translationCore-Create-BCS_.../checking/trans-note-check/01.md

9.0 KiB

ಮೂಲ ಅನುವಾದದಲ್ಲಿ ಅನುವಾದ ಟಿಪ್ಪಣಿಗಳನ್ನು ಹೇಗೆ ಪರಿಶೀಲಿಸುವುದು

ಮೂಲ ಅನುವಾದಕ್ಕೆ ಪ್ರವೇಶ 1.ನೀವು ಪರಿಶೀಲಿಸಲು ಬಯಸುವ ಯೋಜನೆಯನ್ನು (ಸತ್ಯವೇದದ ಪುಸ್ತಕ) ಆಯ್ಕೆ ಮಾಡಿ 1.ನೀವು ಪರಿಶೀಲಿಸಲು ಬಯಸುವ ಟಿಪ್ಪಣಿಗಳ ವರ್ಗ ಅಥವಾ ವರ್ಗಗಳನ್ನು ಆಯ್ಕೆ ಮಾಡಿ 1.ನಿಮ್ಮ ಗೇಟ್ ವೇ ಭಾಷೆಯನ್ನು ಆಯ್ಕೆಮಾಡಿ 1.“ಪ್ರಾರಂಭಿಸು” ಆಯ್ಕೆ ಮಾಡಿ. ಪರಿಶೀಲಿಸಬೇಕಾದ ವಚನನ್ನು ವಿವಿಧ ವರ್ಗಗಳ ಟಿಪ್ಪಣಿಗಳಾಗಿ ವಿಂಗಡಿಸಿ ಎಡಭಾಗದಲ್ಲಿ ಪಟ್ಟಿ ಮಾಡಲಾಗುವುದು, ಪರಿಶೀಲಿಸಲು ಒಂದು ವಚನವನ್ನು ಆಯ್ಕೆ ಮಾಡಿ ಮತ್ತು ನೀಲಿ ಪಟ್ಟಿಯಲ್ಲಿರುವ ಆ ವಚನದ ಟಿಪ್ಪಣಿಯನ್ನು ಓದಿರಿ. ಹೊಸ ವರ್ಗಕ್ಕೆ ತೆರಳುವ ಮೊದಲು ಒಂದೇ ವರ್ಗದಲ್ಲಿರುವ ಎಲ್ಲಾ ಪದ್ಯಗಳನ್ನು ಪರಿಶೀಲಿಸುವುದು ಉತ್ತಮ.

ಕೆಲವು ಟಿಪ್ಪಣಿಗಳು ಪರಿಶೀಲಿಸುವ ನಿರ್ಧಿಷ್ಟ ವಚನಕ್ಕೆ ಅನ್ವಯವಾಗುವ ಹೆಚ್ಚು ಸಾಮಾನ್ಯ ಸಮಸ್ಯೆಗಳನ್ನು ಉಲ್ಲೇಖಿಸುತ್ತದೆ. ಈ ಹೆಚ್ಚು ಸಾಮಾನ್ಯ ಸಮಸ್ಯಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅದು ಪ್ರಸ್ತುತ ವಚನಕ್ಕೆ ಹೇಗೆ ಅನ್ವಯಿಸುತ್ತದೆ ಎಂದು ತಿಳಿಯಲು ಫಲಕದ ಬಲಭಾಗದಲ್ಲಿರುವ ಮಾಹಿತಿಯನ್ನು ಓದಿರಿ.

1.ಟಿಪ್ಪಣಿಯಲ್ಲಿನ ಪದ ಅಥವ ನುಡಿಗಟ್ಟಿಗೆ ಅನುವಾದವನ್ನು ಆಯ್ಕೆ ಮಾಡಿದ ನಂತರ, ”ಉಳಿಸು” ಆಯ್ಕೆ ಮಾಡಿ. 1.ನಡುಗಟ್ಟು ಅಥವ ಪದಕ್ಕೆ ಆಯ್ಕೆ ಮಾಡಲಾದ ಅನುವಾದ ಸನ್ನಿವೇಶದಲ್ಲಿ ಅರ್ಥಪೂರ್ಣವಾಗಿದೆಯೆ ಅಥವ ಇಲ್ಲವೆಂದು ಪರಿಗಣಿಸಿರಿ 1.ಟಿಪ್ಪಣಿ ತಿಳಿಸುವ ಸಮಸ್ಯವನ್ನು ಪರಿಗಣಿಸಿ ಅನುವಾದ ಸರಿಯಾಗಿದೆಯೆ ಅಥವಾ ಇಲ್ಲವೆ ಎಂದು ನಿರ್ಧರಿಸಿ. 1.ಈ ವಿಷಯವನ್ನು ಪರಿಗಣಿಸಿದ ನಂತರ ಅನುವಾದವು ಉತ್ತಮ ಅನುವಾದ ಎಂದು ನೀವು ಭಾವಿಸಿದರೆ, ನಂತರ ”ಉಳಿಸು ಮತ್ತು ಮುಂದುವರಿಸಿ” ಆಯ್ಕೆ ಮಾಡಿ. 1.ವಚನದಲ್ಲಿ ಸಮಸ್ಯ ಅಥವಾ ಪದ ಹಾಗು ನುಡಿಗಟ್ಟಿನ ಅನುವಾದ ಉತಮವಾಗಿಲ್ಲ ಎಂದು ನೀವು ಭಾವಿಸಿದ್ದರೆ, ವಚನವನ್ನು ಉತ್ತಮಗೊಳಿಸಲು ಅದನ್ನು ಬದಲಿಸಿ, ಅಥವಾ ಇಲ್ಲಿನ ಅನುವಾದದಲ್ಲಿ ತಪ್ಪೆಂದು ನೀವು ಭಾವಿಸಿದರೆ ನಿಮ್ಮ ಕೆಲಸವನ್ನು ಪರಿಶೀಲಿಸುವ ಯಾರಿಗಾದರೂ ಹೇಳಿಕೆ ಮೂಲಕ ಹೇಳಿರಿ. ನೀವು ಏನನ್ನಾದರು ಬದಲಿಸಿದ್ದರೆ, ನಿಮ್ಮ ಆಯ್ಕೆಯನ್ನು ಮತ್ತೆ ಮಾಡಬಾಕಾಗಬಹುದು. 1.ನೀವು ಹೇಳಿಕೆ ಅಥವ ತಿದ್ದು ಮಾಡುವುದನ್ನು ಮುಗಿಸಿದ ನಂತರ “ ಉಳಿಸು ಮತ್ತು ಮುಂದುವರಿಸು” ಆಯ್ಕೆ ಮಾಡಿ. ನೀವು ಪದ ಅಥವಾ ನುಡಿಗಟ್ಟುಗೆ ಮಾತ್ರ ಹೇಳಿಕೆ ಹೇಳಲು ಬಯಸಿದರೆ ಅದನ್ನು ಆಯ್ಕೆ ಮಾಡಿ. ನಂತರ ಮುಂದಿನ ಪದಕ್ಕೆ ಹೋಗಲು ಎಡಭಾಗದಲ್ಲಿರುವ ಪಟ್ಟಿಯಲ್ಲಿರುವ ಮುಂದಿನ ವಚನವನ್ನು ಆಯ್ಕೆ ಮಾಡಿ.

ಟಿಪ್ಪಣಿ ವಿಭಾಗದಲ್ಲಿನ ಎಲ್ಲಾ ವಚನಗಳನ್ನು ಆಯ್ಕೆ ಮಾಡಿದ ನಂತರ, ಆವರ್ಗದಲ್ಲಿನ ಅನುವಾದಗಳ ಪಟ್ಟಿಯನ್ನು ಪರಿಶೀಸಬಹುದು. ಈ ಕೆಳಗಿನ ಸೂಚನೆಯು ವಿಮರ್ಶಕರಿಗೆ ಅಥವಾ ಅನುವಾದ ತಂಡಕ್ಕೆ ಮಾತ್ರ. 1.ಎಡಭಾಗದಲ್ಲಿರುವ ಪ್ರತಿ ಅನುವಾದ ಟಿಪ್ಪಣಿ ವರ್ಗದ ಅಡಿಯಲ್ಲಿ ಪ್ರತಿ ಅನುವಾದ ಟಿಪ್ಪಣಿಗಾಗಿ ಮಾಡಿದ ಅನುವಾದ ಪಟ್ಟಿಯನ್ನುನೀವು ನೋಡಲು ಸಾಧ್ಯವಾಗುತ್ತದೆ. ನೀವು ಪರಿಶೀಲಿಸಲು ಬಯಸುವ ಭಾಗವನ್ನು ಆಯ್ಕೆ ಮಾಡಿ. ಅನುವಾದ ತಂಡದ ವಿಭಿನ್ನ ಸದಸ್ಯರು ವಿಭಿನ್ನ ವಿಶೇಷತೆಗಳನ್ನು ಹೊಂದಿರಬಹುದು. ಉದಾಹರಣೆಗೆ, ತಂಡದ ಒಬ್ಬ ಸದಸ್ಯರು ರೂಪಕಗಳನ್ನು ಪರಶೀಲಿಸುವಲ್ಲಿ ಉತ್ತಮರಾಗಿರುತ್ತಾರೆ, ಇನ್ನೊಬ್ಬರು ಕಷ್ಟಕರವಾದ ವ್ಯಾಕರಣಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸರಿಪಡಿಸಲು ಉತ್ತಮರಾಗಿರುತ್ತಾರೆ. ಉದಾಹರಣೆಗೆ **** 1.ಇತರರು ಮಾಡಿದ ಹೇಳಿಕೆಯನ್ನು ನೀವು ಪರಿಶೀಲಿಸಲು ಬಯಸಿದ್ದರೆ, ಮೇಲಿನ ಎಡಭಾಗದಲ್ಲಿರುವ “ಸಲಹಕಾರ” ದ ಬಲಭಾಗದಲ್ಲಿರುವ ಕೊಳುವೆ ಚಿಹ್ನೆಯನ್ನು ಆಯ್ಕೆ ಮಾಡಿ, “ಹೇಳಿಕೆ” ಸೇರಿದಂತೆ ಒಂದು ಪಟ್ಟಿಯು ತೆರೆಯುತ್ತದೆ.

  1. “ಹೇಳಿಕೆ” ಪಕ್ಕದಲ್ಲಿರುವ ಪೆಟ್ಟಿಯನ್ನು ಆಯ್ಕೆ ಮಾಡಿ. ಇದು ಹೇಳಿಕೆ ಇಲ್ಲದ ಎಲ್ಲಾ ವಚನಗಳನ್ನು ಕಣ್ಮರೆಯಾಗುತ್ತದೆ. 1.ಹೇಳಿಕೆಯನ್ನು ಓದಲು, ಪಟ್ಟಿಯಲ್ಲಿರುವ ಮೊದಲನೆಯ ವಚನವನ್ನು ಆಯ್ಕೆ ಮಾಡಿ.
  2.      “ಹೇಳಿಕೆ” ಆಯ್ಕೆ ಮಾಡಿ
    
  3.      ಹೇಳಿಕೆಯನ್ನು ಓದಿರಿ, ಮತ್ತು ಇದರ ಬಗ್ಗೆ ನೀವು ಏನು ಮಾಡುತ್ತೀರಿ ಎಂದು ನಿರ್ಧರಿಸಿ.
    

1.ನೀವು ವಚನದಲ್ಲಿ ಬದಲಿಸಲು ನಿರ್ಧರಿಸಿದ್ದರೆ, ನಂತರ “ರದ್ದು ಮಾಡು” ಆಯ್ಕೆ ಮಾಡಿ. ನಂತರ “ವಚನ ಬದಲಿಸು” ಆಯ್ಕೆ ಮಾಡಿ.ಇದು ಸಣ್ಣ ಸಣ್ಣ ಪರದೆ ತರೆಯುತ್ತದೆ, ಅಲ್ಲಿ ನೀವು ವಚನವನ್ನು ಬದಲಾಯಿಸಬಹುದು. 1.ನೀವು ಬದಲಿಸುವುದನ್ನು ಪೂರ್ಣಗೊಳಿಸಿದ ನಂತರ, ಬದಲಾವಣೆಗೆ ಕಾರಣವನ್ನು ಆರಿಸಿರಿ, ತದನಂತರ “ಉಳಿಸು” ಆಯ್ಕೆ ಮಾಡಿ. ನಿಮಗಾಗಿ ಉಳಿದಿರುವ ಎಲ್ಲಾ ಹೇಳಿಕೆಯಲ್ಲಿ ಕಾರ್ಯನಿರ್ವಹಿಸುವವರೆಗೆ ಈ ಪ್ರಕ್ರಿಯೆಯನ್ನು ಮುಂದುವರೆಸಿರಿ.

ನೀವು ಟಿಪ್ಪಣಿ ವರ್ಗ ಅಥವಾ ಸತ್ಯವೇದ ಪುಸ್ತಕವನ್ನು ಪರಿಶೀಲಿಸಿದ ನಂತರ, ಇನ್ನೂ ಕೆಲವು ವಚನಗಳು ಹಾಗು ಟಿಪ್ಪಣಿ ಪರಿಶೀಲನೆಯ ಬಗ್ಗೆ ನೀವು ಪ್ರಶ್ನೆಗಳನ್ನು ಹೊಂದಿರಬಹುದು. ಅನುವಾದ ತಂಡದಲ್ಲಿ ಇತರರೊಂದಿಗೆ ಕಷ್ಟಕರವಾದ ವಚನವನ್ನು ಚರ್ಚಿಸಲು ನೀವು ಬಯಸಬಹುದು, ಒಟ್ಟಿಗೆ ಪರಹಾರಗಳನ್ನು ಕಂಡುಹಿಡಿಯಲು ಪ್ರಯತ್ನಿಸಬಹುದು, ಹೆಚ್ಚು ಸತ್ಯವೇದ ಅನುವಾದ ಸಂಪನ್ಮೂಲಗಳನ್ನು ಅಧ್ಯಾಯನ ಮಾಡಿ, ಅಥವಾ ಪ್ರಶ್ನೆಗಳನ್ನು ಸತ್ಯವೇದ ಅನುವಾದ ತಜ್ಞರಿಗೆ ಉಲ್ಲೇಖಿಸಿ.