translationCore-Create-BCS_.../translate/bita-farming/01.md

6.9 KiB

ಸತ್ಯವೇದದಲ್ಲಿ ವ್ಯವಸಾಯದ ಬಗ್ಗೆ ತಿಳಿಸಿರುವ ಚಿತ್ರಣಗಳ ಉದಾಹರಣೆಗಳನ್ನು ಕೆಳಗಿನಂತೆ ಪಟ್ಟಿಮಾಡಿದೆ. ಇಲ್ಲಿ ಬರುವ ಎಲ್ಲಾ ದೊಡ್ಡ ಅಕ್ಷರಗಳು ಒಂದು ನಿರ್ದಿಷ್ಟ ಉದ್ದೇಶವನ್ನು ಪ್ರತಿನಿಧಿಸುತ್ತದೆ. ಈ ಪದವು ಪ್ರತಿಯೊಂದು ವಾಕ್ಯದಲ್ಲೂ ಬರಬೇಕೆಂದಿಲ್ಲ. ಆದರೆ ಈ ಕಾವ್ಯ ಪ್ರತಿಮೆಯ ಉದ್ದೇಶ ಪ್ರತಿನಿಧಿಸುವಿಕೆ ಅಗತ್ಯವಾಗಿ ಕಂಡು ಬರುತ್ತದೆ.

ತೋಟಗಾರ ದೇವರನ್ನು ಪ್ರತಿನಿಧಿಸಿದರೆ ದ್ರಾಕ್ಷಿ ತೋಟ ಆತನ ಆಯ್ದ ಜನರನ್ನು ಪ್ರತಿನಿಧಿಸುತ್ತದೆ.

ನನ್ನ ಪ್ರಿಯನಾದವನಿಗೆ ಗುಡ್ಡದ ಮೇಲೆ ಫಲವತ್ತಾದ ದ್ರಾಕ್ಷಿ ತೋಟವಿತ್ತು ಅವನು ತೋಟವನ್ನು ಅಗತೆ ಮಾಡಿ ಕಲ್ಲುಗಳನ್ನು ತೆಗೆದುಹಾಕಿ ಒಳ್ಳೆಯ ದ್ರಾಕ್ಷಿ ಸಸಿಗಳನ್ನು ಆಯ್ಕೆಮಾಡಿ ತಂದು ನೆಟ್ಟನು. ಆ ತೋಟದ ಮಧ್ಯದಲ್ಲಿ ಒಂದು ದ್ರಾಕ್ಷಿ ರಸ ತೆಗೆಯುವ ತೊಟ್ಟಿಯನ್ನು, ಒಂದು ಬುರುಜನ್ನು ಕಟ್ಟಿಸಿದನು ಅವನು ಒಳ್ಳೆ ದ್ರಾಕ್ಷಿ ಹಣ್ಣನ್ನು ನಿರೀಕ್ಷಿಸುತ್ತಿದ್ದನು ಆದರೆ ಅವನಿಗೆ ರುಚಿಯಿಲ್ಲದ ಕಾಡು ಹಣ್ಣಿನಂತಹ ದ್ರಾಕ್ಷಿ ದೊರೆಯಿತು. (ಯಶಾಯ 5:1-2)

ಪರಲೋಕ ರಾಜ್ಯವು ಒಬ್ಬ ಭೂಮಿಯ ಒಡೆಯನಿಗೆ ಹೋಲಿಕೆಯಾಗಿದೆ.ಅವನು ಮುಂಜಾನೆಯೇ ತನ್ನ ತೋಟದಲ್ಲಿ ಕೆಲಸ ಮಾಡಲು ಕೂಲಿ ಆಳುಗಳನ್ನು ನೇಮಿಸಿಕೊಳ್ಳಲು ಹೋದನು. (ಮತ್ತಾಯ 20:1 ULB)

ಒಬ್ಬ ಮನುಷ್ಯನಿಗೆ ಬೇಕಾದಷ್ಟು ವ್ಯವಸಾಯ ಭೂಮಿ ಇತ್ತು. ಅದರಲ್ಲಿ ದ್ರಾಕ್ಷಿ ಬಳ್ಳಿಗಳನ್ನು ನೆಟ್ಟು, ಅದರ ಸುತ್ತಲೂ ಬೇಲಿ ಹಾಕಿಸಿ ಅದರಲ್ಲಿ ದ್ರಾಕ್ಷಿಯ ರಸ ತೆಗೆಯುವ ಆಲೆ ಹಾಕಿಸಿ, ಕಾವಲು ಗೋಪುರ ಕಟ್ಟಿಸಿ ದ್ರಾಕ್ಷಿ ಬೆಳೆಯುವ ಒಕ್ಕಲಿಗರಿಗೆ ಕಾಯಲು ತಿಳಿಸಿ, ಬೆಳೆಯ ಬಗ್ಗೆ ಕಾಳಜಿ ವಹಿಸಲು (ಕೂಲಿ ಕೊಟ್ಟು) ತಿಳಿಸಿದನು. ನಂತರ ಕೆಲಸದ ಮೇಲೆ ಹೊರದೇಶಕ್ಕೆ ಹೊರಟು ಹೋದನು. (ಮತ್ತಾಯ 21:33 ULB)

ಭೂಮಿ ಜನರ ಹೃದಯವನ್ನು ಪ್ರತಿನಿಧಿಸುತ್ತದೆ (ಆಂತರಿಕ ಬೆಳವಣಿಗೆ)

ಯೆಹೋವನು ಯೆಹೂದದವರಿಗೂ, ಯೆರುಸಲೇಮಿನವರಿಗೂ ಹೀಗೆ ಹೇಳುತ್ತಾನೆ. ನಿಮ್ಮ ಹೊಲಗಳನ್ನು ಚೆನ್ನಾಗಿ ಉತ್ತು ಸಿದ್ಧಮಾಡಿ. ಮುಳ್ಳುಗಳಲ್ಲಿ ಬಿತ್ತಬೇಡಿ. (ಯೆರೇಮಿಯಾ 4:3 ULB)

ದೇವರ ರಾಜ್ಯದ ವಾಕ್ಯಗಳನ್ನು ಕೇಳಿದ ಕೆಲವರು ಅದನ್ನು ಅರ್ಥಮಾಡಿ ಕೊಳ್ಳಲಾರರು. ಇದು ರಸ್ತೆಯ ಬದಿಯಲ್ಲಿ ಬಿತ್ತಿದ ಬೀಜಗಳು. ಕೆಲವು ಬೀಜಗಳು ಮಣ್ಣಿಲ್ಲದೆ ಬಂಡೆಯಮೇಲೆ ಬಿದ್ದವು, ಅದನ್ನು ತಕ್ಷಣವೇ ಸಂತೋಷದಿಂದ ಸ್ವೀಕರಿಸಿದ ಜನರು ನಂತರ ಮರೆತು ಹೋಗುತ್ತಾರೆ. ಮುಳ್ಳುಗಿಡಗಳಲ್ಲಿ ಬಿದ್ದ ಬೀಜವು ಮುಳ್ಳುಗಿಡಗಳ ಬೆಳವಣಿಗೆಯಿಂದ ಮೊಳೆತು, ಬೆಳೆಯದೆ ಒಣಗಿ ಹೋದವು. ಇವು ವಾಕ್ಯವನ್ನು ಕೇಳಿದ ಜನರು ಈ ಲೋಕದ ಆಕರ್ಷಣೆಗಳಿಗೆ ಗುರಿಯಾಗಿ ಅದರ ಫಲವನ್ನು ಅನುಭವಿಸದೆ, ಐಶ್ವರ್ಯದಿಂದ ಉಂಟಾಗುವ ಮೋಸಕ್ಕೆ ಗುರಿಯಾಗುತ್ತಾರೆ. ಇನ್ನು ಕೆಲವು ಫಲವತ್ತಾದ ಭೂಮಿಯಲ್ಲಿ ಬಿದ್ದು ಒಳ್ಳೆಯ ಫಲವನ್ನು ನೂರರಷ್ಟು ನೀಡಿದವು. ಇವರೇ ವಾಕ್ಯಗಳನ್ನು ಕೇಳಿ ಅದನ್ನು ಅರ್ಥಮಾಡಿಕೊಂಡು ಅದರಂತೆ ನಡೆಯುವವರು. (ಮತ್ತಾಯ 13:19-23 ULB)

ಉಳದೆ ಇರುವ ಭೂಮಿಯನ್ನು ಉತ್ತು ಹದಗೊಳಿಸಿರಿ. ಏಕೆಂದರೆ ಆತನನ್ನು ಮೊರೆ ಹೋಗುವ ಸಮಯ ಬಂದಿದೆ. (ಹೋಶೇಯ 10:12 ULB)

ಬಿತ್ತುವುದು ಕ್ರಿಯೆಗಳನ್ನು ಅಥವಾ ಮನೋಧೋರಣೆಗಳನ್ನು ಪ್ರತಿನಿಧಿಸುತ್ತವೆ ಮತ್ತು ಕೊಯ್ಯವುದು ನ್ಯಾಯತೀರ್ಪು ಅಥವಾ ಪ್ರತಿಫಲವನ್ನು ಪ್ರತಿನಿಧಿಸುತ್ತದೆ.

ನಾನು ಗಮನಿಸಿದಂತೆ ಯಾರೂ ಅಧರ್ಮವನ್ನು ಬಿತ್ತುತ್ತಾರೋ. ಅವರು ಕೇಡನ್ನೇ ಕೊಯ್ಯುವರು. (ಕೇಡಿನ ಫಲವನ್ನು ಪಡೆಯುವರು) (ಯೋಬ 4:8 ULB) ಮೋಸಕ್ಕೆ ಒಳಗಾಗ ಬೇಡಿ. ದೇವರನ್ನು ಅಪಹಾಸ್ಯ ಮಾಡಬಾರದು. ಮನುಷ್ಯನು ತಾನು ಏನನ್ನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು. ತನ್ನ ಶರೀರ ಭಾವವನ್ನು ಕುರಿತು ಬಿತ್ತವವನು ಆ ಭಾವದಿಂದ ನಾಶನವನ್ನು ಕೊಯ್ಯುವನು., ಆತ್ಮನನ್ನು ಕುರಿತು ಬಿತ್ತುವವನು ಆತ್ಮದಿಂದ ನಿತ್ಯ ಜೀವವನ್ನು ಕೊಯ್ಯುವನು. (ಗಲಾತ್ಯದವರಿಗೆ ಬರೆದ ಪತ್ರಿಕೆ 6:7-8 ULB)

ಒಳ್ಳೆಯ ಜನರಿಂದ ಕೆಟ್ಟ ಜನರನ್ನು ಪ್ರತ್ಯೇಕಿಸುವುದನ್ನು ತೆನೆ ಒಕ್ಕುವುದು ಮತ್ತು ಅದನ್ನು ಕೇರುವ ಚಿತ್ರಣದ ಮೂಲಕ ಪ್ರತಿನಿಧಿಸ ಬಹುದು.