translationCore-Create-BCS_.../checking/natural KA/01.md

5.0 KiB
Raw Blame History

ಸ್ವಾಭಾವಿಕ ಅನುವಾದ

ಸತ್ಯವೇದವನ್ನು ಸ್ವಾಭಾವಿಕವಾಗಿ ಅನುವಾದ ಮಾಡುವುದು ಎಂದರೆ:

ಅನುವಾದ ಮಾಡಿರುವುದು ಒಬ್ಬ ವಿದೇಶೀಯನು ಮಾಡಿರುವಂತೆ ಅಲ್ಲ ಲಕ್ಷ್ಯ ಭಾಷೆಯ ಸಮಾಜದ ಒಬ್ಬ ಸದಸ್ಯರು ಬರೆದಂತೆ ಇರಬೇಕು. ಲಕ್ಷ್ಯ ಭಾಷೆಯ ಮಾತುಗಾರರು ಅದನ್ನು ಹೇಳಿದಂತೆಯೇ ಅನುವಾದವು ವಿಷಯಗಳನ್ನು ಹೇಳಬೇಕು. ಅನುವಾದ ಸ್ವಾಭಾವಿಕವಾಗಿದ್ದಾಗ, ಅರ್ಥಮಾಡಿಕೊಳ್ಳುವುದು ಸುಲಭವಾಗಿರುತ್ತದೆ.

ಅನುವಾದ ಸ್ವಾಭಾವಿಕವಗಿದ್ದೆಯೋ ಎಂದು ಪರೀಕ್ಷಿಸಲು, ಮೂಲ ಭಾಷೆಯೊಂದಿಗೆ ಅದನ್ನು ಹೋಲಿಸುವುದು ಸಹಾಯಕರವಾಗಿರುವದಿಲ್ಲ. ಸ್ವಾಭಾವಿಕ ಈ ಪರೀಕ್ಷೆಯಲ್ಲಿ, ಯಾರು ಮೂಲ ಭಾಷೆಯಲ್ಲಿ ಸತ್ಯವೇದವನ್ನು ನೋಡಬಾರದು. ನಿಖರತೆಗಾಗಿ ಪರೀಕ್ಷೆ ಮತ್ತು ಇನ್ನಿತರ ಪರೀಕ್ಷೆಗಳಿಗಾಗಿ ಜನರು ಮೂಲ ಭಾಷೆಯಲ್ಲಿ ಸತ್ಯವೇದವನ್ನು ನೋಡುತ್ತಾರೆ ಆದರೆ ಈ ಪರೀಕ್ಷೆಯಲ್ಲಿ ನೋಡುವುದಿಲ್ಲ.

ಅನುವಾದ ಸ್ವಾಭಾವಿಕವಾಗಿರಲು ನೀವು ಅಥವಾ ಭಾಷಾ ಸಮುದಾಯದ ಬೇರೊಬ್ಬರು ಅದನ್ನು ಗಟ್ಟಿಯಾಗಿ ಓದಬೇಕು ಅಥವಾ ಅದರ ರಿಕಾರ್ಡಿಂಗನ್ನು ನುಡಿಸಬೇಕು. ಬರವಣಿಗೆಯಲ್ಲಿ ಅದನ್ನು ನೋಡುತ್ತಿರುವಾಗ ಅನುವಾದದ ಸ್ವಾಭಾವಿಕತ್ವವನ್ನು ಪರೀಕ್ಷಿಸುವುದು ಕಷ್ಟಕರವಾಗಿರುತ್ತದೆ. ಆದರೆ ನಿಮ್ಮ ಜನರು ಭಾಷೆಯನ್ನು ಕೇಳಿದಾಗ, ಅದು ಸರಿಯಾಗಿದ್ದೆಯೋ ಇಲ್ಲವೋ ಎಂದು ಅವರು ತಕ್ಷಣವೇ ತಿಳಿಯುತ್ತಾರೆ.

ಲಕ್ಷ್ಯ ಭಾಷೆಯನ್ನು ಮಾತಾಡುವ ಮೊತ್ತೊಬ್ಬ ವ್ಯಕ್ತಿಗೆ ಅಥವಾ ಜನರ ಗುಂಪಿಗೆ ಅದನ್ನು ನೀವು ಗಟ್ಟಿಯಾಗಿ ಓದಿ ಹೇಳಬಹುದು. ನೀವು ಅದನ್ನು ಓದುವುದಕ್ಕೆ ಪ್ರಾರಂಭಿಸುವುದಕ್ಕಿಂತ ಮೊದಲು, ನಿಮ್ಮ ಭಾಷೆಯ ಸಮುದಾಯದಲ್ಲಿ ಕೇಳದಿರುವ ಮಾತುಗಳನ್ನು ಅವರು ಕೇಳಿಸಿಕೊಂಡಾಗ ನೀವು ಓದುವುದನ್ನು ನಿಲ್ಲಿಸುವಂತೆ ಅದನ್ನು ಕೇಳುತ್ತಿರುವ ಜನರಿಗೆ ಸೂಚಿಸಿರಿ. ಯಾರಾದರು ನಿಮ್ಮನ್ನು ನಿಲ್ಲಿಸಿದರೆ, ಆ ಸಂಗತಿಯನ್ನು ಇನ್ನು ಸ್ವಾಭಾವಿಕವಾಗಿ ಯಾವ ರೀತಿಯಲ್ಲಿ ಹೇಳಬಹುದೆಂದು ನೀವು ಒಟ್ಟಿಗೆ ಚರ್ಚೆ ಮಾಡಬಹುದು.

ಅನುವಾದ ಕುರಿತು ಮಾತಾಡುತ್ತಿರುವಾಗ, ನಿಮ್ಮ ಗ್ರಾಮದಲ್ಲಿ ಇದೆ ರೀತಿಯದ ಸಂದರ್ಭದಲ್ಲಿ ಯಾವ ರೀತಿಯಲ್ಲಿ ಮಾತಾಡುತ್ತಾರೆಂದು ಒಂದು ಸನ್ನಿವೇಶವನ್ನು ನೆನಪು ಮಾಡಿಕೊಳ್ಳುವುದು ಸಹಾಯಕರವಾಗಿರುತ್ತದೆ. ಆ ವಿಷಯವನ್ನು ಕುರಿತು ನಿಮಗೆ ತಿಳಿದಿರುವ ಜನರು ಹೇಗೆ ಮಾತಾಡುತ್ತಾರೆಂದು ಊಹಿಸಿಕೊಳ್ಳಿ ಮತ್ತು ಗಟ್ಟಿಯಾಗಿ ಅದೇ ರೀತಿಯಲ್ಲಿ ಹೇಳಿ. ಆ ರೀತಿಯಲ್ಲಿ ಹೇಳಿರುವುದು ಒಳ್ಳೆಯದೆಂದು ಮತ್ತು ಸ್ವಾಭಾವಿಕವಾದ ರೀತಿಯೆಂದು ಬೇರೆಯವರು ಅಂಗೀಕರಿಸಿದರೆ, ಅನುವಾದವನ್ನು ಆ ರೀತಿಯಲ್ಲೇ ಮಾಡಿರಿ.

ಅನುವಾದ ಭಾಗವನ್ನು ಹಲವಾರು ಬಾರಿ ಓದುವುದು ಅಥವಾ ನುಡಿಸುವುದು ಸಹ ಸಹಾಯಕರವಾಗಿರುತ್ತದೆ. ಅವರು ಕೇಳುತ್ತಿರುವ ಪ್ರತಿಯೊಂದು ಬಾರಿ ಅದರಲ್ಲಿ ಅವರು ವ್ಯತ್ಯಾಸವನ್ನು ಕಾಣಬಹುದು ಆ ಸಂಗತಿಗಳನ್ನು ಇನ್ನು ಸ್ವಾಭಾವಿಕವಾಗಿ ಹೇಳಬಹುದು.