translationCore-Create-BCS_.../checking/acceptable/01.md

3.7 KiB

ಅಂಗೀಕೃತ ಶೈಲಿಯಲ್ಲಿನ ಅನುವಾದ

ಹೊಸ ಅನುವಾದವನ್ನು ನೀವು ಓದುತ್ತಿರುವಾಗ, ಈ ಪ್ರಶ್ನೆಗಳನ್ನು ನಿಮಗೆ ನೀವೇ ಕೇಳಿಕೊಳ್ಳಿರಿ. ಇದರಿಂದ ಭಾಷೆಯ ಸಮುದಾಯಕ್ಕೆ ಅಂಗೀಕೃತ ಶೈಲಿಯಲ್ಲಿ ಅನುವಾದ ಮಾಡಿದ್ದಾರೋ ಇಲ್ಲವೋ ಎಂದು ತಿಳಿದುಕೊಳ್ಳುವುದಕ್ಕೆ ಈ ಪ್ರಶ್ನೆಗಳು ಸಹಾಯ ಮಾಡುತ್ತವೆ.

  1. ಭಾಷೆಯ ಸಮುದಾಯದಲ್ಲಿರುವ ಚಿಕ್ಕವರು ದೊಡ್ಡವರು ಮತ್ತು ವೃದ್ಧರು ಎಲ್ಲರು ಸುಲಭವಾಗಿ ಅರ್ಥ ಮಾಡಿಕೊಳ್ಳುವ ವಿಧಾನದಲ್ಲಿ ಅನುವಾದವನ್ನು ಮಾಡಲಾಗಿದೆಯೋ? (ಯಾರಾದರು ಮಾತನಾಡುವ ಸಂದರ್ಭದಲ್ಲಿ ದೊಡ್ಡವರಿಗಾಗಿ ಅಥವಾ ಚಿಕ್ಕವರಿಗಾಗಿ ತಮ್ಮ ಮಾತುಗಳನ್ನು ಬದಲಾಯಿಸಿಕೊಳ್ಳುವ ಅವಕಾಶವಿರುತ್ತದೆ. ಈ ಅನುವಾದವು ಚಿಕ್ಕವರನ್ನು ಮತ್ತು ದೊಡ್ಡವರನ್ನು ಸೇರಿಸಿಕೊಂಡು ಅವರಿಗೆ ಅರ್ಥವಾಗುವಂತೆ ಪದಗಳನ್ನು ಉಪಯೋಗಿಸಿ ಮಾಡಲ್ಪಟ್ಟಿದಿಯೋ?)
  2. ಈ ಅನುವಾದದ ಶೈಲಿ ಹೆಚ್ಚಾಗಿ ಸಾಂಪ್ರದಾಯಿಕವಾಗಿ ಮಾಡಿದ್ದಾರೋ ಅಥವಾ ಅನೌಪಚಾರಿಕವಾಗಿ ಮಾಡಿದ್ದಾರೋ? (ಸ್ಥಳೀಯ ಜನರು ಪದಗಳನ್ನು ಉಪಯೋಗಿಸಿ ಮಾತನಾಡುವ ಪದ್ಧತಿಯಲ್ಲಿದೆಯೋ, ಅಥವಾ ಅದು ಸ್ವಲ್ಪ ಹೆಚ್ಚಾಗಿರಬೇಕೋ ಅಥವಾ ಸ್ವಲ್ಪ ಪದ್ಧತಿಯ ವಿಧಾನವು ಕಡಿಮೆ ಮಾಡಬೇಕೋ?)
  3. ಇತರ ಬೇರೊಂದು ಭಾಷೆಯ ಪದಗಳನ್ನು ಈ ಅನುವಾದದಲ್ಲಿ ಬಳಸಿದ್ದಾರೋ, ಅಥವಾ ಈ ಪದಗಳು ಆ ಭಾಷೆಯ ಜನರಿಗೆ ಅರ್ಥವಾಗುತ್ತವೋ?
  4. ಹೆಚ್ಚಿನ ಭಾಷೆಯನ್ನಾಡುವ ಜನರು ಸ್ವೀಕೃತ ಮಾಡುವ ಹಾಗೆ ಅವರ ಭಾಷೆಯ ಸರಿಯಾದ ಪದ್ಧತಿಯನ್ನು ರಚನಾಕಾರರು ಉಪಯೋಗಿಸಿದ್ದಾರೋ? (ಆ ಪ್ರಾಂತ್ಯದಲ್ಲಿ ಕಂಡು ಬಂದ ನಿಮ್ಮ ಭಾಷೆಯ ಪದಗಳೊಂದಿಗೆ ರಚನಾಕಾರರು ಪರಿಚಿತರಾಗಿದ್ದಾರೋ? ಸಮುದಾಯ ಭಾಷೆಯನ್ನಾಡುವ ಜನರೆಲ್ಲರು ಚೆನ್ನಾಗಿ ಅರ್ಥಮಾಡಿಕೊಳ್ಳುವ ಭಾಷೆಯ ವಿಧಾನವನ್ನು ರಚನಾಕಾರರು ಉಪಯೋಗಿಸಿದ್ದಾರೋ, ಅಥವಾ ಒಂದು ಚಿಕ್ಕ ಪ್ರಾಂತ್ಯದಲ್ಲಿ ಬಳಸುವ ಪದ್ಧತಿಯನ್ನು ಮಾತ್ರ ಉಪಯೋಗಿಸಿದ್ದಾರೋ?)

ಅನುವಾದವು ತಪ್ಪಾದ ಶೈಲಿಯಲ್ಲಿ ಭಾಷೆಯನ್ನು ಉಪಯೋಗಿಸುವುದಾದರೆ, ಅದರ ಬಗ್ಗೆ ಗಮನ ಹರಿಸಿ, ಅದನ್ನು ಎತ್ತಿ ಹಿಡಿಯಿರಿ. ಇದರಿಂದ ನೀವು ಅದರ ಕುರಿತಾಗಿ ಅನುವಾದ ತಂಡದೊಂದಿಗೆ ಚರ್ಚೆ ಮಾಡಬಹುದು.