translationCore-Create-BCS_.../checking/vol2-backtranslation-who/01.md

3.4 KiB

ಪೂರಕ ಅನುವಾದವನ್ನು ಯಾರು ಮಾಡಬೇಕು?

ಉತ್ತಮ ಅನುವಾದವನ್ನು ಮಾಡಲು, ವ್ಯಕ್ತಿಯು ಮೂರು ಅರ್ಹತೆಯನ್ನು ಹೊಂದಿರಬೇಕು.

1.ಪೂರಕ ಅನುವಾದ ಮಾಡುವ ವ್ಯಕ್ತಿಯು ಸ್ಥಳಿಯ ಉದ್ದೇಶಿತ ಭಾಷೆಯ ಮಾತೃಭಾಷೆ ಮಾತನಾಡುವನು ಹಾಗೆಯೆ ವ್ಯಾಪಕ ಸಂಪರ್ಕಿಸುವ ಭಾಷೆಯನ್ನು ಚೆನ್ನಾಗಿ ಮಾತನಾಡುವ ವ್ಯಕ್ತಿಯಾಗಿರಬೇಕು. ಲಿಖಿತ ರೂಪದ ಪೂರಕ ಭಾಷೆಯನ್ನು ಮಾಡಲು, ಆತನಿಗೆ ಎರಡು ಭಾಷೆಗಳು ಉತ್ತಮವಾಗಿ ಓದಲು ಹಾಗು ಬರೆಯಲು ತಿಳಿದಿರಬೇಕು . 1.ಈ ವ್ಯಕ್ತಿಯು ತಾನು ಅನುವಾದಿಸುತ್ತಿರುವ ಸ್ಥಳಿಯ ಉದ್ದೇಶಿತ ಭಾಷ ಅನುವಾದವನ್ನು ಮಾಡುವುದರಲ್ಲಿ ಭಾಗಿಯಾಗದ ವ್ಯಕ್ತಿಯಾಗಿರಬೇಕು. ಇದಕ್ಕೆ ಕಾರಣವೇನೆಂದರೆ ಸ್ಥಳೀಯ ಉದ್ದೇಶಿತ ಬಾಷಾ ಅನುವಾದವನ್ನು ಮಾಡಿದ ಯಾರಾದರು ಅವರು ಅನುವಾದವನ್ನು ಅರ್ಥೈಸಲು ಉದ್ದೇಶಿಸಿದ್ದನ್ನು ತಿಳಿದಿದ್ದಾರೆ, ಮತ್ತು ಆ ಅರ್ಥವು ಪೂರಕ ಅನುವಾದದಲ್ಲಿ ಅದು ಮೂಲ ಅನುವಾದದಂತೆ ಕಾಣುತ್ತದೆ. ಆದರೆ ಸ್ಥಳಿಯ ಉದ್ದೇಶಿತ ಭಾಷೆಯ ಅನುವಾದದಲ್ಲಿ ಕೆಲಸ ಮಾಡುವ ಸ್ಥಳಿಯ ಉದ್ದೇಶಿತ ಭಾಷೆಯನ್ನು ಮಾತನಾಡುವವರು ಅನುವಾದವನ್ನು ಅರ್ಥಮಾಡಿಕೊಳ್ಳವ ಸಾಧ್ಯತೆಯಿದೆ ಅಥವಾ ಅದರ ಎಲ್ಲಾ ಭಾಗಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ. ಅನುವಾದದಿಂದ ಸ್ಥಳಿಯ ಉದ್ದೇಶಿತ ಭಾಷೆಯ ಇತರ ತಿಳಿಯುವಂತಹ ಇತರ ಅರ್ಥಗಳನ್ನು ಪರೀಕ್ಷಕನು ತಿಳಿಯಲು ಬಯಸುತ್ತಾನೆ, ಇದರಿಂದ ಆ ಸ್ಥಳಗಳಲ್ಲಿ ಸರಿಯಾದ ಅರ್ಥವನ್ನು ಹೆಚ್ಚು ಸ್ಪಷ್ಟವಾಗಿ ಸಂಪರ್ಕಿಸಲು ಅನುವಾದ ತಂಡದೊಂದಿಗೆ ಕೆಲಸ ಮಾಡಬಹುದು. ಪೂರಕ ಅನುವಾದವನ್ನು ಮಾಡುವ ವ್ಯಕ್ತಿಯು ಸತ್ಯವೇದವನ್ನು ಚೆನ್ನಾಗಿ ತಿಳಿಯದ ವ್ಯಕ್ತಿಯಾಗಿರಬೇಕು. ಇದಕ್ಕೆ ಕಾರಣವೆಂದರೆ, ಪೂರಕ ಅನುವಾದಕನು ಉದ್ದೇಶಿತ ಭಾಷಾ ಅನುವಾದವನ್ನು ನೋಡುವುದರಿಂದ ಅವನು ಅರ್ಥಮಾಡಿಕೊಳ್ಳುವ ಅರ್ಥವನ್ನು ಮಾತ್ರ ನೀಡಬೇಕು ಹೊರತಾಗಿ ಇತರ ಭಾಷೆಯಲ್ಲಿ ಸತ್ಯವೇದ ಓದುವುದರಿಂದ ಆತನಿಗಿರುವ ಜ್ಞಾನದಿಂದಲ್ಲ.