translationCore-Create-BCS_.../process/intro-publishing/01.md

2.6 KiB

ಪ್ರಕಾಶಕರ ಅವಲೋಕನ

ಕೃತಿಯನ್ನು ಡೋರ್ 43 ಗೆ ಒಳಪಡಿಸಿದ ನಂತರ, ಅದು ನಿಮ್ಮ ಬಳಕೆದಾರ ಖಾತೆಯಡಿಯಲ್ಲಿ ಸ್ವಯಂಚಾಲಿತವಾಗಿ ಆನ್‌ಲೈನ್‌ನಲ್ಲಿ ಲಭ್ಯವಿರುತ್ತದೆ. ಇದನ್ನು ಸ್ವಯಂ ಪ್ರಕಾಶನ ಎಂದು ಕರೆಯಲಾಗುತ್ತದೆ. ನಿಮ್ಮ ಯೋಜನೆಯ ವೆಬ್ ಆವೃತ್ತಿಗೆ http://door43.org/u/user_name/project_name ನಲ್ಲಿ ನೀವು ಪ್ರವೇಶವನ್ನು ಹೊಂದಿರುತ್ತೀರಿ (ಅಲ್ಲಿ ಬಳಕೆದಾರ_ಹೆಸರು ನಿಮ್ಮ ಬಳಕೆದಾರ ಹೆಸರು ಮತ್ತು ಯೋಜನೆಯ_ಹೆಸರು ನಿಮ್ಮ ಅನುವಾದ ಯೋಜನೆಯಾಗಿದೆ). ಅನುವಾದ ಸ್ಟುಡಿಯೋ ಮತ್ತು ಅನುವಾದ ಕೋರ್ ಎರಡನ್ನೂ ನೀವು ಒಳಪಡಿಸುವಾಗ ಸರಿಯಾದ ಲಿಂಕ್ ಅನ್ನು ನೀಡುತ್ತದೆ. ನೀವು ಎಲ್ಲಾ ಕೃತಿಗಳನ್ನು http://door43.org ನಲ್ಲಿ ಬ್ರೌಸ್ ಮಾಡಬಹುದು (ಅಂತರ್ಜಾಲ ಶೋಧ ಮಾಡು).

ನಿಮ್ಮ ಡೋರ್ 43 ಯೋಜನೆ ಪುಟದಿಂದ ನೀವು ಹೀಗೆ ಮಾಡಬಹುದು

  • ಡೀಫಾಲ್ಟ್ ವಿನ್ಯಸದೊಂದಿಗೆ ನಿಮ್ಮ ಯೋಜನೆಯ ಅಂತರ್ಜಾಲದ ಆವೃತ್ತಿಯನ್ನು ನೋಡಿ
  • ನಿಮ್ಮ ಯೋಜನೆಯ ದಾಖಲೆಗಳನ್ನು ಡೌನ್‌ಲೋಡ್ ಮಾಡಿ (ಪಿಡಿಎಫ್‌ನಂತೆ)
  • ನಿಮ್ಮ ಯೋಜನೆಗಾಗಿ ಮೂಲ ಫೈಲ್‌ಗಳಿಗೆ (ಯುಎಸ್‌ಎಫ್‌ಎಂ ಅಥವಾ ಮಾರ್ಕ್‌ಡೌನ್) ಲಿಂಕ್‌ಗಳನ್ನು ಪಡೆಯಿರಿ
  • ನಿಮ್ಮ ಯೋಜನೆಯ ಬಗ್ಗೆ ಇತರರೊಂದಿಗೆ ಸಂವಹನ ನಡೆಸಿ
  • ನಿಮ್ಮ ಯೋಜನೆಯನ್ನು ಸಂಪಾದಿಸಲು ಮತ್ತು ಸುಧಾರಿಸಲು ಮುಂದುವರಿಸಿ ಮತ್ತು ಎಲ್ಲಾ ಬದಲಾವಣೆಗಳ ಜಾಡನ್ನು ಇರಿಸಿ

ನಿಮ್ಮ ಯೋಜನೆಯನ್ನು ಇತರರಿಗೆ ವಿತರಿಸುವ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, [ವಿತರಣೆ] (../intro-share/01.md) ನೋಡಿ.