translationCore-Create-BCS_.../checking/vol2-backtranslation-guidel.../01.md

12 KiB

###ಪದಗಳು ಮತ್ತು ಉಪವಾಕ್ಯಯ ಬಳಕೆಯನ್ನು ಉದ್ದೇಶಿತ ಭಾಷಯಲ್ಲಿ ತೋರಿಸಿ

ಈ ಘಟಕದ ಉದ್ದೇಶಕ್ಕಾಗಿ, ”ಉದ್ದೇಶಿತ ಭಾಷೆ” ಸತ್ಯವೇದದ ಕರಡು ಪ್ರತಿಯನ್ನು ಮಾಡಿದ ಭಾಷೆಯನ್ನು ಸೂಚಿಸುತ್ತದೆ, ಮತ್ತು “ವ್ಯಾಪಕ ಸಂಪರ್ಕ ಭಾಷೆ” ಎನ್ನುವುದು ಪೂರಕ ಅನುವಾದ ಮಾಡುವ ಭಾಷೆಯನ್ನು ಸೂಚಿಸುತ್ತದೆ.

a. ಸಂದರ್ಭಕ್ಕೆ ತಕ್ಕಂತೆ ಪದದ ಅರ್ಥವನ್ನು ಬಳಸಿ

ಒಂದು ಪದವು ಕೇವಲ ಒಂದೇ ಮೂಲ ಅರ್ಥವನ್ನು ಹೊಂದಿದ್ದರೆ, ಪೂರಕ ಅನುವಾದಕನು ವ್ಯಾಪಕ ಸಂಪರ್ಕ ಭಾಷೆಯಲ್ಲಿನ ಮೂಲ ಅರ್ಥವನ್ನು ಪ್ರತಿನಿಧಿಸುವ ಪದವನ್ನು ಪೂರಕ ಅನುವಾದ ಉದ್ದಕ್ಕೂ ಬಳಸಬೇಕು. ಅದಾಗ್ಯೂ, ಉದ್ದೇಶಿತ ಭಾಷೆಯಲ್ಲಿನ ಒಂದು ಪದವು ಒಂದಕ್ಕಿಂತ ಹೆಚ್ಚು ಅರ್ಥವನ್ನು ಹೊಂದಿದ್ದರೆ, ಸಂದರ್ಭಕ್ಕೆ ಅನುಗುಣವಾಗಿ ಅರ್ಥವ ಬದಲಾಗುತ್ತದೆ, ನಂತರ ಪೂರಕ ಅನುವಾದಕನು ವ್ಯಾಪಕ ಸಂಪರ್ಕಿಸುವ ಭಾಷೆಯಲ್ಲಿನ ಪದ ಅಥವ ನುಡಿಗಟ್ಟನ್ನು ಬಳಸಬೇಕು, ಅದು ಪದವನ್ನು ಸನ್ನೀವೇಶದಲ್ಲಿ ಬಳಸಿದ ವಿಧಾನವನ್ನು ಉತ್ತಮವಾಗಿ ಪ್ರತಿನಿಧಿಸುತ್ತದೆ. ಅನುವಾದ ಪರೀಕ್ಷಕನಿಗೆ ಗೊಂದಲವನ್ನು ತಪ್ಪಿಸಲು, ಪೂರಕ ಅನುವಾದಕನು ಮೊದಲ ಬಾರಿಗೆ ಈ ಪದವನ್ನು ಬೇರೆ ರೀತಿಯಲ್ಲಿ ಬಳಸಿದಾಗ ಇತರ ಅರ್ಥವನ್ನು ಆವರಣ ಚಿಹ್ನೆಯಲ್ಲಿ ಹಾಕಬಹುದು, ಇದರಿಂದಾಗಿ ಅನುವಾದಕ ಪರೀಕ್ಷಕನು ಪದಕ್ಕೆ ಒಂದಕ್ಕಿಂತ ಹೆಚ್ಚು ಅರ್ಥವನ್ನು ಹೊಂದಿರುವುದನ್ನು ನೋಡಬಹುದು ಮತ್ತು ಅರ್ಥಮಾಡಿಕೊಳ್ಳಬಹುದು. ಉದಾಹರಣೆಗೆ, ಪೂರಕ ಅನುವಾದದಲ್ಲಿ ಉದ್ದೇಶಿತ ಭಾಷೆಯ ಪದವನ್ನು “ಹೋಗು” ಎಂದು ಅನುವಾದಿಸಿದ್ದರೆ “ಬನ್ನಿ(ಹೋಗಿ)” ಎಂದು ಅವರು ಬರೆಯಬಹುದು, ಆದರೆ ಹೊಸ ಸನ್ನಿವೇಶದಲ್ಲಿ ಇದನ್ನು “ ಬನ್ನಿ” ಎಂದು ಉತ್ತಮವಾಗಿ ಅನುವಾದಿಸಲಾಗುತ್ತದೆ.

ಉದ್ದೇಶಿತ ಭಾಷಾ ಅನುವಾದವು ಒಂದು ನಾಣ್ಣುಡಿಯನ್ನು ಬಳಸಿದರೆ, ಪೂರಕ ಅನುವಾದದ ಅನುವಾದಕನು ನಾಣ್ಣುಡಿಯನ್ನು ಅಕ್ಷರಶಃ ಅನುವಾದಿಸಿದರೆ (ಪದಗಳ ಅರ್ಥಕ್ಕೆ ಅನುಗುಣವಾಗಿ) ಅನುವಾದ ಪರೀಕ್ಷಿಕನಿಗೆ ಇದು ಹೆಚ್ಚು ಸಹಾಯಕವಾಗುತ್ತದೆ, ಆದರೆ ನಾಣ್ಣುಡಿಯ ಅರ್ಥವನ್ನು ಆವರಣದ ಚಿಹ್ನೆಯಲ್ಲಿ ಸೇರಿಸಿ. ಈ ರೀತಿಯಲ್ಲಿ, ಉದ್ದೇಶಿತ ಭಾಷಾ ಅನುವಾದವು ಆ ಸ್ಥಳದಲ್ಲಿ ಒಂದು ನಾಣ್ಣುಡಿಯನ್ನು ಬಳಸುವುದನ್ನು ಅನುವಾದ ಪರೀಕ್ಷಕರು ನೋಡಬಹುದು ಮತ್ತು ಅದರ ಅರ್ಥವನ್ನು ಸಹ ತಿಳಿದುಕೊಳ್ಳಬಹುದು. ಪೂರಕ ಅನುವಾದಕನು ನಾಣ್ಣುಡಿಯನ್ನು ಈ ರೀತಿಯಾಗಿ ಅನುವಾದಿಸಬಹುದು, “ಆತನು ಬಕೆಟ್ ಒದ್ದನು (ಅವನು ಸತ್ತನು).” ನಾಣ್ಣುಡಿಗಳು ಒಂದಕ್ಕಿಂತ ಹೆಚ್ಚು ಬಾರಿ ಕಂಡುಬಂದಲ್ಲಿ, ಪೂರಕ ಅನುವಾದದ ಅನುವಾದಕನು ಪ್ರತಿ ಬಾರಿಯು ಅದನ್ನು ವಿವರಿಸುವ ಅಗತ್ಯವಿರುವುದಿಲ್ಲ, ಆದರೆ ಅದನ್ನು ಅಕ್ಷರಶಃ ಅನುವಾದಿಸಬಹುದು ಅಥವ ಅದರ ಅರ್ಥವನ್ನು ವಿವರಿಸಬಹುದು.

b. ಅಲಂಕಾರಗಳನ್ನು ಒಂದೇ ರೀತಿ ಇರಿಸಿ

ಪೂರಕ ಅನುವಾದದಲ್ಲಿ, ಪೂರಕ ಅನುವಾದಕರು ವ್ಯಾಪಕ ಸಂಪರ್ಕಿಸುವ ಭಾಷೆಯ ಅಲಂಕಾರಗಳನ್ನು ಪ್ರತಿನಿಧಿಸಬೇಕು. ಇದರರ್ಥ ಪೂರಕ ಅನುವಾದಕ ನಾಮಪದವನ್ನು ನಾಮಪದಗಳೊಂದಿಗೆ, ಕ್ರಿಯಾಪದವನ್ನು ಕ್ರಿಯಪದಗಳೊಂದಿಗೆ ಮತ್ತು ಮಾರ್ಪಡಕಗಳನ್ನು ಮಾರ್ಪಡಕಗಳೊಂದಿಗೆ ಅನುವಾದಿಸಬೇಕು. ಉದ್ದೇಶಿತ ಭಾಷೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುವುದನ್ನು ನೋಡಲು ಅನುವಾದ ಪರೀಕ್ಷಕರಿಗೆ ಇದು ಸಹಾಯ ಮಾಡುತ್ತದೆ

c. ಉಪವಾಕ್ಯವನ್ನು ಒಂದೇ ರೀತಿ ಇರಿಸಿ

ಪೂರಕ ಅನುವಾದದಲ್ಲಿ, ಪೂರಕ ಅನುವಾದಕನು ಉದ್ದೇಶಿತ ಭಾಷೆಯ ಪ್ರತಿಯೊಂದು ಉಪವಾಕ್ಯವನ್ನು ವ್ಯಾಪಕ ಸಂಪರ್ಕಿಸುವ ಭಾಷೆಯಲ್ಲಿ ಒಂದೇ ರೀತಿಯ ಉಪವಾಕ್ಯಗಳೊಂದಿಗೆ ಪ್ರತಿನಿಧಿಸಬೇಕು. ಉದಾಹರಣೆಗೆ, ಉದ್ದೇಶಿತ ಭಾಷೆಯ ಉಪವಾಕ್ಯವು ಆಜ್ಞೆಯನ್ನು ಬಳಸಿದರೆ, ಪೂರಕ ಅನುವಾದವು ಸಲಹೆ ಅಥವ ವಿನಂತಿ ಬಳಸದೆ ಆಜ್ಞೆಯನ್ನೆ ಬಳಸಬೇಕು. ಅಥವಾ ಉದ್ದೇಶಿತ ಭಾಷೆಯ ಉಪವಾಕ್ಯವು ವಾಕ್ಚಾತುರ್ಯದ ಪ್ರಶ್ನೆಯನ್ನು ಬಳಸಿದರೆ, ಪೂರಕ ಅನುವಾದವು ಸಹ ಹೇಳಿಕೆ ಅಥವಾ ಇತರ ಅಭಿವ್ಯಕ್ತಿಗಿಂತ ಪ್ರಶ್ನೆಯನ್ನು ಬಳಸುತ್ತದೆ.

d.ವಿರಾಮಚಿಹ್ನೆಯನ್ನು ಒಂದೇ ರೀತಿ ಇರಿಸಿ

ಉದ್ದೇಶಿತ ಭಾಷಾ ಅನುವಾದದಲ್ಲಿರುವಂತೆ ಪೂರಕ ಅನುವಾದಕರು ಅದೇ ರೀತಿಯಲ್ಲಿ ವಿರಾಮಚಿಹ್ನೆಯನ್ನು ಬಳಸಬೇಕು. ಉದಾಹಾಣಗೆ ಉದ್ದೇಶಿತ ಭಾಷೆಯಲ್ಲಿ ಅಲ್ಪವಿರಾಮ ಇದ್ದರೆ, ಪೂರಕ ಅನುವಾದಕನು ಸಹ ಪೂರಕ ಅನುವಾದದಲ್ಲಿ ಅಲ್ಪವಿರಾಮ ಬಳಸಬೇಕು. ಪೂರ್ಣ ವಿರಾಮ ಚಿಹ್ನೆ, ಆಶ್ಚರ್ಯಕರ ಚಿಹ್ನೆಗಳು, ಉಲ್ಲೇಖ ಗಳು ಮತ್ತು ಎಲ್ಲಾ ಚಿಹ್ನೆಗಳು ಎರಡು ಅನುವಾದಲ್ಲಿ ಒಂದೇ ರೀತಿಯಲ್ಲಿರಬೇಕು. ಈ ರೀತಿಯಲ್ಲಿ ಪೂರಕ ಅನುವಾದದ ಯಾವ ಭಾಗಗಳು ಉದ್ದೇಶ ಭಾಷೆಯ ಯಾವ ಭಾಗಗಳನ್ನು ಪ್ರತಿನಿಧಿಸುತ್ತದೆ ಎಂಬುವುದನ್ನು ಅನುವಾದ ಪರೀಕ್ಷಕರು ಸುಲಭಾವಾಗಿ ನೋಡಬಹುದು. ಸತ್ಯವೇದದ ಪೂರಕ ಅನುವಾದವನ್ನು ಮಾಡುವಾಗ, ಎಲ್ಲಾ ಅಧ್ಯಾಯಗಳು ಮತ್ತು ವಚನ ಸಂಖ್ಯೆಗಳು ಸರಿಯಾದ ಸ್ಥಳದಲ್ಲಿವೆಯೆ ಎಂದು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ.

e. ಸಂಕೀರ್ಣ ಪದಗಳ ಪೂರ್ಣ ಅರ್ಥವನ್ನು ವ್ಯಕ್ತಪಡಿಸು

ಕೆಲವೊಮ್ಮೆ ಉದ್ದೇಶಿತ ಭಾಷೆಯಲ್ಲಿನ ಪದಗಳು ವ್ಯಾಪಕ ಸಂಪರ್ಕಿಸುವ ಭಾಷೆಯಲ್ಲಿರುವ ಪದಗಳಿಗಿಂತ ಹೆಚ್ಚು ಸಂಕೀರ್ಣವಾಗಿರುತ್ತದೆ. ಈ ಸಂದರ್ಭದಲ್ಲಿ, ಪೂರಕ ಅನುವಾದವು ಉದ್ದೇಶಿತ ಭಾಷೆಯ ಪದವನ್ನು ವ್ಯಾಪಕ ಸಂಪರ್ಕಿಸುವ ಭಾಷೆಯಲ್ಲಿ ದೀರ್ಘ ನುಡಿಗಟ್ಟಿನೊಂದಿಗೆ ಪ್ರತಿನಿಧಿಸುವ ಅಗತ್ಯವಿದೆ. ಅನುವಾದ ಪರೀಕ್ಷಕನು ಸಾಧ್ಯವಾದಷ್ಟು ಅರ್ಥವನ್ನು ನೋಡಲು ಇದು ಸಹಾಯವಾಗುತ್ತದೆ. ಉದ್ದೇಶಿತ ಭಾಷೆಯಲ್ಲಿ ಒಂದು ಪದವನ್ನು ಭಾಷಾಂತರಿಸಲು ವ್ಯಾಪಕ ಸಂಪರ್ಕಿಸುವ ಭಾಷೆಯಲ್ಲಿನ ಒಂದು ನುಡಿಗಟ್ಟನ್ನು ಬಳಸುವುದು ಅಗತ್ಯವಾಗಿರಬಹುದು (ಉದಾಹರಣೆಗೆ “ಮೇಲಕ್ಕೆ ಹೋಗು” ಅಥವ “ಮಲಗಿಕೊಳ್ಳಿ”). ಅನೇಕ ಭಾಷೆಗಳಲ್ಲಿ ವ್ಯಾಪಕ ಸಂಪರ್ಕಿಸುವ ಭಾಷೆಯಲ್ಲಿನ ಸಮಾನ ಪದಗಳಿಂತ ಹೆಚ್ಚಿನೆ ಮಾಹಿತಿಯನ್ನು ಒಳಗೊಂಡಿರುವ ಪದಗಳನ್ನು ಹೊಂದಿವೆ. ಈ ಸಂದರ್ಭದಲ್ಲಿ, ಪೂರಕ ಅನುವಾದಕರು ಹೆಚ್ಚುವರಿ ಮಾಹತಿಯನ್ನು ಆವರಣ ಚಿಹ್ನೆಯಲ್ಲಿ ಒಳಗೊಂಡಿದ್ದರ ಹೆಚ್ಚು ಸಹಾಯವಾಗುತ್ತದೆ , ಉದಾಹರಣೆಗೆ “ನಾವು(ಅಂತರ್ಗತ)”,ಅಥವಾ “ನೀವು(ಸ್ತ್ರೀಲಿಂಗ, ಬಹುವಚನ)”.

2.ವಾಕ್ಯ ಮತ್ತು ತಾರ್ಕಿಕ ರಚನೆಗಾಗಿ ವ್ಯಾಪಕ ಸಂಪರ್ಕಿಸುವ ಭಾಷೆಯನ್ನು ಬಳಸಿ

ಪೂರಕ ಅನುವಾದವು ವ್ಯಾಪಕ ಸಂಪರ್ಕಿಸುವ ಭಾಷೆಯಲ್ಲಿನ ವಾಕ್ಯ ರಚನೆಯನ್ನು ಬಳಸಬೇಕೆ ಹೊರತಾಗಿ ಉದ್ದೇಶಿತ ಭಾಷೆಯಲ್ಲಿ ಬಳಸುವ ರಚನೆಯಲ್ಲಾ. ಇದರರ್ಥ ಪೂರಕ ಅನುವಾದವು ವ್ಯಾಪಕ ಸಂಪರ್ಕ ಭಾಷೆಯಲ್ಲಿನ ಸ್ವಾಭಾವಿಕ ಪದ ಕ್ರಮವನ್ನು ಬಳಸಬೇಕೇ ಹೊರತಾಗಿ ಉದ್ದೇಶಿತ ಭಾಷೆಯಲ್ಲಿ ಬಳಸುವ ಪದ ಕ್ರಮವಲ್ಲ. ಪೂರಕ ಅನುವಾದವು ಪರಸ್ಪರ ನುಡಿಗಟ್ಟುಗಳಿಗೆ ಸಂಬಂಧಿಸಿದ ವಿಧಾನವನ್ನು ಮತ್ತು ವ್ಯಾಪಕ ಸಂಪರ್ಕಿಸುವ ಭಾಷೆಯ ಸ್ವಾಭಾವಿಕವಾದ ಕಾರಣ ಅಥವಾ ಉದ್ದೇಶದಂತಹ ತಾರ್ಕಿಕ ಸಂಬಂಧಗಳನ್ನು ಸೂಚಿಸುವ ವಿಧಾನವನ್ನು ಸಹ ಬಳಸಬೇಕು.