translationCore-Create-BCS_.../checking/goal-checking/01.md

6.9 KiB

ಯಾಕೆ ಪರಿಶೀಲನೆ ಮಾಡಬೇಕು?

ಅನುವಾದದ ತಂಡನಿಖರವಾದ , ಸ್ವಾಭಾವಿಕವಾದ, ಸ್ಪಷ್ಟವಾದ ಮತ್ತು ಸಭೆಯಿಂದ ಸ್ವೀಕೃತವಾದ ಅನುವಾದವನ್ನು ಮಾಡುವುದೇ ಪರಿಶೀಲನೆ ಮಾಡುವ ಗುರಿಯಾಗಿರುತ್ತದೆ. ಅನುವಾದ ತಂಡವು ಕೂಡ ಈ ಗುರಿಯನ್ನು ತಲುಪಬೇಕಾದ ಅವಶ್ಯಕತೆ ಇರುತ್ತದೆ. ಇದು ತುಂಬಾ ಸುಲಭವಾಗಿ ಕಾಣಿಸಿಕೊಳ್ಳಬಹುದು, ಆದರೆ ಇದನ್ನು ಮಾಡುವುದು ತುಂಬಾ ಕಷ್ಟ, ಮತ್ತು ಅನೇಕ ಜನರು ಇದಕ್ಕೆ ಬೇಕಾಗಿರುತ್ತಾರೆ, ಇದನ್ನು ಸಾಧಿಸುವುದಕ್ಕೆ ಅನುವಾದವನ್ನು ಅನೇಕಬಾರಿ ತಿದ್ದುಪಡಿ ಮಾಡಬೇಕಾಗಿರುತ್ತದೆ. ಈ ಕಾರಣಕ್ಕಾಗಿ ನಿಖರತೆಯ, ಸ್ವಾಭಾವಿಕವಾದ, ಸ್ಪಷ್ಟವಾದ ಮತ್ತು ಸಭೆಯಿಂದ ಸ್ವೀಕೃತವಾದ ಅನುವಾದವನ್ನು ಮಾಡುವುದಕ್ಕೆ ಅನುವಾದ ತಂಡದವರಿಗೆ ಸಹಾಯ ಮಾಡುವುದರಲ್ಲಿ ಪರಿಶೀಲಕರು ತುಂಬಾ ಪ್ರಾಮುಖ್ಯವಾದ ಪಾತ್ರೆಯನ್ನು ವಹಿಸುತ್ತಾರೆ.

ನಿಖರತೆ

ಪರಿಶೀಲಕರಾಗಿರುವ ಸಭಾಪಾಲಕರು, ಸಭಾ ನಾಯಕರು, ಮತ್ತು ಸಭೆಗಳ ಜಾಲ ವ್ಯವಸ್ಥಾಪಕಗಳ ನಾಯಕರು ಸರಿಯಾದ ನಿಖರತೆಯ ಅನುವಾದ ಮಾಡುವುದಕ್ಕೆ ಅನುವಾದ ತಂಡಕ್ಕೆ ಸಹಾಯ ಮಾಡುವರು. ಅವರು ಇದನ್ನು ಮೂಲ ಭಾಷೆಯ ಅನುವಾದದೊಂದಿಗೆ ಹೋಲಿಸಿಕೊಳ್ಳುತ್ತಾ ಮಾಡುವರು ಮತ್ತು, ಸಾಧ್ಯವಾದಲ್ಲಿ ಬೈಬಲ್ ಅಸಲಿ ಭಾಷೆಯೊಂದಿಗೆ ಹೋಲಿಸಿಕೊಳ್ಳುತ್ತಾ ಪರಿಶೀಲನೆ ಮಾಡುತ್ತಾರೆ. (ನಿಖರತೆಯ ಅನುವಾದಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, [ನಿಖರತೆಯ ಅನುವಾದಗಳನ್ನು ಮಾಡಿರಿ] (../../translate/guidelines-accurate/01.md) ಎನ್ನುವ ಶೀರ್ಷಿಕೆಯನ್ನು ನೋಡಿರಿ.)

ಸ್ಪಷ್ಟವಾದ

ಭಾಷೆಯ ಸಮುದಾಯದ ಸದಸ್ಯರಾಗಿರುವ ಪರಿಶೀಲಕರು ಸ್ಪಷ್ಟವಾದ ಅನುವಾದವನ್ನುಂಟು ಮಾಡುವದಕ್ಕೆ ಅನುವಾದ ತಂಡಕ್ಕೆ ಸಹಾಯ ಮಾಡುವರು. ಅವರು ಮಾಡಿದ ಅನುವಾದವನ್ನು ಕೇಳಿಕೊಳ್ಳುತ್ತಾ ಇದನ್ನು ಮಾಡುವರು ಮತ್ತು ಅವರಿಗೆ ಗೊತ್ತಾಗದ ಅಥವಾ ಅರ್ಥವಾಗದ ಅಥವಾ ಗಲಿಬಿಲಿ ಇರುವ ಅನುವಾದಗಳನ್ನು ಗುರುತಿಸುವರು. ಆಗ ಅನುವಾದ ತಂಡದವರು ಅವುಗಳನ್ನು ಗಮನಿಸಿ ಬಗೆಹರಿಸುವರು, ಇದರಿಂದ ಅವು ಸ್ಪಷ್ಟವಾಗುತ್ತವೆ. (ಸ್ಪಷ್ಟವಾದ ಅನುವಾದಗಳ ಕುರಿತಾಗಿ ಇನ್ನಿತರ ಹೆಚ್ಚಿನ ಮಾಹಿತಿಗಾಗಿ, [ಸ್ಪಷ್ಟವಾದ ಅನುವಾದಗಳನ್ನು ಮಾಡಿರಿ] (../../translate/guidelines-clear/01.md) ಎನ್ನುವ ಶೀರ್ಷಿಕೆಯನ್ನು ನೋಡಿರಿ.

ಸ್ವಾಭಾವಿಕವಾದ

ಭಾಷೆಯ ಸಮುದಾಯದ ಸದಸ್ಯರಾಗಿರುವ ಪರಿಶೀಲಕರು ಸ್ವಾಭಾವಿಕವಾದ ಅನುವಾದವನ್ನು ಮಾಡುವದಕ್ಕೆ ಅನುವಾದ ತಂಡಕ್ಕೆ ಸಹಾಯ ಮಾಡುವರು. ಅವರು ಮಾಡಿದ ಅನುವಾದವನ್ನು ಕೇಳಿಕೊಳ್ಳುತ್ತಾ ಇದನ್ನು ಮಾಡುವರು ಮತ್ತು ಅನುವಾದವು ವಿಭಿನ್ನವಾಗಿ ಎಲ್ಲೆಲ್ಲಿ ಕೇಳಿಸುತ್ತದೋ ಅಲ್ಲಲ್ಲಿ ಮತ್ತು ಅವರ ಭಾಷೆಯನ್ನು ಮಾಡುವವರು ಮಾತನಾಡುವ ವಿಧಾನದಲ್ಲಿ ಶಬ್ದ ಕೇಳಿಸದ ಸ್ಥಳಗಳನ್ನು ಗುರುತಿಸುವರು. ಆಗ ಅನುವಾದ ತಂಡದವರು ಆ ಸ್ಥಳಗಳನ್ನು ಗಮನಿಸಿ ಅವುಗಳನ್ನು ಬಗೆಹರಿಸುವರು, ಇದರಿಂದ ಅವು ಸ್ವಾಭಾವಿಕವಾದ ಭಾಷೆಯಲ್ಲಿ ಕೇಳಿಸಿಕೊಳ್ಳುತ್ತವೆ. (ಸ್ವಾಭಾವಿಕವಾದ ಅನುವಾದಗಳ ಕುರಿತಾಗಿ ಇನ್ನಿತರ ಹೆಚ್ಚಿನ ಮಾಹಿತಿಗಾಗಿ, [ಸ್ವಾಭಾವಿಕವಾದ ಅನುವಾದಗಳನ್ನು ಮಾಡಿರಿ] (../../translate/guidelines-natural/01.md) ಎನ್ನುವ ಶೀರ್ಷಿಕೆಯನ್ನು ನೋಡಿರಿ.

ಸಭೆ ನಿರ್ಧಾರಣೆ ಮಾಡಿದೆ

ಭಾಷೆಯ ಸಮುದಾಯದಲ್ಲಿ ಸಭೆಯ ಸದಸ್ಯರಾಗಿರುವ ಪರಿಶೀಲಕರು ಆ ಸಮುದಾಯದಲ್ಲಿರುವ ಸಭೆಯಿಂದ ಸ್ವೀಕೃತವಾಗುವ ಮತ್ತು ನಿರ್ಧಾರಣೆ ಅನುವಾದವನ್ನು ಮಾಡುವದಕ್ಕೆ ಅವರು ಅನುವಾದ ತಂಡಕ್ಕೆ ಸಹಾಯ ಮಾಡುವರು. ಅವರು ಆ ಭಾಷೆಯ ಸಮುದಾಯದಿಂದ ಇತರ ಸಭೆಗಳ ನಾಯಕರೊಂದಿಗೆ ಮತ್ತು ಸದಸ್ಯರೊಂದಿಗೆ ಸೇರಿ ಈ ಕೆಲಸವನ್ನು ಮಾಡುವರು ಮತ್ತು ಈ ಅನುವಾದವು ಚೆನ್ನಾಗಿದೆಯೆಂದು ಒಪ್ಪಿಕೊಳ್ಳುವರು, ಆದನಂತರ ಸಮುದಾಯದಲ್ಲಿರುವ ಸಭೆಗಳಿಂದ ಅಂದು ಸ್ವೀಕರಿಸಲ್ಪಡುತ್ತದೆ ಮತ್ತು ಉಪಯೋಗಿಸಲ್ಪಡುತ್ತದೆ. (ಸಭೆಯಿಂದ ಅನುಮೋದನೆ ಹೊಂದಿದ ಅನುವಾದಗಳ ಕುರಿತಾಗಿ ಇನ್ನಿತರ ಹೆಚ್ಚಿನ ಮಾಹಿತಿಗಾಗಿ, [ಸಭೆಯಿಂದ ಅನುಮೋದನೆ ಮಾಡಿದ ಅನುವಾದಗಳನ್ನು ಮಾಡಿರಿ] (../../translate/guidelines-church-approved/01.md) ಎನ್ನುವ ಶೀರ್ಷಿಕೆಯನ್ನು ನೋಡಿರಿ.