translationCore-Create-BCS_.../translate/bita-plants/01.md

6.6 KiB
Raw Blame History

ಸತ್ಯವೇದದಲ್ಲಿ ಬಳಕೆಯಾಗಿರುವ ಚಿತ್ರಣಗಳಲ್ಲಿ ಕೆಲವು ಸಸ್ಯಗಳೂ ಇವೆ. ಇವುಗಳನ್ನು ಇಂಗ್ಲೀಷ್ ವರ್ಣಮಾಲೆಅಕ್ಷರಗಳ ಕ್ರಮಾನುಸಾರ ಪಟ್ಟಿ ಮಾಡಿದೆ. ದೊಡ್ಡ ಅಕ್ಷರಗಳಲ್ಲಿ ಇರುವ ಪದಗಳು ಮುಖ್ಯ ಉದ್ದೇಶ, ವಿಷಯವನ್ನು ಪ್ರತಿನಿಧಿಸುತ್ತದೆ. ಈ ಪದಗಳು ಪ್ರತಿಯೊಂದು ವಾಕ್ಯಗಳಲ್ಲೂ ಇರಬೇಕೆಂಬ ಅವಶ್ಯಕತೆ ಇಲ್ಲ ಆದರೆ ಈ ಚಿತ್ರಣಗಳ ಉದ್ದೇಶವನ್ನು ಸೂಚಿಸುವ ಪದಗಳು ಅಲ್ಲಲ್ಲಿ ಪ್ರತಿನಿಧಿಸುತ್ತವೆ.

ಕೊಂಬೆ ಎಂಬ ಪದ ವ್ಯಕ್ತಿಯೊಬ್ಬನ ಸಂತತಿಯ /ವಂಶದ ಬಗ್ಗೆ ಪ್ರತಿನಿಧಿಸುತ್ತದೆ

ಕೆಳಗೆಕೊಟ್ಟಿರುವ ಉದಾಹರಣೆಗಳಲ್ಲಿ ಯೆಶಾಯ ಪ್ರವಾದಿ ತಿಳಿಸಿದಂಥ ಒಂದು ಇಷಯನ ಸಂತತಿ ಮತ್ತು ಯೆರೇಮಿಯ ಬರೆದಿರುವ ದಾವೀದನ ಸಂತತಿ ಬಗ್ಗೆ ಬರೆದಿದ್ದಾನೆ

ಒಂದು ಚಿಗುರು ಇಶಯನಿಂದ ಹೊರಟು ಚಿಗುರೊಡೆಯುವುದು ಅದರ ಬೇರಿನಿಂದ ಹೊರಟ ಕೊಂಬೆ ಚಿಗುರು ಫಲಿಸುವುದು . ಆ ಅಂಕುರದ ಮೇಲೆ ಜ್ಞಾನ ವಿವೇಕ, ಆತ್ಮದಾಯಕ ಆತ್ಮ ಆಲೋಚನಾ ಪರಾಕ್ರಮಗಳನ್ನು ಹುಟ್ಟಿಸುವ ಆತ್ಮ ತಿಳಿವಳಿಕೆಯನ್ನು, ಯೆಹೋವನ ಭಯವನ್ನು ಹುಟ್ಟಿಸುವ ಆತ್ಮ ನೆಲೆಯಾಗಿರುತ್ತದೆ. (ಯೆಶಾಯ 11:1 ULB) ಯೆಹೋವನು ಹೀಗೆನ್ನುತ್ತಾನೆ ಇಗೋ - ನಾನು ಮುಂದಿನ ಕಾಲದಲ್ಲಿ ದಾವೀದನೆಂಬ ಮೂಲದಿಂದ ಸದ್ಧರ್ಮೀಯರ ಮೊಳಕೆಯನ್ನು ಚಿಗುರಿಸುವೆನು ಅದು ವಿವೇಕದಿಂದ ನೀತಿ ನ್ಯಾಯಗಳನ್ನು ನಿರ್ವಹಿಸುವಂತದ್ದು . ಅವನು ರಾಜನಾಗಿ ಆಡಳಿತ ನಡೆಸಿ ಪ್ರಗತಿಯನ್ನು, ನೀತಿ ನ್ಯಾಯಗಳನ್ನು ನೆಲಸುವಂತೆ ಮಾಡುವನು. (ಯೆರೇಮಿಯಾ 23:5 ULB)

ಯೋಬನು " ಆತನ ಕೊಂಬೆಗಳು ಕತ್ತರಿಸಲ್ಪಡುವವು" ಎಂದು ಹೇಳಿದರೆ ಅದರ ಅರ್ಥ ಅವನಿಗೆ ಯಾವ ಸಂತತಿಯೂ ಇರುವುದಿಲ್ಲ ಎಂದು.

ಅವನ ಬುಡದ ಬೇರು ಒಣಗುವುದು. ಮೇಲಿನ ರೆಂಬೆಯು ಕತ್ತರಿಸಲ್ಪಟ್ಟು ಬಾಡುವುದು . ಅವನ ಬಗೆಗಿನ ಸ್ಮರಣೆಯು ಭೂಮಿಯಿಂದ ಅಳಿದು ಹೋಗುವುದು. ಅವನ ಹೆಸರು ಎಲ್ಲೂ ಉಳಿಯದಂತೆ ಮರೆತು ಹೊಗುವುದು, (ಯೋಬ 18:17 ULB)

ಸಸ್ಯ ಒಬ್ಬ ವ್ಯಕ್ತಿಯನ್ನು ಪ್ರತಿನಿಧಿಸುತ್ತದೆ.

ಅದರಂತೆ ದೇವರು ನಿನ್ನನ್ನು ಎಂದಿಗೂ ಏಳದಂತೆ ಆ ಸ್ಥಳದಿಂದ ಕಿತ್ತುಬಿಸಾಡುವನು. ನೀನು ಆ ಸ್ಥಳದಿಂದ ಬೇರು ಸಮೇತವಾಗಿ ಕಿತ್ತು ಹಾಕಲ್ಪಡುವಿ (ದಾ.ಕೀ 52:5 ULB)

ಸಸ್ಯ ಭಾವನೆಯನ್ನು ಅಥವಾ ಮನೋಧೋರಣೆಯನ್ನು ಪ್ರತಿನಿಧಿಸುತ್ತದೆ.

ಯಾವ ಗಿಡದ ಬೀಜವನ್ನು ಹಾಕುತ್ತೇವೋ ಅದೇ ಗಿಡ ಬೆಳೆದು ಫಲ ಕೊಡುತ್ತದೆ. ನಾವು ಯಾವರೀತಿಯ ಮನೋಭಾವದಿಂದ ವರ್ತಿಸುತ್ತೇವೋ ಅದೇ ರೀತಿಯ ಪ್ರತಿಕ್ರಿಯೆ ದೊರೆಯುತ್ತದೆ. ಭಾವನೆಗಳು ಅಥವಾ ಮನೋಭಾವಗಳನ್ನು ಈ ವಾಕ್ಯಗಳಲ್ಲಿ ಗುರುತಿಸಿ ತಿಳಿಸಲ್ಪಟ್ಟಿದೆ.

ನಿಮಗಾಗಿ ನೀತಿಯ ಬೀಜವನ್ನು ಬಿತ್ತಿರಿ ಪ್ರೀತಿಯ ಫಲವನ್ನು ಕೊಯಿಲು ಮಾಡಿ ಇದು ವಿಶ್ವಾಸದ ಒಡಂಬಡಿಕೆಯ ಫಲ . (ಹೋಶಯಾ 10:12 ULB)

ನಾನು ನೋಡಿರುವಂತೆ ಅಧರ್ಮವನ್ನು ಉತ್ತು ಕೇಡನ್ನು ಬಿತ್ತುವವರುಕೇಡನ್ನೇ ಕೊಯ್ಯುವರು , (ಯೋಬ :8 ULB)

ಅವರು ಗಾಳಿಯನ್ನು ಬಿತ್ತುತ್ತಾರೆ ಬಿರುಗಾಳಿಯನ್ನು ಕೊಯ್ದುಕೊಳ್ಳುವರು. (ಹೋಶಯಾ 8:7 ULB)

ನೀವು ನ್ಯಾಯವನ್ನು ವಿಷಭರಿತ ಧರ್ಮದ ಫಲವನ್ನು ಕೈಯ್ಯಿಗೆ ತಂದಿದ್ದೀರಿ (ಅಮೋಸ 6:12 ULB)

ಎಂತಹ ಫಲವನ್ನು ನೀವು ಆ ಸಮಯದಲ್ಲಿ ನಿರೀಕ್ಷಿಸುತ್ತೀರಿ? ನಿಮಗುಂಟಾದ ಫಲವೇನು? ನಾಚಿಕೆಯಲ್ಲವೇ ? (ರೋಮಪುರದವರಿಗೆ 6:21 ULB)

ಮರ ಮನುಷ್ಯನನ್ನು ಪ್ರತಿನಿಧಿಸುತ್ತದೆ.

ಅವನು ನೀರಿನ ಕಾಲುವೆಗಳ ಬಳಿಯಲ್ಲಿ ಬೆಳೆದಿರುವ ಮರದ ಹಾಗಿರುವನು. ಅಂತಹ ಮರವು ತಕ್ಕಕಾಲದಲ್ಲಿ ಫಲಕೊಡುತ್ತದಲ್ಲ .ಅದರ ಎಲೆಗಳು ಬಾಡುವುದೇ ಇಲ್ಲ ಅದರಂತೆ ಅವನ ಕಾರ್ಯವೆಲ್ಲವೂ ಸಫಲವಾಗುವುದು. (ದಾ.ಕೀ.1:3 ULB)

ದುಷ್ಟನು ಭೀಕರವಾಗಿ ಸ್ವಸ್ಥಳದಲ್ಲಿ ಹಸಿರಾಗಿ ಬೆಳೆದ ಮರದಂತೆ ವಿಸ್ತರಿಸಿ ಕೊಂಡಿರುವುದನ್ನು ನೋಡಿದೆನು . (ದಾ.ಕೀ.37:35 ULB)

ನಾನು ಹಸಿರಾದ ಆಲೀವ್ ಮರದಂತೆ ದೇವರ ಮನೆಯಲ್ಲಿ ಹರಡಿಕೊಂಡಿದ್ದೇನೆ. (ದಾ.ಕೀ. 52:8 ULB)