translationCore-Create-BCS_.../translate/writing-participants/01.md

16 KiB
Raw Blame History

ವಿವರಣೆಗಳು

ಮೊದಲನೇ ಬಾರಿ ಒಂದು ಕತೆಯಲ್ಲಿ ಯಾರ ಬಗ್ಗೆಯಾದರೂ ಅಥವಾ ಯಾವ ವಸ್ತುವಿನ ಬಗ್ಗೆಯಾದರೂ ಹೇಳುವಾಗ ಅವರು ಹೊಸದಾಗಿ ಪಾತ್ರಧಾರಿ. ಆನಂತರ ಬಳಕೆಯಾದಾಗ, ಅವುಗಳ ಬಗ್ಗೆ ಹೇಳಿದಾಗ ಅವರು ಹಳೆಯ ಪಾತ್ರಧಾರಿ.

ಈಗ ಫರಿಸಾಯರಲ್ಲಿ ಯಹೂದ್ಯರ ಹಿರೀ ಸಭೆಯವನಾದ ನಿಕೋದೇಮನೆಂಬ ಒಬ್ಬ ಮನುಷ್ಯನಿದ್ದನು ... ಈ ಮನುಷ್ಯನು ರಾತ್ರಿಸಮಯದಲ್ಲಿ ಯೇಸುವಿನ ಬಳಿಗೆ ಬಂದನು ... ಯೇಸು ಅವನಿಗೆ ಹೀಗೆ ಉತ್ತರಿಸಿ ಹೇಳಿದನು ...(ಯೋಹಾನ 3:1 2ಎ, 3ಎ)

ಮೊದಲ ವಾಕ್ಯದಲ್ಲಿ ನಿಕೋದೇಮನೆಂಬ ಮನುಷ್ಯನನ್ನು ಹೊಸ ವ್ಯಕ್ತಿಯಾಗಿ ಪರಿಚಯಿಸಲಾಗಿದೆ. ಪರಿಚಿತನಾದ ನಂತರ, ಎರಡನೇ ವಾಕ್ಯದಲ್ಲಿ "ಈ ಮನುಷ್ಯ" ಮತ್ತು "ಅವನು" ಎಂಬ ಪದಗಳು ಹಳೆಯ ವ್ಯಕ್ತಿಗಳಾಗಿದ್ದಾರೆ.

ಕಾರಣ ಇದೊಂದು ಭಾಷಾಂತರ ವಿಷಯ.

ಭಾಷಾಂತರವನ್ನು ಸ್ಪಷ್ಟವಾಗಿ ಮತ್ತು ಸಹಜವಾಗಿ ಇರಬೇಕೆಂದರೆ, ಓದುಗರು ವಾಕ್ಯಭಾಗದಲ್ಲಿ ಬರುವ ವ್ಯಕ್ತಿಗಳು ಹೊಸ ಪಾತ್ರಧಾರಿಗಳಾದರೂ ಅವರು ಈಗಾಗಲೇ ಓದಿದ್ದ ಪಾತ್ರಧಾರಿಯಾಗಿದ್ದರೂ ಅರ್ಥಮಾಡಿಕೊಳ್ಳುವಂತೆ ತಿಳಿಸಬೇಕು. ವಿವಿಧ ಭಾಷೆಗಳಲ್ಲಿ ವಿವಿಧ ರೀತಿಯಲ್ಲಿ ಈ ಕಾರ್ಯವನ್ನು ಮಾಡಲಾಗುತ್ತದೆ. ಇಂತಹ ಭಾಷಾಂತರ ಮಾಡುವಾಗ ನೀವು ನಿಮ್ಮ ಭಾಷೆಯಲ್ಲಿ ಬಳಸುವ ರೀತಿಯಲ್ಲೇ ಮಾಡಬೇಕೇ ಹೊರತು, ಮೂಲಗ್ರಂಥ ಭಾಷೆಯಲ್ಲಿ ಇರುವಂತೆ ಮಾಡಬಾರದು.

ಸತ್ಯವೇದದಿಂದ ಉದಾಹರಣೆಗಳು.

ಹೊಸ ಪಾತ್ರಧಾರಿಗಳು

ಸಾಮಾನ್ಯವಾಗಿ ಹೊಸ ವ್ಯಕ್ತಿಗಳು ಮತ್ತು ಹೊಸ ಪಾತ್ರಧಾರಿಗಳನ್ನು ಪರಿಚಯಿಸುವಾಗ "ಒಬ್ಬ ಮನುಷ್ಯನಿದ್ದನು" ಎಂಬ ಪದವನ್ನು ಬಳಸುತ್ತಾರೆ. ಇದನ್ನು ತಿಳಿಸುವ ಉದಾಹರಣೆಗಳು ಕೆಳಗಿನಂತಿವೆ. "ಅಲ್ಲೊಬ್ಬ" ಮನುಷ್ಯನಿದ್ದನು ಎಂಬ ಪದವನ್ನು ಬಳಸಿದಾಗ ಆ ಮನುಷ್ಯ ಆ ಕಾಲದಲ್ಲಿ ಬದುಕಿದ್ದನು. "ಒಂದು" "ಒಬ್ಬ ಮನುಷ್ಯ" ಎಂಬ ಪದಗಳು ಲೇಖಕನು ಆ ವ್ಯಕ್ತಿಯ ಬಗ್ಗೆ ಮೊದಲ ಸಲ ಮಾತನಾಡುತ್ತಿದ್ದಾನೆ ಎಂದು ತಿಳಿಯುತ್ತದೆ. ವಾಕ್ಯದ ಮುಂದಿನ ಪದಗಳು ಈ ಮನುಷ್ಯ ಯಾರು, ಎಲ್ಲಿಂದ ಬಂದನು, ಕುಟುಂಬದವರು ಯಾರು, ಇವನ ಹೆಸರು ಏನು ಎಂಬುದು ತಿಳಿದುಬರುತ್ತದೆ.

ಒಬ್ಬ ಮನುಷ್ಯನಿದ್ದನು ಚೋರ್ಗಾ ಎಂಬ ಊರಲ್ಲಿ, ದಾನ್ ಕುಲದವನಾದ, ಅವನ ಹೆಸರು ಮಾನೋಹ. (ನ್ಯಾಯಸ್ಥಾಪಕರು 13:2ಎ ಯು ಎಲ್ ಟಿ)

ಒಬ್ಬ ಪಾತ್ರಧಾರಿಯ ಪಾತ್ರ ಮುಖ್ಯವಾದುದು ಎಂದು ಪರಿಚಯಿಸುವಾಗ ಇನ್ನೊಬ್ಬ ಹೊಸ ಪಾತ್ರಧಾರಿ ಬಂದರೂ ಅಷ್ಟೇನೂ ಮುಖ್ಯವಲ್ಲ. ಈ ಉದಾಹರಣೆಯ ಎರಡನೇ ವಾಕ್ಯದಲ್ಲಿ ಬರುವ ಮಾನೋಹನ ಹೆಂಡತಿಯನ್ನು "ಅವನ ಹೆಂಡತಿ" ಎಂದು ಪರಿಚಯಿಸಲಾಗಿದೆ. ಈ ಪದ ಮಾನೋಹನಿಗೆ ಇವಳು ಸಂಬಂಧಪಟ್ಟವಳು ಎಂದು ಅರ್ಥ.

ಚೋರ್ಗಾ ಎಂಬ ಊರಲ್ಲಿ ಅಲ್ಲಿ ಒಬ್ಬ ಮನುಷ್ಯನಿದ್ದನು, ದಾನ್ ಕುಲದವನಾಗಿದ್ದನು, ಮತ್ತು ಅವನ ಹೆಸರು ಮಾನೋಹ. ಅವನ ಹೆಂಡತಿ ಬಂಜೆಯಾಗಿದ್ದುದರಿಂದ ಮತ್ತು ಅವಳು ಎಂದಿಗೂ ಮಕ್ಕಳಿಗೆ ಜನ್ಮನೀಡಿರಲಿಲ್ಲ. (ನ್ಯಾಯಸ್ಥಾಪಕರು 13:2 ಯು ಎಲ್ ಟಿ)

ಕೆಲವೊಮ್ಮೆ ಲೇಖಕನು ಹೊಸ ಪಾತ್ರಧಾರಿಯನ್ನು ಸರಳವಾಗಿ ಪರಿಚಯಿಸುತ್ತಾನೆ ಏಕೆಂದರೆ ಲೇಖಕನು ತನ್ನ ಓದುಗರಿಗೆ ಆ ವ್ಯಕ್ತಿಯನ್ನು ಈಗಾಗಲೇ ಪರಿಚಯಿಸಿದ್ದಾನೆಂದು ತಿಳಿದಿರುತ್ತಾನೆ. ಒಂದನೇ ಅರಸುಗಳ, ಮೊದಲ ವಾಕ್ಯದಲ್ಲಿ ಓದುಗರಿಗೆ ಅರಸನಾದ ದಾವೀದನು ಯಾರು ಎಂದು ತಿಳಿದಿದೆ ಎಂದು ಭಾವಿಸುತ್ತಾನೆ. ಆದುದರಿಂದ ಅವನು ಯಾರು ಎಂದು ಪರಿಚಯಿಸುವ ಅಗತ್ಯವಿಲ್ಲ.

ಅರಸನಾದ ದಾವೀದನು ದಿನ ತುಂಬಿದ ಮುದುಕನಾಗಿದ್ದನು, ಸೇವಕರು ಎಷ್ಟು ಕಂಬಳಿಗಳನ್ನು ಹೊದೆಸಿದರೂ, ಆದರೆ ಅವನಿಗೆ ಅದು ಬೆಚ್ಚನೆಯ ಅನುಭವ ನೀಡಲಿಲ್ಲ. (1 ಅರಸುಗಳು 1:1 ಯು ಎಲ್ ಟಿ)

ಹಳೆಯ ಪಾತ್ರಧಾರಿಗಳು.

ಕತೆಯಲ್ಲಿ ಒಬ್ಬ ವ್ಯಕ್ತಿಯನ್ನು ಪರಿಚಯಿಸಿದ ಮೇಲೆ ನಂತರ ವ್ಯಕ್ತಿಯ ಬಗ್ಗೆ ಮಾತನಾಡುವಾಗ ಸರ್ವನಾಮವನ್ನು ಬಳಸಿ ಹೇಳುತ್ತಾನೆ. ಕೆಳಗೆ ಕೊಟ್ಟಿರುವ ಉದಾಹರಣೆಯಲ್ಲಿ ಮನೋಹನನ್ನು ಕುರಿತು ಹೇಳುವಾಗ "ಅವನು," ಅವನ ಹೆಂಡತಿಯ ಬಗ್ಗೆ ಹೇಳುವಾಗ "ಅವಳು," ಎಂದು ಬಳಸಿದ್ದಾರೆ.

ಅವನ ಹೆಂಡತಿ ಬಂಜೆಯಾಗಿದ್ದುದರಿಂದ ಅವಳು ಎಂದಿಗೂ ಮಗುವಿಗೆ ಜನ್ಮ ನೀಡಲು ಆಗಲಿಲ್ಲ. (ನ್ಯಾಯಸ್ಥಾಪಕರು 13:2 ಯು ಎಲ್ ಟಿ)

ಹಳೆಯ ಪಾತ್ರಧಾರಿಯನ್ನು ಕುರಿತು ಹೇಳುವಾಗ ಕತೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಸೂಚಿಸುತ್ತದೆ. ಕೆಳಗೆ ಕೊಟ್ಟಿರುವ ಉದಾಹರಣೆಯ ಕತೆಯಲ್ಲಿ ಬರುವ ಮನೋಹನ ಹೆಂಡತಿ ಮಗುವನ್ನು ಪಡೆಯುವ ಬಗ್ಗೆ ಹೇಳುವಾಗ "ಅವನ ಹೆಂಡತಿ." ಎಂಬ ನಾಮಪದವನ್ನು ಬಳಸಲಾಗಿದೆ.

ಯೆಹೋವನ ದೂತನು ಪ್ರತ್ಯಕ್ಷವಾಗಿ ಹೆಂಡತಿಗೆ ಮತ್ತು ಆತನು ಅವಳಿಗೆ ಹೇಳಿದನು (.ನ್ಯಾಯಸ್ಥಾಪಕರು 13:3ಎ ಯು ಎಲ್ ಟಿ)

ಹಳೆಯ ಪಾತ್ರಧಾರಿ ಹೆಸರನ್ನು ಸ್ವಲ್ಪ ಸಮಯದವರೆಗೆ ಹೇಳದಿದ್ದರೂ ಅಥವಾ ಪಾತ್ರಧಾರಿಗಳ ನಡುವೆ ಗೊಂದಲ ಉಂಟಾದರೆ ಲೇಖಕನು ಪಾತ್ರಧಾರಿಗಳ ಹೆಸರನ್ನು ಬಳಸಬಹುದು. ಕೆಳಗೆ ಕೊಟ್ಟಿರುವ ಉದಾಹರಣೆಯಲ್ಲಿ, ಮನೋಹನನ್ನು ಅವನ ಹೆಸರಿನಿಂದ ಗುರುತಿಸಲ್ಪಟ್ಟಿದೆ, ಲೇಖಕನು 2ನೇ ವಾಕ್ಯದಿಂದ ಅವನ ಹೆಸರಿನಿಂದ ಗುರುತಿಸಿಲ್ಲ

ಆಗ ಮನೋಹನು ಯೆಹೋವನನ್ನು ಕುರಿತು ಪ್ರಾರ್ಥಿಸಿದನು. (ನ್ಯಾಯಸ್ಥಾಪಕರು 13:8ಎ ಯು ಎಲ್ ಟಿ)

ಕೆಲವು ಭಾಷೆಯಲ್ಲಿ ಕ್ರಿಯಾಪದವನ್ನು ಕುರಿತು ಹೇಳಿದರೆ ಅವು ಕರ್ತೃಪದದ ಬಗ್ಗೆ ತಿಳಿಸುತ್ತದೆ. ಇನ್ನು ಕೆಲವು ಭಾಷೆಗಳಲ್ಲಿ ಜನರು ನಾಮಪದಗಳನ್ನು ಎಲ್ಲಾ ಸಮಯದಲ್ಲೂ ಉಪಯೋಗಿಸುವುದಿಲ್ಲ ಅಥವಾ ಹಳೇ ಪಾತ್ರಧಾರಿಗಳಿಗೆ ಸರ್ವನಾಮವನ್ನು ಉಪಯೋಗಿಸುವುದಿಲ್ಲ. ಕ್ರಿಯಾಪದಗಳು ಕರ್ತೃಪದ ನಿರ್ವಹಿಸುವ ಕೆಲಸವನ್ನು ಅರ್ಥಮಾಡಿಕೊಳ್ಳುವಂತೆ ಸಾಕಷ್ಟು ಮಾಹಿತಿಯನ್ನು ಶ್ರೋತೃಗಳಿಗೆ ತಿಳಿಸುತ್ತದೆ. (ನೋಡಿಕ್ರಿಯಾಪದಗಳು.)

ಭಾಷಾಂತರ ಕುಶಲತೆಗಳು

(1) ಒಂದು ವೇಳೆ ಪಾತ್ರಧಾರಿಗಳು ಹೊಸಬರಾಗಿದ್ದರೆ, ಭಾಷೆಯಲ್ಲಿ ಪರಿಚಯಿಸುವ ಹೊಸ ಪಾತ್ರಧಾರಿಗಳು ಬಗ್ಗೆ ನಿಮ್ಮ ಭಾಷೆಯಲ್ಲಿರುವಂತೆ ಬಳಸಿ.

(2) ಸರ್ವನಾಮ ಯಾರ ಬಗ್ಗೆ ಉಪಯೊಗಿಸಲಾಗಿದೆ ಎಂದು ಗೊಂದಲವಾದರೆ ನಾಮಪದ ಅಥವಾ ಹೆಸರನ್ನು ಬಳಸಬಹುದು.

(3) ಹಳೆಯ ಪಾತ್ರಧಾರಿ ಹೆಸರನ್ನು ಸ್ವಲ್ಪ ಸಮಯದವರೆಗೆ ಹೇಳದಿದ್ದರೂ ಅಥವಾ ಪಾತ್ರಧಾರಿಗೆ ವ್ಯಕ್ತಿಗಳ ನಡುವೆ ಗೊಂದಲ ಉಂಟಾದರೆ ಲೇಖಕನು ಪಾತ್ರಧಾರಿಗಳ ಹೆಸರನ್ನು ಬಳಸಬಹುದು. ವಾಕ್ಯಭಾಗದ ಸಂದರ್ಭಕ್ಕಾಗಿ ಸರ್ವನಾಮಗಳನ್ನು ಬಳಸದೆ ವಾಕ್ಯ ಮಾಡಿದಾಗ ಜನರಿಗೆ ಸುಲಭವಾಗಿ ಅರ್ಥವಾದರೆ ಸರ್ವನಾಮಗಳನ್ನು ಬಳಸದೆ ಬಿಡಬಹುದು.

ಭಾಷಾಂತರ ಕುಶಲತೆಗಳನ್ನು ಅಳವಡಿಸಿರುವ ಉದಾಹರಣೆಗಳು.

(1) ಒಂದು ವೇಳೆ ಪಾತ್ರಧಾರಿಗಳು ಹೊಸಬರಾಗಿದ್ದರೆ, ಭಾಷೆಯಲ್ಲಿ ಪರಿಚಯಿಸುವ ಹೊಸ ಪಾತ್ರಧಾರಿಗಳು ಬಗ್ಗೆ ನಿಮ್ಮ ಭಾಷೆಯಲ್ಲಿರುವಂತೆ ಬಳಸಿ.

< ನಂತರ ಯೋಸೇಫನು, ಬಾರ್ನಬ ಎಂದು ಕರೆಯಲ್ಪಡುವ (ಧೈರ್ಯದಾಯಕನು ಎಂದು ಇದನ್ನು ಅನುವಾದಿಸಲಾಗಿದೆ), ಕುಪ್ರ ದ್ವೀಪದಲ್ಲಿ ಜನಿಸಿ ಲೇವಿಯನಾಗಿದ್ದವನು ... (ಆ. ಕೃ. 4:36-37 ಯು ಎಲ್ ಟಿ) ಯೋಸೇಫನ ಹೆಸರನ್ನು ಪ್ರಾರಂಬದಲ್ಲೇ ಪರಿಚಯಿಸುವಾಗ ಮತ್ತು ಇನ್ನೊಂದು ಹೆಸರನ್ನು ಬಳಸಿರುವುದರಿಂದ ಗೊಂದಲವಾಗದೇ ಇರುವಂತೆ ನೋಡಿಕೊಳ್ಳಬೇಕು. < < < ಕುಪ್ರ ದ್ವೀಪದಲ್ಲಿ ಜನಿಸಿದ ಲೇವಿಯನಾಗಿದ್ದ ಒಬ್ಬ ಮನುಷ್ಯನಿದ್ದನು. ಅವನ ಹೆಸರು ಯೋಸೇಫ, ಮತ್ತು ಅಪೋಸ್ತಲರು ಅವನಿಗೆ ಬಾರ್ನಬನೆಂದು ಹೆಸರಿಟ್ಟು ಕರೆದರು. (ಇದರ ಅರ್ಥ ಧೈರ್ಯದಾಯಕ). ಅಲ್ಲೊಬ್ಬ ಲೇವಿಯನು ಕುಪ್ರ ದ್ವೀಪದಿಂದ ಬಂದಿದ್ದ ಅವನ ಹೆಸರು ಯೋಸೇಫ, ಅಪೋಸ್ತಲರು ಅವನಿಗೆ ಬಾರ್ನಬನೆಂದು ಹೆಸರಿಟ್ಟು ಕರೆದರು. ಇದರ ಅರ್ಥಧೈರ್ಯದಾಯಕ ಎಂದು.

(2) ಯಾರನ್ನು ಕುರಿತು ಸರ್ವನಾಮವನ್ನು ಹೇಳಿದೆ ಎಂದು ಗೊತ್ತಾಗದಿದ್ದರೆ ನಾಮಪದ ಅಥವಾ ಹೆಸರನ್ನು ಬಳಸಿ.

ಮತ್ತು ಆತನು ಒಂದು ಸ್ಥಳದಲ್ಲಿ ಪ್ರಾರ್ಥನೆ ಮಾಡುತ್ತಿದ್ದಾಗ ಇದು ನಡೆಯಿತು, ಆತನು ನಿಲ್ಲಿಸಿದಾಗ, ತನ್ನ ಶಿಷ್ಯರಲ್ಲಿ ಒಬ್ಬನು ಆತನಿಗೆ ಗುರುವೇ ಯೋಹಾನನು ತನ್ನ ಶಿಷ್ಯರಿಗೆ ಕಲಿಸಿದ ಹಾಗೆ ನಮಗೂ ಪ್ರಾರ್ಥನೆ ಮಾಡುವುದನ್ನು ಕಲಿಸು ಎಂದು ಹೇಳಿದನು. (ಲೂಕ 11:1 ಯು ಎಲ್ ಟಿ) ಇಲ್ಲಿ ಅಧ್ಯಾಯದ ಪ್ರಾರಂಭ ವಾಕ್ಯದಲ್ಲಿ ಮೊದಲ ಪದ " ಆತನು " ಎಂದು ಪ್ರಾರಂಭವಾದಾಗ ಓದುಗರಿಗೆ "ಆತನು" ಎಂಬುದು ಯಾರು ಎಂದು ಆಶ್ವರ್ಯವಾಗಬಹುದು.

ಯೇಸು ಒಂದು ನಿರ್ದಿಷ್ಟ ಸ್ಥಳದಲ್ಲಿ ಪ್ರಾರ್ಥನೆ ಮಾಡಿಮುಗಿಸಿದಾಗ ನಡೆದ ವಿಷಯ. ಆತನ ಶಿಷ್ಯರಲ್ಲಿ ಒಬ್ಬನು ಗುರುವೇ, ಯೋಹಾನನು ತನ್ನ ಶಿಷ್ಯರಿಗೆ ಪ್ರಾರ್ಥಿಸುವುದನ್ನು ಕಲಿಸಿದಂತೆ ನಮಗೂ ಪ್ರಾರ್ಥಿಸುವುದನ್ನು ಕಲಿಸು ಎಂದು ಹೇಳಿದನು."

(3) ಹಳೆಯ ಪಾತ್ರಧಾರಿ ಹೆಸರನ್ನು ಸ್ವಲ್ಪ ಸಮಯದವರೆಗೆ ಹೇಳದಿದ್ದರೂ ಅಥವಾ ಪಾತ್ರಧಾರಿಗೆ ವ್ಯಕ್ತಿಗಳ ನಡುವೆ ಗೊಂದಲ ಉಂಟಾದರೆ ಲೇಖಕನು ಪಾತ್ರಧಾರಿಗಳ ಹೆಸರನ್ನು ಬಳಸಬಹುದು. ವಾಕ್ಯಭಾಗದ ಸಂದರ್ಭಕ್ಕಾಗಿ ಸರ್ವನಾಮಗಳನ್ನು ಬಳಸದೆ ವಾಕ್ಯ ಮಾಡಿದಾಗ ಜನರಿಗೆ ಸುಲಭವಾಗಿ ಅರ್ಥವಾದರೆ ಸರ್ವನಾಮಗಳನ್ನು ಬಳಸದೆ ಬಿಡಬಹುದು.

< ಯೋಸೇಫನ ಧಣಿಯು ಯೋಸೇಫನ ಹಿಡಿಸಿ ತರಿಸಿ ಸೆರೆಮನೆಗೆ ಹಾಕಿದನು, ಅದೇ ಸ್ಥಳದಲ್ಲಿ ಅರಸನ ಎಲ್ಲಾ ಕೈದಿಗಳನ್ನು ಹಾಕುತ್ತಿದ್ದರು, ಮತ್ತು ಯೋಸೇಫನು ಅಲ್ಲೇ ಉಳಿದುಕೊಂಡನು. (ಆದಿಕಾಂಡ 39:20) ಈ ಕತೆಯಲ್ಲಿ ಯೋಸೇಫನು ಮುಖ್ಯಪಾತ್ರವಹಿಸಿದ್ದರಿಂದ, ಕೆಲವು ಭಾಷೆಯಲ್ಲಿ ಪದೇಪದೇ ಸರ್ವನಾಮದ ಬಳಸುತ್ತಿದ್ದರು.

ಯೋಸೇಫನ ಧಣಿಯು ಅವನನ್ನು ಹಿಡಿದು ಅವನನ್ನು ಸೆರೆಮನೆಯಲ್ಲಿ ಹಾಕಿದನು, ಅದೇ ಸ್ಥಳದಲ್ಲಿ ಅರಸನ ಎಲ್ಲಾ ಕೈದಿಗಳನ್ನು ಹಾಕುತ್ತಿದ್ದರು, ಮತ್ತು ಅವನು ಅಲ್ಲೇ ಸೆರೆಮನೆಯಲ್ಲೇ ಉಳಿದುಕೊಂಡನು.