಎರಡು ಷರತ್ತುಗಳನ್ನು ಸಂಪರ್ಕಿಸುತ್ತದೆ ಮತ್ತು ಆ ಷರತ್ತುಗಳಲ್ಲಿ ಒಂದು ಸಂಭವಿಸಿದಾಗ ಮಾತ್ರ ಇನ್ನೊಂದು ಸಂಭವಿಸುವುದೆಂದು ಸೂಚಿಸುತ್ತದೆ. ಇಂಗ್ಲಿಷಿನಲ್ಲಿ, ಷರತ್ತುಬದ್ಧ ಷರತ್ತುಗಳನ್ನು ಸಂಪರ್ಕಿಸಲು ಅತ್ಯಂತ ಸಾಮಾನ್ಯ ಮಾರ್ಗವೆಂದರೆ ಈ ಪದಗಳ ಬಳಕೆ "if … then." ಆದಾಗ್ಯೂ, "then" ಎಂಬ ಪದವನ್ನು ಆಗಾಗ್ಗೆ ಹೇಳಲಾಗುವುದಿಲ್ಲ.

ಕಾಲ್ಪನಿಕ ಸ್ಥಿತಿ

ವಿವರಣೆ

ಕಾಲ್ಪನಿಕ ಸ್ಥಿತಿಯು ಎರಡನೇ ಘಟನೆ ("then" ಷರತ್ತು) ನಡೆದರೆ ಅಥವಾ ಯಾವುದಾದರೂ ರೀತಿಯಲ್ಲಿ ಪೂರೈಸಿದರೆ ಮಾತ್ರ ಮೊದಲ ಘಟನೆ ("if" ಷರತ್ತು) ನಡೆಯುವ ಒಂದು ಷರತ್ತಾಗಿದೆ. ಕೆಲವೊಮ್ಮೆ ಏನು ನಡೆಯುತ್ತದೆ ಎಂಬುದು ಇತರ ಜನರ ಕ್ರಿಯೆಗಳ ಮೇಲೆ ಅವಲಂಬಿತವಾಗಿರುತ್ತದೆ.

ಕಾರಣ ಇದು ಅನುವಾದ ಸಮಸ್ಯೆ

ಅನುವಾದಕರು ಏನನ್ನಾದರೂ ಕಾಲ್ಪನಿಕ ಸ್ಥಿತಿಯೇ ಅಥವಾ ಅಲ್ಲವೇ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ, ಇದರಿಂದ ಅವರು ಅದನ್ನು ಸರಿಯಾದ ರೀತಿಯಲ್ಲಿ ಅನುವಾದಿಸುತ್ತಾರೆ. ಉದಾಹರಣೆಗೆ, ಇಸ್ರಾಯೇಲಿಗೆ ದೇವರು ನೀಡಿದ ಕೆಲವು ವಾಗ್ದಾನಗಳು, ಇಸ್ರಾಯೇಲು ದೇವರಿಗೆ ವಿಧೇಯವಾಗಿದೆಯೇ ಅಥವಾ ಇಲ್ಲವೇ ಎಂಬುದರ ಆಧಾರದ ಮೇಲೆ ಷರತ್ತುಬದ್ಧವಾಗಿದ್ದವು. ಆದರೆ, ಇಸ್ರಾಯೇಲ್ಯನಿಗೆ ದೇವರು ನೀಡಿದ ಅನೇಕ ವಾಗ್ದಾನಗಳು ಷರತ್ತುಬದ್ಧವಾಗಿರಲಿಲ್ಲ; ಇಸ್ರಾಯೇಲ್ಯರು ಪಾಲಿಸಲಿ ಬಿಡಲಿ ದೇವರು ಈ ಭರವಸೆಗಳನ್ನು ಉಳಿಸಿಕೊಳ್ಳುತ್ತಾನೆ. ಈ ಎರಡು ರೀತಿಯ ಭರವಸೆಗಳ ನಡುವಿನ ವ್ಯತ್ಯಾಸವನ್ನು ನೀವು (ಅನುವಾದಕ) ತಿಳಿದುಕೊಳ್ಳುವುದು ಮತ್ತು ಪ್ರತಿಯೊಂದನ್ನೂ ನಿಮ್ಮ ಸ್ವಂತ ಭಾಷೆಯಲ್ಲಿ ನಿಖರವಾಗಿ ಸಂವಹನ ಮಾಡುವುದು ಮುಖ್ಯ. ಅಲ್ಲದೆ, ಕೆಲವೊಮ್ಮೆ ಷರತ್ತುಗಳನ್ನು ಅವು ಸಂಭವಿಸುವ ಕ್ರಮಕ್ಕಿಂತ ಭಿನ್ನವಾದ ಕ್ರಮದಲ್ಲಿ ಹೇಳಲಾಗುತ್ತದೆ. ಅನುವಾದಿಸುವ ಭಾಷೆ ಷರತ್ತುಗಳನ್ನು ಬೇರೆ ಕ್ರಮದಲ್ಲಿ ಹೇಳಿದರೆ, ಆಗ ನೀವು ಹೊಂದಾಣಿಕೆಯನ್ನು ಮಾಡಬೇಕಾಗುತ್ತದೆ.

OBS ಮತ್ತು ಸತ್ಯವೇದದಿಂದ ಉದಾಹರಣೆಗಳು

ದೇವರು ಜನರನ್ನು ಆಶೀರ್ವದಿಸುವುದಾಗಿ ಮತ್ತು ಅವರನ್ನು ರಕ್ಷಿಸುವುದಾಗಿ ಭರವಸೆ ನೀಡಿದರು, ಒಂದು ವೇಳೆ ಅವರು ನಿಯಮಗಳನ್ನು ಪಾಲಿಸಿದರೆ. ಆದರೆ, ಅವರು ಈ ನಿಯಮಗಳಿಗೆ ಒಂದು ವೇಳೆ ಅವಿಧೇಯರಾದರೆ ಅವರನ್ನು ಶಿಕ್ಷಿಸುವುದಾಗಿ ಹೇಳಿದರು (Story 13 Frame 7 OBS)

ಈ ಚೌಕಟ್ಟಿನಲ್ಲಿ ಎರಡು ಕಾಲ್ಪನಿಕ ಸ್ಥಿತಿಗಳಿವೆ. ಈ ಎರಡೂ ಷರತ್ತುಗಳಲ್ಲಿ, ಮೊದಲ ಘಟನೆ ("ಒಂದು ವೇಳೆ" ಷರತ್ತು) ಪೂರೈಸಿದ ನಂತರ "ಆಗ" ಷರತ್ತು ಅನ್ವಯವಾಗುವುದು. ಇದು ಅಸ್ವಾಭಾವಿಕ ಅಥವಾ ಗೊಂದಲಮಯವಾಗಿದ್ದರೆ, ಷರತ್ತುಗಳನ್ನು ಹೆಚ್ಚು ಸಾಧಾರಣ ಕ್ರಮದಲ್ಲಿ ಹೇಳಬಹುದು. ಮೊದಲನೆಯ ಕಾಲ್ಪನಿಕ ಸ್ಥಿತಿಯೆಂದರೆ: ಇಸ್ರಾಯೇಲ್ಯರು ದೇವರಿಗೆ ವಿಧೇಯರಾದರೆ, ಆಗ ದೇವರು ಅವರನ್ನು ಆಶೀರ್ವದಿಸುತ್ತಾನೆ ಮತ್ತು ರಕ್ಷಿಸುತ್ತಾನೆ. ಎರಡನೆಯ ಕಾಲ್ಪನಿಕ ಸ್ಥಿತಿ: ಇಸ್ರಾಯೇಲ್ಯರು ದೇವರಿಗೆ ಅವಿಧೇಯರಾದರೆ, ಆಗ ದೇವರು ಅವರನ್ನು ಶಿಕ್ಷಿಸುತ್ತಾನೆ.

ನೀವು ಸರಿಯಾದದ್ದನ್ನು ಮಾಡಿದರೆ, ನಿಮ್ಮನ್ನು ಸ್ವೀಕರಿಸಲಾಗುವುದಿಲ್ಲವೇ? (Genesis 4:7a ULT)

ಒಂದು ವೇಳೆ ಕಾಯಿನನು ಸರಿಯಾದದ್ದನ್ನು ಮಾಡಿದರೆ ಅವನು ಸ್ವೀಕರಿಸಲ್ಪಡುತ್ತಾನೆ. ಕಾಯಿನನನ್ನು ಒಪ್ಪಿಕೊಳ್ಳಲು ಇರುವ ಏಕೈಕ ಮಾರ್ಗವೆಂದರೆ ಅವನು ಸರಿಯಾದದ್ದನ್ನು ಮಾಡುವುದು.

ಒಂದು ವೇಳೆ ಈ ಯೋಜನೆಯು ಅಥವಾ ಈ ಕೆಲಸವು ಮನುಷ್ಯರಿಂದಾಗಿದ್ದರೆ, ತಾನೇ ಕೆಡುವದು; ಆದರೆ ಅದು ಒಂದು ವೇಳೆ ದೇವರಿಂದಾಗಿದ್ದರೆ, ಅದನ್ನು ಕೆಡಿಸುವದಕ್ಕೆ ನಿಮ್ಮಿಂದ ಆಗುವದಿಲ್ಲ. (Acts 5:38b-39aULT)

ಇಲ್ಲಿ ಎರಡು ಕಾಲ್ಪನಿಕ ಪರಿಸ್ಥಿತಿಗಳಿವೆ: (1) ಈ ಕೆಲಸವು ಮನುಷ್ಯರಿಂದಾಗಿದ್ದು ನಿಜವಾಗಿದ್ದರೆ, ತಾನೇ ಕೆಡುವದು; (2) ಅದು ದೇವರಿಂದಾಗಿದ್ದು ನಿಜವಾಗಿದ್ದರೆ, ಅದನ್ನು ಕೆಡಿಸುವದಕ್ಕೆ ಆಗುವದಿಲ್ಲ.

ಅನುವಾದದ ತಂತ್ರಗಳು

(1) ಷರತ್ತುಗಳ ಕ್ರಮವು ಕಾಲ್ಪನಿಕ ಸ್ಥಿತಿಯನ್ನು ಗೊಂದಲಮಯವಾಗಿಸಿದರೆ, ಷರತ್ತುಗಳ ಕ್ರಮವನ್ನು ಬದಲಾಯಿಸಿ.

(2) ಎರಡನೆಯ ಘಟನೆ ಎಲ್ಲಿದೆ ಎಂಬುದು ಸ್ಪಷ್ಟವಾಗಿಲ್ಲದಿದ್ದರೆ, ಆ ಭಾಗವನ್ನು "then/ಆಗ" ಎಂಬ ಪದದಿಂದ ಗುರುತಿಸಿ.

ಅನ್ವಯಿಸಲಾದ ಅನುವಾದ ತಂತ್ರಗಳ ಉದಾಹರಣೆಗಳು

(1) ಷರತ್ತುಗಳ ಕ್ರಮವು ಕಾಲ್ಪನಿಕ ಸ್ಥಿತಿಯನ್ನು ಗೊಂದಲಮಯವಾಗಿಸಿದರೆ, ಷರತ್ತುಗಳ ಕ್ರಮವನ್ನು ಬದಲಾಯಿಸಿ.

ದೇವರು ಜನರನ್ನು ಆಶೀರ್ವದಿಸುವುದಾಗಿ ಮತ್ತು ಅವರನ್ನು ರಕ್ಷಿಸುವುದಾಗಿ ಭರವಸೆ ನೀಡಿದನು ಒಂದು ವೇಳೆ ಅವರು ಈ ನಿಯಮಗಳನ್ನು ಪಾಲಿಸಿದರೆ. ಆದರೆ ಅವರು ಒಂದು ವೇಳೆ ಅವಿಧೇಯರಾಗದಿದ್ದರೆ ಅವರನ್ನು ಶಿಕ್ಷಿಸುವುದಾಗಿ ಹೇಳಿದನು. (Story 13 Frame 7 OBS)

ಒಂದು ವೇಳೆ ಜನರು ಈ ನಿಯಮಗಳನ್ನು ಪಾಲಿಸಿದರೆ, ದೇವರು ಅವರನ್ನು ಆಶೀರ್ವದಿಸುವುದಾಗಿ ಮತ್ತು ರಕ್ಷಿಸುವುದಾಗಿ ಭರವಸೆ ನೀಡಿದನು. ಆದರೆ ಅವರು ಒಂದು ವೇಳೆ ನಿಯಮಗಳಿಗೆ ಅವಿಧೇಯರಾಗದಿದ್ದರೆ, ಅವರನ್ನು ಶಿಕ್ಷಿಸುವುದಾಗಿ ಹೇಳಿದನು.

(2) ಎರಡನೆಯ ಘಟನೆ ಎಲ್ಲಿದೆ ಎಂಬುದು ಸ್ಪಷ್ಟವಾಗಿಲ್ಲದಿದ್ದರೆ, ಆ ಭಾಗವನ್ನು "then/ಆಗ" ಎಂಬ ಪದದಿಂದ ಗುರುತಿಸಿ.

ದೇವರು ಜನರನ್ನು ಆಶೀರ್ವದಿಸುವುದಾಗಿ ಮತ್ತು ಅವರನ್ನು ರಕ್ಷಿಸುವುದಾಗಿ ಭರವಸೆ ನೀಡಿದನು ಒಂದು ವೇಳೆ ಅವರು ಈ ನಿಯಮಗಳನ್ನು ಪಾಲಿಸಿದರೆ. ಆದರೆ ಅವರು ಒಂದು ವೇಳೆ ಅವಿಧೇಯರಾಗದಿದ್ದರೆ, ಆಗ ಅವರನ್ನು ಶಿಕ್ಷಿಸುವುದಾಗಿ ಹೇಳಿದನು. (Story 13 Frame 7 OBS)

ಜನರು ಈ ನಿಯಮಗಳನ್ನು ಪಾಲಿಸಿದರೆ, ಆಗ ದೇವರು ಅವರನ್ನು ಆಶೀರ್ವದಿಸುವುದಾಗಿ ಮತ್ತು ಅವರನ್ನು ರಕ್ಷಿಸುವುದಾಗಿ ಭರವಸೆ ನೀಡಿದನು. ಆದರೆ ಒಂದು ವೇಳೆ ಅವರು ನಿಯಮಗಳಿಗೆ ಅವಿಧೇಯರಾಗದಿದ್ದರೆ, ಆಗ ಅವರನ್ನು ಶಿಕ್ಷಿಸುವುದಾಗಿ ಹೇಳಿದನು.

ಒಂದು ವೇಳೆ ಈ ಯೋಜನೆಯು ಅಥವಾ ಈ ಕೆಲಸವು ಮನುಷ್ಯರಿಂದಾಗಿದ್ದರೆ, ತಾನೇ ಕೆಡುವದು; ಆದರೆ ಅದು ದೇವರಿಂದಾಗಿದ್ದರೆ, ಆಗ ಅದನ್ನು ಕೆಡಿಸುವದಕ್ಕೆ ನಿಮ್ಮಿಂದ ಆಗುವದಿಲ್ಲ. (Acts 5:38b-39aULT)

ಒಂದು ವೇಳೆ ಈ ಯೋಜನೆಯು ಅಥವಾ ಈ ಕೆಲಸವು ಮನುಷ್ಯರಿಂದಾಗಿದ್ದರೆ, ಆಗ ತಾನೇ ಕೆಡುವದು; ಆದರೆ ಅದು ಒಂದು ವೇಳೆ ದೇವರಿಂದಾಗಿದ್ದರೆ, ಆಗ ಅದನ್ನು ಕೆಡಿಸುವದಕ್ಕೆ ನಿಮ್ಮಿಂದ ಆಗುವದಿಲ್ಲ;