translationCore-Create-BCS_.../translate/figs-you/01.md

3.7 KiB

ಏಕವಚನ, ದ್ವಿವಿಧ, (ಉಭಯ, ಬಹುವಚನ)

ಕೆಲವು ಭಾಷೆಯಲ್ಲಿ "you"/ "ನೀನು" ಎಂಬ ಪದಕ್ಕೆ ಒಂದಕ್ಕಿಂತ ಹೆಚ್ಚು ಪದಗಳನ್ನು ಬಳಸುತ್ತಾರೆ, ಒಬ್ಬರಿಗಿಂತ ಹೆಚ್ಚು ವ್ಯಕ್ತಿಗಳು ಎಂದು ಹೇಳುವಾಗಲೂ ಈ ಪದಗಳನ್ನು ಬಳಸುತ್ತಾರೆ.

ಏಕವಚನ ಪದವು ಒಬ್ಬ ವ್ಯಕ್ತಿಯನ್ನು ಉದ್ದೇಶಿಸಿ ಹೇಳಿದರೆ, "ಬಹುವಚನ" ಪದವು ಒಬ್ಬರಿಗಿಂತ ಹೆಚ್ಚು ಜನರನ್ನು ಸೂಚಿಸುತ್ತಾರೆ.

ಕೆಲವು ಭಾಷೆಯಲ್ಲಿ ದ್ವಿವಿಧ ಪದಗಳು ಇವೆ, ಇವು ಇಬ್ಬರು ವ್ಯಕ್ತಿಗಳ ಮತ್ತು ಕೆಲವೊಮ್ಮೆ ಮೂರು ಅಥವಾ ನಾಲ್ಕು ಜನರನ್ನು ಉದ್ದೇಶಿಸಿ ಹೇಳುವಾಗ ಬಳಕೆಯಾಗುತ್ತವೆ. ನೀವು ಇಲ್ಲಿರುವ ಲಿಂಕ್ ಬಳಸಿ ವಿಡಿಯೋ ನೋಡಿದರೆ ಇದು ಸ್ಪಷ್ಟವಾಗುತ್ತದೆ http://ufw.io/figs_younum.

ಕೆಲವೊಮ್ಮೆ ಸತ್ಯವೇದದಲ್ಲಿ ಮಾತನಾಡುವ ವ್ಯಕ್ತಿ "ಏಕವಚನದ ಪದವನ್ನು” ಅಂದರೆ "you" "ನೀನು" ಉಪಯೋಗಿಸುತ್ತಿದ್ದರೂ ಅವನುಒಂದು ಗುಂಪನ್ನು ಉದ್ದೇಶಿಸಿ ಮಾತನಾಡುತ್ತಿರುತ್ತಾನೆ.

ಔಪಚಾರಿಕ ಮತ್ತು ಅನೌಪಚಾರಿಕ.

ಕೆಲವು ಭಾಷೆಯಲ್ಲಿ “ನೀವು” ಎಂಬ ಪದ ವಿವಿಧ ರೂಪಗಳನ್ನು ಹೊಂದಿದ್ದು ಮಾತನಾಡುವ ವ್ಯಕ್ತಿಗೂ ಮತ್ತು ಅವನು ಯಾರೊಂದಿಗೆ ಮಾತನಾಡುತ್ತಿದ್ದಾನೋ ಅವರಿಬ್ಬರ ಸಂಬಂಧವನ್ನು ಆಧರಿಸಿ ಇರುತ್ತದೆ. ಜನರು ತಮಗಿಂತ ವಯಸ್ಸಾದವರೊಂದಿಗೆ ಮಾತನಾಡುವಾಗ ಔಪಚಾರಿಕವಾಗಿ "you" "ನೀವು" ಎಂಬ ಪದವನ್ನು ಬಳಸುತ್ತಾರೆ. ಹಾಗೆಯೇ ಅವರಿಗಿಂತ ಅಧಿಕಾರದಲ್ಲಿ ಹೆಚ್ಚಿನವರಾದರೂ, ಅವರಿಗೆ ಪರಿಚಯವಿಲ್ಲದವರಾಗಿದ್ದರೂ "ನೀವು" ಪದವನ್ನೇ ಬಳಸುತ್ತಾರೆ. ಜನರು ಕೆಲವೊಮ್ಮೆ ಅನೌಪಚಾರಿಕ ರೂಪವನ್ನು ತಮಗಿಂತ ವಯಸ್ಸಿನಲ್ಲಿ ದೊಡ್ಡವರಲ್ಲದಿದ್ದರೂ, ಅಧಿಕಾರದಲ್ಲಿ ಹಿರಿತನವಿಲ್ಲದಿದ್ದರೂ ತಮ್ಮ ಹತ್ತಿರದ ಸ್ನೇಹಿತರನ್ನು ಮತ್ತು ಕುಟುಂಬದ ಸದಸ್ಯರನ್ನು ಕುರಿತು ಮಾತನಾಡುವಾಗ ಬಳಸುತ್ತಾರೆ.

ನೀವು ಈ ವೀಡಿಯೋವನ್ನು ನೋಡಿ http://ufw.io/figs_youform.

ನೀವು ಈ ಭಾಗವನ್ನು ಭಾಷಾಂತರಿಸುವಾಗ ಇದಕ್ಕೆ ಸಂಬಂಧಿಸಿದ ಪಠ್ಯ ಓದಿ ತಿಳಿಯಿರಿ