translationCore-Create-BCS_.../translate/writing-pronouns/01.md

16 KiB

ವಿವರಣೆ

ನಾವು ಮಾತನಾಡುವಾಗ ಅಥವಾ ಬರೆಯುವಾಗ ಜನರನ್ನು ಅಥವಾ ವಸ್ತುಗಳ ಬಗ್ಗೆ ಅವರ / ಅವುಗಳ ಹೆಸರನ್ನು ಪದೇಪದೇ ಉಚ್ಛರಿಸುವ ಬದಲು ಸರ್ವನಾಮಗಳನ್ನು ಬಳಸುತ್ತೇವೆ. ಸಾಮಾನ್ಯವಾಗಿ ನಾವು ಮೊದಲ ಬಾರಿ ಯಾರ ಬಗ್ಗೆ / ಯಾವುದರ ಬಗ್ಗೆ ಹೇಳುತ್ತೇವೋ ಆಗ ಅದನ್ನು ವಿವರಿಸಲು ನುಡಿಗುಚ್ಛವನ್ನು ಅಥವಾ ಹೆಸರನ್ನು ಬಳಸುತ್ತೇವೆ. ಮುಂದಿನಸಲ ನಾವು ಆ ವ್ಯಕ್ತಿಯ ಬಗ್ಗೆ ಹೇಳುವಾಗ ಅವನ ಹೆಸರು ಅಥವಾ ಸರಳ ನಾಮಪದ ಬಳಸುತ್ತೇವೆ. ಆ ನಂತರ ನಾವು ಅವನ ಬಗ್ಗೆ ಉದ್ದೇಶಿಸಿ ಮಾತನಾಡುವಾಗ ಸರ್ವನಾಮಗಳನ್ನು ಬಳಸುತ್ತೇವೆ. ನಮ್ಮ ಓದುಗರು ನಾವು ಯಾರನ್ನು ಉದ್ದೇಶಿಸಿ ಹೇಳುತ್ತಿದ್ದೇವೆ ಯಾರ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ಅರ್ಥಮಾಡಿಕೊಳ್ಳಲು ಸಮರ್ಥರಾಗಿರುವವರೆಗೆ. ಇವುಗಳನ್ನು ಬಳಸುತ್ತೇವೆ.

ಪರಿಸಾಯರಲ್ಲಿ ಯೆಹೂದ್ಯರ ಹಿರಿಯವನಾದ ನಿಕೋದೇಮನೆಂಬ ಒಬ್ಬ ಮನುಷ್ಯನಿದ್ದನು ಅವನುರಾತ್ರಿಯಲ್ಲಿ ಯೇಸುವಿನ ಬಳಿ ಬಂದನು. ಯೇಸು ಅವನಿಗೆ ಉತ್ತರಿಸಿದನು (ಯೋಹಾನ 3:1-3 ULB)

ಯೋಹಾನ 3,ರಲ್ಲಿ ನಿಕೋದೇಮನನ್ನು ಮೊದಲು ನಾಮಪದ ಹಾಗೂ ಅವನ ಹೆಸರಿನಿಂದ ಗುರುತಿಸಲಾಗಿದೆ. ಆಮೇಲೆ ಅವನನ್ನು ನಾಮಪದ ಗುಚ್ಛ "ಈ ಮನುಷ್ಯ." ಎಂದು ಗುರುತಿಸಿ ಹೇಳಿದೆ. ಆಮೇಲೆ ಅವನನ್ನು "ಅವನಿಗೆ." ಎಂಬ ಸರ್ವನಾಮದಿಂದ ಗುರುತಿಸಿ ಹೇಳಿದೆ. ಪ್ರತಿಯೊಂದು ಭಾಷೆಯಲ್ಲೂ ಈ ರೀತಿಯ ನಿಯಮಗಳು, ಬಳಕೆಗಳು ವ್ಯಕ್ತಿಗಳ ಬಗ್ಗೆ ಮತ್ತು ವಸ್ತುಗಳ ಬಗ್ಗೆ ಹೇಳಲು ಬಳಸಲಾಗುತ್ತದೆ.

  • ಕೆಲವು ಭಾಷೆಯಲ್ಲಿ ಮೊದಲಸಲ ಒಂದು ವಾಕ್ಯಭಾಗ ಅಥವಾ ಅಧ್ಯಾಯವನ್ನು ಕುರಿತು ಹೇಳುವಾಗ ನಾಮಪದವನ್ನು ಬಳಸುತ್ತಾರೆಯೇ ಹೊರತು ಸರ್ವನಾಮಗಳನ್ನು ಬಳಸುವುದಿಲ್ಲ.
  • ಅದರಲ್ಲಿನ ಪ್ರಮುಖ ಪಾತ್ರ ಒಬ್ಬ ವ್ಯಕ್ತಿ ಅವನ ಬಗ್ಗೆ ಈ ಕತೆ ಬೆಳೆಯುತ್ತದೆ. ಇನ್ನು ಕೆಲವು ಭಾಷೆಯಲ್ಲಿ ಕತೆ ಪ್ರಾರಂಭವಾದ ಮೇಲೆ ಮುಖ್ಯ ಪಾತ್ರದ ಪರಿಚಯವಾಗುತ್ತದೆ ನಂತರ ಆತನ ಬಗ್ಗೆ ಹೇಳುವಾಗಲೆಲ್ಲಾ ಸರ್ವನಾಮವನ್ನು ಬಳಸುತ್ತಾರೆ. ಕೆಲವು ಭಾಷೆಯಲ್ಲಿ ವಿಶೇಷವಾದ ಸರ್ವನಾಮವಿದ್ದು ಅದನ್ನು ಕತೆಯ ಮುಖ್ಯಪಾತ್ರಕ್ಕೆ ಮಾತ್ರ ಬಳಸಲಾಗುತ್ತದೆ.
  • ಕೆಲವು ಭಾಷೆಯಲ್ಲಿ ಕ್ರಿಯಾಪದವನ್ನು ಗುರುತಿಸಿದರೆ ಓದುಗರು ವಿಷಯದಲ್ಲಿ ಯಾರಬಗ್ಗೆ ಮಾತನಾಡುತ್ತಿದ್ದಾರೆ/ ಹೇಳುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಬಲ್ಲರು (- ಕ್ರಿಯಾಪದ) ಇದನ್ನು ಓದಿ ತಿಳಿಯಿರಿ. ಇನ್ನೂ ಕೆಲವು ಭಾಷೆಗಳಲ್ಲಿ ಓದುಗರು ಇಂತಹ ಗುರುತುಗಳ ಮೂಲಕ " ಯಾರ ಬಗ್ಗೆ ಹೇಳಿದೆ " ಎಂಬುದನ್ನು ತಿಳಿದುಕೊಳ್ಳುವವರಿದ್ದಾರೆ. ಇಲ್ಲಿ ಲೇಖಕರು ಸರ್ವನಾಮ, ನಾಮಪದ ಅಥವಾ ಹೆಸರುಗಳನ್ನು ಬಳಸುವುದು ಕರ್ತೃ ಯಾರೆಂದು ಸೂಚಿಸಲು.

ಕಾರಣ ಇದು ಭಾಷಾಂತರದ ಸಮಸ್ಯೆ.

  • ಭಾಷಾಂತರಗಾರರು ಸರ್ವನಾಮವನ್ನು ಅನಗತ್ಯ ಸನ್ನಿವೇಶ ಅಥವಾ ಸಮಯದಲ್ಲಿ ಬಳಸಿದರೆ ಓದುಗರಿಗೆ ಲೇಖಕ ಯಾರಬಗ್ಗೆ ಹೇಳುತ್ತಿದ್ದಾನೆ ಅಥವಾ ಮಾತನಾಡುತ್ತಿದ್ದಾನೆ ಎಂದು ಗೊಂದಲಕ್ಕೀಡಾಗುವರು.
  • ಭಾಷಾಂತರಗಾರರು ತಮ್ಮ ಭಾಷಾಂತರದಲ್ಲಿ ಪದೇಪದೇ ಮುಖ್ಯ ಪಾತ್ರವನ್ನು ಹೆಸರಿನಿಂದ ಬಳಸಿದರೆ ಓದುಗರ ಮುಖ್ಯ ಪಾತ್ರವನ್ನು ಗುರುತಿಸಲು ಸಾಧ್ಯವಾಗದೆ ಇರಬಹುದು. ಅಥವಾ ಇದೇ ಹೆಸರಿನ ಇನ್ನೊಂದು ಪಾತ್ರವು ಇದೆ ಎಂದು ತಿಳಿದುಕೊಳ್ಳುವ ಸಾಧ್ಯತೆಯೂ ಇರುತ್ತದೆ.
  • ಭಾಷಾಂತರಗಾರರು ಸರ್ವನಾಮಗಳನ್ನು ನಾಮಪದಗಳನ್ನು ಅಥವಾ ಹೆಸರುಗಳನ್ನು ಅನಗತ್ಯ ಸನ್ನಿವೇಶ, ಸಮಯದಲ್ಲಿ ಬಳಸಿದರೆ ಓದುಗರು ಆ ವ್ಯಕ್ತಿ ಅಥವಾ ವಸ್ತುವಿನ ಮೇಲೆ ವಿಶೇಷ ಒತ್ತು ನೀಡಿದೆ ಎಂದು ತಿಳಿದುಕೊಳ್ಳಬಹುದು.

####ಸತ್ಯವೇದದಿಂದ ಕೆಲವು ಉದಾಹರಣೆಗಳು

ಕೆಳಗೆ ಕೊಟ್ಟಿರುವ ಉದಾಹರಣೆಗಳು ಅಧ್ಯಾಯದ ಪ್ರಾರಂಭದಲ್ಲಿ ಇರುವಂತಹವು. ಕೆಲವು ಭಾಷೆಯಲ್ಲಿ ಸರ್ವನಾಮಗಳು ಯಾರನ್ನು ಉದ್ದೇಶಿಸಿ ಹೇಳಿವೆ ಎಂಬುದು ಸ್ಪಷ್ಟವಾಗದೆ ಇರಬಹುದು.

ಯೇಸು ಸಭಾಮಂದಿರಕ್ಕೆ ಹೋದಾಗ ಅಲ್ಲಿ ಕೈಬತ್ತಿಹೋದವನೊಬ್ಬನಿದ್ದನು ಅವರು ಆತನ ಮೇಲೆ ತಪ್ಪು ಹೊರಿಸಬೇಕೆಂದು ಆತನನ್ನು ಹೊಂಚಿನೋಡುತ್ತಾ ಸಬ್ಬತ್ ದಿನದಲ್ಲಿ ಅವನನ್ನು ಸ್ವಸ್ಥಮಾಡುವನೋ ಏನೋ ಎಂದು ನೋಡುತ್ತಿದ್ದರು. (ಮಾರ್ಕ 3:1-2 ULB)

ಕೆಳಗಿನ ಉದಾಹರಣೆಯಲ್ಲಿ ಮೊದಲ ವಾಕ್ಯದಲ್ಲೇ ಇಬ್ಬರ ಹೆಸರುಗಳನ್ನು ತಿಳಿಸಿದೆ. ಎರಡನೇ ವಾಕ್ಯದಲ್ಲಿ " ಅವನು" ಎಂದು ಬಳಸಿರುವುದು ಯಾರನ್ನು ಕುರಿತು ಎಂಬುದು ಸ್ಪಷ್ಟವಾಗಿಲ್ಲ.

ಕೆಲವು ದಿನಗಳ ನಂತರ ಅಗ್ರಿಪ್ಪ ರಾಜನುಬೆರ್ನಿಕೆ ರಾಣಿಯು ಫೆಸ್ತನ ದರ್ಶನ .ಮಾಡುವುದಕ್ಕೆ ಕೈಸರಿಯಕ್ಕೆ ಬಂದರು. ಅವರು ಅನೇಕ ದಿನಗಳು ಅಲ್ಲಿ ಇದ್ದರು.ಫೆಸ್ತನು ಪೌಲನ ಸಂಗತಿಯನ್ನು ರಾಜನಿಗೆ ತಿಳಿಸಿದನು.....(ಆ.ಕೃ. 25:13-14 ULB)

ಯೇಸು ಮತ್ತಾಯನ ಸುವರ್ತಾ ಪುಸ್ತಕದ ಮುಖ್ಯಪಾತ್ರದಾರಿ, ಆದರೆ ಕೆಳಗೆ ಉದಾಹರಿಸಿದ ವಾಕ್ಯಗಳಲ್ಲಿ ಯೇಸುವಿನ ಹೆಸರು ನಾಲ್ಕುಸಲ ಹೇಳಲಾಗಿದೆ. ಇದರಿಂದ ಕೆಲವು ಭಾಷೆಯಲ್ಲಿನ ಓದುಗರು ಯೇಸು ಮುಖ್ಯಪಾತ್ರ ಎಂದು ತಿಳಿದುಕೊಳ್ಳುವ ಸಾಧ್ಯತೆ ಇರುತ್ತದೆ. ಅಥವಾ ಯೇಸು ಎಂಬ ಹೆಸರಿನ ಅನೇಕ ವ್ಯಕ್ತಿಗಳು ಈ ಕತೆಯಲ್ಲಿ ಇದ್ದಾರೆ ಎಂದು ತಿಳಿಯಬಹುದು. ಅಥವಾ ಯೇಸುವಿನ ಪಾತ್ರದ ಮೇಲೆ ವಿಶೇಷ ಒತ್ತು ನೀಡಲಾಗಿದೆ ಎಂದು ತಿಳಿಯಬಹುದು.ಇಲ್ಲಿ ಈ ಪಾತ್ರದ ಮೇಲೆ ಹೆಚ್ಚು ಪ್ರಾಮುಖ್ಯತೆ ಇಲ್ಲದಿದ್ದರೂ ಈ ರೀತಿ ಯೋಚಿಸಬಹುದು.

ಆ ಸಮಯದಲ್ಲಿ ಯೇಸುಸಬ್ಬತ್ ದಿನದಂದು ಪೈರಿನ ಹೊಲದ ಮೂಲಕ ಹಾದುಹೋಗುತ್ತಿರುವಾಗ ಆತನಶಿಷ್ಯರು ಹಸಿದಿದ್ದರಿಂದ ಹಸಿರು ತೆನೆಗಳನ್ನು ಮುರಿದು ತಿನ್ನತೊಡಗಿದರು ಪರಿಸಾಯರು ಇದನ್ನು ಕಂಡು ಯೇಸುವನ್ನು ಕುರಿತು ಯೇಸು , "ನೋಡು ನಿನ್ನ ಶಿಷ್ಯರು ಸಬ್ಬತ್ ದಿನದಲ್ಲಿ ಧರ್ಮಕ್ಕೆ ವಿರುದ್ಧವಾದ ಮಾಡಬಾರದ ಕೆಲಸವನ್ನು ಮಾಡುತ್ತಿದ್ದಾರೆ". ಆದರೆ ಯೇಸುಅವರನ್ನು ಕುರಿತು " ದಾವೀದನೂ ತಾನು ತನ್ನ ಸಂಗಡ ಇದ್ದವರು ಹಸಿದಾಗ ಏನು ಮಾಡಬೇಕೆಂಬುದನ್ನು ಓದಲಿಲ್ಲವೋ ? "... ಎಂದು ಕೇಳಿದನು. ಆಗ J ಯೇಸು ಅಲ್ಲಿಂದ ಹೊರಟು ಸಭಾ ಮಂದಿರದೊಳಗೆ ಹೋದನು (ಮತ್ತಾಯ 12:1-9 ULB)

ಭಾಷಾಂತರ ಕೌಶಲ್ಯಗಳು.

  1. ನಿಮ್ಮ ಓದುಗರಿಗೆ ಇನ್ನು ಸರ್ವನಾಮವನ್ನು ಉದ್ದೇಶಿಸಿ ಹೇಳುವ ನಾಮಪದ ಅಥವಾ ಹೆಸರು ಇವುಗಳ ಬಗ್ಗೆ ಸ್ಪಷ್ಟವಾಗಿಲ್ಲದಿದ್ದರೆ ಎಂಬುದನ್ನು ಯೋಚಿಸಬೇಕಿದೆ.
  2. ಪುನರಾವರ್ತಿತವಾಗುವ ನಾಮಪದ ಅಥವಾ ಹೆಸರು ಜನರನ್ನು ಮುಖ್ಯಪಾತ್ರವನ್ನು ಮುಖ್ಯಪಾತ್ರವಲ್ಲ ಎಂದು ಯೋಚಿಸುವಂತೆ ಮಾಡುತ್ತದೆ.ಅಥವಾ ಲೇಖಕ ಒಬ್ಬನಿಗಿಂತ ಹೆಚ್ಚು ಜನರ ಹೆಸರಿನ ಬಗ್ಗೆ ಮಾತನಾಡುತ್ತಿದ್ದಾನೆ ಎಂದು ತಿಳಿಯಬಹುದು. ಅಥವಾ ಕೆಲವರ ಮೇಲೆ ಒತ್ತು ನೀಡುವ ಅವಶ್ಯಕತೆ ಇಲ್ಲದಿದ್ದರೂ ಒತ್ತು ನೀಡಬಹುದು. ಅದರ ಬದಲು ಸರ್ವನಾಮವನ್ನು ಬಳಸಬಹುದು.

ಭಾಷಾಂತರದ ಕೌಶಲ್ಯಗಳ ಅಳವಡಿಕೆ.

  1. ನಿಮ್ಮ ಓದುಗರಿಗೆ ಸರ್ವನಾಮವು ಯಾರ ಬಗ್ಗೆ ಯಾವದರ ಬಗ್ಗೆ ಉದ್ದೇಶಿಸಿ ಹೇಳಿದೆ. ಎಂಬುದು ಇನ್ನೂ ಸ್ಪಷ್ಟವಾಗದಿದ್ದರೆ ನಾಮಪದ ಅಥವಾ ಹೆಸರು ಉಪಯೋಗಿಸಿ.
  • ಆತನು ಪುನಃ ಸಭಾಮಂದಿರದೊಳಗೆ ಹೋದಾಗ ಅಲ್ಲಿ ಕೈಬತ್ತಿದವನೊಬ್ಬನಿದ್ದನು ಅವರುಆತನ ಮೇಲೆ ತಪ್ಪು ಹೊರಿಸಬೇಕೆಂದು ಆಲೋಚಿಸಿ ಸಬ್ಬತ್ ದಿನದಲ್ಲಿ ಸ್ವಸ್ಥ ಮಾಡುವನೋ ಏನೋ ಎಂದು ಆತನನ್ನು ಹೊಂಚಿನೋಡುತ್ತಾ ಇದ್ದರು. (ಮಾರ್ಕ 3:1-2 ULB)
    • ಪುನಃ ಯೇಸು ಸಭಾಮಂದಿರದೊಳಗೆ ಹೋದನು, ಅಲ್ಲಿ ಕೈಬತ್ತಿದವನೊಬ್ಬನಿದ್ದನು ಕೆಲವು ಪರಿಸಾಯರು Jಯೇಸು ಆ ಮನುಷ್ಯನನ್ನು ಸಬ್ಬತ್ ದಿನದಂದು ಸ್ವಸ್ಥ ಮಾಡುವನೋ ಎಂದು ಹೊಂಚಿನೋಡುತ್ತಾ ಇದ್ದರು (Mark 3:1-2 UDB)
  1. ಪುನರಾವರ್ತಿತವಾಗುವ ನಾಮಪದ ಅಥವಾ ಹೆಸರು ಜನರನ್ನು ಮುಖ್ಯಪಾತ್ರವನ್ನು ಮುಖ್ಯಪಾತ್ರವಲ್ಲ ಎಂದು ಯೋಚಿಸುವಂತೆ ಮಾಡುತ್ತದೆ.ಅಥವಾ ಲೇಖಕ ಒಬ್ಬನಿಗಿಂತ ಹೆಚ್ಚು ಜನರ ಹೆಸರಿನ ಬಗ್ಗೆ ಮಾತನಾಡುತ್ತಿದ್ದಾನೆ ಎಂದು ತಿಳಿಯಬಹುದು. ಅಥವಾ ಕೆಲವರ ಮೇಲೆ ಒತ್ತು ನೀಡುವ ಅವಶ್ಯಕತೆ ಇಲ್ಲದಿದ್ದರೂ ಒತ್ತು ನೀಡಬಹುದು. ಅದರ ಬದಲು ಸರ್ವನಾಮವನ್ನು ಬಳಸಬಹುದು.

ಆ ಸಮಯದಲ್ಲಿ ಯೇಸುಸಬ್ಬತ್ ದಿನದಂದು ಪೈರಿನ ಹೊಲದ ಮೂಲಕ ಹಾದುಹೋಗುತ್ತಿರುವಾಗ ಆತನಶಿಷ್ಯರು ಹಸಿದಿದ್ದರಿಂದ ಹಸಿರು ತೆನೆಗಳನ್ನು ಮುರಿದು ತಿನ್ನತೊಡಗಿದರು ಪರಿಸಾಯರು ಇದನ್ನು ಕಂಡು ಯೇಸುವನ್ನು ಕುರಿತು ಯೇಸು , "ನೋಡು ನಿನ್ನ ಶಿಷ್ಯರು ಸಬ್ಬತ್ ದಿನದಲ್ಲಿ ಧರ್ಮಕ್ಕೆ ವಿರುದ್ಧವಾದ ಮಾಡಬಾರದ ಕೆಲಸವನ್ನು ಮಾಡುತ್ತಿದ್ದಾರೆ". ಆದರೆ ಯೇಸುಅವರನ್ನು ಕುರಿತು " ದಾವೀದನೂ ತಾನು ತನ್ನ ಸಂಗಡ ಇದ್ದವರು ಹಸಿದಾಗ ಏನು ಮಾಡಬೇಕೆಂಬುದನ್ನು ಓದಲಿಲ್ಲವೋ ? "... ಎಂದು ಕೇಳಿದನು. ಆಗ J ಯೇಸು ಅಲ್ಲಿಂದ ಹೊರಟು ಸಭಾ ಮಂದಿರದೊಳಗೆ ಹೋದನು ** (ಮತ್ತಾಯ 12:1-9 ULB)

ಇವುಗಳನ್ನು ಈ ರೀತಿಯೂ ಭಾಷಾಂತರ ಮಾಡಬಹುದು.

ಆ ಸಮಯದಲ್ಲಿ ಯೇಸುಸಬ್ಬತ್ ದಿನದಂದು ಪೈರಿನ ಹೊಲದ ಮೂಲಕ ಹಾದುಹೋಗುತ್ತಿರುವಾಗ ಆತನಶಿಷ್ಯರು ಹಸಿದಿದ್ದರಿಂದ ಹಸಿರು ತೆನೆಗಳನ್ನು ಮುರಿದು ತಿನ್ನತೊಡಗಿದರು ಆಗ ಪರಿಸಾಯರು ಇದನ್ನು ನೋಡಿ ಆತನಿಗೆ , " ನೋಡು ನಿನ್ನ ಶಿಷ್ಯರು ಸಬ್ಬತ್ ದಿನದಂದು ಧರ್ಮನಿಯಮಕ್ಕೆ ವಿರುದ್ಧವಾದ ಕೆಲಸವನ್ನು ಮಾಡುತ್ತಿದ್ದಾರೆ” ಎಂದು ಹೇಳಿದರು. ಆದರೆ ಆತನುಅವರಿಗೆ ಹೀಗೆ ಹೇಳಿದನು" ದಾವೀದನೂ ತಾನು ತನ್ನ ಶಿಷ್ಯರು ಹಸಿದಿದ್ದಾಗ ಎನು ಮಾಡಿದರು ಎಂಬುದನ್ನು ನೀವು ಓದಲಿಲ್ಲವೆ? " --- ಆಗ ಅವನುಅಲ್ಲಿಂದ ಹೊರಟು ಸಭಾ ಮಂದಿರದಲ್ಲಿ ಹೋದನು.