translationCore-Create-BCS_.../checking/alignment-tool/01.md

18 KiB

ಕ್ರಮಬದ್ಧವಾದ ಪರಿಶೀಲನೆಯನ್ನು ಮಾಡುವುದಕ್ಕೆ ಜೋಡಣೆಯ ಸಾಧನೆಯನ್ನು ಉಪಯೋಗಿಸಿಕೊಳ್ಳುವ ಕ್ರಮದಲ್ಲಿ :

  1. ಟ್ರಾನ್ಸ್.ಲೇಶನ್.ಕೋರ್.ನಲ್ಲಿ ನೀವು ಪರಿಶೀಲನೆ ಮಾಡಬೇಕಾದ ಬೈಬಲ್ ಪುಸ್ತಕದ ಅನುವಾದವನ್ನು ಲೋಡ್ ಮಾಡಿರಿ.
  2. ಪದ ಜೋಡಣೆಯ ಸಾಧನೆಯನ್ನು ಆಯ್ಕೆ ಮಾಡಿಕೊಳ್ಳಿರಿ.
  3. ಎಡಬದಿಯಲ್ಲಿರುವ ಅಧ್ಯಾಯಗಳು ಮತ್ತು ವಚನಗಳ ಪರಿವಿಡಿಯನ್ನು ಉಪಯೋಗಿಸಿಕೊಂಡು ವಚನಗಳ ಮೂಲಕ ಪರಿಶೀಲನೆ ಮಾಡಿರಿ.
  • ವಚನವನ್ನು ತೆರೆಯುವುದಕ್ಕೆ ಪರಿವಿಡಿಯ ಪಟ್ಟಿಯಲ್ಲಿರುವ ವಚನದ ಮೇಲೆ ನೀವು ಒತ್ತಿದಾಗ (ಕ್ಲಿಕ್ ಮಾಡಿದಾಗ), ವಾಕ್ಯದ ಪದಗಳು ಲಂಬ ರೇಖೆಯ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತವೆ, ಅವುಗಳು ಅಧ್ಯಾಯಗಳು ಮತ್ತು ವಚನಗಳು ಪಟ್ಟಿಯ ಬಲಬದಿಗೆ ಮೇಲಿನಿಂದ ಕೆಳಗಡೆಗೆ ಇರುತ್ತವೆ, ಪ್ರತಿಯೊಂದು ಪದವು ಒಂದೊಂದು ಪ್ರತ್ಯೇಕ ಪೆಟ್ಟಿಗೆಯಲ್ಲಿರುತ್ತದೆ.
  • ಆ ವಚನಕ್ಕಾಗಿ ಮೂಲ ಭಾಷೆಯ ಪದಗಳ ಅಥವಾ ಮಾತುಗಳ (ಗ್ರೀಕ್, ಇಬ್ರಿ, ಅಥವಾ ಅರಾಮಿಕ್) ವಾಕ್ಯವು ಕೂಡ ಅನುವಾದ ಮಾಡುವ ಭಾಷೆಯ ಪದಗಳ ಪಟ್ಟಿಯ ಬಲಬದಿಯಲ್ಲಿ ಪ್ರತ್ಯೇಕವಾದ ಪೆಟ್ಟಿಗೆಯಲ್ಲಿರುತ್ತದೆ. ಮೂಲ ಭಾಷೆಯ ಪದಗಳ ಪೆಟ್ಟಿಗೆಗಳ ಕೆಳಗೆ ಚುಕ್ಕೆಗಳ ಸಾಲು ಇರುತ್ತದೆ.
  1. ಪ್ರತಿಯೊಂದು ವಚನದಲ್ಲಿ, ಅದೇ ಅರ್ಥವನ್ನು ವ್ಯಕ್ತಪಡಿಸುವ ಮೂಲ ಭಾಷೆಯ ಪದಗಳ ಕೆಳಗೆ ಪದ ಬ್ಯಾಂಕಿನಲ್ಲಿರುವ ಅನುವಾದ ಮಾಡುವ ಭಾಷೆಯ ಪದಗಳನ್ನು ಎಳೆದಿಡಿರಿ.
  • ಪದವನ್ನು ಅಥವಾ ಮಾತನ್ನು ಆರಿಸಿಕೊಳ್ಳಲು, ವಾಕ್ಯಕ್ಕೆ ಸಂಬಂಧಪಟ್ಟಿರುವ ಮೂಲ (ನಿಜವಾದ) ವಾಕ್ಯದ ಪದ ಪೆಟ್ಟಿಗೆಯ ಕೆಳಗಿರುವ ಉದ್ದವಾದ ಸ್ಥಳದೊಳಗೆ ಅನುವಾದ ಮಾಡುವ ಭಾಷೆಯ ಪ್ರತಿಯೊಂದು ವಾಕ್ಯದ ಪೆಟ್ಟಿಗೆಯನ್ನು ನೀವು ಎಳೆಯುತ್ತಿರುವಾಗ ಅದನ್ನು ಕ್ಲಿಕ್ ಮಾಡಿ, ಹಾಗೆಯೇ ಒತ್ತಿ ಇಟ್ಟುಕೊಂಡಿರಬೇಕು.
  • ಮೂಲ ಭಾಷೆಯ ವಾಕ್ಯಗಳ ಪೆಟ್ಟಿಗೆಯ ಮೇಲೆ ಅನುವಾದ ಮಾಡಿದ ವಾಕ್ಯಗಳನ್ನು ಇಟ್ಟಾಗ, ಚುಕ್ಕೆಗಳ ಸಾಲು ನೀಲಿ ಸಾಲುಗಳಾಗಿ ಕಾಣಿಸಿಕೊಳ್ಳುತ್ತವೆ, ಆಗ ನೀವು ಆ ವಾಕ್ಯವು ಅಲ್ಲಿಗೆ ಎಳೆಯಲ್ಪಟ್ಟಿದೆಯೆಂದು ತಿಳಿದುಕೊಳ್ಳಬಹುದು. ಅನುವಾದ ಮಾಡುವ ಭಾಷೆಯ ಮಾತುಗಳು ಬೇರೊಂದಕ್ಕೆ ಸಂಬಂಧಪಟ್ಟಿವೆಯೆಂದು ನೀವು ನಿರ್ಣಯಿಸಿಕೊಂಡರೆ ಅಥವಾ ತಪ್ಪು ಮಾಡಿದರೆ, ನೀವು ಸುಮ್ಮನೆ ಅದನ್ನು ತಿರುಗಿ ಸಂಬಂಧಿತ ಸ್ಥಳದಲ್ಲಿ ಹಾಕಿರಿ. ಗುರಿ ಭಾಷೆಯ ಪದಗಳು ಅಥವಾ ಮಾತುಗಳು ಕೂಡ ತಿರುಗಿ ಆ ಪಟ್ಟಿಯೊಳಗೆ ಹಾಕಲ್ಪಡುತ್ತವೆ.
  • ವಾಕ್ಯದಲ್ಲಿ ಪುನರಾವರ್ತನೆಯಾದ ಮಾತುಗಳು ಇರುವಾಗ, ಮೂಲ ಭಾಷೆಯ ವಾಕ್ಯಕ್ಕೆ ಅರ್ಥ ಕೊಡುವ ಭಾಗಕ್ಕೆ ಸಂಬಂಧಪಟ್ಟ ಮಾತುಗಳನ್ನೇ ಎಳೆಯಲು ನಿರ್ಣಯಿಸಿಕೊಳ್ಳಿರಿ. ಆದನಂತರ ಆ ವಾಕ್ಯದ ಅರ್ಥವು ಪುನರಾವರ್ತನೆ ಆಗುವ ಪ್ರತಿಯೊಂದು ಮೂಲ ವಾಕ್ಯದಲ್ಲಿ ಪುನರಾವರ್ತನೆಯಾಗುವ ಪದಗಳನ್ನು ಮಾತ್ರ ಎಳೆಯಿರಿ.
  • ವಾಕ್ಯದಲ್ಲಿ ಅನುವಾದ ಮಾಡುವ ಭಾಷೆಯ ಪದಗಳು ಒಂದಕ್ಕಿಂತ ಹೆಚ್ಚಾಗಿ ಕಂಡುಬಂದರೆ, ಪದದ ಪ್ರತಿಯೊಂದು ಉದಾಹರಣೆಯು ಪದದನಂತರ ಒಂದು ಸಣ್ಣ ಸಂಖ್ಯೆಯನ್ನು ಹೊಂದಿರುತ್ತದೆ. ಈ ಸಂಖ್ಯೆಯಿಂದ ನೀವು ಸರಿಯಾದ ಕ್ರಮದಲ್ಲಿ ಮೂಲ ಪದವನ್ನು ಸರಿಪಡಿಸುವುದಕ್ಕೆ ಪುನರಾವೃತವಾದ ಅನುವಾದ ಮಾಡುವ ಪದವನ್ನು ಜೋಡಿಸಲು ನಿಮಗೆ ಸಹಾಯಕವಾಗಿರುತ್ತದೆ.
  • ಸಮತೋಲನವಾದ ಅರ್ಥಗಳನ್ನು ಹೊಂದಿರುವ ಮಾತುಗಳ/ಪದಗಳ ಗುಂಪನ್ನು ಮಾಡುವ ಕ್ರಮದಲ್ಲಿ ಅನುವಾದ ಮಾಡುವ ಭಾಷೆಯ ಪದಗಳನ್ನು ಅಥವಾ/ಮತ್ತು ಮೂಲ ಭಾಷೆಯ ಪದಗಳನ್ನು ಸಂಯೋಜಿಸುವ ಅವಶ್ಯಕತೆ ಇರಬಹುದು. ಜೋಡಣೆಯ ಮುಖ್ಯ ಉದ್ದೇಶವು ಏನಂದರೆ ಅನುವಾದ ಮಾಡುವ ಭಾಷೆಯ ಪದಗಳ ಅತೀ ಚಿಕ್ಕ ಗುಂಪನ್ನು ಒಂದೇ ಅರ್ಥವಿರುವ ಮೂಲ ಭಾಷೆಯ ಪದಗಳ ಅತೀ ಚಿಕ್ಕ ಗುಂಪಿಗೆ ಸರಿಹೋಗುತ್ತವೋ ಇಲ್ಲವೋ ಎಂದು ನೋಡುವುದಾಗಿರುತ್ತದೆ.

ಒಂದು ವಾಕ್ಯಕ್ಕಾಗಿ ಈ ವಿಧಾನವನ್ನು ಸಂಪೂರ್ಣಗೊಳಿಸಿದನಂತರ, ಅನುವಾದ ಮಾಡುವ ಪದಗಳ ಬ್ಯಾಂಕಿನಲ್ಲಿ ಅಥವಾ ಮೂಲ ಭಾಷೆಯ ಫಲಕದಲ್ಲಿ ಪದಗಳು ಏನಾದರೂ ಉಳಿದುಹೋಗಿದ್ದಾವೋ ಇಲ್ಲವೋ ಎಂದು ನೋಡುವುದಕ್ಕೆ ಸುಲಭವಾಗಿರಬೇಕು.

  • ಅನುವಾದ ಮಾಡುವ ಭಾಷೆಯ ಪದಗಳು ಏನಾದರು ಉಳಿದುಹೋಗಿದ್ದರೆ, ಅನುವಾದದಲ್ಲಿ ಸಂಬಂಧಪಡದಿರುವ ಏನೋ ಒಂದು ಮಾತುಗಳು ಸೇರಿಸಲ್ಪಟ್ಟಿವೆಯೆಂದು ಇದರ ಅರ್ಥವಾಗಿರಬಹುದು. ಉಳಿದ ಪದಗಳು ಅಳವಡಿಸುಕೊಳ್ಳುವ ಮಾಹಿತಿಯನ್ನು ವ್ಯಕ್ತಪಡಿಸುವದಾದರೆ, ಅವು ಹೆಚ್ಚುವರಿಯಾಗಿ ಬಂದ ಮಾತುಗಳಲ್ಲ ಮತ್ತು ಅವುಗಳು ವಾಕ್ಯಕ್ಕೆ ಅನುಗುಣವಾಗಿ ಜೋಡಣೆ ಮಾಡಬೇಕಾಗಿರುತ್ತದೆ ಅಥವಾ ಅವರು ವಿವರಿಸುವ ಮಾತುಗಳಿಗೆ ಜೋಡಿಸಬೇಕಾಗಿರುತ್ತದೆ.
  • ಒಂದುವೇಳೆ ಮೂಲ ಭಾಷೆಯ ಪದಗಳು ಉಳಿದುಹೋದರೆ, ಉಳಿದುಹೋಗಿರುವ ಈ ಮಾತುಗಳಿಗೆ ಅನುವಾದವನ್ನು ಅನುವಾದದಲ್ಲಿ ಸೇರಿಸಬೇಕಾಗಿರುತ್ತದೆಯೆಂದರ್ಥ.
  • ಮೂಲ ವಾಕ್ಯದ ಅನುವಾದದಲ್ಲಿ ಕೆಲವು ಪದಗಳಿಗೆ ಅನುವಾದ ಮಾಡಲಿಲ್ಲವೆಂದು ಅಥವಾ ಕಾಣಿಸುತ್ತಿಲ್ಲವೆಂದು ನೀವು ಕಂಡುಹಿಡಿಯುವುದಾದರೆ, ಯಾರಾದರೊಬ್ಬರು ಅನುವಾದವನ್ನು ತಿದ್ದುಪಡಿ ಮಾಡಬೇಕಾದ ಅವಶ್ಯಕತೆಯಿರುತ್ತದೆ . ಅನುವಾದದಲ್ಲಿ ತಪ್ಪು ಏನಿದೆಯೆಂದು ಬೇರೊಬ್ಬರಿಗೆ ಹೇಳುವುದಕ್ಕೆ ನೀವು ಒಂದು ವ್ಯಾಖ್ಯೆಯನ್ನು ಮಾಡಬೇಕಾಗುತ್ತದೆ, ಅಥವಾ ನೀವು ನೇರವಾಗಿ ಜೋಡಣೆಯ ಸಾಧನೆಯಲ್ಲಿ ಅನುವಾದವನ್ನು ತಿದ್ದುಪಡಿ ಮಾಡಬಹುದು.

ಜೋಡಣೆಯ ತತ್ವ

ಜೋಡಣೆಯ ಸಾಧನೆಯು ಒಂದರಿಂದ ಒಂದಕ್ಕೆ, ಒಂದರಿಂದ ಹಲವು , ಹಲವುಗಳಿಂದ ಒಂದಕ್ಕೆ, ಮತ್ತು ಅನೇಕವಾದವುಗಳಿಂದ ಅನೇಕವಾದ ಜೋಡಣೆಗಳಿಗೆ ಸಹಕಾರ ಮಾಡುತ್ತದೆ. ಎರಡು ಭಾಷೆಗಳಿಂದ ವ್ಯಕ್ತವಾಗಿರುವ ಅರ್ಥದ ಸರಿಯಾದ ಜೋಡಣೆಯನ್ನು ಹೊಂದಿಕೊಳ್ಳುವ ಅವಶ್ಯಕತೆಯ ಮೇಲೆ, ಒಂದು ಅಥವಾ ಅನೇಕವಾದ ಅನುವಾದ ಭಾಷೆಯ ಪದಗಳು ಒಂದು ಅಥವಾ ಅನೇಕವಾದ ಮೂಲ ಭಾಷೆಯ ಪದಗಳಿಗೆ ಜೋಡಣೆಯಾಗುತ್ತವೆ ಎಂದರ್ಥ, ಏನಾದರೊಂದು ವಿಷಯವನ್ನು ತಿಳಿಯಪಡಿಸುವದಕ್ಕೆ ಮೂಲ ಭಾಷೆಗಿಂತಲೂ ಅನುವಾದ ಮಾಡುವ ಭಾಷೆಯಲ್ಲಿ ಕಡಿಮೆ ಪದಗಳಾಗಲಿ ಅಥವಾ ಹೆಚ್ಚುವರಿ ಪದಗಳನ್ನಾಗಲಿ ಉಪಯೋಗಿಸಿದ್ದರೆ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಡಿರಿ, ಯಾಕಂದರೆ ಅದು ಸಹಜವಾಗಿ ಬರುವುದುಂಟು. ಜೋಡಣೆಯ ಸಾಧನೆಯೊಂದಿಗೆ, ನಾವು ಕೇವಲ ಮಾತುಗಳನ್ನು ಅಥವಾ ಪದಗಳನ್ನು ಮಾತ್ರವಲ್ಲದೆ, ನಿಜವಾಗಿ ಅರ್ಥವನ್ನು ಕೂಡ ಜೋಡಣೆ ಮಾಡುತ್ತಿದ್ದೇವೆ. ಮೂಲ ಬೈಬಲ ಅರ್ಥವನ್ನು ಚೆನ್ನಾಗಿ ವ್ಯಕ್ತಪಡಿಸುವುದೇ ಪ್ರಾಮುಖ್ಯ, ಈ ಕೆಲಸ ಮಾಡುವುದಕ್ಕೆ ಎಷ್ಟು ಪದಗಳನ್ನು ಬಳಸಿದರೂ ಸಮಸ್ಯೆಯಿಲ್ಲ. ಮೂಲ ಭಾಷೆಯ ಅರ್ಥವನ್ನು ವ್ಯಕ್ತಪಡಿಸುವ ಅನುವಾದ ಭಾಷೆಯ ಪದಗಳನ್ನು ಜೋಡಣೆ ಮಾಡುವುದರ ಮೂಲಕ ಅನುವಾದದಲ್ಲಿ ಮೂಲ ಭಾಷೆಯ ಅರ್ಥವು ಇದೆಯೋ ಇಲ್ಲವೋ ಎಂದು ನಾವು ನೋಡಬಹುದು.

ಯಾಕಂದರೆ ವಾಕ್ಯವನ್ನು ನಿರ್ಮಾಣ ಮಾಡುವುದಕ್ಕೆ ಪ್ರತಿಯೊಂದು ಅನುವಾದ ಮಾಡುವ ಭಾಷೆಯು ವಿಭಿನ್ನವಾದ ಅಗತ್ಯತೆಗಳನ್ನು ಹೊಂದಿಕೊಂಡಿರುತ್ತದೆ ಮತ್ತು ಕೊಡಬೇಕಾದ ಸ್ಪಷ್ಟತೆಯ ಮಾಹಿತಿಯನ್ನು ಹೊಂದಿರುತ್ತದೆ, ಮೂಲ ಭಾಷೆಯಲ್ಲಿರುವ ಯಾವುದೇ ಪದಗಳಿಗೆ ಸಂಬಂಧಪಡದ ಅನುವಾದ ಮಾಡುವ ಭಾಷೆಯ ಕೆಲವು ಪದಗಳು ಅನೇಕಬಾರಿ ಬರುತ್ತಾ ಇರುತ್ತವೆ. ವಾಕ್ಯಕ್ಕೆ ಅರ್ಥವನ್ನು ಕೊಡುವ ಕ್ರಮದಲ್ಲಿ ಈ ಪದಗಳು ವಾಕ್ಯಕ್ಕೆ ಬೇಕಾದ ಮಾಹಿತಿಯನ್ನು ಕೊಡುವುದಾದರೆ, ಅಥವಾ ಆ ವಾಕ್ಯವನ್ನು ಅರ್ಥಮಾಡಿಕೊಳ್ಳುವುದಕ್ಕೋಸ್ಕರ ಬೇಕಾದ ವಿವರಣಾತ್ಮಕ ಮಾಹಿತಿಯನ್ನು ಕೊಡುತ್ತಿರುವುದಾದರೆ, ಕೊಡಲ್ಪಟ್ಟಿರುವ ಅನುವಾದ ಮಾಡುವ ಭಾಷೆಯಲ್ಲಿನ ಪದಗಳನ್ನು ಅಳವಡಿಸಿಕೊಳ್ಳುವ ವಿಧಾನದಲ್ಲಿ ಅಥವಾ ವಿವರಣೆ ಕೊಡುವುದಕ್ಕೆ ಅವು ಸಹಾಯ ಮಾಡುವ ಪದ್ಧತಿಯಲ್ಲಿ ಮೂಲ ಭಾಷೆಯ ಪದಗಳೊಂದಿಗೆ ಜೋಡಣೆ ಮಾಡಬೇಕು.

ಸೇರಿಸಬೇಕಾದ ಮತ್ತು ಸೇರಿಸಬಾರದ ನಿಯಮಗಳು

  • ಒಂದೇ ಒಂದು ಮೂಲ ಭಾಷೆಯ ಪದಕ್ಕೆ ಅನೆಕವಾದ ಅನುವಾದ ಭಾಷೆಯ ಪದಗಳನ್ನು ಜೋಡಣೆ ಮಾಡುವುದಕ್ಕೆ, ಕೇವಲ ಅನುವಾದ ಮಾಡುವ ಭಾಷೆಯ ಪದಗಳನ್ನು ಮೂಲ ಭಾಷೆಯ ಪದದ ಕೆಳಗಿರುವ ಪೆಟ್ಟಿಗೆಯ ಮೇಲೆ ಎಳೆದು ಹಾಕಿರಿ.
  • ಮೂಲ ಭಾಷೆಯ ಪದಗಳ ಸೇರ್ಪಡೆಗೆ ಅನುವಾದ ಭಾಷೆಯ ಪದ(ಗಳನ್ನು) ಜೋಡಿಸಬೇಕಾದ ಅವಶ್ಯಕತೆ ಬಂದಾಗ, ಮೊಟ್ಟ ಮೊದಲು ಇತರ ಮೂಲ ಭಾಷೆಯ ಪದವಿರುವ ಪೆಟ್ಟಿಗೆಯೊಳಗೆ ಮೂಲ ಭಾಷೆಯ ಪದಗಳಿಗೆ ಸಂಬಂಧಪಟ್ಟ ಪದಗಳಲ್ಲಿ ಒಂದು ಎಳೆದು ಹಾಕಿರಿ. ಇದರಿಂದ ಅನೇಕ ಮೂಲ ಭಾಷೆಯ ಪದಗಳು ಅಲ್ಲಿಯೇ ಬೆರೆತುಕೊಂಡಿರುತ್ತವೆ.
  • ಮುಂಚೆ ಸೇರ್ಪದಡೆ ಭಾಷೆಯ ಪದಗಳನ್ನು ಪುನ ಹೊರ ತೆಗೆಯಬೇಕಾದರೆ, ಬಲಬದಿಗೆ ಇರುವ ಮೂಲ ಭಾಷೆಯ ಪದವನ್ನು ಬಲಕ್ಕೆ ಎಳೆಯಿರಿ. ಒಂದು ಚಿಕ್ಕ ಹೊಸ ಜೋಡಣೆಯ ಪೆಟ್ಟಿಗೆಯು ಕಾಣಿಸಿಕೊಳ್ಳುತ್ತದೆ, ಮತ್ತು ಹೊರಗೆ ತೆಗೆಯಬೇಕೆಂದೆನ್ನುವ ಮೂಲ ಭಾಷೆಯ ಪದಗಳೆಲ್ಲವೂ ಇನ್ನೊಂದು ಪೆಟ್ಟಿಗೆಯಲ್ಲಿ ಹಾಕಿರಿ.
  • ಕಡೂ ಎಡಬದಿಗೆ ಇರುವ ಮೂಲ ಭಾಷೆಯ ಪದವನ್ನು ಕೂಡ ಎಳೆಯುವುದರ ಮೂಲಕ ಹೊರಗೆ ತೆಗೆಯಬಹುದು ಮತ್ತು ಅದನ್ನು ಅದರ ಎಡಬದಿಯಲ್ಲಿರುವ ಮೂಲ ಭಾಷೆಯ ಪದದ ಪೆಟ್ಟಿಗೆಯೊಳಗೆ ತಕ್ಷಣವೇ ಹಾಕಬಹುದು.
  • ಅನುವಾದ ಭಾಷೆಯ ಪದಗಳಲ್ಲಿ ಯಾವ ಪದವಾದರೂ ಮೂಲ ಭಾಷೆಯ ಪದದೊಂದಿಗೆ ಜೋಡಣೆ ಮಾಡಲ್ಪಟ್ಟಿದ್ದರೆ, ಅದು ಪದಗಳ ಪಟ್ಟಿಗೆ ತಿರುಗಿ ಹೋಗಿ ಸೇರಿಕೊಳ್ಳುತ್ತದೆ.
  • ಮೂಲ ಭಾಷೆಯ ಪದಗಳು ಸರಿಯಾದ ಕ್ರಮದಲ್ಲಿಯೇ ಉಳಿದುಕೊಂಡಿರಬೇಕು. ಒಂದುವೇಳೆ ಮೂರು ಪದಗಳನ್ನು ಬೆರೆತುಪಡಿಸಿದ್ದರೆ ಅಥವಾ ಮೂರಕ್ಕಿಂತ ಇನ್ನೂ ಹೆಚ್ಚಾದ ಪದಗಳನ್ನು ಬೆರೆತುಗೊಳಿಸಿದ್ದರೆ, ಕಡೂ ಬಲಬದಿಗೆ ಇರುವ ಮೂಲ ಭಾಷೆಯ ಪದಗಳನ್ನು ಮೊದಲು ಹೊರಗೆ ತೆಗೆಯಬಹುದು. ಮೊಟ್ಟಮೊದಲು ಮಧ್ಯದಲ್ಲಿರುವ ಪದ(ಗಳನ್ನು) ಹೊರತೆಗೆಯುವುದರ ಮೂಲಕ ಮೂಲ ಭಾಷೆಯ ಪದಗಳಗಳ ಕ್ರಮವು ತಪ್ಪಿಹೋಗಬಹುದು. ಒಂದುವೇಳೆ ಆ ರೀತಿ ನಡೆದಾಗ, ಮೂಲ ಭಾಷೆಯ ಪದಗಳು ತಮ್ಮ ಕ್ರಮದಲ್ಲಿಯೇ ಉಳಿದುಕೊಳ್ಳುವುದಕ್ಕೆ ಆ ಪೆಟ್ಟಿಗೆಯಲ್ಲಿರುವ ಪದಗಳನ್ನು ಹೊರ ತೆಗೆಯಿರಿ.

ಜೋಡಣೆ ಮಾಡಿದನಂತರ

ನೀವು ಅನುವಾದದ ಕುರಿತಾಗಿ ಪ್ರಶ್ನೆಗಳನ್ನು ಮತ್ತು ವ್ಯಾಖ್ಯೆಗಳನ್ನು ಮಾಡಿ ಬೈಬಲ್ ಪುಸ್ತಕವನ್ನು ಜೋಡಣೆ ಮಾಡಿ ಮುಗಿಸಿದನಂತರ, ಅನುವಾದ ತಂಡಕ್ಕೆ ಪ್ರಶ್ನೆಗಳನ್ನು ಕಳುಹಿಸುವ ಸಮಯವಿದು ಅಥವಾ ಅನುವಾದ ತಂಡದೊಂದಿಗೆ ಭೇಟಿ ಮಾಡಿ ಚರ್ಚೆ ಮಾಡುವ ಸಮಯವಿದು. ಈ ಪದ್ಧತಿಯನ್ನು ಸಂಪೂರ್ಣಗೊಳಿಸುವುದಕ್ಕೆ ಕೆಲವೊಂದು ಸೂತ್ರಗಳಿಗಾಗಿ ನೀವು ಎಲ್ಲಿ ಬಿಟ್ಟಿದ್ದೀರೋ ಅಲ್ಲಿಗೆ ತಿರುಗಿ ಹೋಗಿ ನೋಡಿರಿ. [ಕ್ರಮಬದ್ಧವಾದ ಪರಿಶೀಲನೆಗೆ ಮೆಟ್ಟಿಲುಗಳು] (../vol2-backtranslation/01.md) ಪುಟ.