translationCore-Create-BCS_.../intro/translate-why/01.md

10 lines
5.5 KiB
Markdown
Raw Blame History

This file contains ambiguous Unicode characters

This file contains Unicode characters that might be confused with other characters. If you think that this is intentional, you can safely ignore this warning. Use the Escape button to reveal them.

ಭಾಷಾಂತರ ಅಕಾಡೆಮಿಯ ಉದ್ದೇಶವೇನೆಂದರೆ ಸತ್ಯವೇದದ ಭಾಷಾಂತರಗಾರರನ್ನು ತರಬೇತಿಗೊಳಿಸುವುದು. ದೇವರ ವಾಕ್ಯಗಳನ್ನು ನಿಮ್ಮ ಭಾಷೆಗೆ ಭಾಷಾಂತರಿಸುವುದು , ನಿಮ್ಮ ಜನರನ್ನು ಯೇಸುಕ್ರಿಸ್ತನ ಶಿಷ್ಯರನ್ನಾಗಿ ಬೆಳೆಸುವ ಮುಖ್ಯ ಕರ್ತವ್ಯ ನಿಮಗೆ ಇದೆ. ನೀವು ಈ ಕರ್ತವ್ಯವನ್ನು ನಿರ್ವಹಿಸುವುದಕ್ಕೆ ಬದ್ಧರಾಗಿರಬೇಕು .ನಿಮ್ಮ ಹೊಣೆಯನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಈ ಕಾರ್ಯದಲ್ಲಿ ದೇವರು ಸಹಾಯಮಾಡುವಂತೆ ಪ್ರಾರ್ಥಿಸಬೇಕು.
ಸತ್ಯವೇದದ ಮೂಲಕ ದೇವರು ನಮ್ಮೊಂದಿಗೆ ಮಾತನಾಡಿದ್ದಾನೆ. ಆತನು ಸತ್ಯವೇದವನ್ನು ಬರೆಯುವ ಬರಹಗಾರರಿಗೆ ಸ್ಫೂರ್ತಿಯಾಗಿದ್ದು ಆತನ ವಾಕ್ಯಗಳನ್ನು , ಮಾತುಗಳನ್ನು ಹಿಬ್ರೂ, ಅರಾಮಿಕ್, ಮತ್ತು ಗ್ರೀಕ್ ಭಾಷೆಗಳಲ್ಲಿ ಬರೆಯುವಂತೆ ಪ್ರೇರೇಪಿಸಿದನು. ಕ್ರಿಸ್ತಪೂರ್ವ 1400ರಿದ ಕ್ರಿಸ್ತಶಕ 100ರವರೆಗೆ ಸುಮಾರು 40 ಬರಹಗಾರರು ಸತ್ಯವೇದವನ್ನು ಬರೆದರು. ಈ ಎಲ್ಲಾ ದಾಖಲೆಗಳನ್ನು ಮಧ್ಯಪೂರ್ವದೇಶದಲ್ಲಿ, ಉತ್ತರ ಆಫ್ರಿಕಾ ಮತ್ತು ಯೂರೋಪ್ ದೇಶಗಳಲ್ಲಿ ಬರೆಯಲಾಯಿತು. ಆತನ ಮಾತುಗಳನ್ನು ಅವರ ಭಾಷೆಯಲ್ಲಿ ದಾಖಲಿಸುವುದರೊಂದಿಗೆ ಆ ಕಾಲದಲ್ಲಿ ದೇವರು ಹೇಳಿದ ಮಾತುಗಳು ಆಯಾ ಸ್ಥಳದಲ್ಲಿದ್ದ ಜನರಿಗೆ ಅರ್ಥವಾಗುವಂತೆ ನೋಡಿಕೊಂಡರು.
ಪ್ರಸ್ತುತ ಇರುವ ನಿಮ್ಮ ದೇಶದ ಇಂದಿನ ಜನರು ಹಿಬ್ರೂ, ಅರಾಮಿಕ್ ಮತ್ತು ಗ್ರೀಕ್ ಭಾಷೆಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಆದರೆ ದೇವರ ವಾಕ್ಯವನ್ನು ಅವರ ಭಾಷೆಯಲ್ಲಿ ಭಾಷಾಂತರಿಸಿದರೆ ಅವರು ಸುಲಭವಾಗಿ ಅರ್ಥಮಾಡಿಕೊಳ್ಳ ಬಲ್ಲರು. ಒಬ್ಬರ "ಮಾತೃಭಾಷೆ" ಅಥವಾ "ಹೃದಯದ ಭಾಷೆ" ಎಂದರೆ ಅವರು ಮಗುವಾಗಿ ಮಾತಾಡಿದ ಮೊದಲ ಭಾಷೆ ಮತ್ತು ಮನೆಯಲ್ಲಿ ಮಾತನಾಡುವ ಭಾಷೆ. ಈ ಭಾಷೆಯಲ್ಲೇ ಅವರು ತುಂಬಾ ಸುಲಲಿತವಾಗಿ, ಅನುಕೂಲಕರವಾಗಿ ಮತ್ತು ಅವರ ಭಾವನೆಗಳನ್ನು, ಆಲೋಚನೆಗಳನ್ನು ಸುಲಭವಾಗಿ ವ್ಯಕ್ತಪಡಿಸಲು ಸಾಧ್ಯವಾಗುತ್ತದೆ. ದೇವರ ವಾಕ್ಯವನ್ನು ಅವರ ಹೃದಯದ ಭಾಷೆಯ ಮೂಲಕ ಓದಲು ಅನುಕೂಲ ಮಾಡಿಕೊಡುವುದು ಉತ್ತಮ. ಪ್ರತಿಯೊಂದು ಭಾಷೆಯೂ ಅತಿ ಮುಖ್ಯವಾದುದು ಮತ್ತು ಮೌಲ್ಯಯುತವಾದುದು.
ಅಲ್ಪಸಂಖ್ಯಾತ ಭಾಷೆಯೂ ಸಹ ನಿಮ್ಮ ರಾಷ್ಟ್ರೀಯ ಭಾಷೆಗಳಷ್ಟೇ ಮುಖ್ಯವಾದುದು ಮತ್ತು ಅದೇರೀತಿ ಅರ್ಥವನ್ನು ಸರಿಯಾದ ರೀತಿಯಲ್ಲಿ ವ್ಯಕ್ತಪಡಿಸುತ್ತದೆ. ಅವರವರ ಭಾಷೆಯನ್ನು ಮಾತನಾಡಲು ಯಾರೂ ನಾಚಿಕೆ ಪಡಬಾರದು. ಕೆಲವೊಮ್ಮೆ ಕೆಲವರು ತಮ್ಮ ಅಲ್ಪಸಂಖ್ಯಾತ ಗುಂಪಿನ ಭಾಷೆಗಳನ್ನು ರಾಷ್ಟ್ರದ ಬಹುಸಂಖ್ಯಾತ ಭಾಷೆ ಮಾತನಾಡುವವರ ಮಧ್ಯದಲ್ಲಿ ಮಾತನಾಡಲು ನಾಚಿಕೊಳ್ಳುವರು. ಆದರೆ ಸ್ಥಳೀಯ ಭಾಷೆಗಿಂತ ಸಹಜವಾಗಿ ಹೇಳುವುದಾದರೆ ಯಾವುದೂ ಅಷ್ಟು ಮುಖ್ಯವಲ್ಲ ಅಷ್ಟೊಂದು ಪ್ರತಿಷ್ಠೆಯ ವಿಷಯವಲ್ಲ ಅಥವಾ ರಾಷ್ಟ್ರೀಯ ಭಾಷೆಯಲ್ಲಿ ವಿದ್ಯಾವಂತರಾಗಬೇಕೆಂದಿಲ್ಲ. ಪ್ರತಿಯೊಂದು ಭಾಷೆಯಲ್ಲೂ ಸೂಕ್ಷ್ಮ ವ್ಯತ್ಯಾಸ ಮತ್ತು ಅರ್ಥಗಳ ಛಾಯೆ ಅಸಾಧಾರಣವಾದುದು. ನಮಗೆ ಯಾವ ಭಾಷೆ ಹಿತಕರವಾಗಿದೆಯೋ ಅದನ್ನೇ ನಾವು ಉಪಯೋಗಿಸಬೇಕು ಮತ್ತು ನಮಗೆ ಯಾವ ಭಾಷೆಯಲ್ಲಿ ಸಂವಹನ ಮಾಡಲು ಸುಲಭವಾಗುತ್ತದೋ ಆ ಭಾಷೆಯನ್ನು ಬಳಸಬೇಕು .
*ಶ್ರದ್ಧೆ (Credits): "ಬೈಬಲ್ ಭಾಷಾಂತರ ಸಿದ್ಧಾಂತಗಳು ಮತ್ತು ಪ್ರಾಯೋಗಿಕ ಪಡೆದದ್ದು" by Todd Price, Ph.D. CC BY-SA 4.0*