translationCore-Create-BCS_.../translate/figs-declarative/01.md

12 KiB

ವಿವರಣೆ

ಸಾಮಾನ್ಯವಾಗಿ ಯಾವುದಾದರೂ ಮಾಹಿತಿಯನ್ನು ನೀಡುವಾಗ ನಿರೂಪಣಾ ವಾಕ್ಯಗಳ ಮೂಲಕ ನೀಡಲಾಗುತ್ತದೆ. ಆದರೆ ಸತ್ಯವೇದದಲ್ಲಿ ಇದನ್ನು ಬೇರೆ ಉದ್ದೇಶಗಳಿಗೂ ಬಳಸಲಾಗುವುದು.

ಇದಕ್ಕೆ ಭಾಷಾಂತರದ ಪ್ರಕರಣಗಳೇ ಕಾರಣ.

ಕೆಲವು ಭಾಷೆಯಲ್ಲಿ ಇಂತಹ ಹೇಳಿಕೆ ಸತ್ಯವೇದದಲ್ಲಿ ಕೆಲವು ವಿಚಾರಗಳಿಗೆ ಬಳಸದೇ ಇರಬಹುದು.

ಸತ್ಯವೇದದಲ್ಲಿನ ಉದಾಹರಣೆಗಳು.

ಹೇಳಿಕೆ ಸಾಮಾನ್ಯವಾಗಿ ಮಾಹಿತಿ. ನೀಡುವುದಕ್ಕಾಗಿ ಬಳಸಬಹುದು. ಯೋಹಾನ 1:6-8 ರಲ್ಲಿರುವಂತೆ ಈ ಕೆಳಗೆ ನೀಡಿರುವ ವಾಕ್ಯಗಳೆಲ್ಲವೂ ಕಾರ್ಯದ ಹಿತಿಯನ್ನು ನೀಡುವ ವಾಕ್ಯಗಳಾಗಿವೆ.

ದೇವರು ಕಳುಹಿಸಿದ ಒಬ್ಬ ಮನುಷ್ಯನು ಬಂದನು, ಅವನ ಹೆಸರು ಯೋಹಾನ. ಅವನು ಆ ಬೆಳಕಿನ ವಿಷಯದಲ್ಲಿ ಸಾಕ್ಷಿಕೊಡುವುದಕ್ಕೆ ಬಂದನು. ಅವನ ಮೂಲಕ ಎಲ್ಲರೂ ನಂಬುವವರಾದರು. ಯೋಹಾನನೇ ಆ ಬೆಳಕಲ್ಲ, ಬೆಳಕಿನ ವಿಷಯದಲ್ಲಿ ಸಾಕ್ಷಿಕೊಡುವುದಕ್ಕಾಗಿ ಬಂದವನು. (ಯೋಹಾನ 1:6-8 ಯು ಎಲ್ ಟಿ )

ಕೆಲವೊಮ್ಮೆ ಇಂತಹ ವಾಕ್ಯಗಳು ಆಜ್ಞೆ ಗಳಾಗಿ ಕೆಲವರಿಗೆ ಏನು ಮಾಡಬೇಕು ಎಂಬುದುನ್ನು ಸೂಚಿಸುವಂತದ್ದು. ಈ ಕೆಳಗಿನ ಉದಾಹರಣೆಗಳಲ್ಲಿ ದೇವಾಲಯದ ಯಾಜಕನು ಕೆಲವು ನಿರೂಪಣಾ ವಾಕ್ಯಗಳನ್ನು "ಕ್ರಿಯಾಪದ" ಗಳನ್ನು ಬಳಸಿ ಜನರು ಏನು ಮಾಡಬೇಕು ಎಂಬುದನ್ನು ಸೂಚಿಸುತ್ತಿದ್ದ.

ಅವನು ಆಜ್ಞಾಪೂರ್ವಕವಾಗಿ " ನೀವು ಇಂತಹದ್ದನ್ನೇ" ಖಂಡಿತವಾಗಿ ಹೀಗೆ ಮಾಡಲೇಬೇಕು ಎಂಬುದನ್ನು ತಿಳಿಸುವನು. ಅವರಿಗೆ ಸಬ್ಬತ್ ದಿನದಲ್ಲಿ ಮನೆಗೆ ಹೋಗುವ ಸೈನ್ಯದ ಮೂರರಲ್ಲೊಂದು ಭಾಗವು ಅರಮನೆಯನ್ನು ಕಾಯಬೇಕು, ಇನ್ನೊಂದು ಭಾಗವು ಸೂರ್ ಬಾಗಿಲಿನಲ್ಲಿಯೂ, ಮತ್ತೊಂದು ಭಾಗವು ಕಾವಲುದಂಡಿನ ಹಿಂದಿನ ಬಾಗಿಲಿನಲ್ಲಿಯೂ ಇರಬೇಕು (2 ನೇ ಅರಸುಗಳು 11:5 ಯು ಎಲ್ ಟಿ )

ಕೆಲವೊಮ್ಮೆ ಈ ಹೇಳಿಕೆಗಳು ಸೂಚನೆಗಳನ್ನು. ನೀಡುವ ವಾಕ್ಯಗಳಾಗಿ ಉಪಯೋಗಿಸಬಹುದು. ಕೆಳಗೆ ನೀಡಿರುವ ವಾಕ್ಯಗಳಲ್ಲಿ ಯೋಸೆಫನೊಂದಿಗೆ ಮಾತನಾಡುವವನು ಯೋಸೆಫನಿಗೆ ಮುಂಬರುವ ದಿನಗಳಲ್ಲಿ ಅವನು ಏನು ಮಾಡಬೇಕೆಂದು ಹೇಳುವುದರೊಂದಿಗೆ ಯೋಸೆಫನು ಏನು ಮಾಡಲೇಬೇಕು ಎಂದು ಹೇಳುತ್ತಾನೆ.

ಆಕೆಯು ಒಬ್ಬ ಮಗನನ್ನು ಹಡೆಯುವಳು, ನೀನು ಆತನಿಗೆ ಯೇಸು ಎಂದು ಹೆಸರಿಡಬೇಕು, ಏಕೆಂದರೆ ಆತನು ತನ್ನ ಜನರನ್ನು ಅವರ ಪಾಪಗಳಿಂದ ಬಿಡಿಸಿ ಕಾಯುವನು ಅಂದನು.(ಮತ್ತಾಯ 1:21 ಯು ಎಲ್ ಟಿ)

ಕೆಲವೊಮ್ಮೆ ಹೇಳಿಕೆಗಳು ಬೇಡಿಕೊಳ್ಳವವಾಕ್ಯಗಳಾಗಿ ಉಪಯೋಗಿಬಹುದು. ಕುಷ್ಠರೋಗದಿಂದ ಬಳಲುತ್ತಿರುವ ವ್ಯಕ್ತಿ ಯೇಸುವಿಗೆ ಏನು ಮಾಡಬಹುದೆಂದು ಹೇಳುತ್ತಿರಲಿಲ್ಲ. ಅವನನ್ನು ಗುಣಪಡಿಸುವಂತೆ ಯೇಸುವನ್ನು ಕೇಳುತ್ತಿದ್ದನು

ಇಗೋ, ಕುಷ್ಠರೋಗಿಯೊಬ್ಬರು ಅವನ ಬಳಿಗೆ ಬಂದು ಅವನ ಮುಂದೆ ನಮಸ್ಕರಿಸಿ, “ಕರ್ತನೇ, ನಿನಗೆ ಮನಸಿದ್ದರೆ ** ನೀನು ನನ್ನನ್ನು ಶುದ್ಧಮಾಡಬಲ್ಲೆ." (ಮತ್ತಾಯ 8:2ಯು ಎಲ್ ಟಿ)

ಈ ವಾಕ್ಯಗಳು ಕೆಲವೊಮ್ಮೆ ನಿರ್ವಹಿಸು ಎಂಬ ಅರ್ಥದ ವಾಕ್ಯಗಳಾಗಿ ಉಪಯೋಗಿಸಬಹುದು.

ನಿನ್ನ ನಿಮಿತ್ತ ಭೂಮಿಗೆ ಶಾಪಬಂತು, ದೇವರು ನಿಜವಾಗಿ ಅದನ್ನು ಶಪಿಸಿದನು.

.... **ನಿನ್ನ ನಿಮಿತ್ತ; ಭೂಮಿಗೆ ಶಾಪಬಂತು, (ಆದಿಕಾಂಡ 3:17 ಯು ಎಲ್ ಟಿ)

ನಿನ್ನ ಪಾಪವು ಕ್ಷಮಿಸಲ್ಪಟ್ಟಿದೆ ಎಂದು ಹೇಳಿದನು, ಆ ಮನುಷ್ಯನ ಪಾಪಗಳನ್ನು ಯೇಸು ಕ್ಷಮಿಸಿದನು.

ಅವರ ನಂಬಿಕೆಯನ್ನು ನೋಡಿದ ಯೇಸು, ಆ ಪಾರ್ಶ್ವವಾಯು ರೋಗಿಯನ್ನು ನೋಡಿ, "ಮಗನೇ, ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ ಅಂದನು." (ಲೂಕ 2:5 ಯು ಎಲ್ ಟಿ )

ಅನುವಾದದ ಕಾರ್ಯ ತಂತ್ರಗಳು.

(1) ಒಂದು ವೇಳೆ ಹೇಳಿಕೆಯ ಕಾರ್ಯವು ನಿಮ್ಮ ಭಾಷೆಯಲ್ಲಿ ಸರಿಯಾಗಿ ಅರ್ಥಮಾಡಿಕೊಳ್ಳಲು ಸಾದ್ಯವಾಗದಿದ್ದರೆ ಕೆಲವು ಬೇರೆ ವಾಕ್ಯಗಳನ್ನು ಅದೇ ರೀತಿಯ ಕ್ರಿಯೆಯನ್ನು ಬಳಸಿ ವ್ಯಕ್ತಪಡಿಸಬೇಕು. (2) ಹೇಳಿಕೆಯ ಕಾರ್ಯವು ನಿಮ್ಮ ಭಾಷೆಯಲ್ಲಿ ಸರಿಯಾಗಿ ಅರ್ಥಮಾಡಿಕೊಳ್ಳಲು ಸಾದ್ಯವಾಗದಿದ್ದರೆಕೆಲವು ಬೇರೆ ವಾಕ್ಯಗಳನ್ನು ಅದೇ ರೀತಿಯ ಕ್ರಿಯೆಯನ್ನು ಸೇರಿಸಿ ವ್ಯಕ್ತಪಡಿಸಬೇಕು (3) ಹೇಳಿಕೆಯ ಕಾರ್ಯವು ನಿಮ್ಮ ಭಾಷೆಯಲ್ಲಿ ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಕ್ರಿಯಾಪದದ ರೂಪವನ್ನು ಬಳಸಿ ಇದರ ಪ್ರಕ್ರಿಯೆಯನ್ನು ವ್ಯಕ್ತಪಡಿಸಬೇಕು.

ಅನುವಾದದ ಕಾರ್ಯತಂತ್ರಗಳನ್ನು ಅಳವಡಿಸಿರುವ ಉದಾಹರಣೆಗಳು.

(1) ಒಂದು ವೇಳೆ ಹೇಳಿಕೆಯ ಕಾರ್ಯವು ನಿಮ್ಮ ಭಾಷೆಯಲ್ಲಿ ಸರಿಯಾಗಿ ಅರ್ಥಮಾಡಿಕೊಳ್ಳಲು ಸಾದ್ಯವಾಗದಿದ್ದರೆ ಕೆಲವು ಬೇರೆ ವಾಕ್ಯಗಳನ್ನು ಅದೇ ರೀತಿಯ ಕ್ರಿಯೆಯನ್ನು ಬಳಸಿ ವ್ಯಕ್ತಪಡಿಸಬೇಕು.

ಆಕೆಯು ಒಬ್ಬ ಮಗನನ್ನು ಹಡೆಯುವಳು ಮತ್ತು ನೀನು ಆತನಿಗೆ ಯೇಸು ಎಂದು ಹೆಸರಿಡಬೇಕು, ಏಕೆಂದರೆ ಆತನು ತನ್ನ ಜನರನ್ನು ಅವರ ಪಾಪಗಳಿಂದ ಬಿಡಿಸಿ ಕಾಯುವನು ಅಂದನು. (ಮತ್ತಾಯ 1:21 ಯು ಎಲ್ ಟಿ )"

"ನೀನು ಅವನ ಹೆಸರನ್ನು ಯೇಸು ಎಂದು ಕರೆಯಬೇಕು" ಎಂಬ ನುಡಿಗಟ್ಟು ಒಂದು ಸೂಚನೆಯಾಗಿದೆ. ಸಾಮಾನ್ಯ ಸೂಚನೆಯ ವಾಕ್ಯ ಪ್ರಕಾರವನ್ನು ಬಳಸಿಕೊಂಡು ಇದನ್ನು ಅನುವಾದಿಸಬಹುದು.

ಆಕೆಯು ಒಬ್ಬ ಗಂಡು ಮಗುವಿಗೆ ಜನ್ಮ ನೀಡುವಳು. ಆತನಿಗೆ ಯೇಸು ಎಂದು ಹೆಸರಿಡು, ಏಕೆಂದರೆ ಆತನು ತನ್ನ ಜನರನ್ನು ಅವರ ಪಾಪಗಳಿಂದ ಬಿಡಿಸಿ **ರಕ್ಷಿಸುವನು.

(2) ಒಂದು ವೇಳೆ ಹೇಳಿಕೆಯ ಕಾರ್ಯವು ನಿಮ್ಮ ಭಾಷೆಯಲ್ಲಿ ಸರಿಯಾಗಿ ಅರ್ಥಮಾಡಿಕೊಳ್ಳಲು ಸಾದ್ಯವಾಗದಿದ್ದರೆ ಆ ಕಾರ್ಯವನ್ನು ವ್ಯಕ್ತಪಡಿಸುವ ವಾಕ್ಯ ಪ್ರಕಾರವನ್ನು ಸೇರಿಸಿಕೊಳ್ಳಬೇಕು.

ಕರ್ತನೇ, ** ದಯವಿಟ್ಟು ನನ್ನನ್ನು ಗುಣಪಡಿಸು **, ಏಕೆಂದರೆ ನಿನಿಗೆ ಮನಸಿದ್ದರೆ ನೀನು ನನ್ನನ್ನು ಗುಣಪಡಿಸಲು ಸಮರ್ಥರಾಗಿದ್ದೀರಿ ಎಂದು ನನಗೆ ತಿಳಿದಿದೆ. (ಮತ್ತಾಯ 8: 2 ಯು ಎಲ್ ಟಿ)

ವಿನಂತಿಯನ್ನು ಮಾಡುವುದು “ನಿಮಗೆ ತಿಳಿದಿದೆ” ಎಂಬ ಕಾರ್ಯ. ಹೇಳಿಕೆಯ ಜೊತೆಗೆ, ವಿನಂತಿಯನ್ನು ಸೇರಿಸಬಹುದು.

ಕರ್ತನೆ **ನೀನು ಗುನಪಡಿಸಬಲ್ಲೆ ಎಂದು ನನಗೆ ಗೊತ್ತದೆ " ನಿನಗೆ ಮನಸ್ದಸಿದ್ಯದರೆ ದಯವಿಟ್ಟು ಹಾಗೇ ಮಾಡು

ಕರ್ತನೆ, ನೀನು ಮನಸ್ಸು ಮಾಡಿದರೆ, ನನ್ನನ್ನು ಪರಿಶುದ್ಧಮಾಡು**.** " ನೀನು ಮಾಡಬಲ್ಲೆ ಎಂದು ನನಗೆ ಗೊತ್ತದೆ**.**

(3) ನಿಮ್ಮ ಭಾಷೆಯಲ್ಲಿ ಹೇಳಿಕೆಯ ಕಾರ್ಯವು ಸರಿಯಾಗಿ ಅರ್ಥವಾಗದಿದ್ದರೆ, ಆ ಕಾರ್ಯವನ್ನು ವ್ಯಕ್ತಪಡಿಸುವ ಕ್ರಿಯಾಪದ ರೂಪವನ್ನು ಬಳಸಿ.

ಆಕೆಯು ಒಬ್ಬ ಗಂಡು ಮಗುವಿಗೆ ಜನ್ಮ ನೀಡುವಳು, ಮತ್ತು ಆವನಿಗೆ ಯೇಸು ಎಂದು ಹೆಸರಿಡಬೇಕು, ಏಕೆಂದರೆ ಆತನು ತನ್ನ ಜನರನ್ನು ಅವರ ಪಾಪಗಳಿಂದ ರಕ್ಷಿಸುವನು**. (ಮತ್ತಾಯ 1:21 ಯು ಎಲ್ ಟಿ)

ಆಕೆಯು ಒಬ್ಬ ಗಂಡುಮಗುವಿಗೆ ಜನ್ಮ ನೀಡುವಳು, ಮತ್ತು ನೀನು ಆತನನ್ನು ಯೇಸು ಎಂದು ಕರೆಯಬೇಕು, ಏಕೆಂದರೆ ಆತನು ತನ್ನ ಜನರನ್ನು ಅವರ ಪಾಪಗಳಿಂದ ರಕ್ಷಿಸುವನು.

ಮಗನೇ, ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ. (ಲೂಕ 2:5 ಯು ಎಲ್ ಟಿ)

ಮಗನೇ, ನಾನು ನಿನ್ನ ಪಾಪಗಳನ್ನು ಕ್ಷಮಿಸುವೆ.

ಮಗನೇ, ದೇವರು ನಿನ್ನ ನಿನ್ನ ಪಾಪಗಳನ್ನು ಕ್ಷಮಿಸಿದ್ದಾನೆ.