translationCore-Create-BCS_.../checking/authority-process/01.md

7.0 KiB

ವಿವರಣೆ

ಹೊಣೆಗಾರಿಕೆ

ಬೈಬಲ್ ಸಭೆಯ ಚರಿತ್ರೆಗೆ (ಚರಿತ್ರೆಯೆಲ್ಲಾ ಸಂಘಟನೆಗಳಿಗೂ) ಮತ್ತು ವಿಶ್ವಕ್ಕೂ (ಪ್ರಪಂಚದಲ್ಲಿರುವ ಎಲ್ಲಾವುದಕ್ಕೂ) ಸಂಬಂಧ ಹೊಂದಿರುತ್ತದೆ. ಸಭೆಯ ಪ್ರತಿಯೊಂದು ಭಾಗವು ಸಭೆಯಲ್ಲಿರುವ ಇನ್ನೊಂದು ಭಾಗಕ್ಕೆ, ಅಂದರೆ ನಾವು ಆ ವಾಕ್ಯವನ್ನು ಹೇಗೆ ವ್ಯಾಖ್ಯಾನ ಮಾಡುತ್ತಿದ್ದೇವೆ, ಹೇಗೆ ಪ್ರಕಟನೆ ಮಾಡುತ್ತಿದ್ದೇವೆ ಮತ್ತು ಬೈಬಲ್ ಹೇಳುವ ವಿಷಯಗಳಿಗೆ ಹೇಗೆ ಜೀವನ ಮಾಡುತ್ತಿದ್ದೇವೆ ಎನ್ನುವ ವಿಷಯಗಳಲ್ಲಿ ಸಭೆ ಹೊಣೆಯಾಗಿರಬೇಕು. ಬೈಬಲ್ ಅನುವಾದಕ್ಕೆ ಸಂಬಂಧಪಟ್ಟ ವಿಷಯಕ್ಕೆ ಬರುವಾಗ, ಪ್ರಪಂದಲ್ಲಿರುವ ಪ್ರತಿಯೊಂದು ಭಾಷೆಗೆ ಬೈಬಲ್.ನಲ್ಲಿರುವ ಪ್ರತಿಯೊಂದು ವಿಷಯವನ್ನು ವ್ಯಕ್ತಪಡಿಸುವ ಸ್ವಂತ ವಿಧಾನ ಒಂದಿರುತ್ತದೆ. ಆದರೂ, ಅವರು ಆ ಅರ್ಥವನ್ನು ಹೇಗೆ ವ್ಯಕ್ತಪಡಿಸುತ್ತಿರುವ ಸಭೆಯ ಒಂದು ಒಂದು ಭಾಗ ಆ ಭಾಷೆಯನ್ನು ಮಾತನಾಡುವ ಸಭೆಯ ಮತ್ತೊಂದು ಭಾಗಕ್ಕೆ ಹೊಣೆಗಾರಿಕೆಯಾಗಿರಬೇಕು. ಆ ಕಾರಣದಿಂದಲೇ, ಬೈಬಲ್ ಅನುವಾದ ಮಾಡುವ ಪ್ರತಿಯೊಬ್ಬರೂ ಅದನ್ನು ಬೇರೊಬ್ಬರು ಹೇಗೆ ಅನುವಾದ ಮಾಡಿದ್ದಾರೆಂದು ಅಧ್ಯಯನ ಮಾಡಲೇ ಬೇಕು. ಅವರು ತಪ್ಪದೇ ಬೈಬಲ್ ಭಾಷೆಗಳಲ್ಲಿ ತುಂಬಾ ಹೆಚ್ಚಾದ ಪರಿಣಿತಿಯನ್ನು ಪಡೆದಂಥವರಿಂದ ಸರಿಮಾಡಿಕೊಳ್ಳುವುದಕ್ಕೆ ಸಿದ್ಧರಿರಬೇಕು ಮತ್ತು ಅವರಿಂದ ಸಲಹೆಗಳನ್ನು ಪಡೆದುಕೊಳ್ಳಬೇಕು. ಅಷ್ಟೇ ಅಲ್ಲದೆ, ಅದನ್ನು ಸಭೆ ಹೇಗೆ ಅರ್ಥಮಾಡಿಕೊಂಡಿದೆ ಮತ್ತು ಇತಿಹಾಸದ ಮೂಲಕ ಬೈಬಲನ್ನು ಹೇಗೆ ವ್ಯಾಖ್ಯಾನಿಸಿದೆ ಎಂದೆನ್ನುವ ವಿಷಯಗಳನ್ನು ಸಹ ಅವರು ಅರ್ಥಮಾಡಿಕೊಳ್ಳಬೇಕು.

ಅಧಿಕಾರ ಮತ್ತು ಸಾಮರ್ಥ್ಯ

ಮೇಲೆ ಅರ್ಥಮಾಡಿಕೊಂಡಿರುವ ಪ್ರಕಾರ, ಪ್ರತಿಯೊಂದು ಭಾಷೆಯನ್ನು ಮಾತನಾಡುವ ಸಭೆಯು ತಮ್ಮ ಭಾಷೆಯಲ್ಲಿ ಅನುವಾದ ಮಾಡಿರುವ ಬೈಬಲ್ ಎಷ್ಟರಮಟ್ಟಿಗೆ ಉತ್ತಮವಾಗಿದೆಯೋ ಇಲ್ಲವೋ ಎಂದು ಅಥವಾ ಚೆನ್ನಾಗಿದೆಯೋ ಇಲ್ಲವೋ ಎಂದು ತಮಗೋಸ್ಕರ ತಾವೇ ನಿರ್ಣಯಿಸಿಕೊಳ್ಳುವ ಅಧಿಕಾರ ಹೊಂದಿಕೊಂಡಿರುತ್ತದೆ. ಪರಿಶೀಲನೆ ಮಾಡುವುದಕ್ಕೆ ಮತ್ತು ಬೈಬಲ್ ಅನುವಾದವನ್ನು ಅನುಮೋದನೆ ಮಾಡುವದಕ್ಕೆ ಇರುವ ಅಧಿಕಾರ ಸಾಮರ್ಥ್ಯದಿಂದ ಬೇರ್ಪಡಿಸಲಾಗಿರುತ್ತದೆ, ಅಥವಾ ಬೈಬಲ್ ಅನುವಾದವನ್ನು ಪರಿಶೀಲನೆ ಮಾಡುವ ಪ್ರಕ್ರೀಯೆಯಿಂದ (ಈ ವಿಧಾನವನ್ನು ಇನ್ನೂ ಹೆಚ್ಚಾಗಿ ಮಾಡಲಾಗಿರುತ್ತದೆ) ಸಾಮರ್ಥ್ಯವನ್ನು ತೆಗೆದುಹಾಕಲಾಗಿರುತ್ತದೆ. ಬೈಬಲ್ ಅನುವಾದದ ಗುಣಮಟ್ಟವನ್ನು ನಿರ್ಧರಿಸುವ ಅಧಿಕಾರವು ಅನುವಾದದ ಭಾಷೆಯನ್ನು ಮಾತನಾಡುವ ಸಭೆಗೆ ಸಂಬಂಧಪಟ್ಟಿರುತ್ತದೆ, ತಮ್ಮ ಪ್ರಸ್ತುತ ಸಾಮರ್ಥ್ಯ, ಅನುಭವ ಮೇಲೆ ಆಧಾರಪಟ್ಟಿರುತ್ತದೆ, ಅಥವಾ ಬೈಬಲ್ ಅನುವಾದವನ್ನು ಪರಿಶೀಲನೆ ಮಾಡುವುದಕ್ಕೆ ಕೊಡುವ ಸಂಪನ್ಮೂಲಗಳನ್ನು ಉಪಯೋಗಿಸುವದರ ಮೇಲೆ ಆಧಾರಪಟ್ಟಿರುತ್ತದೆ. ಆದ್ದರಿಂದ, ಭಾಷೆಯನ್ನು ಮಾತನಾಡುವ ಸಮುದಾಯದಲ್ಲಿರುವ ಸಭೆಯು ಪರಿಶೀಲನೆ ಮಾಡುವ ಅಧಿಕಾರವನ್ನು ಮತ್ತು ತಮ್ಮ ಬೈಬಲ್ ಅನುವಾದವನ್ನು ಅವರೇ ಅನುಮೋದನೆ ಮಾಡಿಕೊಳ್ಳುವುದಕ್ಕು, unfoldingWord ಉಪಕರಣಗಳನ್ನು ಉಪಯೋಗಿಸುವುದಕ್ಕು ಹಕ್ಕನ್ನು ಪಡೆದುಕೊಂಡಿರುತ್ತದೆ. ಇದರಲ್ಲಿ translationAcademy ಯ ಘಟಕಗಳು ಹೊಂದಿರುತ್ತವೆ, ಉತ್ತಮವಾದ ವಿಧಾನವನ್ನು ಉಪಯೋಗಿಸಿ ತಮ್ಮ ಬೈಬಲ್ ಅನುವಾದದ ಗುಣಮಟ್ಟವನ್ನು ಪರಿಶೀಲನೆ ಮಾಡುವುದಕ್ಕೆ ಪ್ರತಿಯೊಂದು ಸಭೆಯು ಸಾಮರ್ಥ್ಯವನ್ನು ಹೊಂದಿರುತ್ತದೆಯೆಂದು ನಿಶ್ಚಯಗೊಳಿಸುಕೊಳ್ಳುವುದಕ್ಕೆ ಈ ಘಟಕಗಳನ್ನು ತಯಾರು ಮಾಡಲಾಗಿರುತ್ತದೆ. ಬೈಬಲ್ ಪರಿಣಿತಿಯನ್ನು ಪಡೆದವರು ಬೈಬಲ್ ಕುರಿತಾಗಿ ಹೇಳಿರುವ ವಿಷಯಗಳನ್ನು ತಿಳಿದುಕೊಳ್ಳುವುದಕ್ಕೂ ಮತ್ತು ಇತರ ಭಾಷೆಗಳಲ್ಲಿ ಅದನ್ನು ಸಭೆಯ ಇತರ ಭಾಗಗಳಲ್ಲಿರುವವರು ಹೇಗೆ ಅನುವಾದ ಮಾಡಿದ್ದಾರೆಂದು ತಿಳಿದುಕೊಳ್ಳುವುದಕ್ಕೆ ಪ್ರತಿಯೊಂದು ಭಾಷೆಯ ಸಮುದಾಯದಲ್ಲಿರುವ ಸಭೆಗೆ ಈ ಉಪಕರಣಗಳನ್ನು ಕೊಡಲು ತಯಾರಿಸಲಾಗಿರುತ್ತದೆ.

ಅನುವಾದವನ್ನು ಪರಿಶೀಲನೆ ಮಾಡುವುದಕ್ಕೆ ಇರುವ ಪ್ರಕ್ರೀಯೆಯ ಕುರಿತಾಗಿ ಕೈಪಿಡಿಯಲ್ಲಿ ಇನ್ನೂ ಹೆಚ್ಚಾಗಿ ವಿವರಿಸಲ್ಪಟ್ಟಿರುತ್ತದೆ.