translationCore-Create-BCS_.../checking/language-community-check/01.md

16 KiB

ಭಾಷೆಯ ಸಮುದಾಯದ ಪರಿಶೀಲನೆ

ತಂಡವಾಗಿ ಪರಿಶೀಲನೆಗಳನ್ನು ಮಾಡಿದ ಮೇಲೆ ಪರಿಶೀಲನೆ ಮತ್ತು ಹೇಳಲ್ಪಟ್ಟಿರುವ ಹಂತಗಳನ್ನು ಅನುವಾದ ತಂಡ ಸಂಪೂರ್ಣಗೊಳಿಸಿದ ಅನುವಾದವನ್ನು ಭಾಷಾಂತರ ಸಮುದಾಯದ ಮೂಲಕ ಪರಿಶೀಲನೆ ಮಾಡಿಸುವುದಕ್ಕೆ ಸಿದ್ಧವಾಗಿರುತ್ತದೆ. ಭಾಷಾಂತರ ಮಾಡುವ ಭಾಷೆಯಲ್ಲಿ ಸ್ಪಷ್ಟವಾಗಿ ಮತ್ತು ಸ್ವಾಭಾವಿಕವಾಗಿರುವಂತೆ ಸಮುದಾಯವು ಅನುವಾದ ತಂಡಕ್ಕೆ ಸಹಾಯ ಮಾಡುತ್ತಾರೆ. ಇದನ್ನು ಮಾಡುವುದಕ್ಕೆ, ಅನುವಾದ ವರ್ಗದವರು ಸಮುದಾಯದ ಪರಿಶೀಲನೆಯ ವಿಧಾನದಲ್ಲಿ ತರಬೇತಿ ಹೊಂದಿದ ಜನರನ್ನು ಆಯ್ಕೆ ಮಾಡಿಕೊಳ್ಳಬೇಕು. ಅನುವಾದ ಮಾಡಿದ ಜನರೇ ಇಲ್ಲಿಯೂ ಕೆಲಸ ಮಾಡಬಹುದು.

ಈ ಜನರು ಸಮುದಾಯವಿರುವ ಪ್ರತಿಯೊಂದು ಕಡೆಗೆ ಹೋಗಿ, ಮತ್ತು ಭಾಷೆಯ ಸಮುದಾಯದಲ್ಲಿರುವ ಸದಸ್ಯರೊಂದಿಗೆ ಅನುವಾದವನ್ನು ಪರಿಶೀಲನೆ ಮಾಡುತ್ತಾರೆ. ಈ ಪರಿಶೀಲನೆಯನ್ನು ಅನೇಕರ ಜೊತೆಯಲ್ಲಿ ಅಂದರೆ ಯೌವನಸ್ಥರು, ವೃದ್ಧರು, ಸ್ತ್ರೀ ಪುರುಷರು ಮತ್ತು ಆ ಭಾಷೆಯ ಪ್ರಾಂತ್ಯದಲ್ಲಿನ ಅನೇಕ ವಿಭಾಗಗಳಲ್ಲಿನ ಪ್ರಸಂಗಿಗಳು ಮತ್ತು ಇನ್ನೂ ಅನೇಕರಿಂದ ಮಾಡಿಸಿದರೆ ಇನ್ನೂ ಒಳ್ಳೇಯದು, ಇದರ ಮೂಲಕ ಆ ಅನುವಾದವು ಎಲ್ಲರು ಅರ್ಥ ಮಾಡಿಕೊಳ್ಳುವುದಕ್ಕೆ ಸಹಾಯಕವಾಗುವುದು.

ಅನುವಾದದ ಸ್ಪಷ್ಟತೆಗಾಗಿ ಮತ್ತು ಸ್ವಾಭಾವಿಕತೆಗಾಗಿ ಪರಿಶೀಲನೆ ಮಾಡುವುದಕ್ಕೆ, ಅದನ್ನು ಮೂಲ ಭಾಷೆಗೆ ಹೋಲಿಸಿ ನೋಡಿದರೆ ಯಾವ ಪ್ರಯೋಜನವೂ ಇರುವುದಿಲ್ಲ. ಸಮುದಾಯದೊಂದಿಗೆ ಮಾಡುವ ಈ ಪರಿಶೀಲನೆಗಳಲ್ಲಿ, ಯಾರೂ ಕೂಡ ಮೂಲ ಭಾಷೆಯ ಬೈಬಲನ್ನು ನೋಡಬಾರದು. ಜನರು ಸಹಜವಾಗಿ ನಿಖರತೆಗಾಗಿ ಪರಿಶೀಲನೆ ಮಾಡುವಂತೆ ಇತರ ಪರಿಶೀಲನೆಗಳಿಗಾಗಿಯೂ ಮೂಲ ಭಾಷೆಯ ಬೈಬಲನ್ನು ನೋಡುತ್ತಾರೆ, ಆದರೆ ಈ ಪರಿಶೀಲನೆಗಳ ಸಮಯದಲ್ಲಿ ಅದನ್ನು ನೋಡುವುದಿಲ್ಲ .

ಸ್ವಾಭಾವಿಕತೆಗಾಗಿ ಪರಿಶೀಲನೆ ಮಾಡುವುದಕ್ಕೆ, ಭಾಷೆಯ ಸಮುದಾಯದ ಸದಸ್ಯರಿಗೆ ವಾಕ್ಯ ಭಾಗವನ್ನು ಕೇಳಿಸಬಹುದು ಅಥವಾ ಅದನ್ನು ನೀವು ಓದಿಸಲೂ ಬಹುದು. ನೀವು ಆ ಅನುವಾದವನ್ನು ಕೇಳಿಸುವುದಕ್ಕೆ ಮುಂಚಿತವಾಗಿ ಅಥವಾ ಓದುವುದಕ್ಕೆ ಮುಂಚಿತವಾಗಿ, ಅವರ ಭಾಷೆಯಲ್ಲಿ ಸ್ವಾಭಾವಿಕವಾಗಿರದವುಗಳನ್ನು ಅವರು ಒಂದುವೇಳೆ ಕೇಳಿಸಿಕೊಂಡರೆ ಅವರು ನಿಮ್ಮನ್ನು ನಿಲ್ಲಿಸಬೇಕೆಂದು ಕೇಳುವ ಜನರಿಗೆ ಹೇಳಿರಿ. [ಸ್ವಾಭಾವಿಕತೆಗಾಗಿ ಅನುವಾದವನ್ನು ಹೇಗೆ ಪರಿಶೀಲನೆ ಮಾಡಬೇಕು ಎನ್ನುವದರ ಕುರಿತಾಗಿ ಹೆಚ್ಚಿನ ಮಾಹಿತಿಗಾಗಿ, [ಸ್ವಾಭಾವಿಕ ಅನುವಾದ] (../natural/01.md) ನೋಡಿರಿ.] ಅವರು ನಿಮ್ಮನ್ನು ನಿಲ್ಲಿಸಿದಾಗ, ಯಾವುದು ಸ್ವಾಭಾವಿಕವಲ್ಲ ಎನ್ನುವುದನ್ನು ಅವರಿಗೆ ಕೇಳಿರಿ, ಮತ್ತು ಅವರು ಹೇಳುವ ಮಾತುಗಳನ್ನು ಗುರುತಿಸಿಕೊಂಡು, ಅವುಗಳನ್ನು ಇನ್ನೂ ಸ್ವಾಭಾವಿಕವಾಗಿ ಮಾಡಲು ಪ್ರಯತ್ನಿಸಿ ಅವರು ಕೊಡುವ ಉತ್ತರವನ್ನು ದಾಖಲು ಮಾಡಿಕೊಳ್ಳಿರಿ ಅಥವಾ ಆ ಪದ ಅಥವಾ ಮಾತನ್ನು ವಾಕ್ಯ ಮತ್ತು ಅಧ್ಯಾಯದ ಸಮೇತವಾಗಿ ಬರೆದುಕೊಳ್ಳಿರಿ. ಇದರಿಂದ ಅನುವಾದ ತಂಡವು ಅನುವಾದದಲ್ಲಿರುವ ಮಾತನ್ನು ಅಥವಾ ಪದವನ್ನು ಅವರ ವಿಧಾನದಲ್ಲಿ ಉಪಯೋಗಿಸುವುದನ್ನು ಪರಿಗಣಿಸಬೇಕು.

ಸ್ಪಷ್ಟತೆಗಾಗಿ ಅನುವಾದವನ್ನು ಪರಿಶೀಲನೆ ಮಾಡುವುದಕ್ಕೆ, ಪ್ರತಿಯೊಂದು * ಬೈಬಲ್ ಕಥೆಗಾಗಿ * ಮತ್ತು ನೀವು ಉಪಯೋಗಿಸುವಂತಹ ಪ್ರತಿಯೊಂದು ಬೈಬಲ್ ಅಧ್ಯಾಯಕ್ಕಾಗಿ ಪ್ರಶ್ನೋತ್ತರಗಳ ಪಟ್ಟಿ ಒಂದಿದೆ. ಭಾಷೆಯ ಸಮುದಾಯದವರು ಆ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರಗಳನ್ನು ಕೊಡುವಾಗ, ಆ ಅನುವಾದವು ತುಂಬಾ ಸ್ಪಷ್ಟವಾಗಿದೆಯೆಂದು ನೀವು ತಿಳಿದುಕೊಳ್ಳುವಿರಿ. (See http://ufw.io/tq/ for the questions.)

ಈ ಪ್ರಶ್ನೆಗಳನ್ನು ಉಪಯೋಗಿಸುವುದಕ್ಕೆ, ಈ ಕೆಳಗಿನ ಹಂತಗಳನ್ನು ಅನುಸರಿಸಿರಿ :

  1. ಈ ಪ್ರಶ್ನೆಗಳಿಗೆ ಉತ್ತರ ಕೊಡುವ ಭಾಷೆಯ ಅನುವಾದದ ಇಬ್ಬರು ಅಥವಾ ಮೂವರ ಸದಸ್ಯರಿಗೆ ಅನುವಾದ ವಾಕ್ಯಭಾಗವನ್ನು ಓದಿ ಕೇಳಿಸಿರಿ. ಭಾಷೆಯ ಸಮುದಾಯದ ಈ ಸದಸ್ಯರು ಮುಂಚಿತವಾಗಿ ಅನುವಾದ ಮಾಡುವುದರಲ್ಲಿ ಭಾಗವಹಿಸಿಬಾರದು. ಮತ್ತೊಂದು ಮಾತಿನಲ್ಲಿ ಹೇಳಬೇಕಾದರೆ, ಪ್ರಶ್ನೆಗಳನ್ನು ಕೇಳಿಸಿಕೊಂಡ ಸಮುದಾಯದ ಸದಸ್ಯರು ಮುಂಚಿತವಾಗಿ ಬೈಬಲ್ ಜ್ಞಾನವನ್ನು ಪಡೆದಿರುವವರಾಗಿರಬಾರದು ಅಥವಾ ಅನುವಾದದ ಕೆಲಸದಲ್ಲಿದ್ದು ಪ್ರಶ್ನೆಗಳಿಗೆ ಉತ್ತರಗಳನ್ನು ಮುಂಚಿತವಾಗಿ ತಿಳಿದುಕೊಂಡಿರುವವರಾಗಿರಬಾರದು. ಬೈಬಲ್ ವಾಕ್ಯಭಾಗವನ್ನು ಅಥವಾ ಬೈಬಲ್ ಕಥೆಯ ಅನುವಾದವನ್ನು ಓದುವುದರಿಂದ ಅಥವಾ ಕೇಳುವುದರಿಂದ ಮಾತ್ರವೇ ಅವರು ಪ್ರಶ್ನೆಗಳಿಗೆ ಉತ್ತರಗಳನ್ನು ಕೊಡಬೇಕೆಂದು ನಮ್ಮ ಬಯಕೆ. ಹೀಗೆ ಮಾಡುವುದರಿಂದಲೇ ನಾವು ಅನುವಾದವು ಸ್ಪಷ್ಟವಾಗಿದೆಯೋ ಇಲ್ಲವೋ ಎಂದು ತಿಳಿದುಕೊಳ್ಳುತ್ತೇವೆ. ಈ ಕಾರಣಕ್ಕಾಗಿಯೇ, ಸಮುದಾಯದ ಸದಸ್ಯರು ಈ ಪ್ರಶ್ನೆಗಳಿಗೆ ಉತ್ತರಗಳನ್ನು ಕೊಡುವಾಗ ಸತ್ಯವೇದವನ್ನು ನೋಡಬಾರದು.

  2. ವಾಕ್ಯಭಾಗಕ್ಕಾಗಿ ಕೆಲವೊಂದು ಪ್ರಶ್ನೆಗಳನ್ನು ಸಮುದಾಯದ ಸದಸ್ಯರಿಗೆ ಕೇಳಿರಿ. ಒಂದುಬಾರಿ ಒಂದು ಪ್ರಶ್ನೆಯನ್ನು ಕೇಳಿರಿ. ಸಮುದಾಯದ ಸದಸ್ಯರು ಅನುವಾದವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಿದ್ದರೆ ಒಂದು ವಾಕ್ಯಭಾಗಕ್ಕಾಗಿ ಅಥವಾ ಒಂದೊಂದು ಕಥೆಗಾಗಿ ಎಲ್ಲಾ ಪ್ರಶ್ನೆಗಳನ್ನು ಉಪಯೋಗಿಸಬೇಕಾದ ಅವಶ್ಯಕತೆಯಿಲ್ಲ.

  3. ಪ್ರತಿಯೊಂದು ಪ್ರಶ್ನೆಯನ್ನು ಕೇಳಿದನಂತರ, ಭಾಷೆಯ ಸಮುದಾಯದ ಸದಸ್ಯನು ಉತ್ತರ ಕೊಡುವನು. ಆ ವ್ಯಕ್ತಿ ಕೇವಲ “ಹೌದು” ಅಥವಾ “ಇಲ್ಲ” ಎಂದು ಉತ್ತರ ಕೊಡುವುದಾದರೆ, ಪ್ರಶ್ನೆ ಕೇಳುವವರು ಇನ್ನೊಂದು ಪ್ರಶ್ನೆಯನ್ನು ಕೇಳಬೇಕು, ಇದರಿಂದ ಆತನು ಅನುವಾದವನ್ನು ಚೆನ್ನಾಗಿ ಮಾಡಿದ್ದಾರೆಂದು ನಿಶ್ಚಯಿಸಿಕೊಳ್ಳುವನು. ಕೇಳಬೇಕಾದ ಇನ್ನೊಂದು ಪ್ರಶ್ನೆ ಹೇಗಿರಬೇಕೆಂದರೆ, “ಅದರ ಕುರಿತಾಗಿ ನಿಮಗೆ ಹೇಗೆ ಗೊತ್ತು?” ಅಥವಾ “ಅನುವಾದದಲ್ಲಿನ ಯಾವ ಭಾಗವು ಅದನ್ನು ನಿಮಗೆ ಹೇಳುತ್ತದೆ?” ಎಂದು ಅವರಿಗೆ ಪ್ರಶ್ನಿಸಬೇಕು.

  4. ಆ ವ್ಯಕ್ತಿ ಕೊಡುವ ಉತ್ತರವನ್ನು ಬೈಬಲ್ ವಾಕ್ಯ ಮತ್ತು ಅಧ್ಯಾಯದೊಂದಿಗೆ ಬರೆದಿಟ್ಟುಕೊಳ್ಳಿರಿ ಅಥವಾ ನೀವು ಮಾತನಾಡುವ “ಓಪನ್ ಬೈಬಲ್ ಕಥೆಗಳು” ಸಂಖ್ಯೆಯನ್ನು ಮತ್ತು ಕಥೆಯನ್ನು ಬರೆದಿಟ್ಟುಕೊಳ್ಳಿರಿ ಅಥವಾ ಅದನ್ನು ರಿಕಾರ್ಡ್ ಮಾಡಿಟ್ಟುಕೊಳ್ಳಿರಿ. ಪ್ರಶ್ನೆಗಾಗಿ ಕೊಡಲ್ಪಟ್ಟಿರುವ ಉತ್ತರದೊಂದಿಗೆ ಆ ವ್ಯಕ್ತಿ ಹೇಳುವಂಥ ಉತ್ತರವು ಸರಿಯಾಗಿದ್ದಾರೆ, ಆ ವಿಷಯದಲ್ಲಿ ಅನುವಾದವು ಸರಿಯಾದ ಮಾಹಿತಿಯನ್ನು ಹೊಂದಿರುತ್ತದೆಯೆಂದು ಅರ್ಥ. ಸರಿಯಾದ ಉತ್ತರವಾಗಿ ಕೊಡಲ್ಪಟ್ಟಿರುವ ಉತ್ತರದೊಂದಿಗೆ ಆ ವ್ಯಕ್ತಿ ಹೇಳುವ ಉತ್ತರವು ಸರಿಯಾಗಿ ಇಲ್ಲದಿದ್ದಲ್ಲಿ, ಅದು ಪ್ರಾಥಮಿಕವಾಗಿ ಒಂದೇ ಮಾಹಿತಿಯನ್ನು ಕೊಡಬೇಕಾಗಿರುತ್ತದೆ. ಕೆಲವೊಂದುಬಾರಿ ಕೊಡಲ್ಪಟ್ಟಿರುವ ಉತ್ತರವು ದೊಡ್ಡದಾಗಿರಬಹುದು . ಆ ವ್ಯಕ್ತಿ ಕೊಡುವ ಉತ್ತರವು ಕೊಡಲ್ಪಟ್ಟಿರುವ ಉತ್ತರದಲ್ಲಿ ಒಂದು ಭಾಗವನ್ನೇ ಹೇಳಿರುವದಾದರೆ, ಅದು ಕೂಡ ಸರಿಯಾದ ಉತ್ತರವೇ.

  5. ಕೊಡಲ್ಪಟ್ಟಿರುವ ಉತ್ತರಗಿಂತ ಆ ವ್ಯಕ್ತಿ ಕೊಡುವ ಉತ್ತರವು ಬೇರೆಯಾಗಿದ್ದಾರೆ ಅಥವಾ ವಿಭಿನ್ನವಾಗಿದ್ದರೆ, ಅಥವಾ ಆ ವ್ಯಕ್ತಿ ಪ್ರಶ್ನೆಗೆ ಉತ್ತರವನ್ನು ಕೊಡದೇ ಇದ್ದರೆ, ಆ ಮಾಹಿತಿಯನ್ನು ಸರಿಯಾಗಿ ತಿದ್ದುಪಡಿಸುವುದಕ್ಕೆ ಅನುವಾದ ತಂಡವು ಅನುವಾದದ ಭಾಗವನ್ನು ತಿರುಗಿ ಪರಿಶೀಲನೆ ಮಾಡಬೇಕು. ಇದರಿಂದ ಮಾಹಿತಿಯು ಇನ್ನೂ ಹೆಚ್ಚಾಗಿ ಸ್ಪಷ್ಟವಾಗಿ ಮಾಡುವುದಕ್ಕೆ ಸಾಧ್ಯವಾಗುವುದು.

  6. ಭಾಷೆಯ ಸಮುದಾಯದಲ್ಲಿರುವ ಪ್ರತಿಯೊಬ್ಬರೊಂದಿಗೆ, ಸಾಧ್ಯವಾದರೆ ಯೌವನಸ್ಥರೊಂದಿಗೆ, ಸ್ತ್ರೀ ಪುರುಷರೊಂದಿಗೆ ಮತ್ತು ವೃದ್ಧರೊಂದಿಗೆ ಮತ್ತು ಭಾಷೆಯ ಸಮುದಾಯದ ವಿವಿಧ ಪ್ರಾಂತ್ಯಗಳೊಂದಿಗೆ ಅದೇ ಪ್ರಶ್ನೆಗಳನ್ನು ಕೇಳುವುದನ್ನು ಮರೆಯಬೇಡಿರಿ, ಅದೇ ಪ್ರಶ್ನೆಗಳಿಗೆ ಅನೇಕಮಂದಿ ಉತ್ತರವನ್ನು ಕೊಡುವುದಕ್ಕೆ ಕಷ್ಟಪಡುತ್ತಿದ್ದರೆ, ಬಹುಶಃ ಅನುವಾದದಆ ವಾಕ್ಯಭಾಗದಲ್ಲಿ ಸಮಸ್ಯೆ ಇದ್ದಿರಬಹುದು. ಆ ಜನರಿಗೆ ಕಷ್ಟವಾಗಿರುವ ಅಥವಾ ಸರಿಯಾಗಿ ಅರ್ಥವಾಗದಿರುವ ಭಾಗಗಳನ್ನು ಗುರುತಿಸಿಕೊಂಡಿರಿ, ಇದರಿಂದ ಅನುವಾದ ತಂಡದವರು ಆ ಭಾಗವನ್ನು ಸರಿಯಾಗಿ ತಿದ್ದುಪಡಿ ಮಾಡಿ, ಅದನ್ನು ಇನ್ನೂ ಹೆಚ್ಚಾದ ಸ್ಪಷ್ಟತೆಗೆ ತರುವರು.

  7. ವಾಕ್ಯಭಾಗದ ಅನುವಾದವನ್ನು ಅನುವಾದ ತಂಡವು ತಿದ್ದುಪಡಿಸಿದನಂತರ, ಆ ವಾಕ್ಯಭಾಗಕ್ಕಾಗಿ ಅದೇ ಪ್ರಶ್ನೆಗಳನ್ನು ಇತರ ಸದಸ್ಯರೊಂದಿಗೆ ಕೇಳಿರಿ. ಅಂದರೆ ಮುಂಚಿತವಾಗಿ ಆ ವಾಕ್ಯಭಾಗದ ಪರಿಶೀಲನೆಯಲ್ಲಿ ಭಾಗವಹಿಸದವರೊಂದಿಗೆ ಆ ಪ್ರಶ್ನೆಗಳನ್ನು ಕೇಳಿರಿ. ಅವರು ಆ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಕೊಡುವುದಾದರೆ, ಆ ವಾಕ್ಯಭಾಗದ ಅನುವಾದವು ಈಗ ಸರಿಯಾಗಿದೆ ಎಂದರ್ಥ.

  8. ಭಾಷೆಯ ಸದಸ್ಯರು ಆ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ಕೊಡುವವರೆಗೂ, ಅನುವಾದವು ಸರಿಯಾದ ಮಾಹಿತಿಯನ್ನು ಸ್ಪಷ್ಟವಾಗಿ ಹೇಳುತ್ತಿದೆಯೆಂದು ತೋರಿಸುವವರೆಗೂ ಬೈಬಲ್ ಅಧ್ಯಾಯವನ್ನು ಅಥವಾ ಬೈಬಲ್ ಪ್ರತಿಯೊಂದು ಕಥೆಯನ್ನು ಈ ವಿಧಾನದೊಂದಿಗೆ ಪುನರಾವರ್ತನೆ ಮಾಡಿರಿ. ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ಕೊಡುವುದಕ್ಕೆ ಮುಂಚಿತವಾಗಿ ಅನುವಾದವನ್ನು ಭಾಷೆಯ ಸಮುದಾಯದ ಸದಸ್ಯರು ಕೇಳದೆ ಇರುವಾಗ ಸಭೆಯ ನಾಯಕರ ನಿಖರತೆಯ ಪರಿಶೀಲನೆಗೆ ಅನುವಾದವು ಸಿದ್ಧವಾಗಿರುತ್ತದೆ.

  9. ಸಮುದಾಯ ಮೌಲ್ಯಮಾಪನ ಪುಟಕ್ಕೆ ಹೋಗಿರಿ ಮತ್ತು ಅಲ್ಲಿರುವ ಪ್ರಶ್ನೆಗಳಿಗೆ ಉತ್ತರಗಳನ್ನು ಕೊಡಿರಿ. ([ಭಾಷೆಯ ಸಮುದಾಯ ಮೌಲ್ಯಮಾಪನ ಪ್ರಶ್ನೆಗಳು] (../community-evaluation/01.md)) ನೋಡಿರಿ.)

ಸ್ಪಷ್ಟವಾದ ಅನುವಾದವನ್ನು ಮಾಡುವುದರ ಕುರಿತಾಗಿ ಇನ್ನೂ ಹೆಚ್ಚಾದ ಮಾಹಿತಿಗಾಗಿ, [ಸ್ಪಷ್ಟತೆ] ಯನ್ನು ನೋಡಿರಿ (../clear/01.md). ಸಮುದಾಯದೊಂದಿಗೆ ಅನುವಾದವನ್ನು ಪರಿಶೀಲನೆ ಮಾಡುವುದಕ್ಕೆ ನೀವು ಉಪಯೋಗಿಸುವ ಅನುವಾದ ಪ್ರಶ್ನೆಗಳಿಗಿಂತ ಇತರ ವಿಧಾನಗಳು ಇವೆ. ಇನ್ನಿತರ ವಿಧಾನಗಳಿಗೋಸ್ಕರ, [ಇತರ ವಿಧಾನಗಳು] ನೋಡಿರಿ (../other-methods/01.md).