translationCore-Create-BCS_.../checking/vol2-backtranslation-purpose/01.md

5.9 KiB

####ಹಿಂದಿನ ಅನುವಾದ ಏಕೆ ಅಗತ್ಯ?

ಹಿಂದಿನ ಭಾಷಾಂತರದ ಉದ್ದೇಶವೆಂದರೆ, ಉದ್ದೇಶಿತ ಭಾಷೆಯನ್ನು ಅರ್ಥಮಾಡಿಕೊಳ್ಳದ ಸತ್ಯವೇದದ ಸಲಹೆಗಾರ ಅಥವಾ ಪರೀಕ್ಷಕನು ,ಅವನು ಅಥವ ಅವಳು ಉದ್ದೇಶಿತ ಭಾಷೆಯನ್ನು ಅರ್ಥಮಾಡಿಕೊಳ್ಳದಿದ್ದರೂ ಸಹ ಉದ್ದೇಶಿತ ಭಾಷಾ ಅನುವಾದದಲ್ಲಿ ಏನಿದೆ ಎಂಬುವುದನ್ನು ನೋಡಲು ಸಾಧ್ಯವಾಗುತ್ತದೆ. ಈ ರೀತಿಯಾಗಿ ಪರೀಕ್ಷಕನು ಹಿಂದಿನ ಅನುವಾದವನ್ನು “ನೋಡಬಹುದು” ಮತ್ತು ಉದ್ದೇಶಿತ ಭಾಷೆಯನ್ನು ತಿಳಿಯದೆ ಉದ್ದೇಶಿತ ಭಾಷೆಯ ಅನುವಾದವನ್ನು ಪರಿಶೀಲಿಸಬಹುದು. ಆದುದರಿಂದ ಹಿಂದಿನ ಅನುವಾದದ ಭಾಷೆಯು, ಹಿಂದಿನಅನುವಾದವನ್ನು ಭಾಷಾಂತರ ಮಾಡುವ ವ್ಯಕ್ತಿಗು (ಹಿಂದಿನ ಅನುವಾದಕ) ಮತ್ತು ಪರೀಕ್ಷಿಕನು ವ್ಯಾಪಕ ಸಂಪರ್ಕಿಸುವ ಭಾಷೆಯಾಗಿರಬೇಕು. ಇದರರ್ಥ ಹಿಂದಿನ ಅನುವಾದಕರು ಉದ್ದೇಶಿತ ಭಾಷೆಯ ಪಠ್ಯವನ್ನು ಬಳಸಲಾದ ವ್ಯಾಪಕ ಸಂಪರ್ಕಿಸುವ ಅದೇ ಭಾಷೆಗೆ ಅನುವಾದಿಸಬೇಕಾಗುತ್ತದೆ.

ಕೆಲವು ಜನರು ಇದನ್ನು ಅನಗತ್ಯವೆಂದು ಪರಿಗಣಿಸಬಹುದು, ಏಕೆಂದರೆ ಸತ್ಯವೇದದ ಪಠ್ಯವು ಈಗಾಗಲೇ ಮೂಲ ಭಾಷೆಯಲ್ಲಿ ಅಸ್ತಿತ್ವದಲ್ಲಿದೆ. ಆದರೆ ಹಿಂದಿನ ಅನುವಾದದ ಉದ್ದೇಶವನ್ನು ನೆನಪಿನಲ್ಲಿಡಿ: ಉದ್ದೇಶಿತ ಭಾಷ ಅನುವಾದದಲ್ಲಿ ಏನು ಅಡಕವಾಗಿದೆ ಎಂದು ತಿಳಿದುಕೊಳ್ಳಲು ಪರೀಕ್ಷಕರಿಗೆ ಅನುಮತಿಸುವುದು. ಮೂಲ ಭಾಷೆಯ ಪಠ್ಯವನ್ನು ಓದುವುದರಿಂದ ಮಾತ್ರ ಉದ್ದೇಶಿತ ಭಾಷಾ ಅನುವಾದದಲ್ಲಿ ಏನಿದೆ ಎಂದು ನೋಡಲು ಪರಿಕ್ಷಕನಿಗೆ ಅನುಮತಿಸುವುದಿಲ್ಲ. ಆದ್ದರಿಂದ ಹಿಂದಿನ ಅನುವಾದಕನು ಹೊಸ ಅನುವಾದವನ್ನು ವ್ಯಾಪಕ ಸಂಪರ್ಕ ಭಾಷೆಯಲ್ಲಿ ಮತ್ತೆ ಮಾಡಬೇಕು. ಅದು ಉದ್ದೇಶಿತ ಭಾಷಾ ಅನುವಾದವನ್ನು ಮಾತ್ರ ಆಧರಿಸುತ್ತದೆ. ಈ ಕಾರಣಕ್ಕಾಗಿ,ಹಿಂದಿನ ಅನುವಾದ ಮಾಡಿರುವ ವ್ಯಕ್ತಿ ತನ್ನ ಹಿಂದಿನ ಅನುವಾದವನ್ನು ಮಾಡುವಾಗ ಮೂಲ ಭಾಷೆಯ ಪಠ್ಯವನ್ನು ನೋಡಲು ಸಾಧ್ಯವಿರುವುದಿಲ್ಲ, ಆದರೆ ಉದ್ದೇಶಿತ ಪಠ್ಯ ಮಾತ್ರ ನೋಡಲು ಸಾಧ್ಯ. ಈ ರೀತಿಯಲ್ಲಿ, ಉದ್ದೇಶಿತ ಭಾಷಾ ಅನುವಾದದಲ್ಲಿ ಇರುವ ಯಾವುದೇ ಸಮಸ್ಯೆವನ್ನು ಪರೀಕ್ಷಕನು ಗುರುತಿಸಬಹುದು ಮತ್ತು ಅದನ್ನು ಪರಿಹರಿಸಲು ಅನುವಾದಕರೊಂದಿಗೆ ಕೆಲಸ ಮಾಡಬಹುದು.

ಅನುವಾದವನ್ನು ಪರಿಶೀಲಿಸಲು ಪರೀಕ್ಷಕರು ಉದ್ದೇಶಿತ ಅನುವಾದವನ್ನು ಪರಿಶೀಲಿಸುವ ಮೊದಲೇ ಉದ್ದೇಶಿತ ಭಾಷೆಯನ್ನು ಸುಧಾರಿಸಲು ಹಿಂದಿನ ಅನುವಾದವು ತುಂಬಾ ಉಪಯುಕ್ತವಾಗಿದೆ. ಅನುವಾದ ತಂಡವು ಹಿಂದಿನ ಅನುವಾದವನ್ನು ಓದುವಾಗ, ಹಿಂದಿನ ಅನುವಾದಕರು ತಮ್ಮ ಅನುವಾದವನ್ನು ಹೇಗೆ ಅರ್ಥಮಾಡಿಕೊಂಡಿದ್ದಾರೆ ಎಂಬುವುದನ್ನು ಅವರು ನೋಡಬಹುದು. ಕೆಲವೊಮ್ಮೆ, ಅವರು ಉದ್ದೇಶಿಸಿದ್ದಕ್ಕಿಂತ ವಿಭಿನ್ನವಾದ ರೀತಿಯಲ್ಲಿ ಹಿಂದಿನ ಅನುವಾದಕರು ತಮ್ಮ ಅನುವಾದವನ್ನು ಅರ್ಥಮಾಡಿಕೊಂಡಿಕೊಳ್ಳುತ್ತಾರೆ. ಅಂತಹ ಸಂದರ್ಭಗಳಲ್ಲಿ, ಅವರು ಅನುವಾದವನ್ನು ಬದಲಾಯಿಸಬಹುದು ಇದರಿಂದ ಅವರು ಉದ್ದೇಶಿಸಿದ ಅರ್ಥವನ್ನು ಹೆಚ್ಚು ಸ್ಪಷ್ಟವಾಗಿ ತಿಳಿಸಬಹುದು. ಅನುವಾದ ತಂಡವು ಹಿಂದಿನ ಅನುವಾದವನ್ನು ಪರೀಕ್ಷಕರಿಗೆ ನೀಡುವ ಮೊದಲು ಅದನ್ನು ಬಳಸಲು ಸಾಧ್ಯವಾದಾಗ, ಅವರು ತಮ್ಮ ಅನುವಾದಕ್ಕೆ ಹಲವು ಸುಧಾರಣೆಗಳನ್ನು ಮಾಡಬಹುದು. ಅವರು ಹೀಗೆ ಮಾಡುವಾಗ, ಪರೀಕ್ಷಿಕರು ತಮ್ಮ ಪರೀಶೀಲನೆಯನ್ನು ಹೆಚ್ಚು ವೇಗವಾಗಿ ಮಾಡಬಹುದು, ಏಕೆಂದರೆ ಅನುವಾದ ತಂಡವು ಪರೀಕ್ಷಕನೊಂದಿಗೆ ಭೇಟಿಯಾಗುವ ಮೊದಲು ಅನುವಾದದಲ್ಲಿನ ಅನೇಕ ಸಮಸ್ಯೆಗಳನ್ನು ಸರಿಪಡಿಸಲಾಗುತ್ತದೆ.