translationCore-Create-BCS_.../translate/bita-part3/01.md

36 KiB
Raw Blame History

ವಿವರಣೆ

ಜೀವನದ ವರ್ತನೆಯ ಬಗೆಗಿನ ಮಾನಸಿಕ ಚಿತ್ರಗಳ ಸಾಂಸ್ಕೃತಿಕ ಮಾದರಿಗಳು. ಈ ಚಿತ್ರಗಳು ಇಲ್ಲಿನ ವಿಷಯಗಳ ಬಗ್ಗೆ ಕಲ್ಪನೆಮಾಡುವುದಕ್ಕೂ ಮಾತನಾಡುವುದಕ್ಕೂ ಸಹಾಯ ಮಾಡುತ್ತದೆ. ಉದಾಹರಣೆಗೆ, ಅಮೇರಿಕಾದವರು ಆಗಿಂದಾಗ್ಗೆ ಮದುವೆ ಮತ್ತು ಸ್ನೇಹದ ಬಗ್ಗೆ ಯಾಂತ್ರಿಕವಾಗಿ ಯೋಚಿಸುತ್ತಾರೆ.

ಅವರು ಒಬ್ಬ ವ್ಯಕ್ತಿಯ ಕುರಿತು “ಅವನ ಮದುವೆ ಮುರಿದು ಹೊಗುತ್ತಿದೆ” ಅಥವಾ ಅವರ ಸ್ನೇಹ ಬಹುವೇಗದಿಂದ ಮುಂದುವರೆಯುತ್ತದೆ ಎಂದು ಹೇಳುತ್ತಾರೆ. ಇಲ್ಲಿನ ಉದಾಹರಣೆಗಳಲ್ಲಿ ಮಾನವರ ಸಂಬಂಧಗಳನ್ನು ಯಾಂತ್ರೀಕರಿಸಿ ಮಾತನಾಡಲಾಗಿದೆ. ಸತ್ಯವೇದದಲ್ಲಿ ಕಂಡುಬರುವ ಸಾಂಸ್ಕೃತಿಕ ಮಾದರಿಗಳನ್ನು ಮಾನಸಿಕ ಚಿತ್ರಗಳನ್ನು ಈ ಕೆಳಗಿನಂತೆ ಪಟ್ಟಿಮಾಡಲಾಗಿದೆ.

ಇಲ್ಲಿರುವ ಮಾದರಿಗಳು ದೇವರ, ಮಾನವರ,ವಸ್ತುಗಳ ಮತ್ತು ಅನುಭವಗಳ ಬಗ್ಗೆ ಇವೆ. ಪ್ರತಿಯೊಂದು ವಿಷಯಕ್ಕೂ ಅದರದೇ ಆದ ಶಿರೋನಾಮೆ ದೊಡ್ಡ ಅಕ್ಷರದಲ್ಲಿ ಬರೆಯಲಾಗಿದೆ. ಆ ಪದ ಎಲ್ಲಾ ವಾಕ್ಯಗಳಲ್ಲಿ ಬರಲೇಬೇಕೆಂಬ ನಿಯಮವಿಲ್ಲ ಆದರೆ ಅದರ ಉದ್ದೇಶ ಕಂಡುಬರುತ್ತದೆ.

ದೇವರನ್ನು ಮಾನವನಂತೆ ಮಾದರಿಗೊಳಿಸಲಾಗಿದೆ.

ಸತ್ಯವೇದದಲ್ಲಿ ಬಹು ಸ್ಪಷ್ಟವಾಗಿ ದೇವರು ಮಾನವನಲ್ಲ ಎಂದು ನಿರಾಕರಿಸಿದರೂ ಆಗಿಂದಾಗ್ಗೆ ದೇವರು ಮಾನವರಂತೆ ಕಾರ್ಯಗಳನ್ನು ಮಾಡುವ ಬಗ್ಗೆ ತಿಳಿಸಿದೆ. ಆದರೆ ದೇವರು ಮಾನವನಲ್ಲ. ಸತ್ಯವೇದದಲ್ಲಿ ದೇವರು ಮಾತನಾಡುತ್ತಾರೆ ಎಂದರೆ ದೇವರಿಗೆ ಮಾನವರಂತೆ ಧ್ವನಿಪೆಟ್ಟಿಗೆ ಇದೆ ಎಂದು ತಿಳಿಯಬಾರದು. ದೇವರ ಬಗ್ಗೆ ಮಾತನಾಡುವಾಗ ಆತನು ತನ್ನ ಕೈಯಿಂದ ಕೆಲಸ ಮಾಡುತ್ತಿದ್ದಾನೆ ಎಂದರೆ ಅವನಿಗೆ ಭೌತಿಕವಾಗಿ ಕೈಗಳಿವೆ ಎಂದು ಅರ್ಥವಲ್ಲ.

ನಮ್ಮ ಯಹೋದೇವರ ಸ್ವರವನ್ನು ನಾವು ತಿರುಗಿ ಕೇಳಿದರೆ ಸತ್ತೇವು. (ಧರ್ಮೋಪದೇಶ ಕಾಂಡ 5:25 ULB)

ನನ್ನ ದೇವರಾದ ಯೆಹೋವನ ಹಸ್ತಪಾಲನೆಯು ನನಗೆ ದೊರಕಿದ್ದರಿಂದ ನಾನು ಧೈರ್ಯ ತಂದುಕೊಂಡೆನು (ಎಜ್ರಾ 7:28 ULB)

ಯಹೋದ್ಯರಾದರೊ ದೇವರ ಕೃಪಾಹಸ್ತ ಪ್ರೇರಣೆಯಿಂದ ಯೂದಾಯಕ್ಕೆ ಬಂದರೂ. ಯೆಹೋವನ ಧರ್ಮಶಾಸ್ತ್ರ ಅನುಸಾರ ಅರಸನಿಂದಲೂ, ಪ್ರಭುಗಳಿಂದಲೂ ಹೊರಟ ಆಜ್ಞೆಯನ್ನು ಕೈಗೊಂಡರು (2 ನೇ ಪೂರ್ವಕಾಲ ವೃತ್ತಾಂತ 30:12 ULB)

"ಕೈ"/ "ಹಸ್ತ " ಎಂಬ ಪದದಲ್ಲಿ ಮೆಟೋನಿಮಿ ಇದೆ. ಏಕೆಂದರೆ ಮಹೋನ್ನತ ದೇವರ "ಹಸ್ತವಿದು " ಅದರಲ್ಲಿ ದೇವರ ಮಹಿಮೆ ಇದೆ. (ಮೆಟೋನಿಮಿ)

ದೇವರನ್ನು ರಾಜಾಧಿರಾಜನಂತೆ ಮಾದರಿಗೊಳಿಸಲಾಗಿದೆ.

ದೇವರು ಭೂಲೋಕಕ್ಕೆಲ್ಲಾ ರಾಜನು ; (ದಾ.ಕೀ. 47:7 ULB) ಈ ರಾಜ್ಯವು ಯಹೋವನದೇ ಎಲ್ಲಾಜನಾಂಗಗಳಿಗೆ ಆತನೇ ಒಡೆಯನು. (ದಾ.ಕೀ. 22:28 ULB) ದೇವರೇ ನಿನ್ನ ಸಿಂಹಾಸನವು , ನೀನು ನಮ್ಮೊಂದಿಗೆ ಎಂದೆಂದೂ ಇರುವಿ ; ರಾಜ್ಯಗಳು . ಜನಾಂಗಗಳು ನ್ಯಾಯಕ್ಕಾಗಿ ಕಳವಳಗೊಂಡು ತತ್ತರಿಸಿದವು. (ದಾ.ಕೀ. 45:6 ULB) ಯೆಹೋವನು ಹೀಗೆನ್ನುತ್ತಾನೆ. ಆಕಾಶವು ನನಗೆ ಸಿಂಹಾಸನವು , ಭೂಮಿಯು ನನಗೆ ಪಾದಪೀಠ , (ಯೆಶಾಯ 66:1 ULB) ದೇವರು ಸರ್ವಾಧಿಪತ್ಯವನ್ನು ದೇಶಗಳ ಮೇಲೆ ಹೊಂದಿದ್ದಾನೆ. ದೇವರು ತನ್ನ ಪರಿಶುದ್ಧ ಸಿಂಹಾಸನದಲ್ಲಿ ,ಕುಳಿತಿದ್ದಾನೆ. ಜನಾಂಗಗಳ ರಾಜಕುಮಾರನು ಜನಾಂಗಗಳಲ್ಲಿ ಶ್ರೇಷ್ಠರಾದವರು ಕೂಡಿಬಂದಿದ್ದಾರೆ ಅವರೆಲ್ಲರೂ ಅಬ್ರಹಾಮನ ದೇವರ ಪ್ರಜೆಯಾಗಿರುವುದಕ್ಕೆ ಕೂಡಿಬರುತ್ತಾರೆ. ಏಕೆಂದರೆ ಭೂಪಾಲಕರೆಲ್ಲಾ ಅವರಿಗೆ ರಕ್ಷಣೆಯಾಗಿ ದೇವರಿಗೆ ಅಧೀನರಾಗಿದ್ದಾರೆ. ಆತನೇ ಸರ್ವೋನ್ನತನು. (ದಾ.ಕೀ. 47:8-9 ULB)

####ದೇವರನ್ನು ಕುರುಬನಂತೆ ಮಾದರೀಕರಿಸಲಾಗಿದೆ ಆತನ ಪ್ರಜೆಗಳನ್ನು ಕುರಿಗಳಂತೆ ಮಾದರಿಗೊಳಿಸಲಾಗಿದೆ.

ಯೆಹೋವನು ನನಗೆ ಕುರುಬನು; ನಾನು ಕೊರತೆ ಪಡೆನು. (ದಾ.ಕೀ. 23:1 ULB)

ಆತನ ಪ್ರಜೆಗಳು ಕುರಿಗಳು.

ಆತನು ನಮ್ಮ ದೇವರು ನಾವು ಆತನು ಪಾಲಿಸುವ ಹಿಂಡು ಆಗಿದ್ದೇವೆ . (ದಾ.ಕೀ. 95:7 ULB)

ಆತನು ತನ್ನ ಪ್ರಜೆಗಳನ್ನು ಕುರಿಗಳಂತೆ.ಮಾರ್ಗದರ್ಶಿಸುತ್ತಾನೆ.

ಆತನು ತನ್ನ ಜನರನ್ನು ಕುರಿಗಳನ್ನೋ ಎಂಬಂತೆ ಹೊರತಂದು ಮಂದೆಯಂತೆಯೇ ಪೋಷಿಸಿ, ಅಡವಿಯಲ್ಲಿ ಮುನ್ನಡೆಸಿದನು . (ದಾ.ಕೀ. 78:52 ULB)

ತನ್ನ ಕುರಿಗಳಿಗಾಗಿ, ಅವುಗಳ ರಕ್ಷಣೆಗಾಗಿ ತನ್ನ ಪ್ರಾಣವನ್ನು ಕೊಡಲು ಸಿದ್ಧವಾಗಿದ್ದಾನೆ.

ನಾನೇ ಒಳ್ಳೆ ಕುರುಬ, ನಾನು ನನ್ನ ಕುರಿಗಳನ್ನು ತಿಳಿದಿರುವಂತೆ ಅವು ನನ್ನನ್ನು ತಿಳಿದಿವೆ. ತಂದೆಯು ನನ್ನನ್ನು ತಿಳಿದಿರುವಂತೆಯೇ ನಾನು ನನ್ನ ತಂದೆಯನ್ನು ತಿಳಿದಿದ್ದೇನೆ ಮತ್ತು ನನ್ನ ಕುರಿಗಳಿಗೋಸ್ಕರ ನನ್ನ ಪ್ರಾಣವನ್ನು ಕೊಡಲು ಸಿದ್ಧನಿದ್ದೇನೆ . ಇದಲ್ಲದೇ ಈ ಮಂದೆಗೆ ಸೇರದಿರುವ ಇನ್ನೂ ಬೇರೆ ಕುರಿಗಳು ನನಗೆ ಇವೆ. ಅವುಗಳನ್ನು ನಾನು ನನ್ನ ಮಂದೆಗೆ ಸೇರಿಸಬೇಕು.ಅವು ನನ್ನ ಸ್ವರಕ್ಕೆ ಕಿವಿಗೊಡುತ್ತವೆ.ಆಗ ಅವೆಲ್ಲವೂ ಸೇರಿ ಒಂದೇ ಹಿಂಡು ಆಗುತ್ತವೆ. ಅವುಗಳಿಗೆ ಒಬ್ಬನೇ ಕುರುಬ. (ಯೋಹಾನ 10:14-15 ULB)

####ದೇವರನ್ನು ಯುದ್ಧವೀರನನ್ನಾಗಿ ಮಾದರೀಕರಿಸಲಾಗಿದೆ

ಯೆಹೋವನುಯುದ್ಧವೀರನು ; (ವಿಮೋಚನಾ ಕಾಂಡ 15:3 ULB) ಯೆಹೋವನು ಶೂರನಂತೆ ಹೊರಟು, ಯುದ್ಧವೀರನ ಹಾಗೆ ;ತನ್ನ ರೌದ್ರವನ್ನು ಎಬ್ಬಿಸುವನು . ಆತನು ಶೌರ್ಯವನ್ನು ವ್ಯಾಪಿಸುವಂತೆ ಮಾಡುವನು. ಶೂರನಂತೆ ಆರ್ಭಟಿಸಿ, ಗರ್ಜಿಸಿ ಶತೃಗಳ ಮೇಲೆ ಬಿದ್ದು ; ತನ್ನ ಪರಾಕ್ರಮವನ್ನು ಶತೃಗಳಿಗೆ ತೋರಿಸುವನು ; (ಯೆಶಾಯ 42:13 ULB) ಯೆಹೋವನೇ ನಿನ್ನ ಭುಜಬಲವು ಎಷ್ಟೋಘನವಾದದ್ದು ; ಯೆಹೋವನೇ ನಿನ್ನ ಭುಜಬಲವು ಶತೃಗಳನ್ನು ಪುಡಿಪುಡಿ ಮಾಡುತ್ತದೆ. . (ವಿಮೋಚನಾಕಾಂಡ 15:6 ULB) ಆದರೆ ದೇವರು ಅವರನ್ನು ತನ್ನ ಬಾಣಗಳಿಂದ ಆಕ್ರಮಣಮಾಡುತ್ತಾನೆ; ಇದ್ದಕ್ಕಿದ್ದಂತೆ ಅವರು ಆತನ ಬಾಣಗಳಿಂದ ಗಾಯಗೊಳ್ಳುವರು . (ದಾ.ಕೀ. 65:7 ULB)

ನೀನು ನಿನ್ನ ಬಾಣಗಳನ್ನು ಬಿಲ್ಲಿಗೆ ಹೂಡಿ ಅವರ ಮುಖದೆದುರು ; ಎಸೆದು ಅವರು ಬೆನ್ನು ತೋರಿಸಿ ಓಡುಹೋಗುವಂತೆ ಮಾಡುವಿ. (ದಾ.ಕೀ. 21:12 ULB)

ನಾಯಕನಾದವನನ್ನು ಕುರುಬನಂತೆ ಮಾದರೀಕರಿಸಿ ಇರುವುದರಿಂದ ಆತ ತನ್ನ ಕುರಿಗಳನ್ನು ಮುನ್ನಡೆಸುತ್ತಾನೆ.

ಅನಂತರ ಇಸ್ರಾಯೇಲರ ಎಲ್ಲ ಕುಲದವರು ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಬಂದು ಅವನಿಗೆ ನಾವು ನಿನ್ನ ರಕ್ತಸಂಬಂಧಿಗಳಾಗಿದ್ದೇವೆ. ಹಿಂದಿನ ದಿನಗಳಲ್ಲಿ ಸೌಲನ ಆಳ್ವಿಕೆಯಲ್ಲಿ ಇಸ್ರಾಯೇಲರ ದಳಪತಿಯಾಗಿ ಮುನ್ನಡಿಸಿದವನು ನೀನು. ನಿನ್ನನ್ನು ಕುರಿತು ಯಹೋವನು 'ನೀನು ನಿನ್ನ ಪ್ರಜೆಗಳಾದ ಇಸ್ರಾಯೇಲರ ನಾಯಕನೂ, ಪಾಲಕನೂ, ಕುರುಬನೂ ಆಗಿದ್ದೀಯೆಂದು ಹೇಳಿದನು. (2 ನೇ ಸಾಮುವೇಲ 5:1-2 ULB)

"ನನ್ನ ಕಾವಲಿನ ಕುರಿಗಳನ್ನು ಹುಲ್ಲುಗಾವಲಿನಿಂದ ಚದುರಿಸಿ ಹಾಳುಮಾಡುವ ಕುರುಬನ ಗತಿಯನ್ನು ಏನೆಂದು ಹೇಳಲಿ ಎಂಬುದು ಯಹೋವನ ನುಡಿ (ಯೆರೇಮಿಯಾ 23:1 ULB)

ಯೆಹೋವನು ತನ್ನ ಸ್ವರಕ್ತದಿಂದ ಸಂಪಾದಿಸಿಕೊಂಡ ಸಭೆ ಎಂಬ ಮಂದೆಯನ್ನು ಪರಿಪಾಲಿಸುವುದಕ್ಕಾಗಿ ನಿಮ್ಮನ್ನು ಆರಿಸಿಕೊಂಡಿದ್ದಾನೆ nಎಚ್ಚರಿಕೆಯಿದಿರಿ ಕುರುಬರಾಗಿ ದೇವರು ನಿಮ್ಮನ್ನು ನೇಮಿಸಿದ್ದಾನೆ. ತನ್ನ ರಕ್ತಕೊಟ್ಟು ನಿಮ್ಮನ್ನು ಕೊಂಡುಕೊಂಡಿದ್ದಾನೆ. ಹಿಂಡಿನ ವಿಷಯದಲ್ಲಿ ಎಚ್ಚರಿಕೆಯಿಂದಿರಿ ನಾನು ಹೋದ ಮೇಲೆ ಕ್ರೂರವಾದ ತೋಳಗಳು ನಿಮ್ಮೊಳಗೆ ಬರುವವು ಎಂದು ನನಗೆ ತಿಳಿದಿದೆ. ಅವು ಹಿಂಡಿನಲ್ಲಿ ಇರುವ ಕುರಿಗಳನ್ನು ಕನಿಕರಿಸುವುದಿಲ್ಲ ಮಂದೆ. ಇದಲ್ಲದೆ ನಿಮ್ಮಲ್ಲಿಯೂ ಕೆಲವರು ಎದ್ದು ವಿರುದ್ಧವಾದ ಬೋಧನೆಗಳನ್ನು ಮಾಡಿ ನನ್ನ ಶಿಷ್ಯರನ್ನು ತಮ್ಮ ಕಡೆಗೆ ಎಳೆದುಕೊಳ್ಳುವರು (ಅಪೋಸ್ತಲ ಕೃತ್ಯಗಳು 20:28-30 ULB)

ಕಣ್ಣನ್ನು ದೀಪ ಎಂದು ಮಾದರೀಕರಿಸಿದೆ.

ಕೆಟ್ಟದೃಷ್ಟಿಯ ಬಗ್ಗೆ ಅನೇಕ ವಿಚಾರಗಳು ಜಗತ್ತಿನಾದ್ಯಂತ ಕಂಡುಬರುತ್ತವೆ. ಇವುಗಳಲ್ಲಿ ಅನೇಕ ಏರುಪೇರುಗಳಿವೆ. ಸತ್ಯವೇದದಲ್ಲಿ ಬಂದಿರುವ ಸಾಂಸ್ಕೃತಿಕ ಪ್ರಾತಿನಿಧ್ಯವು ಈ ಕೆಳಗಿನ ಮಾದರಿಗಳನ್ನು ಒಳಗೊಂದಡಿದೆ. ಜನರು ವಸ್ತುಗಳನ್ನು, ವಿಷಯಗಳನ್ನು ಬೆಳಕಿನಲ್ಲಿ ನೋಡಲು ಪ್ರಯತ್ನಿಸುತ್ತಾರೆ. ಆದರೆ ಬೆಳಕು ಎಂಬುದು ಅವರ ಕಣ್ಣುಗಳ ಮೂಲಕ ವಸ್ತುಗಳ ಮೇಲೆ ಆವರಿಸುವುದರಿಂದ ನೋಡಲು ಸಾಧ್ಯವಾಗುತ್ತದೆ.

ಕಣ್ಣು ದೇಹದ ದೀಪ ವಾಗಿದೆ ಆದುದರಿಂದ ನಿನ್ನ ಕಣ್ಣಿನ ದೃಷ್ಟಿ ಒಳ್ಳೆಯದಾಗಿದ್ದರೆ ನಿನ್ನ ದೇಹವೆಲ್ಲಾ ಬೆಳಕಿನಿಂದ ಬೆಳಗುವುದು . (ಮತ್ತಾಯ 6:22 ULB)

ಕಣ್ಣಿನಿಂದ ಹೊಳೆಯುವ ಬೆಳಕು ಆ ವ್ಯಕ್ತಿಯ ಗುಣವನ್ನು ಪ್ರತಿಬಿಂಬಿಸುತ್ತದೆ.

ದುರಾತ್ಮನು ಕೇಡಿನ ಮೇಲೆ ಮನಸ್ಸಿಡುವನು ನೆರೆಯವರನ್ನು ಕನಿಕರಿಸದೆ ತಿರಸ್ಕರಿಸುವನು . (ಜ್ಞಾನೋಕ್ತಿ 21:10 ULB)

####ದ್ವೇಷ ಮತ್ತು ಶಾಪ ಎಂಬ EVIL EYE ದುಷ್ಟದೃಷ್ಟಿಯಂತೆ ಮಾದರೀಕರಿಸಿದೆ GOOD EYE ಒಳ್ಳೆಯದೃಷ್ಟಿಯನ್ನು ಒಳ್ಳೆಯ ತನದಿಂದ ಮಾದರೀಕರಿಸಿದೆ

ಮನುಷ್ಯನ ಮೂಲ ಪ್ರಾಥಮಿಕ ಭಾವನೆ ಎಂದರೆ ದುಷ್ಟದೃಷ್ಟಿ ದ್ವೇಷ. ಗ್ರೀಕ್ ಭಾಷೆಯಿಂದ "ದ್ವೇಷ" ಎಂಬ ಪದವನ್ನು ಮಾರ್ಕನ ಸುವಾರ್ತೆಯ 7ನೇ ಅಧ್ಯಾಯದಲ್ಲಿ "ಕಣ್ಣು" ಎಂದು ಅನುವಾದ ಮಾಡಿದೆ, ಅಂದರೆ ಇಲ್ಲಿ ದುಷ್ಟ ದೃಷ್ಟಿ ಎಂಬ ಅರ್ಥದಲ್ಲಿ ಅನುವಾದಿಸಿದೆ.

ಮನುಷ್ಯನಿಂದ ಹೊರಡುವಂತದ್ದೇ ಮನುಷ್ಯನನ್ನು ಹೊಲೆ ಮಾಡುವುದು. ಮನುಷ್ಯರ ಹೃದಯದೊಳಗಿಂದ ಕೆಟ್ಟ ಆಲೋಚನೆಗಳು ಹೊರಡುತ್ತವೆ ದ್ವೇಷ …. (ಮಾರ್ಕ 7:20-22 ULB)

ಮತ್ತಾಯ 20:15 ದ್ವೇಷದ ಭಾವನೆಗಳು ಹೇಗೆ ಬರುತ್ತದೆ. ಎಂಬುದನ್ನು ತೋರಿಸುತ್ತದೆ. "ನಿಮ್ಮ ಕಣ್ಣಿನ ದೃಷ್ಟಿ ಕೆಟ್ಟದ್ದೇ?" ಅಂದರೆ ನೀವು "ಹೊಟ್ಟಕಿಚ್ಚು, ದ್ವೇಷವುಳ್ಳವರೇ ?"

ನನ್ನ ಸ್ವಂತ ಆಸ್ತಿಯಿಂದ ನನಗೆ ಬೇಕಾದ ಹಾಗೆ ಬದುಕಬಹುದಲ್ಲವೇ? ನಾನು ಒಳ್ಳೆಯವನಾಗಿರುವುದು ನಿನ್ನ ಕಣ್ಣನ್ನು ಒತ್ತುತ್ತದೋ ? (ಮತ್ತಾಯ 20:15 ULB)

ಒಬ್ಬ ವ್ಯಕ್ತಿಯ ಕಣ್ಣಿನ ದೃಷ್ಟಿ ಕೆಟ್ಟದ್ದಾಗಿದ್ದರೆ ಅವನು ಪರರ ಸೊತ್ತಿನ ಬಗ್ಗೆ ಹೊಟ್ಟೆಕಿಚ್ಚು, ಅಸೂಯೆ ಪಡುವವನಾಗಿರುತ್ತಾನೆ.

ಕಣ್ಣು ದೇಹಕ್ಕೆ ದೀಪವಾಗಿದೆ ನಿನ್ನ ಕಣ್ಣು /ದೃಷ್ಟಿ ಒಳ್ಳೆಯದಾಗಿದ್ದರೆ , ನಿನ್ನ ದೇಹದಲ್ಲಿ ಬೆಳಕಾಗಿರುವುದು. ಆದರೆ ನಿನ್ನ ಕಣ್ಣು /ದೃಷ್ಟಿ ಕೆಟ್ಟದಾಗಿದ್ದರೆ ನಿನ್ನ ದೇಹವೆಲ್ಲಾ ಕೆಟ್ಟದಾಗಿರುವುದು., ಹಾಗಾದರೆ ನಿನ್ನೊಳಗಿರುವ ಬೆಳಕೇ ಕತ್ತಲಾದರೆ ಆ ಕತ್ತಲು ಎಷ್ಟಾಗಿರಬೇಕು. ಯಾರೂ ಇಬ್ಬರು ಯಜಮಾನರಿಗೆ ಸೇವೆ ಮಾಡಲಾರರು. ಅವನು ಒಬ್ಬನನ್ನು ದ್ವೇಷಿಸಿ ಮತ್ತೊಬ್ಬನನ್ನು ಪ್ರೀತಿಸುವನು ಇಲ್ಲವೇ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬನನ್ನು ತಾತ್ಸಾರಮಾಡುವನು ನೀವು ದೇವರನ್ನು ಹಣವನ್ನು ಏಕಕಾಲಕ್ಕೆ ಸೇವೆ ಮಾಡಲು ಸಾಧ್ಯವಿಲ್ಲ . (ಮತ್ತಾಯ 6:22-24 ULB)

ಒಬ್ಬ ಮನುಷ್ಯನು ದ್ವೇಷದಿಂದ ಇದ್ದರೆ ಇತರರನ್ನು ಅವನು ಶಪಿಸುವುದು ಅದರ ಮೇಲೆ ಮಂತ್ರತಂತ್ರಮಾಡುವುದು, ಅವರನ್ನು ಯಾವಾಗಲೂ ಕೆಟ್ಟದೃಷ್ಟಿಯಿಂದ ನೋಡುತ್ತಾನೆ.

ಬುದ್ಧಿಹೀನ ಗಲಾತ್ಯದವರೆ ಕೆಟ್ಟಕಣ್ಣು /ದೃಷ್ಟಿ ನಿಮಗೆ ತೊಂದರೆ ಉಂಟುಮಾಡಿತು. (ಗಲಾತ್ಯದವರಿಗೆ 3:1 ULB)

ಒಳ್ಳೆಯ ದೃಷ್ಟಿಯುಳ್ಳವನು ಯಾರನ್ನು ನೋಡಿದರೂ ಅವರನ್ನು ಆಶೀರ್ವದಿಸುವನು

ಒಂದು ದಿನ ದಾವೀದನು ಆಕೀಷನ ಬಳಿ ಬಂದು ನಿನ್ನ ದೃಷ್ಟಿಯಲ್ಲಿ ನನಗೆ ದಯೆತೋರಿಸುವುದಾದರೆ ಯಾವುದಾದರೂ ಒಂದು ಹಳ್ಳಿಯಲ್ಲಿ ನನಗೆ ಇರಲು ಸ್ಥಳಕೊಡಿಸು ಎಂದನು . (1 ನೇ ಸಮುವೆಲ 27:5 ULB)

####ಜೀವನವನ್ನು “ರಕ್ತ ”ಎಂದು ಮಾದರೀಕರಿಸಿದೆ.

ಈ ಮಾದರಿಯಲ್ಲಿ ಮನುಷ್ಯನ ರಕ್ತ ಅಥವಾ ಪ್ರಾಣಿಯ ರಕ್ತ ಅವರ ಜೀವನವನ್ನು ಪ್ರತಿನಿಧಿಸಿದೆ.

ಆದರೆ ರಕ್ತದಿಂದ ಕೂಡಿರುವ ಮಾಂಸವನ್ನು ನೀವು ತಿನ್ನಬಾರದು, ರಕ್ತವು ಜೀವವಷ್ಟೆ. (ಆದಿಕಾಂಡ 9:4 ULB)

ರಕ್ತವು ಹರಿದರೆ ಅಥವಾ ಚಿಮ್ಮಿದರೆ ನಾವು ಯಾರನ್ನಾದರೂ ಕೊಂದಂತೆ.

ಯಾರು , ಮನುಷ್ಯನ ರಕ್ತವನ್ನು ಸುರಿಸುತ್ತಾರೊ ಅವರ ರಕ್ತವನ್ನು ಮನುಷ್ಯರೇ ಸುರಿಸುವರು, (ಆದಿಕಾಂಡ 9:6 ULB)

ಹೀಗೆ, ಸೇಡುತೀರಿಸಿಕೊಳ್ಳಬೇಕೆಂದು ಯೋಚಿಸುವವರಿಂದ ಅಕಸ್ಮಾತ್ತಾಗಿ ಕೊಂದವನು ಓಡಿ ಹೋಗಿ ನ್ಯಾಯಸಭೆಯ ಮುಂದೆ ನಿಲ್ಲುವನು , (ಯೆಹೋಶುವ 20:9 ULB)

ಸುರಿದ ರಕ್ತವು ಕೂಗುತ್ತದೆ, ಪ್ರಕೃತಿಯೇ ಕೊಂದವನ ಬಗ್ಗೆ ಪ್ರತಿಕಾರ ತೀರಿಸಲು ಕೂಗುತ್ತದೆ. (ಇದು ಪರ್ಸಾನಿಫಿಕೇಶನ್ ಏಕೆಂದರೆ ರಕ್ತವನ್ನು ವ್ಯಕ್ತಿಯಂತೆ ಚಿತ್ರಿಸಿ,ರಕ್ತ ಕೂಗಲು ಸಾಧ್ಯವೆಂದುತಿಳಿಸಿದೆ) : ವ್ಯಕ್ತೀಕರಣ)

ಯೆಹೋವನು ಕಾಯೀನನನ್ನು ಕುರಿತು, " ನೀನು ಏನು ಮಾಡಿದೆ ? ನಿನ್ನ ತಮ್ಮನ ರಕ್ತವು ಭೂಮಿಯ ಕಡೆಯಿಂದ ನನ್ನನ್ನು ಕೂಗುತ್ತಿದೆ. (ಆದಿಕಾಂಡ 4:10 ULB)

ಒಂದು ನಾಡನ್ನು /ದೇಶವನ್ನು ಸ್ತ್ರೀ ಯಂತೆ ಮಾದರೀಕರಿಸಿದೆ ಅದರಲ್ಲಿ ಪೂಜಿಸುವ ದೇವರುಗಳನ್ನು ಅವಳ ಪತಿಯಂತೆ ಮಾದರೀಕರಿಸಲಾಗಿದೆ.

ಗಿದ್ಯೋನನು ಸತ್ತ ನಂತರ ಇಸ್ರಾಯೇಲರು ದೇವದ್ರೋಹಿಗಳಾಗಿ ಬಾಳನ ಪ್ರತಿಮೆಗಳನ್ನು ಪೂಜಿಸಿದರು ಇದರಿಂದ ಅವರುಬಾಳ್ ಬೇರಿತ್ ದೇವತೆಗಳನ್ನು ತಮ್ಮ ದೇವರನ್ನಾಗಿ ಮಾಡಿಕೊಂಡು ವೇಶ್ಯಾವೃತ್ತಿ ಮಾಡುವವರಂತೆ ಆದರು. ಬಾಳ್ ಬೇರಿತ್ ನನ್ನು ಅವರ ದೇವರನ್ನಾಗಿ ಮಾಡಿಕೊಂಡರು. (ನ್ಯಾಯಸ್ಥಾಪಕರು 8:33 ULB)

####ಇಸ್ರಾಯೇಲ್ ದೇಶವನ್ನು ತಂದೆಯ ಮಗನಂತೆ ಮಾದರೀಕರಿಸಿದೆ.

ಇಸ್ರಾಯೇಲ್ ಬಾಲ್ಯದಲ್ಲಿದ್ದಾಗ ನಾನು ಅದರ ಮೇಲೆ ಪ್ರೀತಿ ಇಟ್ಟು ನನ್ನ ಮಗನೆಂದುಐಗುಪ್ತ ದೇಶದಿಂದ ಕರೆತಂದೆ (ಹೋಶಯ 11:1 ULB)

ಸೂರ್ಯನನ್ನು ರಾತ್ರಿಯೆಂಬ ಪಾತ್ರೆಯಲ್ಲಿ ಇರುವಂತೆ ಮಾದರೀಕರಿಸಿದೆ.

ಅವುಗಳ ನುಡಿಗಳು ಲೋಕದ ಕಟ್ಟಕಡೆಯವರೆಗೂ ವ್ಯಾಪಿಸಿರುತ್ತದೆ. ಅಲ್ಲಿ ಆತನು ಸೂರ್ಯನಿಗೋಸ್ಕರ.ಗುಡಾರವನ್ನು ಏರ್ಪಡಿಸಿದ್ದಾನೆ ಸೂರ್ಯನು ತನ್ನ ಮಂಟಪದೊಳಗಿಂದ ಮದುಮಗನಂತೆ ಹೊರಟುಬರುವನು. ಅವನು ಶೂರನಂತೆ ತನಗೆ ನೇಮಕವಾದ ಮಾರ್ಗದಲ್ಲಿ ಓಡುವುದಕ್ಕೆ ಉಲ್ಲಾಸವಾಗಿದ್ದಾನೆ. (ದಾ.ಕೀ. 19:4-5 ULB)

ದಾ.ಕೀ. 110ರಲ್ಲಿ ಸೂರ್ಯನು ಉದಯವಾಗುವ ಮೊದಲು ತಾಯಿಯ ಗರ್ಭದಲ್ಲಿದ್ದಂತೆ ಎಂದು ಹೇಳಿದೆ

ಗರ್ಭದಿಂದ ಹೊರಬಂದಂತೆ ನಿನ್ನ ಯುವ ಸೈನ್ಯವು ಉದಯಕಾಲದ ಇಬ್ಬನಿಯಂತೆ ಹೊರಬರುವರು. (ದಾ. ಕೀ. 110:3 ULB)

####ವೇಗವಾಗಿ ಚಲಿಸುವವುಗಳನ್ನು ರೆಕ್ಕೆಗಳಿವೆ ಎಂದು ಮಾದರಿಗೊಳಿಸಿದೆ.

ಇವು ವಿಶೇಷವಾದ ಸತ್ಯ ಸಂಗತಿಗಳಾಗಿದ್ದು ಆಕಾಶದಲ್ಲಿ ರೆಕ್ಕೆಗಳೊಡನೆ ಹಾರುತ್ತವೆ. ಸೂರ್ಯನನ್ನು ರೆಕ್ಕೆಗಳುಳ್ಳ ಸೂರ್ಯ ಮಂಡಲ, ಇದು ಹಗಲಿನಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಆಕಾಶದಲ್ಲಿ ಹಾರುತ್ತಿರುತ್ತದೆ. ದಾ.ಕೀ. 139, "ಅರುಣನ ರೆಕ್ಕೆಗಳು " ಎಂದು ಹೇಳುವಲ್ಲಿ ಸೂರ್ಯನನ್ನು ಕುರಿತು ಹೇಳಿದೆ.

ಮಲಾಕಿಯ ಪ್ರವಾದದ ಗ್ರಂಥದ ನಾಲ್ಕನೇ ಅಧ್ಯಾಯದಲ್ಲಿ ದೇವರು ತಾನೇ "ನೀತಿಯೆಂಬ ರೆಕ್ಕೆಯುಳ್ಳ ಸೂರ್ಯನಾಗಿ" ಎಂದು ಹೇಳಿದ್ದಾನೆ. ನಾನು ಅರುಣನ ರೆಕ್ಕೆಗಳನ್ನು ಕಟ್ಟಿಕೊಂಡು ಹಾರಿಹೋಗಿ ಸಮುದ್ರದ ಕಟ್ಟಕಡೆಯಲ್ಲಿ ವಾಸಮಾಡುತ್ತೇನೆ ಎಂದರೆ ಅಲ್ಲಿಯೂ ನಿನ್ನ ಕೈ ನನ್ನನ್ನು ನಡೆಸುವುದು. (ದಾ.ಕೀ. 139:9 ULB)

ನನ್ನ ನಾಮದಲ್ಲಿ ಭಯಭಕ್ತಿ ಇಟ್ಟಿರುವ ನಿಮಗೋ ಧರ್ಮವೆಂಬ ಸೂರ್ಯನು ಸ್ವಸ್ಥತೆ ಉಂಟುಮಾಡುವ ಕಿರಣಗಳನ್ನು ಹೊಂದಿದವನಾಗಿ ಬರುವನು . (ಮಲಾಕಿ 4:2 ULB)

ಗಾಳಿಯು ವೇಗವಾಗಿ ಚಲಿಸುತ್ತದೆ ಏಕೆಂದರೆ ಅದಕ್ಕೆ ರೆಕ್ಕೆಗಳಿವೆ ಎಂದು ಮಾದರೀಕರಿಸಿದೆ.

ವಾಯುವೇ ಆತನ ರೆಕ್ಕೆಗಳೋ ಎಂಬಂತೆ ಇಳಿದು ಪ್ರತ್ಯಕ್ಷನಾದನು . (2 ನೇ ಸಮುವೆಲ. 22:11 ULB)

ಕೆರೋಬಿ ವಾಹನನಾಗಿ ಹಾರಿ ವಾಯುವೇ ಆತನ ರೆಕ್ಕೆಗಳೋ ಎಂಬಂತೆ ಇಳಿದು ಬಂದನು . (ದಾ.ಕೀ. 18:10 ULB)

ವಾಯುವಿನ ರೆಕ್ಕೆಗಳ ಮೇಲೆ ಸಂಚರಿಸುತ್ತೀ (ದಾ.ಕೀ. 104:3 ULB)

ಗಾಳಿ ನಿರರ್ತಕತೆಯನ್ನು ಎಲ್ಲವನ್ನೂ ಹೊಡೆದುಕೊಂಡು ಹೋಗಬಲ್ಲದು ಎಂದು ಮಾದರಿಗೊಳಿಸಿದೆ

ಈ ಮಾದರಿಯಲ್ಲಿ ಗಾಳಿ ಎಲ್ಲವನ್ನು ಹೊಡೆದುಕೊಂಡು ಹೋಗುತ್ತದೆ., ಅವು ಬೆಲೆಯುಳ್ಳದ್ದಲ್ಲ ಆದುದರಿಂದಲೇ ಅವು ಹಾರಿ ಹೋದವು. ದಾ.ಕೀ 1 ಮತ್ತು ಯೋಬ 27ರಲ್ಲಿ ದುಷ್ಟರು ಯೋಗ್ಯರಲ್ಲದ ಕಾರಣ ಹೆಚ್ಚುಕಾಲ ಉಳಿಯುವುದಿಲ್ಲ

ದುಷ್ಟರು ಹಾಗೆ ಅಲ್ಲ, ಆದರೆ ಗಾಳಿ ಬಡುಕೊಂಡು ಹೋಗುವ ಹೊಟ್ಟಿನಂತಿದ್ದಾರೆ . (ದಾ.ಕೀ. 1:4 ULB) ಮೂಡಣದಿಕ್ಕಿನಿಂದ ಬೀಸುವ ಗಾಳಿ ಅವನನ್ನು ಬಡಿದುಕೊಂಡು ಹೋಗುವುದು,,ಮತ್ತು ಅವನು ಹೊರಟುಹೋಗುವನು. , ಅದು ಅವನನ್ನು ಬಡಿದು ಅವನ ಸ್ಥಳದಿಂದ ಹಾರಿಸಿ ಬಿಡುವುದು . (ಯೋಬ27:21 ULB)

ದಾವೀದನ ಮಗನು ಯೆರೂಸಲೇಮನ್ನು ಆಳುವ ಅರಸನಾಗಿದ್ದ, ಸೊಲೊಮೋನನು ಹೇಳಿದ ಮಾತು,, ಸಮಸ್ತವೂ ವ್ಯರ್ಥ, ವ್ಯರ್ಥವೇ ವ್ಯರ್ಥ

ಮಂಜಿನ ಹನಿಯಂತೆ , ಗಾಳಿಯಲ್ಲಿರುವ ತಂಪು , ಸಮಸ್ತವೂ ವ್ಯರ್ಥ, ಅನೇಕ ಪ್ರಶ್ನೆಗಳನ್ನುಉಳಿಸಿ ಎಲ್ಲವೂ ಮಾಯವಾಗುತ್ತದೆ. ಮನುಷ್ಯನು ಈ ಲೋಕದಲ್ಲಿ ಸೂರ್ಯಶಾಖದಲ್ಲಿ ಪಡುವ ಎಲ್ಲಾ ಪ್ರಯಾಸದಿಂದ ಅವನಿಗೆ ಯಾವ ಲಾಭವೂ ಇಲ್ಲ? (ಪ್ರಸಂಗಿ 1:2-3 ULB)

ಯೋಬ 30:15, ನನ್ನ ಮಾನವು ಗಾಳಿಯಂತೆ ಹೊಡೆದುಕೊಂಡು ಹೋಗುತ್ತಿದೆ ಎಂದಿದ್ದಾನೆ.

ಅಪಾಯವು ನನ್ನನ್ನು ಆವರಿಸಿಕೊಂಡಿದೆ. ನನ್ನ ಗೌರವವು ಗಾಳಿಯಂತೆ ಹೊಡೆದುಕೊಂಡು ಹೋಯಿತು ; ನನ್ನ ಕ್ಷೇಮ ಹಾಗೂ ಅಭಿವೃದ್ಧಿ ಮೇಘದ ಹಾಗೆ.ಸರಿದು ಹೋಯಿತು . (ಯೋಬ 30:15 ULB)

ಮಾನವನ ಯುದ್ಧವನ್ನು ದೈವೀಕ ಯುದ್ಧದಂತೆ ಮಾದರೀಕರಿಸಿದೆ.

ಹಿಂದಿನ ಕಾಲದಲ್ಲಿ ದೇಶದೇಶಗಳ ನಡುವೆ ಯುದ್ದ ನಡೆದಾಗ ಜನರು ಅವರ ದೇವರು ಆ ಯುದ್ಧದಲ್ಲಿ ಭಾಗವಹಿಸುತ್ತಾನೆ ಎಂದು ನಂಬಿದ್ದರು.

ಇದು ಆ ಕಾಲದಲ್ಲಿ ಯೆಹೋವನು ಐಗುಪ್ತರ ದೇವತೆಗಳನ್ನು ಶಿಕ್ಷಿಸಿ, ಐಗುಪ್ತರ ಚೊಚ್ಚಲು ಮಕ್ಕಳನ್ನು ಸಂಹರಿಸುದುದರಿಂದ ಅವರು ಆ ಮಕ್ಕಳ ಶವಗಳನ್ನು ಸಮಾಧಿ ಮಾಡುತ್ತಿದ್ದರು . (ಅರಣ್ಯಕಾಂಡ 33:4 ULB)

ನಿನ್ನ ಇಸ್ರಾಯೇಲ್ ಪ್ರಜೆಗೆ ಸಮಾನವಾದ ಜನಾಂಗವು ಲೋಕದಲ್ಲಿ ಯಾವುದಿದೆ? ನೀನೇ ಹೋಗಿ ಅದನ್ನು ವಿಮೋಚಿಸಿ ಸ್ವಪ್ರಜೆಯನ್ನಾಗಿ ಮಾಡಿಕೊಂಡು ನಿನ್ನ ಹೆಸರನ್ನು ಪ್ರಸಿದ್ಧಿ ಪಡಿಸಿದೀ. ಐಗುಪ್ತರು, ಅನ್ಯಜನರ ಕೈಗೂ ಅವರ ದೇವತೆಗಳ ಕೈಗೂ ಸಿಕ್ಕದಂತೆ ತಪ್ಪಿಸಿ, ರಕ್ಷಿಸಿ ಅವರ ಎದುರಿನಲ್ಲೇ ನಿನ್ನ ದೇಶಕ್ಕೋಸ್ಕರ ಭಯಂಕರವಾದ ಮಹತ್ಕಾರ್ಯಗಳನ್ನು ನಡೆಸಿದಿ. (2 ನೇ ಸಮುವೆಲ 7:23 ULB)

ಆರಮ್ಯರ ಅರಸನ ಸೇವಕರು ಮಂತ್ರಿಗಳು ತಮ್ಮ ಒಡೆಯರಿಗೆ ಇಸ್ರಾಯೇಲರ ದೇವರ ಬೆಟ್ಟಗಳು ದೇವರಾಗಿರುವುದರಿಂದ ಅವರು ನಮ್ಮನ್ನು ಸೋಲಿಸಿದರು. " ಅವರು ನಮಗಿಂತ ಬಲಶಾಲಿಗಳಾಗಿ ಇರುವುದರಿಂದ ನಾವು ಅವರನ್ನು ಜಯಿಸಲು ಸಾಧ್ಯವಾಗಲಿಲ್ಲ . ನಾವು ಅವರೊಡನೆ ಸೆರೆಮನೆಯಲ್ಲಿ ಯುದ್ಧಮಾಡುವುದಾದರೆ ಖಂಡಿತ ಜಯ ಹೊಂದುವೆವು." (1 ನೇ ಅರಸುಗಳು 20:23 ULB)

ಜೀವನದಲ್ಲಿ ಎದುರಾಗುವ ನಿರ್ಭಂಧಗಳನ್ನು ದೈಹಿಕ ಮಿತಿಗಳೊಂದಿಗೆ ಮಾದರಿಗೊಳಿಸಿದೆ.

ಕೆಳಗೆ ಪಟ್ಟಿಮಾಡಿರುವ ವಾಕ್ಯಗಳಲ್ಲಿ ದೈಹಿಕ ಮಿತಿಗಳ ಬಗ್ಗೆ ಹೇಳದೆ ಜೀವನದಲ್ಲಿ ಎದುರಾಗುವ ಕಷ್ಟಗಳ ಬಗ್ಗೆ ತಿಳಿಸಿದೆ.

ನಾನು ಆಚೆ ಹೋಗದಂತೆ ನನ್ನ ಸುತ್ತಲೂ ಗೋಡೆ , ಕಟ್ಟಿ ನಾನು ತಪ್ಪಿಸಿ ಕೊಳ್ಳದಂತೆ ಮಾಡಿದ್ದಾನೆ. ನನಗೆ ಭಾರಿ ಬೇಡಿಗಳನ್ನು ಹಾಕಿ ಬಂಧಿಸಿದ್ದಾನೆ. (ಪ್ರಲಾಪಗಳು 3:7 ULB)

ನನ್ನ ದಾರಿಯಲ್ಲಿ ಅಡ್ಡವಾಗಿ ಕೆತ್ತನೆಯ ಕಲ್ಲಿನ ಗೋಡೆಗಳನ್ನು ಕಟ್ಟಿ ನನ್ನ ಹಾದಿಯನ್ನು ಸುತ್ತಿಕೊಂಡುಹೋಗುವ ಹಾಗೆ ಮಾಡಿದ್ದಾನೆ ; (ಪ್ರಲಾಪಗಳು 3:9 ULB)

ಅಳತೆಮಾಡಲ್ಪಟ್ಟ ಸ್ಥಳಗಳು ನನಗೆ ಪ್ರಾಪ್ತವಾಗಿರುವ ಸ್ವಾಸ್ಥ್ಯವು ರಮಣೀಯವಾದುದು ಅದು ನನಗೆ ಸಂತೃಪ್ತಿಕರವಾಗಿದೆ.ದಾ.ಕೀ. 16:6 ULB)

ಅಪಾಯಕರ ಸ್ಥಳಗಳನ್ನು ಇಕ್ಕಾಟ್ಟಾದ ಸ್ಥಳಗಳು ಎಂದು ಮಾದರಗೊಳಿಸಲಾಗಿದೆ.

ದಾ.ಕೀ. 4 ರಲ್ಲಿ ದಾವೀದನು ತನ್ನನ್ನು ರಕ್ಷಿಸುವಂತೆ ದೇವರನ್ನು ಪ್ರಾರ್ಥಿಸುತ್ತಾನೆ.

ನ್ಯಾಯವನ್ನು ಸ್ಥಾಪಿಸುವ ನನ್ನ ದೇವರೇ ನಾನು ಮೊರೆಯಿಟ್ಟಾಗ ಸದುತ್ತರವನ್ನು ದಯಪಾಲಿಸು. ನನ್ನನ್ನು ಇಕ್ಕಟ್ಟಿನಿಂದ ಬಿಡಿಸಿ ಸೂಕ್ತವಾದ ಸ್ಥಳದಲ್ಲಿ ಸೇರಿಸು . ನನ್ನನ್ನು ಕರುಣಿಸಿ ನನ್ನ ಪ್ರಾರ್ಥನೆಯನ್ನು ಆಲಿಸಿ ಅಂಗೀಕರಿಸು. (ದಾ.ಕೀ. 4:1 ULB)

####ಸಂಕಟ/ಯಾತನೆಯ ಸನ್ನಿವೇಶಗಳನ್ನು ನಿರ್ಜನ ಪ್ರದೇಶವಾಗಿ ಮಾದರೀಕರಿಸಿದೆ.

ಯೋಬನು ಸಂಕಟ, ಯಾತನೆಗೆ ಗುರಿಯಾಗಿ ಎಲ್ಲವನ್ನು ಕಳೆದುಕೊಂಡು, ದುಃಖ ಅನುಭವಿಸುತ್ತಿದ್ದಾಗ ನಿರಾಶನಾಗಿ ತಾನು ನಿರ್ಜನ ಪ್ರದೇಶದಲ್ಲಿದ್ದಂತೆ ಮಾತನಾಡಿದ್ದಾನೆ. ನರಿಗಳು ಮತ್ತು ಉಷ್ಟ್ರಪಕ್ಷಿಗಳು ಇಂತಹ ಮರಳುಗಾಡಿನಂತಹ ನಿರ್ಜನ ಪ್ರದೇಶದಲ್ಲಿ ವಾಸಿಸುತ್ತವೆ.

ನನ್ನ ಹೃದಯವು ಕಳವಳದಿಂದ ವಿಶ್ರಾಂತಿಯಿಲ್ಲದೆ ದುಃಖಿಸುತ್ತಿದೆ. ಬಾಧೆಯ ದಿನಗಳು ನನಗೆ ಒದಗಿದೆ. ನನ್ನ ದೇಹವೆಲ್ಲಾ ಕಪ್ಪಾಗಿ ನಾನು ಅಲೆಯುತ್ತಿದ್ದೇನೆ. ಇದು ಸೂರ್ಯನ ತಾಪದಿಂದ ಆದುದಲ್ಲ. ನಾನು ದೂತರ ಸಂಘದಲ್ಲಿ ನಿಂತು ಸಹಾಯಕ್ಕಾಗಿ ಅಂಗಲಾಚುತ್ತೇನೆ ನಾನು ನರಿಯ ತಮ್ಮ, ಉಷ್ಟ್ರಪಕ್ಷಿಗಳ ಗೆಳೆಯನೂ ಆಗಿದ್ದೇನೆ.. (ಯೋಬ 30:27-29 ULB)

####ಆರೋಗ್ಯವಾಗಿ ಸ್ವಸ್ಥವಾಗಿರುವುದು ದೈಹಿಕವಾದ ಸ್ವಚ್ಛತೆಯನ್ನು ಮಾದರಿಗೊಳಿಸಿದೆ. ದುಷ್ಟತನ, ನೀಚತನ ಅಶುದ್ಧತೆಯನ್ನು ಪ್ರತಿನಿಧಿಸುತ್ತದೆ.

ಕುಷ್ಠ ಒಂದು ರೋಗ ಒಬ್ಬ ವ್ಯಕ್ತಿ ಕುಷ್ಠರೋಗವಿದ್ದರೆ ಅವನನ್ನು ಅಶುದ್ಧನೆಂದು ಹೇಳುತ್ತಿದ್ದರು.

ಒಬ್ಬ ಕುಷ್ಠರೋಗಿ ಯೇಸುವಿನ ಬಳಿ ಬಂದು ಆತನಿಗೆ ಅಡ್ಡಬಿದ್ದು "ಸ್ವಾಮಿ - ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ ." ಯೇಸು ಅವನನ್ನು ಮುಟ್ಟಿ "ನನಗೆ ಮನಸ್ಸುಂಟು. ಶುದ್ಧನಾಗು ಅಂದನು." ಕೂಡಲೆ ಅವನಕುಷ್ಠವಾಸಿಯಾಯಿತು.(ಮತ್ತಾಯ 8:2-3 ULB)

"ಅಶುದ್ಧಆತ್ಮವು "ಸೈತನಾನ ಆತ್ಮ. ಅದು ಅಪವಿತ್ರವಾದದ್ದು

ಅಶುದ್ಧಾತ್ಮವು. /ಅಪವಿತ್ರ ಆತ್ಮವು ಮನುಷ್ಯನನ್ನು ಬಿಟ್ಟುಹೋದಮೇಲೆ ವಿಶ್ರಾಂತಿಯನ್ನು ಹುಡುಕುತ್ತಾ ನೀರಿಲ್ಲದ ಸ್ಥಳಗಳಲ್ಲಿ ತಿರುಗಾಡುತ್ತದೆ. (ಮತ್ತಾಯ 12:43 ULB)