translationCore-Create-BCS_.../checking/important-term-check/01.md

9.8 KiB

ಮೂಲ ಅನುವಾದದಲ್ಲಿ ಅನುವಾದ ಪದಗಳ ಪರಿಶೀಲನೆ ಹೇಗೆ ಮಾಡಬೇಕು

  • ಮೂಲ ಅನುವಾದ ದೊಳಗೆ ಸೈನ್ ಇನ್ ಆಗಿರಿ
  • ನೀವು ಪರಿಶೀಲನೆ ಮಾಡಬೇಕೆಂದೆನ್ನುವ (ಬೈಬಲ್ ಪುಸ್ತಕವನ್ನು) ಪ್ರಾಜೆಕ್ಟನ್ನು ಆಯ್ಕೆ ಮಾಡಿಕೊಳ್ಳಿರಿ
  • ನೀವು ಪರಿಶೀಲನೆ ಮಾಡಬೇಕೆನ್ನುವ ಪದಗಳ ಅಥವಾ ಶಬ್ದಗಳ ವರ್ಗ ಅಥವಾ ವರ್ಗ ಗಳನ್ನು ಆಯ್ಕೆಮಾಡಿಕೊಳ್ಳಿರಿ
  • ನಿಮ್ಮ ಉಪಯೋಗಿಸಲ್ಪಡುವ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಿರಿ
  • “ಪ್ರಾರಂಭಿಸು” ಒತ್ತಿರಿ
  • ಬೈಬಲ್ ವಾಕ್ಯದ ಬಲ ಬದಿಯಲ್ಲಿ ಕಾಣಿಸುವ ಸೂಚನೆಗಳನ್ನು ಅನುಸರಿಸುವದರ ಮೂಲಕ ಎಡ ಬದಿಯಲ್ಲಿರುವ ಶಬ್ದಗಳ ಪಟ್ಟಿಯ ಮೂಲಕ ಕೆಲಸ ಮಾಡಿರಿ.
  • ಮೂಲ ಶಬ್ದವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು, ನೀವು ನೀಲಿ ಬಾರ್.ನಲ್ಲಿ ಬರುವ ಚಿಕ್ಕ ವ್ಯಾಖ್ಯಾನವನ್ನು ಓದಬಹುದು, ಅಥವಾ ಬಲ ಬದಿಯಲ್ಲಿ ಪ್ಯಾನೆಲ್.ನಲ್ಲಿರುವ ದೊಡ್ಡ ನಿರ್ವಚನವನ್ನು ನೋಡಬಹುದು.
  • ಪಟ್ಟಿಯಲ್ಲಿ ವಾಕ್ಯವನ್ನಾಗಲಿ ಅಥವಾ ಶಬ್ದವನ್ನಾಗಲಿ ಅನುವಾದಕ್ಕಾಗಿ ಆಯ್ಕೆ ಮಾಡಿದನಂತರ (ಹೈಲೆಟ್ ಮಾಡಿದನಂತರ), “ಉಳಿಸಿ” ಎನ್ನುವದನ್ನು ಒತ್ತಿರಿ.
  • ಅನುವಾದ ಪದಕ್ಕಾಗಿ ಆಯ್ಕೆ ಮಾಡಲ್ಪಟ್ಟಿರುವ ಪದವು ಈ ಸಂದರ್ಭದಲ್ಲಿ ಅರ್ಥವನ್ನು ಕೊಡುತ್ತಿದೆಯೋ ಇಲ್ಲವೋ ಎಂದು ಗಮನಿಸಿರಿ.
  • ಅನುವಾದ ಪದಕ್ಕೆ ಅನುವಾದವು ಒಳ್ಳೇಯ ಅನುವಾದವೆಂದು ನೀವು ಆಲೋಚನೆ ಮಾಡಿದರೆ, “ಉಳಿಸಿ ಮತ್ತು ಮುಂದೆವರಿಸಿ” ಎನ್ನುವದನ್ನು ಒತ್ತಿರಿ.
  • ಪದಕ್ಕಾಗಿ ಅಥವಾ ಮಾತಿಗಾಗಿ ಮಾಡಿರುವ ಅನುವಾದವು ಸರಿಯಲ್ಲವೆಂದು ಅಥವಾ ವಾಕ್ಯದೊಂದಿಗೆ ಏನಾದರೂ ಸಮಸ್ಯೆಯಿದೆಯೆಂದು ನೀವು ಆಲೋಚನೆ ಮಾಡಿದರೆ, ತಕ್ಷಣವೇ ಅದನ್ನು ಸರಿಪಡಿಸುವದಕ್ಕಾಗಿ ಆ ವಾಕ್ಯವನ್ನು ತಿದ್ದುಪಡಿ ಮಾಡಿರಿ, ಅಥವಾ ನೀವು ಇಲ್ಲಿರುವ ಅನುವಾದದ ವಿಷಯದಲ್ಲಿ ನಿಮ್ಮ ಆಲೋಚನೆಯು ತಪ್ಪಾಗಿರಬಹುದೆಂದು ನಿಮ್ಮ ಕೆಲಸವನ್ನು ಪರಿಶೀಲನೆ ಮಾಡುವವರಿಗೆ ನಿಮ್ಮ ವ್ಯಾಖ್ಯೆಯನ್ನು ಹೇಳಿರಿ.
  • ನೀವು ತಿದ್ದುಪಡಿ ಮಾಡಿರುವದಾದರೆ, ನೀವು ನಿಮ್ಮ ಆಯ್ಕೆಯನ್ನು ಮತ್ತೊಂದುಬಾರಿ ಮಾಡಿಕೊಳ್ಳಬೇಕಾದ ಅವಶ್ಯಕತೆಯಿದೆ.
  • ನೀವು ತಿದ್ದುಪಡಿ ಮಾಡುವುದನ್ನು ಅಥವಾ ವ್ಯಾಖ್ಯೆಯನ್ನು ಮಾಡುವದನ್ನು ಮುಗಿಸಿದನಂತರ, “ಉಳಿಸಿ ಮತ್ತು ಮುಂದುವರೆಸಿ” ಎನ್ನುವದನ್ನು ಒತ್ತಿರಿ. ನೀವು ಕೇವಲ ಅನುವಾದ ಪದಗಳ ಕುರಿತಾಗಿ ಮಾತ್ರವೇ ವ್ಯಾಖ್ಯೆ ಮಾಡುವುದಕ್ಕೆ ಪ್ರಾಧಾನ್ಯತೆ ಕೊಡುವುದಾದರೆ, ಅದಕ್ಕಾಗಿ ಭಾಗವನ್ನು ತಯಾರಿಸಬೇಡಿರಿ, ಆದನಂತರ ಮುಂದಕ್ಕೆ ಹೋಗುವುದಕ್ಕೆ ಎಡಬದಿಯಲ್ಲಿರುವ ಪಟ್ಟಿಯಲ್ಲಿನ ಇನ್ನೊಂದು ವಾಕ್ಯವನ್ನು ಒತ್ತಿರಿ.

ಅನುವಾದ ಪದಗಳ ಬಂದಿರುವ ಪ್ರತಿಯೊಂದು ವಾಕ್ಯಕ್ಕಾಗಿ ಆಯ್ಕೆ ಮಾಡಿದನಂತರ, ಆ ವಾಕ್ಯಕ್ಕಾಗಿರುವ ಪಟ್ಟಿಯನ್ನು ಪರಿಶೀಲನೆ ಮಾಡಬಹುದು. ಕೆಳಗಿರುವ ಸೂಚನೆಗಳೆಲ್ಲವು ಪುನರ್ಪರಿಶೀಲನೆ ಮಾಡುವವರಿಗೆ ಅಥವಾ ಅನುವಾದ ತಂಡದವರಿಗೆ ಕೊಡಲ್ಪಟ್ಟಿವೆ.

  • ಎಡಬದಿಯಲ್ಲಿರುವ ಅನುವಾದ ಪದಗಳ ಪ್ರತಿಯೊಂದು ಕೆಳಗಿನ ಪ್ರತಿಯೊಂದು ಅನುವಾದ ಪದಗಳಿಗಾಗಿ ಮಾಡಲ್ಪಟ್ಟಿರುವ ಅನುವಾದಗಳ ಪಟ್ಟಿಕೆಗಳನ್ನು ನೀವೀಗ ನೋಡಬಹುದು. ನೀವು ಅನುವಾದ ಪದಗಳ ನ್ನು ವಿವಿಧವಾದ ವಿಧಾನಗಳಲ್ಲಿ ಅನುವಾದ ಮಾಡಿರುವದನ್ನು ನೋಡುವುದಾದರೆ, ಪ್ರತಿಯೊಂದು ಸಂದರ್ಭಕ್ಕೋಸ್ಕರ ಗುರಿಯ ಭಾಷೆಯ ಸರಿಯಾದ ಪದಗಳನ್ನು ಬಳಸಿದ್ದಾರೋ ಇಲ್ಲವೋ ಎಂದು ನೋಡುವುದಕ್ಕೆ ವ್ಯತ್ಯಾಸಗಳಿರುವ ಪದಗಳನ್ನು ನೀವು ಪರಿಶೀಲನೆ ಮಾಡಬೇಕು.
  • ಇತರರಿಂದ ಮಾಡಲ್ಪಟ್ಟಿರುವ ಇತರ ಎಲ್ಲಾ ವ್ಯಾಖ್ಯೆಗಳನ್ನು ಪರಿಶೀಲನೆ ಮಾಡಬೇಕು. ಅದನ್ನು ಮಾಡುವುದಕ್ಕೆ, ಮೇಲಿನ ಎಡಬದಿಯಲ್ಲಿರುವ “ಕಾರ್ಯಕ್ರಮಗಳ ಪಟ್ಟಿ”ಗೆ ಬಲಬದಿಯಲ್ಲಿರುವ ಲಾಳಿಕೆಯ ಗುರುತನ್ನು ಒತ್ತಿರಿ. ಆಗ ಪಟ್ಟಿಕೆ ತೆರೆಯಲ್ಪಡುವದು, ಅದರಲ್ಲಿ “ವ್ಯಾಖ್ಯೆಗಳ” ಮಾತುಗಳು ಕೂಡ ಒಳಗೊಂಡಿರುತ್ತವೆ.
  • “ವ್ಯಾಖ್ಯೆಗಳು” ಪಕ್ಕದಲ್ಲಿಯೇ ಇರುವ ಪೆಟ್ಟಿಗೆಯನ್ನು ಒತ್ತಿರಿ. ಅವುಗಳಲ್ಲಿ ವ್ಯಾಖ್ಯೆಗಳಿರದ ಎಲ್ಲಾ ಮಾತುಗಳು ಕಾಣಿಸಿಕೊಳ್ಳದಂತೆ ಇದು ಮಾಡುತ್ತದೆ.
  • ವ್ಯಾಖ್ಯೆಗಳನ್ನು ಓದುವುದಕ್ಕೆ, ಪಟ್ಟಿಯಲ್ಲಿ ಮೊದಲ ವ್ಯಾಖ್ಯೆಯನ್ನು ಒತ್ತಿರಿ.
  • “ವ್ಯಾಖ್ಯೆ” ಎನ್ನುವದರ ಮೇಲೆ ಒತ್ತಿರಿ.
  • ವ್ಯಾಖ್ಯೆಯನ್ನು ಓದಿರಿ, ಮತ್ತು ಅದರ ಕುರಿತಾಗಿ ನೀವು ಮಾಡುವುದನ್ನು ನಿರ್ಣಯಿಸಿಕೊಳ್ಳಿರಿ.
  • ಆ ಮಾತನ್ನು ನೀವು ತಿದ್ದುಪಡಿ ಮಾಡಬೇಕೆಂದು ನೀವು ನಿರ್ಣಯಿಸಿಕೊಂಡರೆ, “ರದ್ದು ಮಾಡಿ” ಎನ್ನುವದನ್ನು ಒತ್ತಿ ಮತ್ತು “ಮಾತನ್ನು ತಿದ್ದುಪಡಿಸಿರಿ” ಎನ್ನುವದನ್ನು ಒತ್ತಿರಿ. ಆಗ ಅದು ಆ ಮಾತನ್ನು ತಿದ್ದುಪಡಿಸುವುದಕ್ಕೆ ಒಂದು ಚಿಕ್ಕ ಪರದೆಯನ್ನು ತೆರೆಯುತ್ತದೆ.
  • ನೀವು ತಿದ್ದುಪಡಿಯನ್ನು ಮಾಡಿ ಮುಗಿಸಿದ ಮೇಲೆ, ಅದನ್ನು ಬದಲಾಯಿಸುವ ಕಾರಣವನ್ನು ಆಯ್ಕೆ ಮಾಡಿರಿ, ಮತ್ತು “ಉಳಿಸಿ” ಎನ್ನುವದನ್ನು ಒತ್ತಿರಿ.
  • ನಿಮಗೆ ಕೊಡಲ್ಪಟ್ಟಿರುವ ವ್ಯಾಖ್ಯೆಗಳೆಲ್ಲವುದರ ಮೇಲೆ ನೀವು ಕೆಲಸ ಮಾಡುವವರೆಗೂ ಈ ಕ್ರಮವನ್ನು ಮುಂದೆವರಿಸಿರಿ.

ಆ ಸಂದರ್ಭದಲ್ಲಿ ಕೆಲವೊಂದು ಅನುವಾದ ಪದಗಳ ಗೋಸ್ಕರ ಉಪಯೋಗಿಸಿದ ಅನುವಾದವು ಸರಿಯಾಗಿಲ್ಲವೆಂದು ನಿಮಗೆ ನಿಶ್ಚಯವಿಲ್ಲದಿದ್ದರೆ, ಅನುವಾದ ತಂಡವು ಮಾಡುವ ಅನುವಾದವು ಅನುವಾದ ಪದಗಳ ಹಾಳೆಯನ್ನು ನೋಡುವುದಕ್ಕೆ ಅದು ಸಹಾಯಕರವಾಗಿರಬಹುದು. ಅನುವಾದ ತಂಡದ ಮೇಲೆ ನೀವು ಇತರರೊಂದಿಗೆ ಕಠಿಣ ಪದಕ್ಕೋಸ್ಕರ ಚರ್ಚೆ ಮಾಡಬಹುದು ಮತ್ತು ಎಲ್ಲರು ಸೇರಿ ಪರಿಹಾರವನ್ನು ಕಂಡುಕೊಳ್ಳುವುದಕ್ಕೆ ಪ್ರಯತ್ನ ಮಾಡಬಹುದು. ಕೆಲವೊಂದು ಸಂದರ್ಭಗಳಲ್ಲಿ ನೀವು ವಿವಿಧ ಪದಗಳನ್ನು ಉಪಯೋಗಿಸಿಕೊಳ್ಳಬಹುದು, ಅಥವಾ ಅನುವಾದ ಪದಗಳ ಪದವನ್ನು ಅನುವಾದ ಮಾಡುವುದಕ್ಕೆ ಬೇರೊಂದು ಮಾರ್ಗವನ್ನು ಕಂಡುಹಿಡಿಯಬಹುದು, ಅಂದರೆ ದೊಡ್ಡ ವಾಕ್ಯವನ್ನು ಬಳಸಿ ಅನುವಾದ ಮಾಡಬಹುದು.