translationCore-Create-BCS_.../checking/spelling/01.md

5.2 KiB

ಶ್ರೋತೃಗಳು ಅನುವಾದವನ್ನು ಸುಲಭವಾಗಿ ಓದಿ ಅರ್ಥಮಾಡಿಕೊಳ್ಳಬೇಕಾದರೆ, ನೀವು ಪದಗಳನ್ನು ಸಮಂಜಸವಾಗಿ ಉಚ್ಚರಿಸುವುದು ಬಹಳ ಮುಖ್ಯ. ಉದ್ದೇಶಿತ ಭಾಷೆಯಲ್ಲಿ ಬರವಣಿಗೆ ಅಥವಾ ಕಾಗುಣಿತ ಸಂಪ್ರದಾಯವಿಲ್ಲದಿದ್ದರೆ ಇದು ಕಷ್ಟಕರವಾಗುತ್ತದೆ. ಅನುವಾದದ ವಿವಿಧ ಭಾಗದಲ್ಲಿ ಹಲವಾರು ಜನರು ಕೆಲಸ ಮಾಡುತ್ತಿರುವಾಗ, ಅವರು ಪರಸ್ಪರ ಒಂದೇ ಪದವನ್ನು ವಿಭಿನ್ನವಾಗಿ ಉಚ್ಚರಿಸಬಹುದು. ಆ ಕಾರಣಕ್ಕಾಗಿ, ಅನುವಾದದ ತಂಡವು ಪದಗಳನ್ನು ಉಚ್ಚರಿಸಲು ಹೇಗೆ ಯೋಜಿಸುತ್ತದೆ ಎಂಬುವುದರ ಕುರಿತು ಮಾತನಾಡಲು ಅನುವಾದಡ ತಂಡ ಅನುವಾದವನ್ನು ಪ್ರಾರಂಭಿಸುವ ಮೊದಲು ಒಟ್ಟಿಗೆ ಭೇಟಿಯಾಗುವುದು ಬಹಳ ಮುಖ್ಯ

ಉಚ್ಚರಿಸಲು ಕಷ್ಟಕರವಾದ ಪದಗಳ ಬಗ್ಗೆ ತಂಡವಾಗಿ ಚರ್ಚಿಸಿರಿ. ಪದಗಳಲ್ಲಿ ಪ್ರತಿನಿಧಿಸಲು ಕಷ್ಟವಾಗಿರುವ ಶಬ್ದಗಳಿದ್ದರೆ ನೀವು ಬಳಸುತ್ತಿರುವ ಬರವಣೆಗೆಯ ವ್ಯವಸ್ಥೆಯಲ್ಲಿ ನೀವು ಬದಲಾವಣೆ ಮಾಡಬೇಕಾಗಬಹುದು (ನೋಡಿಆಲ್ಫಾet/Orthography. ಪದಗಳಲ್ಲಿನ ಶಬ್ದಗಳನ್ನು ವಿಭಿನ್ನ ರೀತಿಯಲ್ಲಿ ಪ್ರತಿನಿಧಿಸಬಹುದಾದರೆ, ಅವುಗಳನ್ನು ಹೇಗೆ ಉಚ್ಚರಿಸಬೇಕೆಂದು ತಂಡವು ಬೇಕಾಗುತ್ತದೆ. ವರ್ಣಮಾಲೆಯ ಕ್ರಮಕ್ಕನುಗುಣಾಗಿ ಉಪಯೋಗಿಸಲು ತೀರ್ಮಾನಿಸಿದ ಕಾಗುಣಿತಗಳ ಪಟ್ಟಿಯನ್ನು ಮಾಡಿರಿ. ಭಾಷಾಂತರಿಸುವಾಗ ಸಮಾಲೊಚಿಸುವುದಕ್ಕಾಗಿ ತಂಡದ ಪ್ರತಿಯೊಬ್ಬರು ಈ ಪಟ್ಟಿಯ ನಕಲನ್ನು ಹೊಂದಿದ್ದಾರೆಂದು ಖಚಿತಪಡಿಸಿಕೊಳ್ಳಿ. ಇತರ ಕಷ್ಟಕರವಾದ ಪದಗಳನ್ನು ಪಟ್ಟಿಗೆ ಸೇರಿಸಿರಿ, ಮತ್ತು ಎಲ್ಲರಪಟ್ಟಿಗೆ ಆಎಲ್ಲಾ ಕಾಗುಣಿತಗಳು ಸೇರಿಸೆಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿರಿ. ನಿಮ್ಮ ಕಾಗುಣಿತ ಪಟ್ಟಿಯನ್ನು ನಿರ್ವಹಿಸಲು ಸ್ಪ್ರೆಡ್ಶೀಟ್ ಬಳಸುವುದು ಸಹಾಯಕರವಾಗಬಹುದು. ಇದನ್ನು ಸುಲಭವಾಗಿ ನವಿಕರಿಸಬಹುದು ಮತ್ತು ವಿದ್ಯುನ್ಮಾನವಾಗಿ ಹಂಚಿಕೊಳ್ಳಬಹುದು ಅಥವ ನಿಯತಕಾಲಿಕವಾಗಿ ಮುದ್ರಿಸಬಹುದು.

ಸತ್ಯವೇದದಲ್ಲಿರುವ ಜನರ ಮತ್ತು ಸ್ಥಳಗಳ ಹೆಸರುಗಳು ಉಚ್ಚರಿಸಲು ಕಷ್ಟಕರವಾಗಿರುತ್ತದೆ ಏಕೆಂದರೆ ಅವುಗಳಲ್ಲಿ ಉದ್ದೇಶಿತ ಭಾಷೆಯಲ್ಲಿ ತಿಳಿದಿರುವುದಿಲ್ಲ. ಇವುಗಳನ್ನು ನಿಮ್ಮ ಕಾಗುಣಿತ ಪಟ್ಟಿಯಲ್ಲಿ ಸೇರಿಸಲು ಮರಿಯಬಾರದು

ಕಾಗುಣಿತವನ್ನು ಪರೀಕ್ಷಿಸಲು ಕಂಪ್ಯೂಟರ್ ಉತ್ತಮ ಸಹಾಯವಾಗಬಹುದು. ನೀವು ಗೇಟ್ ವೇ ಭಾಷೆಯಲ್ಲಿ ಕೆಲಸ ಮಾಡುತ್ತಿದ್ದರೆ, ಅದರಲ್ಲಿ ವರ್ಡ್ ಪ್ರೊಸೆಸರ್ ಶಬ್ದಕೋಶವನ್ನು ಮೊದಲೇ ಹೊಂದಿರುತ್ತದೆ. ನೀವು ಬೇರೆ ಭಾಷೆಯಲ್ಲಿ ಅನುವಾದಿಸುತ್ತಿದ್ದರೆ, ತಪ್ಪಾಗಿ ಬರೆಯಲಾದ ಪದಗಳನ್ನು ಸರಿಪಡಿಸಲು ನೀವು ವರ್ಡ್ ಪ್ರೊಸೆಸರ್ನ ’ಹುಡುಕಾಟ ಮತ್ತು ಬದಲಿ’ ಆಯ್ಕೆಯನ್ನು ಬಳಸಬಹುದು. ಪ್ಯಾರಾ ಪಠ್ಯವು ಎಲ್ಲಾ ರೂಪಾಂತರ ಕಾಗುಣಿತಗಳನ್ನು ಹೊಂದಿರುವ ಕಾಗುಣಿತ ಪರಿಶೀಲನಾ ವೈಶಿಷ್ಟ್ಯವನ್ನು ಹೊಂದಿದೆ. ಇದು ನಿಮಗೆ ಇವುಗಳನ್ನು ಪ್ರಸ್ತುತಪಡಿಸುತ್ತದೆ ಮತ್ತು ನಂತರ ನೀವು ಯಾವ ಕಾಗುಣಿತಗಳನ್ನು ಬಳಸಲು ನಿರ್ಧರಿಸಿದ್ದೀರಿ ಎಂಬುವುದನ್ನು ನೀವು ಆಯ್ಕೆ ಮಾಡಬಹುದು.