translationCore-Create-BCS_.../translate/translate-alphabet/01.md

11 KiB
Raw Blame History

ಅಕ್ಷರ ಸೃಷ್ಟಿ.

ಈ ಮೊದಲುನಿಮ್ಮ ಭಾಷೆಯನ್ನು ಬರೆಯದೆ ಇದ್ದರೆ, ನೀವು ಅಕ್ಷರ ಮಾಲೆಯನ್ನು ಸೃಷ್ಟಿಸಿ ಬರೆಯಲು ತೊಡಗಬಹುದು. ಒಂದು ಅಕ್ಷರವನ್ನು ಸೃಷ್ಟಿಸಬೇಕೆಂದರೆ ಅನೇಕ ವಿಚಾರಗಳ ಬಗ್ಗೆ ಆಲೋಚಿಸಬೇಕು ಮತ್ತು ಉತ್ತಮ ಅಕ್ಷರ ಸಂಯೋಜನೆ ನಿಜಕ್ಕೂ ಕಷ್ಟವಾದುದು. ನಿಮಗೆ ಇದು ಕಠಿಣವಾದ ಪ್ರಯತ್ನ ಎನಿಸಿದರೆ ನೀವು ಬರೆಯುವ ಮೂಲಕ ಭಾಷಾಂತರ ಮಾಡುವ ಬದಲು ಶ್ರವಣ ಮಾಧ್ಯಮದ ಭಾಷಾಂತರ ಮಾಡಬಹುದು. ಅಕ್ಷರ ಸಂಯೋಜನೆಯ ಉದ್ದೇಶವೇನೆಂದರೆ ಪ್ರತಿಯೊಂದು ಅಕ್ಷರಕ್ಕೂ ಅದರದೇ ಆದ ಧ್ವನಿ ಉಚ್ಛಾರಣೆ ನಿಮ್ಮ ಭಾಷೆಯಲ್ಲಿ ಪ್ರಇರುತ್ತದೆಯೇ ಎಂದು ತಿಳಿದುಕೊಳ್ಳುವುದುದಾಗಿದೆ. ನಿಮ್ಮ ನೆರೆಯ ಭಾಷೆಯಲ್ಲಿ ಅಕ್ಷರಮಾಲೆ ಇದ್ದರೆ ಮತ್ತು ಆ ಭಾಷೆಯಲ್ಲಿನ ಧ್ವನಿ ಉಚ್ಛಾರಣೆಗಳು ನಿಮ್ಮ ಭಾಷೆಯಲ್ಲಿ ಇದ್ದರೆ ಆಗ ಭಾಷಾಂತರ ಉತ್ತಮವಾಗಿ ಹೊಂದಿಕೊಂಡರೆ ಅದನ್ನು ಅಳವಡಿಸಿಕೊಳ್ಳಿ

ಇಲ್ಲದಿದ್ದರೆ ನೀವು ಶಾಲೆಯಲ್ಲಿ ಕಲಿತ ರಾಷ್ಟ್ರೀಯ ಭಾಷೆಯಿಂದ ಉತ್ತಮವಾಗಿರುವ ಧ್ವನಿ ಉಚ್ಛಾರಣಾ ಅಕ್ಷರಗಳನ್ನು ಪಡೆಯಬಹುದು. ರಾಷ್ಟ್ರೀಯ ಭಾಷೆಯಲ್ಲಿ ಧ್ವನಿ ಉಚ್ಛಾರಣೆಗಳು ಇಲ್ಲದೆ ನಿಮ್ಮ ಭಾಷೆಯಲ್ಲಿ ಇದ್ದರೆ ಆ ಅಕ್ಷರಗಳನ್ನು ಬಳಸಲು ಕಷ್ಟವಾದರೂ ನಿಮ್ಮ ಭಾಷೆಯ ಧ್ವನಿ ಉಚ್ಛಾರಣೆಗಳನ್ನು ಪ್ರತಿನಿಧಿಸಬಹುದು. ನಿಮ್ಮ ಭಾಷೆಯಲ್ಲಿ ಇರುವ ಧ್ವನಿ ಉಚ್ಛಾರಣೆಗಳನ್ನು ಬಳಸುವ ಬಗ್ಗೆ ಆಲೋಚಿಸುವುದು ಒಳ್ಳೆಯದು

ರಾಷ್ಟ್ರೀಯ ಭಾಷೆಯ ಅಕ್ಷರಗಳನ್ನು ಒಂದು ಕಾಗದದಲ್ಲಿ ಮೊದಲಿನಿಂದ ಕೊನೆಯವರೆಗೆ ಬರೆಯಿರಿ. ಹೀಗೆ ಸಾಲಾಗಿ ಬರೆದ ಈ ಅಕ್ಷರಗಳ ಪಕ್ಕದಲ್ಲೆ ನಿಮ್ಮ ಭಾಷೆಯ ಪದಗಳನ್ನು ಉಚ್ಛಾರಣೆಗೆ ತಕ್ಕ ಹಾಗೆ ಬರೆಯಿರಿ. ಪ್ರತಿಯೊಂದು ಪದದಲ್ಲಿ ಉಂಟಾಗುವ ಧ್ವನಿ ಉಚ್ಛಾರಣೆಗಳನ್ನು ಗುರುತಿಸಿರಿ. ರಾಷ್ಟ್ರೀಯ ಭಾಷೆಯಲ್ಲಿ ಇರುವ ಅಕ್ಷರಗಳು ನಿಮ್ಮ ಭಾಷೆಯಲ್ಲಿ ಬಳಸದೇ ಇರುವ ಅಕ್ಷರಗಳಾಗಿ ಇರಬಹುದು. ಆಗಲಿ ಇದೂ ಒಂದು ರೀತಿ ಒಳ್ಳೆಯದೆ. ಈಗ ಇಲ್ಲಿರುವ ಧ್ವನಿ ಉಚ್ಛಾರಣೆಗಳಿಗೆ ಅಕ್ಷರಗಳನ್ನು ಬರೆಯಲು ಕಷ್ಟವಾಗಿದ್ದರೆ, ಅದರ ಬದಲಾಗಿ ಅಕ್ಷರ ಕಂಡುಕೊಳ್ಳಲು ಸಾಧ್ಯವಾಗದಿದ್ದರೆ ಏನು ಮಾಡಬೇಕೆಂದು ಯೋಚಿಸಿ. ನೀವು ಸರಿಯಾದ ಧ್ವನಿ ಉಚ್ಛಾರಣಾ ಶಬ್ಧವನ್ನೋ, ಅಕ್ಷರವನ್ನೋ ಕಂಡುಕೊಂಡರೆ ಆಗ ಅದರ ಬದಲಾಗಿ ಬಳಸುವ ಅಕ್ಷರವನ್ನು ಕಂಡುಕೊಳ್ಳಲು ಪ್ರಯತ್ನಿಸಬಹುದು. ಉದಾಹರಣೆಗೆ ನೀವು " ಎಸ್/s ",ಅಕ್ಷರವನ್ನು ಪ್ರತಿನಿಧಿಸುವ ಧ್ವನಿ ಉಚ್ಛಾರಣೆ ನಿಮ್ಮಲ್ಲಿದ್ದರೆ, ಅದೇ ರೀತಿಯ ಧ್ವನಿ ಉಚ್ಛಾರಣಾ ಅಕ್ಷರಗಳನ್ನು ನೀವು ಕಂಡುಕೊಳ್ಳಲು ಸಾಧ್ಯವಾಗದಿದ್ದರೆ ಆಗ ಸಾಧ್ಯವಾಗುವ ಧ್ವನಿ ಉಚ್ಛಾರಣಾ ಅಕ್ಷರವನ್ನು/ ಶಬ್ಧವನ್ನು ' or/ಅಥವಾ ^ or /ಅಥವಾ ~ ಎಂಬ ಗುರುತನ್ನು ಅಕ್ಷರದ ಮೇಲೆ ಗುರುತಿಸಬಹುದು. ರಾಷ್ಟ್ರೀಯ ಭಾಷೆಯ ಧ್ವನಿ ಉಚ್ಛಾರಣೆಗಿಂತ ನಿಮ್ಮ ಭಾಷೆಯ ಅಕ್ಷರಗಳ ಲ್ಲಿ ಒಂದೇಗುಂಪಿನಲ್ಲಿ ರೀತಿಯ ವ್ಯತ್ಯಾಸವಿದ್ದರೆ ಆಗ ಅದನ್ನು ಬದಲಾಯಿಸುವುದು ಒಳ್ಳೆಯದು.

ಒಮ್ಮೆ ಈ ಎಲ್ಲಾ ಬದಲಾವಣೆಗಳು, ಪ್ರಯತ್ನಗಳು ಆದ ಮೇಲೆ ಮತ್ತು ಇನ್ನು ಯಾವುದೇ ಧ್ವನಿ ಉಚ್ಛಾರಣೆ ನಿಮ್ಮ ಭಾಷೆಯಲ್ಲಿ ಮಾಡಲು ಆಗುವುದಿಲ್ಲ ಎಂದು ತಿಳಿದುಬಂದರೆ ಒಂದು ಕಥೆಯನ್ನು ಬರೆಯಿರಿ ಅಥವಾ ಇತ್ತೀಚೆಗೆ ನಡೆದ ಘಟನೆಯ ಬಗ್ಗೆ ಬರೆಯಿರಿ. ನೀವು ಬರೆಯುತ್ತಾ ಹೋದಂತೆ ಗುರುತಿಸುತ್ತಾ ಹೋದಂತೆ ಬಹುಶಃ ಇದೂವರೆಗೂ ನಿಮಗೆ ತಿಳಿಯದಂತಹ ಧ್ವನಿ ಉಚ್ಛಾರಣೆಯನ್ನು ನಿಮಗೆ ತಿಳಿಯಬಹುದು. ಇದೇ ರೀತಿ ಅಕ್ಷರಗಳ ಬದಲಾವಣೆಯನ್ನು ಧ್ವನಿ ಉಚ್ಛಾರಣೆಯನ್ನು ಮುಂದುವರೆಸಬೇಕು. ಈಗಾಗಲೇ ನೀವು ಮಾಡಿದ ಧ್ವನಿ ಉಚ್ಛಾರಣಾ ಅಕ್ಷರಗಳನ್ನು ಪಟ್ಟಿಯಲ್ಲಿ ಇದನ್ನು ಸೇರಿಸಿ. ಇತರ ಭಾಷೆಯನ್ನು ಮಾತನಾಡುವವರೊಂದಿಗೆ ನೀವು ಮಾಡಿದ ಪಟ್ಟಿಯನ್ನು ತೋರಿಸಿ ಹಾಗೂ ರಾಷ್ಟ್ರೀಯ ಭಾಷೆಯಲ್ಲಿ ಈ ಬಗ್ಗೆ ಏನು ಆಲೋಚಿಸುತ್ತಾರೆ ಎಂಬುದನ್ನು ನೋಡಿ ತಿಳಿಯಿರಿ. ಇದರಿಂದ ಅವರು ಇನ್ನೂ ಸುಲಭವಾದ, ಸರಳವಾದ ಅಕ್ಷರಗಳನ್ನು ನಿಮಗೆ ಸೂಚಿಸಬಹುದು. ಇದನ್ನು ಇತರರಿಗೂ ತೋರಿಸಿ ನೀವು ಬರೆದ ಕಥೆಯನ್ನು ಓದಲು ಹೇಳಿ, ನಂತರ ನೀವು ಮಾಡಿರುವ ಪಟ್ಟಿಯಲ್ಲಿನ ಪದಗಳನ್ನು ಅನುಸರಿಸಿ ಓದಲು ಹೇಳಿ ಮತ್ತು ಲಘು ಉಚ್ಛಾರಣೆಗಳನ್ನು ಗಮನಿಸಲು ತಿಳಿಸಿ.

ಅವರು ಇದನ್ನು ಸುಲಭವಾಗಿ ಓದಿದರೆ ಆಗ ನೀವು ಬಳಸಿರುವ ಪದಗಳು ಮತ್ತು ಅಕ್ಷರಗಳು ಚೆನ್ನಾಗಿವೆ ಎಂದು ತಿಳಿಯಬಹುದು. ಇದಲ್ಲದೆ ಓದಲು ಕಠಿಣವಾದರೆ, ಕಷ್ಟಪಟ್ಟರೆ ನೀವು ಬಳಸಿದ ಅಕ್ಷರ ಮತ್ತು ಪದಗಳು ಇನ್ನಷ್ಟು ಸುಲಭವಾದ ಮತ್ತು ಸರಳವಾದ ಪದಗಳ ಅಗತ್ಯವಿದೆ ಅಥವಾ ಇದೇ ಅಕ್ಷರಗಳು ವಿಭಿನ್ನ ಉಚ್ಛಾರಣೆ ಯನ್ನು ಪ್ರತಿನಿಧಿಸುವಂತಾಗಿರಬೇಕು. ಅಥವಾ ನೀವು ಬಳಸಿರುವ ಅಕ್ಷರಗಳನ್ನು ಬದಲಾಗಿ ಈ ಧ್ವನಿ ಉಚ್ಛಾರಣೆಗಾಗಿ ಬೇರೆ ಅಕ್ಷರ ಕಂಡುಕೊಳ್ಳಬೇಕಾಗಬಹುದು. ನಿಮ್ಮ ಭಾಷೆಯನ್ನು ಮಾತನಾಡುವವರು ರಾಷ್ಟ್ರೀಯ ಭಾಷೆಯನ್ನು ಚೆನ್ನಾಗಿ ಓದಿ ಅರ್ಥಮಾಡಿಕೊಳ್ಳ ಬಲ್ಲವರೊಂದಿಗೆ ಈ ಅಕ್ಷರಗಳನ್ನು ಇನ್ನಷ್ಟು ಪರಿಣಾಮಕಾರಿಯಾದ ಧ್ವನಿ ಉಚ್ಛಾರಣೆಯೊಂದಿಗೆ ಬಳಸಲು ಪ್ರಯತ್ನಿಸಬೇಕು. ಇಂತಹವರೊಂದಿಗೆ ಚರ್ಚಿಸಿ ಅತ್ಯುತ್ತಮವಾದ ಧ್ವನಿ ಉಚ್ಛಾರಣೆಯನ್ನು ಪ್ರತಿನಿಧಿಸುವ ಅಕ್ಷರಗಳನ್ನು ಪಡೆಯಲು ಪ್ರಯತ್ನಿಸಬೇಕು. ರಾಷ್ಟ್ರೀಯ ಭಾಷೆಯಲ್ಲಿ ಬರೆಯುವ ವ್ಯವಸ್ಥೆಯು ರೋಮನ್ ಅಕ್ಷರಗಳಿಗಿಂತ ಭಿನ್ನವಾಗಿದ್ದರೆ ಆಗ ನೀವು ಈ ಅಕ್ಷರಗಳನ್ನು ಚಿಹ್ನೆಗಳನ್ನು ಬದಲಾಯಿಸಬಹುದು ಮತ್ತು ಈ ಪದಗಳನ್ನು ಪ್ರತಿನಿಧಿಸುವ ಧ್ವನಿ ಉಚ್ಛಾರಣೆಯನ್ನು ಬಳಸಬಹುದು. ಈ ಚಿಹ್ನೆಗಳನ್ನು ನೀವು ಕಂಪ್ಯೂಟರ್ ನಲ್ಲಿ ಒಂದು ಕಡೆ ದಾಖಲಿಸಿ ಬೇಕಾದ ಸಂದರ್ಭದಲ್ಲಿ ಬಳಸಿಕೊಳ್ಳುವಂತೆ ಮಾಡಿದರೆ ಉತ್ತಮ. ನೀವು ಬರವಣಿಗೆಯ ಪದ್ಧತಿಯಲ್ಲಿ ವರ್ಡ್ ಪ್ರೋಸೆಸ್ಸರ್ ನಲ್ಲಿ ದಾಖಲಿಸುವ ಪ್ರಯೋಗ ಮಾಡಿದರೆ ಅಥವಾ ಭಾಷಾಂತರ ಕೀ ಬೋರ್ಡ್ ನಲ್ಲಿ) ದಾಖಲಿಸಿ ನಿಮಗೆ ಸಹಾಯ ಕೀ ಬೋರ್ಡ್ ದಾಖಲಿಸಲು ಬೇಕಾದರೆ ಈ ಮೇಲ್ ವಿಳಾಸಕ್ಕೆ ಈ ಮೇಲ್ ಬೇಡಿಕೆ ನೀಡಿ help@door43.org.

ನೀವು ಬಳಸುವ ಚಿಹ್ನೆಗಳನ್ನು ಕಂಪ್ಯೂಟರ್ ನ ಕೀ ಬೋರ್ಡ್ ನಲ್ಲಿ ಟೈಪ್ ಮಾಡಿದರೆ ನೀವು ಮಾಡಿದ ಭಾಷಾಂತರ ದಾಖಲಿಸಿ ರಕ್ಷಿಸಿಡಬಹುದು. ಪ್ರತಿ ಮಾಡಬಹುದು, ವಿದ್ಯುದ್ಮಾನಯಂತ್ರದ ಮೂಲಕ ವಿತರಿಸಬಹುದು. ಆಗ ತಿಳಿಯಲು ಆಸಕ್ತರಾಗಿರುವ ಜನರು ಸುಲಭವಾಗಿ, ಯಾವುದೇ ಕ್ರಯವಿಲ್ಲದೆ ಪ್ರತಿಗಳನ್ನು ಪಡೆಯಬಹುದು. ಟ್ಯಾಬ್ ಗಳಲ್ಲಿ, ಮೊಬೈಲ್ ಫೋನ್ ಗಳಲ್ಲಿ ಪ್ರತಿ ಮಾಡಿ ಓದಬಹುದು.