translationCore-Create-BCS_.../translate/bita-animals/01.md

12 KiB

ಮಾನವನ ಅಂಗಾಂಗಗಳನ್ನು ಮತ್ತು ಮಾನವನ ಲಕ್ಷಣಗಳನ್ನು ಹೊಂದಿರುವ ಕೆಲವು ಸತ್ಯವೇದ ಚಿತ್ರಣಗಳು ಕೆಳಗೆ ಅಕ್ಷರಾನುಕ್ರಮವಾಗಿ ಪಟ್ಟಿಮಾಡಿದೆ. ದೊಡ್ಡ ಅಕ್ಷರಗಳಲ್ಲಿ ಬರೆದಿರುವ ಪದಗಳೆಲ್ಲವೂ ಒಂದು ಉದ್ದೇಶವನ್ನು ಪ್ರತಿನಿಧಿಸುತ್ತದೆ. ಇಂತಹ ಪದ ಚಿತ್ರಣಗಳು ಎಲ್ಲಾ ವಾಕ್ಯಗಳಲ್ಲೂ ಬರಬೇಕೆಂಬುದಿಲ್ಲ ಆದರೆ ಈ ಪದದ ಉದ್ದೇಶ ಅದರಲ್ಲಿ ಪ್ರತಿನಿಧಿತ್ವವಾಗಿರಬೇಕು.

ಒಂದು ಪ್ರಾಣಿಯ ಕೊಂಬು ಅದರ ಬಲವನ್ನು ಪ್ರತಿನಿಧಿಸುತ್ತದೆ.

ಯೆಹೋವನು ನನ್ನ ಬಂಡೆ. ನನ್ನ ಆಶ್ರಯಗಿರಿಯಾಗಿದ್ದಾನೆ. ನನ್ನ ವಿಮೋಚಕನೂ, ನನ್ನ ಗುರಾಣಿಯೂ, ನನ್ನ ರಕ್ಷಣೆಯ ಕೊಂಬು, ನನ್ನ ದುರ್ಗವು. ನನ್ನ ಶರಣನು, ಹಿಂಸೆಯಿಂದ ನನ್ನನ್ನು ರಕ್ಷಿಸುವವನು ಆಗಿದ್ದಾನೆ. (2 ಸಮುವೇಲ 22:3 ULB)

"ನನ್ನ ರಕ್ಷಣೆಯ ಕೊಂಬು" ಬಹು ಶಕ್ತಿಶಾಲಿಯಾಗಿ ನನ್ನನ್ನು ರಕ್ಷಿಸುತ್ತದೆ.

ಅಲ್ಲಿಯೇ ದಾವೀದನ ಕೊಂಬು ಚಿಗುರುವಂತೆ ಮಾಡುವೆನು. (ದಾ.ಕೀ. 132:17 ULB)

"ದಾವೀದನ ಕೊಂಬು" ಎಂದರೆ ದಾವೀದನ ಸೈನ್ಯದ ಬಲ

ಜನರು ಅಪಾಯದಲ್ಲಿರುವುದನ್ನು ಮತ್ತು ರಕ್ಷಣೆ ಇಲ್ಲದೆ ಇರುವುದನ್ನು ಪಕ್ಷಿಗಳು ಪ್ರತಿನಿಧಿಸುತ್ತವೆ.

ಏಕೆಂದರೆ ಕೆಲವು ಪಕ್ಷಿಗಳು ಸುಲಭವಾಗಿ ಬಲೆಯಲ್ಲಿ ಸಿಕ್ಕಿ ಬೀಳುತ್ತವೆ.

ಪಕ್ಷಿಗಳು ಬಲೆಹಾಕಿ ಹಿಡಿಯುವಂತೆ ನನ್ನ ಶತ್ರುಗಳು ಅನಾಯಾಸವಾಗಿ ನನ್ನನ್ನು ವಿನಾಕಾರಣ ಸೆರೆ ಹಿಡಿದರು. (ಪ್ರಲಾಪಗಳು 3:52 ULB) ಬೇಟೆಗಾರನಿಂದ ತಪ್ಪಿಸಿಕೊಂಡು ಓಡುವ ಜಿಂಕೆಯಂತೆ. ಪಕ್ಷಿಯು ತಪ್ಪಿಸಿಕೊಂಡು ಹಾರಿಹೋಗುವಂತೆ ತಪ್ಪಿಸಿಕೋ. (ಜ್ಞಾನೋಕ್ತಿಗಳು 6:5 ULB)

ಹಕ್ಕಿಯ ಬೇಟೆಗಾರನೆಂದರೆ ಪಕ್ಷಿಗಳನ್ನು ಬಲೆಹಾಕಿ ಹಿಡಿಯುವವ, ಅದಕ್ಕಾಗಿ ಬಲೆಗಳನ್ನು ಹಾಕುವವ.

ನಮ್ಮ ಜೀವವು ಹಕ್ಕಿಯ ಬೇಟೆಗಾರನ ಬಲೆಯಿಂದ ತಪ್ಪಿಸಿಕೊಂಡ ಪಕ್ಷಿಯಂತಿದೆ; ಬಲೆಯು ಹರಿದುಹೋಯಿತು, ನಾವು ತಪ್ಪಿಸಿಕೊಂಡೆವು. (ದಾ.ಕೀ. 124:7 ULB)

ಮಾಂಸವನ್ನು ತಿನ್ನುವ ಪಕ್ಷಿಗಳು ಶತ್ರುಗಳು ಹೇಗೆ ಚುರುಕಾಗಿ ನಮ್ಮನ್ನು ಆಕ್ರಮಿಸುತ್ತಾರೋ ಎಂಬುದನ್ನು ಪ್ರತಿನಿಧಿಸುತ್ತದೆ.

ಹಬಕ್ಕೂಕ ಮತ್ತು ಹೋಶೆಯ ಪ್ರವಾದನಾ ಗ್ರಂಥಗಳಲ್ಲಿ ಇಸ್ರಾಯೇಲರ ಶತ್ರುಗಳು ಹದ್ದುಗಳಂತೆ ಆಕ್ರಮಣ ಮಾಡುತ್ತಾರೆ ಎಂದು ಹೋಲಿಸಿ ಹೇಳಿದೆ.

ದೂರದಿಂದ ಕುದುರೆಯ ಮೇಲೆ ಬರುವ ಶತ್ರುಗಳ ಸೈನಿಕರು ಅವನ ಮೇಲೆ ಹದ್ದುಗಳಂತೆ ಎರಗಿ ತಿನ್ನಲು ಹವಣಿಸುತ್ತಾರೆ /ಆಕ್ರಮಿಸುತ್ತಾರೆ. (ಹಬಕೂಕ 1:8 ULB)

ಶತ್ರುವು ಹದ್ದಿನ ಹಾಗೆ ಯೆಹೋವನಾದ ನನ್ನ ನಿವಾಸದ ಮೇಲೆ ಎರಗುತ್ತಾನೆ. ..ಇಸ್ರಾಯೇಲರು ಒಳ್ಳೆಯದನ್ನು ನಿರಾಕರಿಸಿದ್ದಾರೆ. ಶತ್ರುಗಳು ಅವರನ್ನು ಹಿಂದಟ್ಟುವನು. (ಹೋಶೆಯ 8:1,3 ULB)

ಯೆಶಾಯ ಪ್ರವಾದನಾ ಗ್ರಂಥದಲ್ಲಿ ಮೂಡಣ ದೇಶದಿಂದ ಹದ್ದು ಎರಗಿ ಬರಲಿ ಎಂದು ಹೇಳಿದ್ದಾನೆ.ನನ್ನ ಸಂಕಲ್ಪವನ್ನು ನೆರವೇರಿಸುವವನು ದೂರದೇಶದಿಂದ ಬರಲಿ ಅಂದರೆ ಇಸ್ರಾಯೇಲರ ಮೇಲೆ ಅವರ ಶತ್ರುಗಳು ಹದ್ದಿನಂತೆ ಎರಗುತ್ತಾರೆ ಎಂದು

ಮೂಡಲಿಂದ ಹದ್ದು ಎರಗಲಿ, ಅಂದರೆ ನನ್ನ ಸಂಕಲ್ಪವನ್ನು ನೆರವೇರಿಸ ತಕ್ಕವನು ದೂರದೇಶದಿಂದ ಬರಲಿ ಎಂದಿದ್ದೇನೆ (ಯೆಶಾಯ 46:11 ULB)

ಪಕ್ಷಿಯ ರಕ್ಕೆಗಳು ರಕ್ಷಣೆಯನ್ನು ಪ್ರತಿನಿಧಿಸುತ್ತವೆ.

ಪಕ್ಷಿಗಳು ತಮ್ಮ ರಕ್ಕೆಗಳನ್ನು ಹರಡಿ ತಮ್ಮ ಮರಿಗಳನ್ನು ರಕ್ಷಿಸುವುದರಿಂದ ಹೀಗೆ ಹೇಳಿದೆ.

ಕಣ್ಣುಗುಡ್ಡಿನಂತೆ ನನ್ನನ್ನು ಕಾಪಾಡು., ನಿನ್ನ ರೆಕ್ಕೆಗಳ ಮರೆಯಲ್ಲಿಟ್ಟುಕೊಂಡು ನನ್ನನ್ನು ಕಾಪಾಡು., ನನ್ನನ್ನು ಸುತ್ತಿಕೊಂಡು ಬಾಧಿಸುತ್ತಿರುವ ದುಷ್ಟರಿಂದಲೂ, ಪ್ರಾಣವೈರಿಗಳಿಂದಲೂ ತಪ್ಪಿಸಿ ಕಾಪಾಡು. (ದಾ.ಕೀ.17:8-9 ULB)

ರೆಕ್ಕೆಗಳು ಹೇಗೆ ರಕ್ಷಣೆಯನ್ನು ಪ್ರತಿನಿಧಿಸುತ್ತದೆ ಎಂಬುದಕ್ಕೆ ಇನ್ನೊಂದು ಉದಾಹರಣೆ ಇದೆ.

ದೇವರೇ, ಕೃಪೆ ತೋರಿಸು, ನನ್ನನ್ನು ಕರುಣಿಸು. ನೀನೇ ನನ್ನ ಆಶ್ರಯಸ್ಥಾನವಲ್ಲವೇ ? ಆಪತ್ತುಗಳು ಕಳೆದು ಹೋಗುವವರೆಗೂ ನಿನ್ನ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳುವೆನು. (ದಾ.ಕೀ. 57:1 ULB)

ಅಪಾಯಕಾರಿ ಪ್ರಾಣಿಗಳು.

ದಾವೀದನು ತನ್ನ ಕೀರ್ತನೆಗಳಲ್ಲಿ ಶತ್ರುಗಳನ್ನು ಸಿಂಹಗಳಿಗೆ ಹೋಲಿಸಿದ್ದಾನೆ.

ನನ್ನ ಜೀವವು ಸಿಂಹಗಳ ನಡುವೆ ಸಿಕ್ಕಿದೆ ; ಬೆಂಕಿ ಕಾರುವ ಮನುಷ್ಯನ ನಡುವೆ ಬಿದ್ದಿದ್ದೇನೆ. ಅವರ ಹಲ್ಲುಗಳು ಶಸ್ತ್ರ ಬಾಣಗಳು. ನಾಲಿಗೆಗಳು ಹದವಾದ ಕತ್ತಿಗಳು. ದೇವರೇ ಮೇಲಣ ಲೋಕಗಳಲ್ಲಿ ನಿನ್ನ ಪ್ರಭಾವವು ಮೆರೆಯಲಿ, ಭೂಮಂಡಲದ ಮೇಲೆಲ್ಲಾ ನಿನ್ನ ಮಹತ್ವವು ಹಬ್ಬಲಿ. (ದಾ.ಕೀ. 57:4 ULB) ಪೇತ್ರನು ಸೈತಾನನನ್ನು ಗರ್ಜಿಸುವ ಸಿಂಹ ಎಂದು ಕರೆದಿದ್ದಾನೆ. ”ಸ್ವಸ್ಥ ಚಿತ್ತರಾಗಿರಿ ಎಚ್ಚರವಾಗಿರಿ”. ನಿಮ್ಮ ವಿರೋಧಿಯಾಗಿರುವ ಸೈತಾನನು ಗರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಿದ್ದಾನೆ. (1 ಪೇತ್ರ 5:8 ULB)

ಮತ್ತಾಯನ ಸುವಾರ್ತೆಯಲ್ಲಿ ಯೇಸು ಸುಳ್ಳು ಪ್ರವಾದಿಗಳು ಕುರಿವೇಷ ಧರಿಸಿದ ತೋಳಗಳಂತೆ ಬರುತ್ತಾರೆ. ಅವರಿಂದಾಗುವ ಅಪಾಯಗಳಿಂದ ದೂರವಿರಿ ಎಂದು ಹೇಳಿದ್ದಾನೆ.

”ಸುಳ್ಳು ಪ್ರವಾದಿಗಳ ವಿಷಯದಲ್ಲಿ ಎಚ್ಚರವಾಗಿರಿ, ಅವರು ಕುರಿವೇಷ ಹಾಕಿಕೊಂಡು ನಿಮ್ಮ ಬಳಿಗೆ ಬರುತ್ತಾರೆ. ಅವರು ಒಳಗೆ ಹಿಡುಕೊಂಡು ಹೋಗುವ ತೋಳಗಳೇ. (ಮತ್ತಾಯ 7:15 ULB)

ಮತ್ತಾಯನ ಸುವಾರ್ತೆಯಲ್ಲಿ ಸ್ನಾನಿಕನಾದ ಯೆಹೋವನು ಪರಿಸಾಯರನ್ನು ಸದ್ದುಕಾಯರನ್ನು ವಿಷ ಸರ್ಪಗಳೆಂದು ಕರೆದಿದ್ದಾನೆ. ಏಕೆಂದರೆ ಅವರು ಸುಳ್ಳು ಪ್ರವಾದನೆಗಳಿಂದ ಅಪಾಯ ಉಂಟು ಮಾಡುತ್ತಾರೆ.

ಅವನು ಸದ್ದುಕಾಯರಲ್ಲಿ, ಪರಿಸಾಯರಲ್ಲಿ ಅನೇಕರು ತನ್ನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಲು ಬರುವುದನ್ನು ಕಂಡು ಅವರಿಗೆ " ಎಲೈ ಸರ್ಪಜಾತಿಯವರೇ ಮುಂದೆ ಬರುವ ದೈವಕೋಪದಿಂದ ತಪ್ಪಿಸಿಕೊಳ್ಳುವುದಕ್ಕೆ ನಿಮಗೆ ಉಪದೇಶ ಮಾಡಿದವರು ಯಾರು? (ಮತ್ತಾಯ 3:7 ULB)

ಹದ್ದುಗಳು ಬಲವನ್ನು ಪ್ರತಿನಿಧಿಸುತ್ತವೆ.

ಶ್ರೇಷ್ಠವರಗಳಿಂದ ನಿನ್ನ ಆಶೆಯನ್ನು ಪೂರ್ಣಗೊಳಿಸುತ್ತಾನೆ. ಹದ್ದಿಗೆ ಬರುವಂತೆಯೇ ನಿನಗೆ ಯೌವನವನ್ನು ತಿರುಗಿ ಬರಮಾಡುತ್ತಾನೆ. (ದಾ.ಕೀ. 103:5 ULB)

ಯೆಹೋವನು ಇಂತೆನ್ನುತ್ತಾನೆ, ಇಗೋ ಮೇವಾಬಿನ ಮೇಲೆ ಎರಗಬೇಕೆಂದುಶತ್ರುವು ರಣಹದ್ದಿನಂತೆ ರೆಕ್ಕೆಗಳನ್ನು ಹರಡಿ ಹಾರುವನು." (ಯೆರೇಮಿಯ 48:40 ULB)

ಕುರಿ ಅಥವಾ ಕುರಿಮಂದೆಗೆ ನಾಯಕನ ಅಗತ್ಯವಿದೆ ಅಥವಾ ಅಪಾಯದಲ್ಲಿದೆ ಎಂದು ಪ್ರತಿನಿಧಿಸುತ್ತದೆ.

ನನ್ನ ಜನರು ಕುರಿಮಂದೆಯಿಂದ ತಪ್ಪಿಸಿಕೊಂಡ ಕುರಿಗಳಂತಾಗಿದ್ದಾರೆ. ಅವರ ಕುರುಬರು /ಪಾಲಕರು ಅವರನ್ನು ದಾರಿ ತಪ್ಪಿಸಿ ಪರ್ವತಗಳಲ್ಲಿ ಅಲೆಯುವಂತೆ ಮಾಡಿದ್ದಾರೆ; (ಯೆರೇಮಿಯ50:6 ULB)

ಆತನು ಕುರಿಗಳನ್ನೋ ಎಂಬಂತೆ ತನ್ನ ಜನರನ್ನು ಹೊರತಂದು ಅಡವಿಯಲ್ಲಿ ಅವರನ್ನು ಪೋಷಿಸಿ ನಡೆಸಿದನು. (ದಾ.ಕೀ. 78:52 ULB)

ಇಸ್ರಾಯೇಲರ ಸಿಂಹಗಳು ಹಿಂದಟ್ಟಿ ಓಡಿಸಿದ ಚದುರಿದ ಹಿಂಡಿನಂತಿದ್ದಾರೆ. ಮೊಟ್ಟಮೊದಲು ಅಶ್ಯೂರದ ಅರಸನು ಅದನ್ನು ಓಡಿಸಿದನು ಕಟ್ಟಕಡೆಗೆ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಅದರ ಎಲುಬುಗಳನ್ನು ಕಡಿದು ತುಂಡು ಮಾಡಿದನು. (ಯೆರೆಮಿಯಾ 50:17 ULB)

ನೋಡಿರಿ ತೋಳಗಳ ನಡುವೆ ಕುರಿಗಳನ್ನು ಕಳುಹಿಸುವಂತೆ ನಾನು ನಿಮ್ಮನ್ನು ಕಳುಹಿಸಿ ಕೊಡುತ್ತೇನೆ. ಆದುದರಿಂದ ಸರ್ಪಗಳಂತೆ ಜಾಣರೂ ಪಾರಿವಾಳಗಳಂತೆ ನಿಷ್ಕಪಟಿಗಳೂ ಆಗಿರ್ರಿ. ಇದಲ್ಲದೆ ಜನರ ವಿಷಯದಲ್ಲಿ ಎಚ್ಚರವಾಗಿರ್ರಿ. ಅವರು ನಿಮ್ಮನ್ನು ನ್ಯಾಯವಿಚಾರಣೆಯ ಸಭೆಗಳಿಗೆ ಎಳಕೊಂಡು ಹೋಗುವರು. ತಮ್ಮ ಸಭಾಮಂದಿರಗಳಲ್ಲಿ ನಿಮ್ಮನ್ನು ಕೊರಡೆಗಳಿಂದ ಹೊಡೆಯುವರು. (ಮತ್ತಾಯ 10:16 ULB)