translationCore-Create-BCS_.../translate/figs-litany/01.md

14 KiB
Raw Blame History

ವಿವರಣೆ

ಲಿಟನಿ ಎನ್ನುವುದು ಮಾತಿನ ಒಂದು ಆಲಂಕಾರಿಕ ರೂಪವಾಗಿದೆ ಇದರಲ್ಲಿ ಒಂದು ವಿಷಯದ ವಿವಿಧ ಘಟಕಗಳನ್ನು ಒಂದೇ ರೀತಿಯ ಹೇಳಿಕೆಗಳ ಸರಣಿಯಲ್ಲಿ ಪಟ್ಟಿ ಮಾಡಲಾಗಿದೆ. ಭಾಷನಗಾರನು ತಾನು ಹೇಳುತ್ತಿರುವುದನ್ನು ಸಮಗ್ರವಾಗಿ ಮತ್ತು ವಿನಾಯಿತಿಗಳಿಲ್ಲದೆ ಅರ್ಥೈಸಿಕೊಳ್ಳಬೇಕು ಎಂದು ಸೂಚಿಸಲು ಇದನ್ನು ಮಾಡುತ್ತಾರೆ.

ಕಾರಣ ಇದು ಭಾಷಾಂತರ ಸಮಸ್ಯೆಯಾಗಿದೆ

ಅನೇಕ ಭಾಷೆಗಳು ಲಿಟನಿಗಳನ್ನು ಬಳಸುವುದಿಲ್ಲ ಮತ್ತು ಓದುಗರು ಅವರಿಂದ ಗೊಂದಲಕ್ಕೊಳಗಾಗಬಹುದು. ಭಾಷಣಗಾರನು ಅದೇ ವಿಷಯವನ್ನು ಮತ್ತೆ ಮತ್ತೆ ಹೇಳುತ್ತಿರುವುದು ಏಕೆ ಎಂದು ಅವರು ಆಶ್ಚರ್ಯಪಡಬಹುದು.

ಸತ್ಯವೇದದಿಂದ ಉದಾಹರಣೆಗಳು

ಅವರು ಪಾತಾಳವನ್ನು ಅಗೆದರೂ, ಅಲ್ಲಿ ನನ್ನ ಕೈ ಅವರನ್ನು ಹಿಡಿಯುತ್ತದೆ. ಅವರು ಸ್ವರ್ಗಕ್ಕೆ ಏರಿದರೂ, ನಾನು ಅವರನ್ನು ಅಲ್ಲಿಗೆ ಇಳಿಸುತ್ತೇನೆ. ಅವರು ಕರ್ಮೆಲಿನ ಮೇಲ್ಭಾಗದಲ್ಲಿ ಅಡಗಿಕೊಂಡರೂ, ನಾನು ಅವರನ್ನು ಹುಡುಕಿ ತೆಗೆದುಕೊಂಡು ಹೋಗುವೆನು. ಅವರು ಸಮುದ್ರದ ತಳದಲ್ಲಿ ನನ್ನ ಕಣ್ಣಿಗೆ ಕಾಣದಂತೆ ಮರೆಯಾಗಿದ್ದರೂ, ಅಲ್ಲಿ ನಾನು ಸರ್ಪಕ್ಕೆ ಆದೇಶವನ್ನು ನೀಡುತ್ತೇನೆ, ಮತ್ತು ಅದು ಅವರನ್ನು ಕಚ್ಚುತ್ತದೆ. ಅವರು ತಮ್ಮ ಶತ್ರುಗಳಿಂದ ಸೆರೆಗೆ ಹೋದರೂ, ಅಲ್ಲಿಯೂ ಅವರ ಮುಂದೆ ನಾನು ಖಡ್ಗಕ್ಕೆ ಅಪ್ಪಣೆ ಕೊಡುತ್ತೇನೆ, ಮತ್ತು ಅದು ಅವರನ್ನು ಕೊಲ್ಲುತ್ತದೆ. (ಆಮೋಸ 9:2-4 ULT)

ಈ ಭಾಗದಲ್ಲಿ ಯೆಹೋವನು ಇಸ್ರಾಯೇಲ್ಯರನ್ನು ಶಿಕ್ಷಿಸಿದಾಗ ಅವರಲ್ಲಿ ಯಾರೂ ಸಹ ತಪ್ಪಿಸಿಕೊಳ್ಳುವುದಿಲ್ಲ ಎಂದು ಹೇಳುತ್ತಿದ್ದಾನೆ.

ಆದರೆ ನೀನು ನಿನ್ನ ಸಹೋದರನ ದಿನ ಅವನ ದುರದೃಷ್ಟದ ದಿನ ನೋಡಬಾರದಿತ್ತು. ಮತ್ತು ಯೆಹೂದದ ಮಕ್ಕಳು ನಾಶವಾಗುವ ದಿನದಲ್ಲಿ ನೀವು ಅವರ ಬಗ್ಗೆ ಸಂತೋಷಪಡಬಾರದು. ಮತ್ತು ಸಂಕಟದ ದಿನದಲ್ಲಿ ನೀವು ನಿಮ್ಮ ಬಾಯಿಯನ್ನು ದೊಡ್ಡದಾಗಿ ಮಾಡಬಾರದು. ನನ್ನ ಜನರ ಆಪತ್ಕಾಲದಲ್ಲಿ ನೀವು ಅವರ ದ್ವಾರವನ್ನು ಪ್ರವೇಶಿಸಬಾರದು. ಹೌದು ನೀನೆ! ಅವನ ಆಪತ್ತಿನ ದಿನದಲ್ಲಿ ನೀವು ಅವನ ದುಷ್ಟತನವನ್ನು ನೋಡಬಾರದು. ಮತ್ತು ನೀವು ಸ್ತ್ರೀಯರು ಅವನ ವಿಪತ್ತಿನ ದಿನದಲ್ಲಿ ಅವನ ಸಂಪತ್ತನ್ನು ಲೂಟಿ ಮಾಡಬಾರದು. ಮತ್ತು ಅವನ ಪರಾರಿಯಾದವರನ್ನು ಕತ್ತರಿಸಲು ನೀವು ಅಡ್ಡಹಾದಿಯಲ್ಲಿ ನಿಲ್ಲಬಾರದು. ಮತ್ತು ಸಂಕಟದ ದಿನದಲ್ಲಿ ಅವನ ಬದುಕುಳಿದವರನ್ನು ನೀವು ಒಪ್ಪಿಸಬಾರದು. (ಓಬದ್ಯ 1:12-14)

ಈ ವಾಕ್ಯಭಾಗದಲ್ಲಿ ಬಾಬಿಲೋನಿಯನ್ನರು ಯೆಹೂದವನ್ನು ಸೆರೆಹಿಡಿಯುವಾಗ ಎದೋಮಿನ ಜನರು ಯೆಹೂದ ಜನರಿಗೆ ಸಹಾಯ ಮಾಡಬೇಕೆಂದು ಯೆಹೋವನು ಹೇಳುತ್ತಾನೆ,

ಭಾಷಾಂತರದ ತಂತ್ರಗಳು

ಲಿಟನಿಯು ULT ನಲ್ಲಿರುವಂತೆ ಅರ್ಥವಾದರೆ, ಲಿಟನಿಯನ್ನು ಹಾಗೆಯೇ ಅನುವಾದಿಸಿ. ಇದು ಅರ್ಥವಾಗದಿದ್ದರೆ, ಕೆಳಗಿನ ಒಂದು ಅಥವಾ ಹೆಚ್ಚಿನ ತಂತ್ರಗಳನ್ನು ಅನುಸರಿಸಿ.

(1) ಸಾಮಾನ್ಯವಾಗಿ ಸತ್ಯವೇದದಲ್ಲಿ ಲಿಟನಿಯ ಪ್ರಾರಂಭದಲ್ಲಿ ಅಥವಾ ಕೊನೆಯಲ್ಲಿ ಅದರ ಒಟ್ಟಾರೆ ಅರ್ಥವನ್ನು ಸಾರುವ ಸಾಮಾನ್ಯ ಹೇಳಿಕೆ ಇರುತ್ತದೆ. ಲಿಟನಿಯ ಅರ್ಥವನ್ನು ನೀಡುವ ಸಾರಾಂಶ ಹೇಳಿಕೆ ಎಂದು ತೋರಿಸುವ ರೀತಿಯಲ್ಲಿ ನೀವು ಆ ಹೇಳಿಕೆಯನ್ನು ಆಕೃತಿಯನ್ನು ಬಳಸಿ ಮಾಡಬಹುದು.

(2) ನೀವು ಲಿಟನಿಯ ಪ್ರತಿಯೊಂದು ವಾಕ್ಯವನ್ನು ಪ್ರತ್ಯೇಕ ಸಾಲಿನಲ್ಲಿ ಹಾಕಬಹುದು. ಅಲ್ಲದೆ, ಲಿಟನಿಯಲ್ಲಿನ ಪ್ರತಿಯೊಂದು ವಾಕ್ಯವು ಎರಡು ಭಾಗಗಳನ್ನು ಹೊಂದಿದ್ದರೆ, ನೀವು ಲಿಟನಿಯನ್ನು ಆಕೃತಿಯನ್ನು ಬಳಸಿ ಮಾಡಬಹುದು ಇದರಿಂದ ಪ್ರತಿ ವಾಕ್ಯದ ಸಮಾನ ಭಾಗಗಳು ಸಾಲಿನಲ್ಲಿರುತ್ತವೆ. ಪ್ರತಿ ವಾಕ್ಯವು ಒಂದೇ ಅರ್ಥವನ್ನು ಬಲಪಡಿಸುತ್ತದೆ ಎಂದು ತೋರಿಸುವ ಈ ಅಥವಾ ಯಾವುದೇ ರೀತಿಯ ಆಕೃತಿಯನ್ನು ಬಳಸಿ.

(3) ನೀವು ವಾಕ್ಯಗಳ ಪ್ರಾರಂಭದಲ್ಲಿ "ಮತ್ತು," "ಆದರೆ," ಮತ್ತು "ಅಥವಾ" ನಂತಹ ಪದಗಳನ್ನು ತೆಗೆದುಹಾಕಬಹುದು ಇದರಿಂದ ಲಿಟನಿಯ ಘಟಕ ಭಾಗಗಳನ್ನು ಸಾಲಾಗಿ ಪಟ್ಟಿ ಮಾಡಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ.

ಭಾಷಾಂತರದ ತಂತ್ರಗಳ ಉದಾಹರಣೆಗಳು ಅನ್ವಯಿಸಲಾಗಿದೆ

(1) (3) ಜೊತೆಗೆ ಸಂಯೋಜಿಸಲಾಗಿದೆ:

ಸಾಮಾನ್ಯವಾಗಿ ಸತ್ಯವೇದದಲ್ಲಿ ಲಿಟನಿಯ ಪ್ರಾರಂಭದಲ್ಲಿ ಅಥವಾ ಕೊನೆಯಲ್ಲಿ ಅದರ ಒಟ್ಟಾರೆ ಅರ್ಥವನ್ನು ಸಾರುವ ಸಾಮಾನ್ಯ ಹೇಳಿಕೆ ಇರುತ್ತದೆ. ಲಿಟನಿಯ ಅರ್ಥವನ್ನು ನೀಡುವ ಸಾರಾಂಶ ಹೇಳಿಕೆ ಎಂದು ತೋರಿಸುವ ರೀತಿಯಲ್ಲಿ ನೀವು ಆ ಹೇಳಿಕೆಯನ್ನು ಆಕೃತಿಯನ್ನು ಬಳಸಿ ಮಾಡಬಹುದು;

ವಾಕ್ಯಗಳ ಪ್ರಾರಂಭದಲ್ಲಿ "ಮತ್ತು," "ಆದರೆ," ಮತ್ತು "ಅಥವಾ" ನಂತಹ ಪದಗಳನ್ನು ನೀವು ತೆಗೆದುಹಾಕಬಹುದು ಇದರಿಂದ ಲಿಟನಿಯ ಘಟಕ ಭಾಗಗಳನ್ನು ಸತತವಾಗಿ ಪಟ್ಟಿ ಮಾಡಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ.

ಅಪರಿಚಿತರು ಇಸ್ರಾಯೇಲ್ಯರ ಸಂಪತ್ತನ್ನು ಕೊಂಡೊಯ್ದಾಗ ಅವರಿಗೆ ಸಹಾಯ ಮಾಡಲು ನೀವು ಏನನ್ನೂ ಮಾಡಲಿಲ್ಲ. ಅವರು ಯೆಹೂದದ ಎಲ್ಲಾ ನಗರಗಳನ್ನು ವಶಪಡಿಸಿಕೊಂಡರು ಮತ್ತು ಅವರು ಯೆರೂಸಲೇಮನ್ನು ಲೂಟಿ ಮಾಡಿದರು. ಮತ್ತು ನೀವು ಆ ವಿದೇಶಿಯರಂತೆ ಕೆಟ್ಟವರಾಗಿದ್ದೀರಿ, ಏಕೆಂದರೆ ನೀವು ಸಹಾಯ ಮಾಡಲು ಏನನ್ನೂ ಮಾಡಲಿಲ್ಲ:

ನಿಮ್ಮ ಸಹೋದರನ ದಿನ, ಅವನ ದುರದೃಷ್ಟದ ದಿನವನ್ನು ನೀವು ನೋಡಬಾರದು. ಯೆಹೂದದ ಮಕ್ಕಳು ನಾಶವಾಗುವ ದಿನದಲ್ಲಿ ನೀವು ಅವರ ವಿಷಯದಲ್ಲಿ ಸಂತೋಷಪಡಬಾರದು. ಸಂಕಷ್ಟದ ದಿನದಲ್ಲಿ ನಿಮ್ಮ ಬಾಯಿಯನ್ನು ದೊಡ್ಡದಾಗಿ ಮಾಡಬಾರದಿತ್ತು. ನನ್ನ ಜನರ ಆಪತ್ಕಾಲದಲ್ಲಿ ನೀವು ಅವರ ದ್ವಾರವನ್ನು ಪ್ರವೇಶಿಸಬಾರದು. ಹೌದು ನೀನೆ! ಅವನ ಆಪತ್ತಿನ ದಿನದಲ್ಲಿ ನೀವು ಅವನ ದುಷ್ಟತನವನ್ನು ನೋಡಬಾರದು. ಆತನ ಆಪತ್ಕಾಲದಲ್ಲಿ ನೀವು ಸ್ತ್ರೀಯರು ಆತನ ಸಂಪತ್ತನ್ನು ಲೂಟಿ ಮಾಡಬಾರದಿತ್ತು. ಅವನ ಪರಾರಿಯಾದವರನ್ನು ಕಡಿಯಲು ನೀವು ಅಡ್ಡಹಾದಿಯಲ್ಲಿ ನಿಲ್ಲಬಾರದಿತ್ತು. ಸಂಕಟದ ದಿನದಲ್ಲಿ ಅವನ ಬದುಕುಳಿದವರನ್ನು ನೀವು ಒಪ್ಪಿಸಬಾರದು. (ಓಬದ್ಯ 1:11-14)

ಮೇಲಿನ ಉದಾಹರಣೆಯಲ್ಲಿ, 11 ನೇ ವಾಕ್ಯವು 12-14 ವಾಕ್ಯಗಳಲ್ಲಿ ಅನುಸರಿಸುವ ಲಿಟನಿಗೆ ಸಾರಾಂಶ ಮತ್ತು ಅರ್ಥವನ್ನು ಒದಗಿಸುತ್ತದೆ.

(1) (2) ಜೊತೆಗೆ ಸಂಯೋಜಿಸಲಾಗಿದೆ:

ಸಾಮಾನ್ಯವಾಗಿ ಸತ್ಯವೇದದಲ್ಲಿ ಲಿಟನಿಯ ಪ್ರಾರಂಭದಲ್ಲಿ ಅಥವಾ ಕೊನೆಯಲ್ಲಿ ಅದರ ಒಟ್ಟಾರೆ ಅರ್ಥವನ್ನು ಸಾರುವ ಸಾಮಾನ್ಯ ಹೇಳಿಕೆ ಇರುತ್ತದೆ. ಲಿಟನಿಯ ಅರ್ಥವನ್ನು ನೀಡುವ ಸಾರಾಂಶ ಹೇಳಿಕೆ ಎಂದು ತೋರಿಸುವ ರೀತಿಯಲ್ಲಿ ನೀವು ಆ ಹೇಳಿಕೆಯನ್ನು ಆಕೃತಿಯನ್ನು ಬಳಸಿ ಮಾಡಬಹುದು;

ನೀವು ಲಿಟನಿಯ ಪ್ರತಿಯೊಂದು ವಾಕ್ಯವನ್ನು ಪ್ರತ್ಯೇಕ ಸಾಲಿನಲ್ಲಿ ಹಾಕಬಹುದು. ಅಲ್ಲದೆ, ಲಿಟನಿಯಲ್ಲಿನ ಪ್ರತಿಯೊಂದು ವಾಕ್ಯವು ಎರಡು ಭಾಗಗಳನ್ನು ಹೊಂದಿದ್ದರೆ, ನೀವು ಲಿಟನಿಯನ್ನು ಆಕೃತಿಯನ್ನು ಬಳಸಿ ಮಾಡಬಹುದು ಇದರಿಂದ ಪ್ರತಿ ವಾಕ್ಯದ ಸಮಾನ ಭಾಗಗಳು ಸಾಲಿನಲ್ಲಿರುತ್ತವೆ. ಪ್ರತಿ ವಾಕ್ಯವು ಒಂದೇ ಅರ್ಥವನ್ನು ಬಲಪಡಿಸುತ್ತದೆ ಎಂದು ತೋರಿಸುವ ಈ ಅಥವಾ ಯಾವುದೇ ರೀತಿಯ ಆಕೃತಿಯನ್ನು ಬಳಸಿ.

ಅವರಲ್ಲಿ ಒಬ್ಬರೂ ದೂರವಾಗುವುದಿಲ್ಲ, ಅವರಲ್ಲಿ ಒಬ್ಬರೂ ತಪ್ಪಿಸಿಕೊಳ್ಳುವುದಿಲ್ಲ:

ಅವರು ಪಾತಾಳವನ್ನು ಅಗೆದರೂ, ಅಲ್ಲಿ ನನ್ನ ಕೈ ಅವರನ್ನು ಹಿಡಿಯುತ್ತದೆ.

ಅವರು ಸ್ವರ್ಗಕ್ಕೆ ಏರಿದರೂ, ನಾನು ಅವರನ್ನು ಅಲ್ಲಿಗೆ ಇಳಿಸುತ್ತೇನೆ.

ಅವರು ಕರ್ಮೆಲ್‌ನ ಮೇಲ್ಭಾಗದಲ್ಲಿ ಅಡಗಿಕೊಂಡರೂ, ನಾನು ಅವರನ್ನು ಹುಡುಕಿ ತೆಗೆದುಕೊಂಡು ಹೋಗುವೆನು.

ಅವರು ಸಮುದ್ರದ ತಳದಲ್ಲಿ ನನ್ನ ಕಣ್ಣಿಗೆ ಕಾಣದಂತೆ ಮರೆಯಾಗಿದ್ದರೂ, ಅಲ್ಲಿ ನಾನು ಸರ್ಪಕ್ಕೆ ಆದೇಶವನ್ನು ನೀಡುತ್ತೇನೆ ಮತ್ತು ಅದು ಅವರನ್ನು ಕಚ್ಚುತ್ತದೆ.

ಅವರು ತಮ್ಮ ಶತ್ರುಗಳಿಂದ ಸೆರೆಗೆ ಹೋದರೂ, ಅವರ ಮುಂದೆ ನಾನು ಖಡ್ಗಕ್ಕೆ ಅಪ್ಪಣೆ ಕೊಡುತ್ತೇನೆ ಮತ್ತು ಅದು ಅವರನ್ನು ಕೊಲ್ಲುತ್ತದೆ. (ಅಮೋಸ 9:1b4 ULT)

ಮೇಲಿನ ಉದಾಹರಣೆಯಲ್ಲಿ, ಲಿಟನಿಯ ಹಿಂದಿನ ವಾಕ್ಯವು ಅದರ ಒಟ್ಟಾರೆ ಅರ್ಥವನ್ನು ವಿವರಿಸುತ್ತದೆ. ಆ ವಾಕ್ಯವನ್ನು ಪೀಠಿಕೆಯಾಗಿ ಇಡಬಹುದು. ಪ್ರತಿ ವಾಕ್ಯದ ದ್ವಿತೀಯಾರ್ಧವನ್ನು ಮೇಲಿನಂತೆ ಅವರೋಹಣ ಮೆಟ್ಟಿಲು ಮಾದರಿಯಲ್ಲಿ ಆಕೃತಿಯನ್ನು ಬಳಸಿ ಮಾಡಬಹುದು, ಅಥವಾ ಪ್ರತಿ ವಾಕ್ಯದ ಮೊದಲಾರ್ಧದಂತೆ ಸಮವಾಗಿ ಸಾಲಿನಲ್ಲಿರಬಹುದು, ಅಥವಾ ಇನ್ನೊಂದು ರೀತಿಯಲ್ಲಿ. ಈ ವಾಕ್ಯಗಳೆಲ್ಲವೂ ಒಂದೇ ಸತ್ಯವನ್ನು ತಿಳಿಸುತ್ತಿವೆ, ದೇವರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತೋರಿಸುವ ಯಾವುದೇ ಸ್ವರೂಪವನ್ನು ಉತ್ತಮವಾಗಿ ಬಳಸಿ.