translationCore-Create-BCS_.../checking/intro-check/01.md

7.5 KiB

ಅನುವಾದ ಪರಿಶೀಲನೆ ಮಾಡುವ ಕೈ ಪಿಡಿ

ನಿಖರತೆಗಾಗಿ, ಸ್ಪಷ್ಟತೆಗಾಗಿ, ಮತ್ತು ಸ್ವಾಭಾವಿಕತೆಗಾಗಿ ಇತರ ಭಾಷೆಗಗಳಲ್ಲಿ ಮಾಡಿದ ಬೈಬಲ್ ಅನುವಾದಗಳನ್ನು ಹೇಗೆ ಪರಿಶೀಲನೆ ಮಾಡಬೇಕೆಂದು ಈ ಕೈ ಪುಸ್ತಕವು ವಿವರಿಸುತ್ತದೆ. (ಗೇಟ್ ವೇ ಭಾಷೆಯನ್ನು ಪರಿಶೀಲನೆ ಮಾಡುವುದಕ್ಕಿರುವ ಪದ್ಧತಿಗಾಗಿ, Gateway Language Manual ನೋಡಿರಿ)). ಈ ಅನುವಾದ ಪರಿಶೀಲನೆ ಮಾಡುವ ಕೈ ಪುಸ್ತಕವು ಕೂಡ ಅನುವಾದವನ್ನು ಅನುಮೋದನೆ ಮಾಡುವ ಪ್ರಾಮುಖ್ಯತೆಯ ಕುರಿತಾಗಿ ಮತ್ತು ಭಾಷೆಯ ಪ್ರಾಂತ್ಯದ ಸಭೆಯ ನಾಯಕರಿಂದ ಅನುವಾದ ಪದ್ಧತಿಯ ಕುರಿತಾಗಿಯು ಚರ್ಚೆ ಮಾಡುತ್ತದೆ

ಅನುವಾದ ತಂಡವು ತಮ್ಮ ಕೆಲಸಗಳನ್ನು ಒಬ್ಬರನ್ನೊಬ್ಬರು ಪರಿಶೀಲನೆ ಮಾಡುವುದಕ್ಕೆ ಉಪಯೋಗಿಸುವ ಅನುವಾದವನ್ನು ಪರಿಶೀಲನೆ ಮಾಡುವುದಕ್ಕೆ ಕೈ ಪುಸ್ತಕವು ನಿಯಮಗಳೊಂದಿಗೆ ಆರಂಭವಾಗುತ್ತದೆ. ಈ ಪರಿಶೀಲನೆಗಳಲ್ಲಿ [ಬಾಯಿ ಮಾತಿನಿಂದ ಪರಿಶೀಲನೆ ಮಾಡುವವರು ಇರುತ್ತಾರೆ] (../peer-check/01.md) ಮತ್ತು [ತಂಡದವರೆಲ್ಲರು ಬಾಯಿ ಮಾತಿನಿಂದ ಪರಿಶೀಲನೆ ಮಾಡುವ ಭಾಗಗಳು ಇರುತ್ತವೆ] (../team-oral-chunk-check/01.md). translationCore ಸಾಫ್ಟ್.ವೇರ್ ಮೂಲಕ ಅನುವಾದವನ್ನು ಪರಿಶೀಲನೆ ಮಾಡುವುದಕ್ಕೆ ಅನುವಾದ ತಂಡವು ಉಪಯೋಗಿಸಬೇಕಾದ ಕೆಲವು ನಿಯಮಗಳನ್ನು ಕೊಡಲ್ಪಟ್ಟಿರುತ್ತವೆ. ಇವುಗಳಲ್ಲಿ [ಅನುವಾದ ಪದಗಳ ಪರಿಶೀಲನೆ] (../important-term-check/01.md) ಮತ್ತು [ಅನುವಾದ ಸೂಚನೆಗಳನ್ನು ಪರಿಶೀಲನೆ] ಒಳಗೊಂಡಿರುತ್ತವೆ (../trans-note-check/01.md).

ಇದೆಲ್ಲಾ ಆದನಂತರ, ಸ್ಪಷ್ಟತೆಗಾಗಿ ಮತ್ತು ಸ್ವಾಭಾವಿಕತೆಗಾಗಿ [ಭಾಷೆಯ ಸಮುದಾಯದೊಂದಿಗೆ] ಅನುವಾದವನ್ನು ಪರಿಶೀಲನೆ ಮಾಡುವ ಅವಶ್ಯಕತೆ ಅನುವಾದ ತಂಡಕ್ಕೆ ಇರುತ್ತದೆ. ಇದಕ್ಕೆ ಕಾರಣ ಅನುವಾದ ತಂಡಕ್ಕೆ ಗೊತ್ತಿರದ ಕೆಲವೊಂದು ವಿಷಯಗಳನ್ನು ಇನ್ನೂ ಇತರ ಭಾಷೆಯನ್ನು ಮಾತನಾಡುವವರು ಸಲಹೆಗಳನ್ನು ನೀಡುವುದರಿಂದ ಇದು ತುಂಬಾ ಪ್ರಾಮುಖ್ಯ. ಕೆಲವೊಂದುಬಾರಿ ಅನುವಾದ ತಂಡವು ಅನುವಾದವನ್ನು ಒಂದು ರೀತಿಯಲ್ಲಿ ಅಂದರೆ ಅರ್ಥವಾಗದ ರೀತಿಯಲ್ಲಿ ಮಾಡುತ್ತಿರುತ್ತಾರೆ, ಯಾಕಂದರೆ ಅವರು ಮೂಲ ಭಾಷೆಯನ್ನೂ ಭಾಷೆಯಲ್ಲಿನ ಅಕ್ಷರಾರ್ಥವಾಗಿ ಅನುವಾದ ಮಾಡುತ್ತಾರೆ. ಭಾಷೆಯನ್ನು ಮಾಡುವ ಇತರರು ಅದನ್ನು ಸರಿಪಡಿಸಲು ಸಹಾಯಕವಾಗಿರುತ್ತಾರೆ. ಇಂಥ ಸಮಯದಲ್ಲೇ ಅನುವಾದ ತಂಡವು ಇನ್ನೊಂದು ಪರಿಶೀಲನೆ ಮಾಡಬಹುದು, ಅದೇನಂದರೆ ಸಭಾಪಾಲಕರೊಂದಿಗೆ ಪರಿಶೀಲನೆ ಮಾಡಿಸುವುದು ಅಥವಾ [ಸಭಾ ನಾಯಕರ ಪರಿಶೀಲನೆ] ಮಾಡುವುದು (../language-community-check/01.md). ಸಭಾಪಾಲಕರು ಗೇಟ್ ವೆ ಭಾಷೆಯಲ್ಲಿ ಬೈಬಲ್ ಕುರಿತಾಗಿ ಹೆಚ್ಚಾಗಿ ತಿಳಿದಿರುವುದರಿಂದ, ಅವರು ಅನುವಾದವು ನಿಖರತೆಯಾಗಿ ಇದೆಯೋ ಇಲ್ಲವೋ ಎಂದು ಗೇಟ್ ವೆ ಬೈಬಲ್.ಗಾಗಿ ಪರಿಶೀಲನೆ ಮಾಡುತ್ತಾರೆ. ಅನುವಾದ ತಂಡವು ನೋಡದ ಕೆಲವೊಂದು ತಪ್ಪುಗಳನ್ನು ಅವರು ಕೂಡ ಕಂಡುಹಿಡಿಯುತ್ತಾರೆ, ಯಾಕಂದರೆ ಅನುವಾದ ತಂಡವು ಆ ಕೆಲಸದಲ್ಲಿ ಅಷ್ಟು ಹತ್ತಿರವಾಗಿ ಅಥವಾ ಹೆಚ್ಚಾಗಿ ಕೆಲಸಮಾಡಿರುವುದಿಲ್ಲ. ಅಷ್ಟೇ ಅಲ್ಲದೆ, ಅನುವಾದ ತಂಡದಲ್ಲಿರದ ಭಾಷೆಯನ್ನು ಮಾತನಾಡದ ಸಭಾಪಾಲಕರಿಗೆ ಇರುವ ಬೈಬಲ್ ಜ್ಞಾನವು ಅಥವಾ ಅನುಭವವು ಅನುವಾದ ತಂಡಕ್ಕೆ ಇರದಿರಬಹುದು. ಈ ವಿಧಾನದಲ್ಲಿ, ಸಂಪೂರ್ಣ ಭಾಷೆಯ ಸಮುದಾಯದವರು ಭಾಷಾಂತರ ಮಾಡುವ ಭಾಷೆಯಲ್ಲಿ ಬೈಬಲ್ ಅನುವಾದವು ನಿಖರತೆಯಾಗಿದೆ, ಸ್ಪಷ್ಟವಾಗಿದೆ ಮತ್ತು ಸ್ವಾಭಾವಿಕವಾಗಿದೆಯೆಂದು ನಿಶ್ಚಯಪಡಿಸುವುದಕ್ಕೆ ಎಲ್ಲರು ಕೆಲಸ ಮಾಡುವರು.

ಬೈಬಲ್ ಅನುವಾದ ನಿಖರತೆಯನ್ನು ಪರಿಶೀಲನೆ ಮಾಡುವ ಇನ್ನಿತರ ವಿಧಾನವು ಏನಂದರೆ ನಲ್ಲಿ [ಶಬ್ದವನ್ನು ಜೋಡಣೆ] ಮಾಡುವ (../accuracy-check/01.md) ಸಾಧನೆಯನ್ನು ಉಪಯೋಗಿಸಿ ಬೈಬಲ್ ಭಾಷೆಯ ವಾಸ್ತವಿಕ ಭಾಷೆಯಗಳನ್ನು ಜೋಡಿಸುವುದಾಗಿರುತ್ತದೆ. ಈ ಎಲ್ಲಾ ಪರಿಶೀಲನೆಗಳನ್ನು ಮಾಡಿದಾದನಂತರ ಮತ್ತು ಅನುವಾದವನ್ನು ಜೋಡಣೆ ಮಾಡಿದನಂತರ, ಸ್ಥಳೀಯ ಸಭೆಯ ನಾಯಕರ ಗುಂಪು ಅನುವಾದವನ್ನು [ಪುನರ್ ಪರಿಶೀಲನೆಯನ್ನು] (../alignment-tool/01.md) ಮಾಡುವರು ಮತ್ತು ಅವರ [ಅನುಮೋದನೆಯನ್ನು] (../vol2-steps/01.md) ತಿಳಿಸುವರು. ಯಾಕಂದರೆ ಸಭೆಯ ಅನೇಕಮಂದಿ ನಾಯಕರು ಅನುವಾದ ಮಾಡಿರುವ ಭಾಷೆಯನ್ನು ಮಾತನಾಡುವುದಿಲ್ಲ, ತಿದ್ದುಪಡಿ ಮಾಡುವುದಕ್ಕೆ [ಅನುವಾದಕ್ಕೆ ತಿರುಗಿ ಹೋಗುವುದಕ್ಕೆ] (../level3-approval/01.md) ಕೆಲವೊಂದು ನಿಯಮಗಳು ಕೂಡ ಇದ್ದಾವೆ, ಇದರಿಂದ ಜನರು ಮಾತನಾಡದ ಭಾಷೆಯಲ್ಲಿ ಅನುವಾದವನ್ನು ಪರಿಶೀಲನೆ ಮಾಡುವುದಕ್ಕೆ ಜನರಿಗೆ ಅನುಮತಿಯನ್ನು ಕೊಡುತ್ತವೆ.