translationCore-Create-BCS_.../translate/translate-source-licensing/01.md

5.6 KiB
Raw Blame History

###ಇದು ಏಕೆ ಪ್ರಮುಖವಾದುದು?

ಭಾಷಾಂತರ ಮಾಡಲು ಮೂಲ ಪಠ್ಯ ಆಯ್ಕೆ ಮಾಡುವಾಗ ಗ್ರಂಥದಹಕ್ಕು ಮತ್ತು ಪರವಾನಗಿಯನ್ನು ಪಡೆಯುವುದು ಎರಡು ಕಾರಣಗಳಿಂದ ಅತಿ ಮುಖ್ಯವಾದುದು. ಮೊದಲನೆಯದಾಗಿ ಗ್ರಂಥದ ಹಕ್ಕು ಯಾರದು ಎಂದು ತಿಳಿದು ಅವರ ಅನುಮತಿ ಇಲ್ಲದೆ ಭಾಷಾಂತರ ಮಾಡಿದರೆ ನೀವು ಕಾನೂನು ಉಲ್ಲಂಘಿಸಿದಂತೆ. ಮೂಲಲೇಖಕರು ತಮ್ಮ ಗ್ರಂಥದ ಹಕ್ಕು ಸಂಪೂರ್ಣ ಹೊಂದಿರುವುದರಿಂದ ಅದು ಕಾನೂನು ಬಾಹಿರವಾದುದು. ಕೆಲವು ಪ್ರದೇಶಗಳಲ್ಲಿ ಸರ್ಕಾರವು ಮೂಲ ಲೇಖಕರ ಅನುಮತಿ ಇಲ್ಲದೆ ಭಾಷಾಂತರಿಸುವುದು ಇಲ್ಲವೆ, ಗ್ರಂಥದ ಹಕ್ಕನ್ನು ಅತಿಕ್ರಮಿಸುವುದು ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ಬಹು ಗಂಭೀರವಾಗಿ ಪರಿಗಣಿಸುತ್ತದೆ.

ಎರಡನೆಯದಾಗಿ ಮೂಲ ಲೇಖಕರ ಅನುಮತಿ ಇಲ್ಲದೆ ಭಾಷಾಂತರಿಸುವುದು ಇಲ್ಲವೆ, ಮೂಲ ಪಠ್ಯದಲ್ಲಿ ಬದಲಾವಣೆ ತರುವುದು, ಮರುಪ್ರಕಟಣೆ ಇತ್ಯಾದಿ ಮಾಡಿದರೆ, ಮೂಲ ಲೇಖಕರ ಬೌದ್ಧಿಕ ಸಂಪತ್ತನ್ನು ಕೊಳ್ಳೆ ಹೊಡೆದಂತೆ ಆಗುತ್ತದೆ. ಮೂಲ ಲೇಖಕರು ತಮ್ಮ ಗ್ರಂಥದ ಸಂಪೂರ್ಣ ಹಕ್ಕನ್ನು ಉಳಿಸಿಕೊಂಡಿರುತ್ತಾರೆ. ಕೆಲವೊಮ್ಮೆ ಪ್ರಕಾಶಕರಿಗೆ ವಹಿಸುತ್ತಾರೆ. ಈ ಕಾರಣದಿಂದಲೇ ಗ್ರಂಥಕರ್ತರ ಹಕ್ಕು ಮತ್ತು ಕಾನೂನು ಉಲ್ಲಂಘನೆ ಆಗದೆ ಇರುವ ಗ್ರಂಥಗಳನ್ನು ಮಾತ್ರ ಭಾಷಾಂತರಕ್ಕೆ ಬಳಸಿಕೊಳ್ಳುತ್ತಾರೆ.

###ನಾವು ಯಾವ ಪರವಾನಗಿಯನ್ನು ಉಪಯೋಗಿಸಬಹುದು?

ಪ್ರಕಟವಾಗುವ ಎಲ್ಲಾ ವಿಷಯಗಳು ಅಥವಾ ಗ್ರಂಥವು ಈ ಆಧಾರದಮೇಲೆ ಬಿಡುಗಡೆ ಆಗುತ್ತದೆ Creative Commons Attribution-ShareAlike 4.0 License (CC BY-SA) (see http://creativecommons.org/licenses/by-sa/4.0/).

ಈ ಪರವಾನಗಿ/ ಅನುಮತಿ ಚರ್ಚ್ ತುಂಬಾ ಸಹಾಯವಾಗುತ್ತದೆ. ಇದು ಭಾಷಾಂತರ ಮತ್ತು ಇತರ ಉತ್ಪನ್ನ ಶಬ್ದಗಳನ್ನು ಸೇರಿಸಿಕೊಳ್ಳುವುದರಿಂದ ಭಾಷಾಂತರದ ಅನುಮತಿ/ ಪರವಾನಗಿ ನಿರ್ಬಂಧಕ್ಕೆ ಒಳಗಾಗಬಹುದು. ಈ ವಿಷಯದ ಬಗ್ಗೆ ಸಂಪೂರ್ಣವಾದ ಚರ್ಚೆ ಮಾಡಲು, “The Christian Commons” ನ್ನು ಓದಿ (see http://thechristiancommons.com/).

ಯಾವ ಮೂಲ ಪಠ್ಯಭಾಗವನ್ನು ಉಪಯೋಗಿಸಬಹುದು?

ಮೂಲ ಪಠ್ಯವನ್ನು ಸಾರ್ವಜನಿಕ ಕ್ಷೇತ್ರಕ್ಕೆ ಸಂಬಂಧಿಸಿದ ಅಥವಾ ಈ ಕೆಳಗೆ ಕೊಟ್ಟಿರುವ ಪರವಾನಗಿ/ ಅನುಮತಿ ಆಧಾರದ ಮೇಲೆ ಉಪಯೋಗಿಸಬಹುದು, ಈ ಪರವಾನಗಿ ಕ್ರಿಯೆಟಿವ್ ಕಾಮನ್ಸ್ ಅಟ್ರಿಬ್ಯುಷನ್ ಕೇರ್ ಅಲೈಕ್ ಲೈಸೆನ್ಸ್ ಮೂಲಕ ಭಾಷಾಂತರವನ್ನು ಪ್ರಕಟಮಾಡಬಹುದು.

ಇತರ ಎಲ್ಲಾ ಪ್ರಶ್ನೆಗಳಿಗೆ ಈ ಮೇಲ್ ಸಂಪರ್ಕಿಸಿ help@door43.org.

ಗಮನಿಸಿ:

ಎಲ್ಲ ಮೂಲಗ್ರಂಥಗಳು, ವಿಷಯಗಳು ಮೂಲಪಠ್ಯವಾಗಿ ಭಾಷಾಂತರ ಸ್ಟುಡಿಯೋದಲ್ಲಿ ಪರಿಶೀಲನೆಗೆ ಒಳಗಾಗುತ್ತದೆ ಮತ್ತು ನ್ಯಾಯಬದ್ಧವಾಗಿ ಉಪಯೋಗಿಸಲು ಅವಕಾಶ ಮಾಡಿಕೊಡುತ್ತದೆ. ಯಾವುದೇ ಭಾಷಾಂತರ ಗ್ರಂಥವನ್ನು ಪ್ರಕಟಿಸುವ ಮೊದಲು ಬಳಸಿದ ಉತ್ಪನ್ನ ಪದಗಳೊಂದಿಗೆ ಸರಿಯಾಗಿ ಪರಿಶೀಲಿಸಿ ಮೇಲೆ ತಿಳಿಸಿರುವ ಪರವಾನಗಿ/ಅನುಮತಿ ಪದ್ಧತಿಯಂತೆ ಅನುಮತಿ ದೊರೆತಿರುವ ಬಗ್ಗೆ ದೃಢಪಡಿಸಿಕೊಳ್ಳಬೇಕು. ನೀವು ಭಾಷಾಂತರ ಪ್ರಾರಂಭಿಸುವ ಮೊದಲು ಮೂಲ ಪಠ್ಯಭಾಗವನ್ನು/ ಗ್ರಂಥವನ್ನು ಚೆನ್ನಾಗಿ ಪರಿಶೀಲಿಸಬೇಕು ಏಕೆಂದರೆ ಈ ಕಾರಣದಿಂದ ಮುಂದೆ ನಿಮ್ಮ ಭಾಷಾಂತರ ಅಪ್ರಕಟಿತವಾಗಿ ಉಳಿಯಬಹುದು.