translationCore-Create-BCS_.../checking/vol2-backtranslation-kinds/01.md

12 KiB

ಯಾವ ರೀತಿಯ ಪೂರಕ ಅನುವಾದವಿದೆ?

####ಮೌಖಿಕ

ಮೌಖಿಕ ಪೂರಕ ಅನುವಾದವೆಂದರೆ ಪೂರಕ ಅನುವಾದಕನು ಉದ್ದೇಶಿತ ಭಾಷೆಯಲ್ಲಿ ಅನುವಾದವನ್ನು ಓದುತ್ತಿದ್ದಂತೆ ಅಥವಾ ಕೇಳುತ್ತಿದ್ದಂತೆ ಅನುವಾದ ಪರೀಕ್ಷಕನನ್ನು ವ್ಯಾಪಕ ಸಂಪರ್ಕಿತ ಭಾಷೆಯಲ್ಲಿ ಮಾತನಾಡುತ್ತಾನೆ. ಅವನು ಸಾಮಾನ್ಯವಾಗಿ ಒಂದು ಸಮಯದಲ್ಲಿ ಒಂದು ವಾಕ್ಯವನ್ನು ಮಾಡುತ್ತಾನೆ, ಚಿಕ್ಕದಾಗಿದ್ದರೆ ಒಂದೇ ಸಮಯದಲ್ಲಿ ಎರಡು ವಾಕ್ಯವನ್ನು ಮಾಡುತ್ತಾನೆ. ಅನುವಾದ ಪರೀಕ್ಷಕನು ತಪ್ಪಾಗಿರುವ ವಾಕ್ಯವನ್ನು ಕೇಳಿಸಿಕೊಳ್ಳುವಾಗ, ಮೌಖಿಕ ಪೂರಕ ಅನುವಾದವನ್ನು ಮಾಡುವ ವ್ಯಕ್ತಿಯನ್ನು ವಾಕ್ಯ ಓದುವುದನ್ನು ತಡೆದು ಅದರಲ್ಲಿನ ಸಮಸ್ಯೆಗಳ ಬಗ್ಗೆ ಆತನು ಅವರಿಗೆ ಪ್ರಶ್ನೆಗಳನ್ನು ಕೇಳಬಹುದು. ಅನುವಾದ ತಂಡದ ಒಂದು ಅಥವ ಹೆಚ್ಚಿನ ಸದಸ್ಯರು ಹಾಜರಿರಬೇಕು ಆದರಿಂದ ಅವರು ಅನುವಾದದ ವಿಷಯದಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸಬಹುದು.

ಮೌಖಿಕ ಪೂರಕ ಅನುವಾದದ ಒಂದು ಪ್ರಯೋಜನವೇನೆಂದರೆ ಪೂರಕ ಅನುವಾದಕನು ಅನುವಾದ ಪರೀಕ್ಷಕನಿಗೆ ತಕ್ಷಣ ಲಭ್ಯವಿರುತ್ತಾರೆ ಮತ್ತು ಪೂರಕ ಅನುವಾದದ ಕುರಿತು ಅನುವಾದ ಪರೀಕ್ಷಕರ ಪ್ರಶ್ನೆಗೆ ಉತ್ತರಿಸಬಹುದು. ಮೌಖಿಕ ಪೂರಕ ಅನುವಾದದಲ್ಲಿರುವ ಲಾಭವೆಂದರೆ, ಅನುವಾದ ಮಾಡುವ ಉತ್ತಮ ಮಾರ್ಗದ ಬಗ್ಗೆ ಯೋಚಿಸಲು ಅನುವಾದಕನಿಗೆ ಬಹಳ ಕಡಿಮೆ ಸಮಯವಿರುತ್ತದೆ ಮತ್ತು ಅನುವಾದದ ಅರ್ಥವನ್ನು ಉತ್ತಮ ರೀತಿಯಲ್ಲಿ ವ್ಯಕ್ತಪಡಿಸದಿರಬಹುದು. ಪೂರಕ ಅನುವಾದವನ್ನು ಉತ್ತಮ ರೀತಿಯಲ್ಲಿ ವ್ಯಕ್ತಪಡಿಸಿದ್ದಕ್ಕಿಂತ ಅನುವಾದ ಪರೀಕ್ಷಕನು ಹೆಚ್ಚಿನ ಪ್ರಶ್ನೆಗಳನ್ನು ಕೇಳುವ ಅಗತ್ಯವನ್ನು ಇದು ಉಂಟುಮಾಡುತ್ತದೆ. ಮತ್ತೊಂದು ಅನಾನುಕೂಲವೆಂದರೆ, ಅನುವಾದವನ್ನು ಮೌಲ್ಯಮಾಪನೆ ಮಾಡಲು ಪರೀಕ್ಷಕರಿಗೆ ಬಹಳ ಕಡಿಮೆ ಸಮಯ ಸಿಗುತ್ತದೆ. ಅವನಿಗೆ ಒಂದು ವಾಕ್ಯವನ್ನು ಕೇಳಿ ಇನ್ನೊಂದು ವಾಕ್ಯವನ್ನು ಕೇಳುವ ಮೊದಲು ಯೋಚಿಸಲು ಕೆಲವೇ ಸೆಕೆಂಡ್ ಇರುತ್ತದೆ. ಈ ಕಾರಣದಿಂದ, ಪ್ರತಿ ವಾಕ್ಯದ ಬಗ್ಗೆ ಯೋಚಿಸಲು ಸಮಯವಿದ್ದಾಗ ಕಂಡುಹಿಡಿಯಬಹುದಾದ ಎಲ್ಲಾ ಸಮಸ್ಯೆವನ್ನು ಈಗ ಕಂಡುಹಿಡಿಯಲಾಗುವುದಿಲ್ಲ.

ಲಿಖಿತ

ಲಿಖಿತ ರೂಪದ ಪೂರಕ ಅನುವಾದದಲ್ಲಿ ಎರಡು ವಿಧಗಳಿವೆ. ಇವೆರಡ ನಡುವಿನ ವ್ಯತ್ಯಾಸಕ್ಕಾಗಿ,ಲಿಖಿತ ರೂಪದ ಪೂರಕ ಅನುವಾದ ನೋಡಿ. ಲಿಖಿತ ಪೂರಕ ಅನುವಾದವು ಮೌಕಿಕ ಪೂರಕ ಅನುವಾದಕ್ಕಿಂತ ಹಲವಾರು ಪ್ರಯೋಜನಗಳನ್ನು ಹೊಂದಿದೆ. ಮೊದಲನಯದಾಗಿ, ಪೂರಕ ಅನುವಾದವನ್ನು ಬರೆದಾಗ, ಅನುವಾದ ತಂಡವು ಅನುವಾದವನ್ನು ತಪ್ಪಾಗಿ ಅರ್ಥೈಸಿಕೊಂಡ ಯಾವುದೇ ಸ್ಥಳಗಳಿವೆಯೇ ಎಂದು ನೋಡಲು ಅದನ್ನು ಓದಬಹುದು. ಪೂರಕ ಅನುವಾದಕರು ಅನುವಾದವನ್ನು ತಪ್ಪಾಗಿ ಅರ್ಥೈಸಿಕೊಂಡರೆ, ಶ್ರೋತೃಗಳು ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ, ಮತ್ತು ಅನುವಾದ ತಂಡವು ಆ ಸಮಯದಲ್ಲಿ ಅವರ ಅನುವಾದವನ್ನು ಪರಿಷ್ಕರಿಸುವ ಅಗತ್ಯವಿರುತ್ತದೆ.

ಎರಡನೆಯದಾಗಿ, ಪೂರಕ ಅನುವಾದವನ್ನು ಬರೆದಾಗ, ಅನುವಾದ ಪರೀಕ್ಷಕನು ಅನುವಾದ ತಂಡದೊಂದಿಗೆ ಭೇಟಿಯಾಗುವ ಮೊದಲು ಪೂರಕ ಅನುವಾದವನ್ನು ಓದಬಹುದು ಮತ್ತು ಪೂರಕ ಅನುವಾದದಿಂದ ಉದ್ಭವಿಸುವ ಯಾವುದೇ ಪ್ರಶ್ನೆಯನ್ನು ಸಂಶೋಧಿಸಲು ಸಮಯ ತೆಗೆದುಕೊಳ್ಳಬಹುದು. ಅನುವಾದ ಪರೀಕ್ಷಕನು ಸಮಸ್ಯೆಯನ್ನು ಸಂಶೋಧಿಸುವ ಅಗತ್ಯವಿಲ್ಲದಿದ್ದರೂ ಸಹ, ಲಿಖಿತ ರೂಪದ ಪೂರಕ ಅನುವಾದವು ಅನುವಾದದ ಬಗ್ಗೆ ಯೋಚಿಸಲು ಹೆಚ್ಚು ಸಮಯವನ್ನು ನೀಡುತ್ತದೆ. ಅವರು ಅನುವಾದದಲ್ಲಿ ಹೆಚ್ಚಿನ ಸಮಸ್ಯೆಗಳನ್ನು ಗುರುತಿಸಬಹುದು ಮತ್ತು ಪರಿಹರಿಸಬಹುದು ಮತ್ತು ಕೆಲವೊಮ್ಮೆ ಸಮಸ್ಯೆಗಳಿಗೆ ಉತ್ತಮ ಪರಿಹಾರವನನ್ನು ಸಹ ಪಡೆಯಬಹುದು.ಏಕೆಂದರೆ ಪ್ರತಿ ವಾಕ್ಯದ ಬಗ್ಗೆ ಯೋಚಿಸಲು ಕೆಲವೇ ಸೆಕೆಂಡುಗಳಿಂತಲೂ ಪ್ರತಿಯೊಂದರ ಬಗ್ಗೆ ಯೋಚಿಸಲು ಅವರಿಗೆ ಹೆಚ್ಚು ಸಮಯ ಸಿಗುತ್ತದೆ

ಮೂರನೆಯದಾಗಿ, ಪೂರಕ ಅನುವಾದವನ್ನು ಬರೆದಾಗ, ಅನುವಾದ ಪರೀಕ್ಷಕನು ಅನುವಾದ ತಂಡದೊಂದಿಗೆ ಭೇಟಿಯಾಗುವ ಮೊದಲು ತನ್ನ ಪ್ರಶ್ನೆಗಳನ್ನು ಲಿಖಿತ ರೂಪದಲ್ಲಿ ಸಿದ್ಧಪಡಿಸಬಹುದು. ಅವರು ಸಭೆ ಸೇರುವ ಮೊದಲು ಸಮಯವಿದ್ದರೆ ಮತ್ತು ಸಂಪರ್ಕಿಸಲು ಮಾರ್ಗವಿದ್ದರೆ, ಪರೀಕ್ಷಕನು ಅನುವಾದಿಸಲು ತನ್ನ ಲಿಖಿತ ರೂಪದ ಪ್ರಶ್ನೆಗಳನ್ನು ತಂಡಕ್ಕೆ ಕಳುಹಿಸಬಹುದು. ಇದನ್ನು ಅವರು ಓದಬಹುದು ಮತ್ತು ಪರೀಕ್ಷಕನು ತಪ್ಪೆಂದು ಭಾವಿಸಿದರೆ ಅನುವಾದದ ಭಾಗಗಳನ್ನು ಬದಲಾಯಿಸಬಹುದು. ಅನುವಾದ ತಂಡದವರು ಮತ್ತು ಪರೀಕ್ಷಕರು ಒಟ್ಟಿಗೆ ಭೇಟಿಯಾದಾಗ ಹೆಚ್ಚಿನ ಸತ್ಯವೇದಡ ಸಂಗತಿಗಳನ್ನು ಪರಿಶೀಲಿಸಲು ಸಹಾಯಮಾಡುತ್ತದೆ , ಯಾಕೆಂದರೆ ಭೇಟಿಯಾಗುವ ಮೊದಲೇ ಅನುವಾದದ ಅನೇಕ ಸಮಸ್ಯೆಗಳನ್ನು ಪರಿಹರಿಸಲು ಅವರಿಗೆ ಸಾಧ್ಯವಾಯಿತು. ಸಭೆಯಾಗಿ ಸೇರುವಾಗ ಅವರು ಉಳಿದ ಸಮಸ್ಯೆಗಳ ಮೇಲೆ ಮಾತ್ರ ಗಮನ ಹರಿಸುತ್ತಾರೆ. ಇವು ಸಮಾನ್ಯವಾಗಿ ಅನುವಾದ ತಂಡವು ಪರೀಕ್ಷಕರ ಪ್ರಶ್ನೆಗಳನ್ನು ಅರ್ಥಮಾಡಿಕೊಳ್ಳದ ಸ್ಥಳವಾಗಿದೆ ಅಥವಾ ಪರೀಕ್ಷಕರು ಉದ್ದೇಶಿತ ಭಾಷೆಯ ಬಗ್ಗೆ ಅರ್ಥಮಾಡಿಕೊಳ್ಳದೆ, ಇಲ್ಲದಿರುವ ಸಮಸ್ಯೆಗಳನ್ನು ಇದೆ ಎಂದು ಭಾವಿಸುತ್ತಾರೆ.

ಸಭೆ ಸೇರುವ ಮುಂಚೆ ಪರೀಕ್ಷಕ ತನ್ನ ಪ್ರಶ್ನೆಗಳನ್ನು ತಂಡಕ್ಕೆ ಕಳುಹಿಸಲು ಸಮಯವಿಲ್ಲದಿದ್ದರೂ ಸಹ, ಅವರು ಇನ್ನು ಸಭೆಯಲ್ಲಿ ಹೆಚ್ಚಿನ ವಿಷಯಗಳನ್ನು ಪರೀಕ್ಷಿಸಲು ಸಾಧ್ಯವಾಗುತ್ತದೆ, ಇಲ್ಲದಿದ್ದರೆ ಪರಿಶೀಲಿಸಲು ಸಾಧ್ಯವಾಗುವುದರಿಂದ ಪರೀಕ್ಷಕ ಈಗಾಗಲೆ ಪೂರಕ ಅನುವಾದವನ್ನು ಓದಿರುತ್ತಾರೆ ಮತ್ತು ಈಗಾಗಲೆ ಅವರ ಪ್ರಶ್ನೆಗಳನ್ನು ಸಿದ್ದಪಡಿಸಿರುತ್ತಾರೆ . ಈ ಪೂರಕ ಸಿದ್ಧತಾ ಸಮಯವನ್ನು ಹೊಂದಿದ್ದರಿಂದ, ಅವರು ಮತ್ತು ಅನುವಾದ ತಂಡವು ತಮ್ಮ ಸಭೆಯ ಸಮಯವನ್ನು ಮೌಖಿಕ ರೂಪದ ಪೂರಕ ಅನುವಾದ ಮಾಡುವಾಗ ಅಗತ್ಯವಿರುವಷ್ಟು ನಿಧಾನಗತಿವಾಗಿ ಸಂಪೂರ್ಣ ಅನುವಾದವನ್ನು ಓದುವುದಕ್ಕಿಂತ ಹೆಚ್ಚಾಗಿ ಅನುವಾದದ ಸಮಸ್ಯೆಯ ಪ್ರದೇಶಗಳನ್ನು ಮಾತ್ರ ಚರ್ಚಿಸಲು ಬಳಸಬಹುದು.

ನಾಲ್ಕನೆಯದಾಗಿ, ಲಿಖಿತ ಪೂರಕ ಅನುವಾದವು ಒಂದು ಸಮಯದಲ್ಲಿ ಹಲವು ಗಂಟೆಗಳ ಕಾಲ ಮೌಖಿಕ ಅನುವಾದವನ್ನು ಕೇಳುವುದನ್ನು ಮತ್ತು ತಿಳಿದುಕೊಳ್ಳುವುದನ್ನು ಕೇಂದ್ರೀಕರಿಸದಂತೆ ಪರೀಕ್ಷಕನ ಒತ್ತಡವನ್ನು ತಡೆಯುತ್ತದೆ. ಪರೀಕ್ಷಕನು ಮತ್ತು ಅನುವಾದ ತಂಡವು ಗದ್ದಲದ ವಾತವರಣದಲ್ಲಿ ಭೇಟಿಯಾಗುತ್ತಿದ್ದರೆ, ಅವನು ಪ್ರತಿ ಪದವನ್ನು ಸರಿಯಾಗೆ ಕೇಳುತ್ತಾನ ಎಂದು ಖಚಿತಪಡಿಸಿಕೊಳ್ಳುವ ತೊಂದರೆಯಿಂದ ಪರೀಕ್ಷಕನು ಹೆಚ್ಚಾಗಿ ಬಳಲುವನು. ಏಕಾಗ್ರತೆಯ ಮಾನಸಿಕ ಒತ್ತಡದಿಂದ ಪರೀಕ್ಷಕನು ಸತ್ಯವೇದ ಪಠ್ಯವನ್ನು ಸರಿಪಡಿಸುವ ಫಲತಾಂಶದಲ್ಲಿ ಕೆಲವು ಸಮಸ್ಯೆಗಳನ್ನು ತಪ್ಪಿಸುವ ಸಾಧ್ಯತೆಗಳಿರುತ್ತವೆ . ಈ ಕಾರಣಕ್ಕಾಗಿ ಸಾಧ್ಯವಾದಗೆಲ್ಲಾ ಲಿಖಿತ ರೂಪದ ಪೂರಕ ಅನುವಾದವನ್ನು ನಾವು ಶಿಫಾರಸ್ಸು ಮಾಡುತ್ತೇವೆ.