translationCore-Create-BCS_.../checking/punctuation/01.md

4.2 KiB

“ವಿರಾಮ ಚಿಹ್ನೆ” ಎನ್ನುವದು ಒಂದು ವಾಕ್ಯವನ್ನು ಯಾವರೀತಿ ಓದಬೇಕು ಅಥವಾ ಯಾವ ರೀತಿ ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸುವ ಗುರುತುಗಳನ್ನು ಸೂಚಿಸುತ್ತದೆ. ಅಲ್ಪ ವಿರಾಮ ಅಥವಾ ಪೂರ್ಣ ವಿರಾಮ ಚಿಹ್ನೆ ಮತ್ತು ಮಾತನಾಡುವ ವ್ಯಕ್ತಿಯ ಮಾತುಗಳ ಸುತ್ತಲು ಇರುವ ಉಲ್ಲೇಖನ ಗುರುತುಗಳಂತೆ ಅಲ್ಲಲ್ಲಿ ನಿಲ್ಲಿಸಿ ಓದುವುದಕ್ಕೆ ಇರುವ ಗುರುತುಗಳೆಲ್ಲವನ್ನು ಉದಾಹರಣೆಗಳಲ್ಲಿ ನೋಡಬಹುದು . ಓದುಗಾರರು ಅನುವಾದವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಮತ್ತು ಓದುವುದಕ್ಕೆ ಸುಲಭವಾಗಿರುವಂತೆ ಮಾಡುವ ಕ್ರಮದಲ್ಲಿ, ನೀವು ಸಮಂಜಸವಾದ ವಿರಾಮ ಚಿಹ್ನೆಗಳನ್ನು ಉಪಯೋಗಿಸುವದು ತುಂಬಾ ಪ್ರಾಮುಖ್ಯ.

ಅನುವಾದ ಮಾಡುವುದಕ್ಕೆ ಮುಂಚಿತವಾಗಿ, ಅನುವಾದ ತಂಡವು ಅನುವಾದದಲ್ಲಿ ನೀವು ಉಪಯೋಗಿಸುವ ವಿರಾಮ ಚಿಹ್ನೆಗಳ ವಿಧಾನಗಳ ಕುರಿತು ನಿರ್ಣಯಿಸುವ ಅವಶ್ಯಕತೆ ಇರುತ್ತದೆ. ರಾಷ್ಟ್ರೀಯ ಭಾಷೆಯು ಉಪಯೋಗಿಸುವ ಅಥವಾ ಅದಕ್ಕೆ ಸಂಬಂಧಪಟ್ಟ ಭಾಷೆಯ ಬೈಬಲ್ ಉಪಯೋಗಿಸುವ ವಿರಾಮ ಚಿಹ್ನೆಗಳ ವಿಧಾನವನ್ನು ತೆಗೆದುಕೊಳ್ಳುವುದು ತುಂಬಾ ಸುಲಭವಾಗಿರಬಹುದು. ಒಂದುಸಲ ತಂಡವು ವಿಧಾನದ ಕುರಿತಾಗಿ ನಿರ್ಣಯಿಸಿದಾಗ, ಪ್ರತಿಯೊಬ್ಬರು ಅದನ್ನೇ ಅನುಸರಿಸತಕ್ಕದ್ದು . ವಿವಿಧ ವಿರಾಮ ಚಿಹ್ನೆಗಳ ಗುರುತುಗಳನ್ನು ಸರಿಯಾಗಿ ಉಪಯೋಗಿಸುವು ಉದಾಹರಣೆಗಳ ಮಾರ್ಗದರ್ಶಕ ಹಾಳೆಯನ್ನು ತಂಡದಲ್ಲಿರುವ ಪ್ರತಿಯೊಬ್ಬ ಸದಸ್ಯರಿಗೆ ಕೊಡುವುದು ತುಂಬಾ ಸಹಾಯಕರವಾಗಿರುತ್ತದೆ.

ಮಾರ್ಗದರ್ಶಕ ಹಾಳೆ ಇದ್ದಾಗ್ಯೂ , ವಿರಾಮ ಚಿಹ್ನೆಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸದಿರುವುದು ಅನುವಾದಕರು ಮಾಡುವ ಸಹಜವಾದ ತಪ್ಪು . ಈ ಕಾರಣದಿಂದಲೇ, ಒಂದು ಪುಸ್ತಕವನ್ನು ಅನುವಾದ ಮಾಡಿದಾದನಂತರ, ಅದನ್ನು ParaTExt (ಸಾಹಿತ್ಯಿಕ ವ್ಯಾಖ್ಯಾಯನ) ಒಳಗೆ ತೆಗೆದುಕೊಂಡು ಬರಬೇಕೆಂದು ನಾವು ಶಿಫಾರಸು ಮಾಡುತ್ತೇವೆ. ParaTExt ನೊಳಗೆ ಭಾಷಾಂತರ ಮಾಡುವ ಭಾಷೆಯಲ್ಲಿ ವಿರಾಮ ಚಿಹ್ನೆಗಳಿಗಾಗಿ ನೀವು ಕೆಲವೊಂದು ನಿಯಮಗಳನ್ನು ಇಡಬಹುದು, ಇದಾದನಂತರ ಅದರಲ್ಲಿರುವ ವಿವಿಧ ವಿರಾಮ ಚಿಹ್ನೆಗಳನ್ನು ಪರಿಶೀಲನೆ ಮಾಡಿರಿ. ParaTExt ವಿರಾಮ ಚಿಹ್ನೆಗಳ ತಪ್ಪುಗಳನ್ನು ಕಂಡುಹಿಡಿಯುತ್ತದೆ. ಆಗ ನೀವು ಅವುಗಳನ್ನು ಸರಿಪಡಿಸಬಹುದು. ಈ ಎಲ್ಲಾ ವಿರಾಮ ಚಿಹ್ನೆಗಳ ಪರಿಶೀಲನೆಯನ್ನು ಮಾಡಿದಾದನಂತರ, ಅನುವಾದದಲ್ಲಿ ಸರಿಯಾಗಿ ವಿರಾಮ ಚಿಹ್ನೆಗಳನ್ನು ಉಪಯೋಗಿಸಿದ್ದಾರೆಂದು ನಿಶ್ಚಯತೆಯನ್ನು ಪಡೆದುಕೊಂಡಿರಬೇಕು.