translationCore-Create-BCS_.../checking/alphabet/01.md

3.6 KiB

ಅನುವಾದಕ್ಕಾಗಿ ವರ್ಣಮಾಲೆ

ನೀವು ಅನುವಾದವನ್ನು ಓದುತ್ತಿರುವಾಗ, ಪದಗಳು ಯಾವ ರೀತಿ ಉಪಯೋಗಿಸಲ್ಪಟ್ಟಿವೆ ಎನ್ನುವದರ ಕುರಿತಾಗಿ ನಿಮಗೆ ನೀವೇ ಈ ಪ್ರಶ್ನೆಗಳನ್ನು ಹಾಕಿಕೊಳ್ಳಿರಿ. ಒಳ್ಳೇಯ ಭಾಷೆಯನ್ನು ವ್ಯಕ್ತಪಡಿಸುವುದಕ್ಕೆ ಸೂಕ್ತವಾದ ವರ್ಣಮಾಲೆಯನ್ನು ಉಪಯೋಗಿಸಿದ್ದಾರೋ ಇಲ್ಲವೋ ಎಂದು ತಿಳಿದುಕೊಳ್ಳಲು ಮತ್ತು ಸರಿಯಾದ ವಿಧಾನದಲ್ಲಿ ಪದಗಳು ಬರೆದಿದ್ದಾರೋ ಇಲ್ಲವೋ ಎಂದು ನಿರ್ಧಾರ ಮಾಡಿಕೊಳ್ಳಲು ಈ ಪ್ರಶ್ನೆಗಳು ಸಹಾಯ ಮಾಡುತ್ತವೆ. ಇದರಿಂದ ಅನುವಾದವನ್ನು ಓದುವುದಕ್ಕೆ ತುಂಬಾ ಸುಲಭವಾಗಿರುತ್ತದೆ.

  1. ಹೊಸ ಅನುವಾದದ ಭಾಷೆಯ ಶಬ್ದಗಳನ್ನು ವ್ಯಕ್ತಗೊಳಿಸುವುದಕ್ಕೆ ವರ್ಣಮಾಲೆಯು ಅಥವಾ ಅಕ್ಷರಗಳು ಸರಿಹೊಂದುವುದೋ ? (ಬೇರೊಂದು ಶಬ್ದವನ್ನು ಮಾಡುವುದಕ್ಕೋಸ್ಕರ ಒಂದೇ ಗುರುತನ್ನು ಉಪಯೋಗಿಸುತ್ತಾ ಅರ್ಥದಲ್ಲಿ ವಿಭಿನ್ನತೆಯನ್ನು ಉಂಟು ಮಾಡುವ ಶಬ್ದಗಳು ಏನಾದರೂ ಇದ್ದಾವೋ? ಇದರಿಂದ ಪದಗಳನ್ನು ಓದುವುದಕ್ಕೆ ಕಷ್ಟವಾಗುವಂತೆ ಬರೆಯಬೇಕಾಗುತ್ತದೋ? ಈ ಅಕ್ಷರಗಳನ್ನು ಹೊಂದಾಣಿಕೆ ಮಾಡಲು ಹೆಚ್ಚುವರಿ ಗುರುತುಗಳೇನಾದರೂ ಬಳಸಿ, ವ್ಯತ್ಯಾಸವನ್ನು ತೋರಿಸಬಹುದೋ?)
  2. ಪುಸ್ತಕದಲ್ಲಿ ಉಪಯೋಗಿಸಿಲಾಗಿರುವ ಕಾಗುಣಿತವು ಸರಿಯಾಗಿದೆಯೋ? (ವಿಭಿನ್ನವಾದ ಪರಿಸ್ಥಿತಿಗಳಲ್ಲಿ ಪದಗಳು ಹೇಗೆ ಮಾರ್ಪಾಟು ಆಗುತ್ತವೆಯೆಂದು ತೋರಿಸುವುದಕ್ಕೆ ಲೇಖಕರು ಏನಾದರೂ ಅನುಸರಿಸಬೇಕಾದ ನಿಯಮಗಳು ಇದ್ದಾವೋ? ಅವುಗಳನ್ನು ವಿವರಿಸಬಹುದೇ, ಇದರಿಂದ ಇತರರು ಕೂಡ ಸುಲಭವಾಗಿ ಭಾಷೆಯನ್ನು ಹೇಗೆ ಓದಬೇಕು ಮತ್ತು ಹೇಗೆ ಬರೆಯಬೇಕೆಂದು ತಿಳಿದುಕೊಳ್ಳುವರು)
  3. ಭಾಷೆಯ ಸಮುದಾಯದ ಜನರು ಗುರುತಿಸುವ ರೀತಿಯಲ್ಲಿ ಅನುವಾದಕರು ಮಾತುಗಳನ್ನು, ಕಾಗುಣಿತಗಳನ್ನು, ಅಭಿವ್ಯಕ್ತಿಗಳನ್ನು ಮತ್ತು ನುಡಿಗಟ್ಟುಗಳನ್ನು ಉಪಯೋಗಿಸಿದ್ದಾರೋ?

ಅಕ್ಷರವಾಗಲಿ ಅಥವಾ ನುಡಿಗಟ್ಟಾಗಲಿ ಸರಿಯಾಗಿಲ್ಲವೆಂದು ಕಂಡುಬಂದರೆ, ಅದರ ಕುರಿತಾಗಿ ಬರೆದುಕೊಳ್ಳಿರಿ, ಇದರಿಂದ ನೀವು ಸರಿಯಿಲ್ಲದ ವಿಷಯಗಳ ಕುರಿತಾಗಿ ಅನುವಾದ ತಂಡದೊಂದಿಗೆ ಚರ್ಚಿಸಬಹುದು.