translationCore-Create-BCS_.../translate/translate-textvariants/01.md

12 KiB

ವಿವರಣೆ

ಸಾವಿರಾರು ವರ್ಷಗಳ ಹಿಂದೆ ಜನರು ಸತ್ಯವೇದದ ಅನೇಕ ಪುಸ್ತಕಗಳನ್ನು ಬರೆದರು. ಇತರರು ಅದರ ಪ್ರತಿಗಳನ್ನು ಕೈಯಿಂದಲೇ ಬರೆದರು (ಹಸ್ತಪ್ರತಿಗಳು) ಮತ್ತು ಭಾಷಾಂತರಿಸಿದರು. ಈ ಕೆಲಸವನ್ನು ಅವರು ತುಂಬಾ ಎಚ್ಚರಿಕೆಯಿಂದ ಮಾಡಿದರು. ಕಾಲಕ್ರಮೇಣ ಜನರು ಸಾವಿರಾರು ಪ್ರತಿಗಳನ್ನು ಬರೆದಿಟ್ಟರು. ನಂತರ ಈ ಪ್ರತಿಗಳನ್ನು ಅವರು ಗಮನಿಸಿದಾಗ ಚಿಕ್ಕಪುಟ್ಟ ವ್ಯತ್ಯಾಸಗಳು ಅವುಗಳಲ್ಲಿ ಕಂಡುಬಂದವು. ಕೆಲವು ಪ್ರತಿಗಳಲ್ಲಿ ಆಕಸ್ಮಿಕವಾಗಿ ಕೆಲವು ಪದಗಳು ಬಿಟ್ಟುಹೋಗಿದ್ದವು, ಒಂದೇ ರೀತಿಯಿರುವ ಕೆಲವು ಪದಗಳನ್ನು ತಪ್ಪಾಗಿ ಭಾವಿಸಿ ಆ ಪದಕ್ಕೆ ಬದಲಾಗಿ ಇನ್ನೊಂದು ಪದವನ್ನು ಬಳಸಿರುವುದೂ ಉಂಟು. ಇನ್ನು ಕೆಲವೊಮ್ಮೆ ಅವರು ಕೆಲವೊಂದನ್ನು ವಿವರಿಸುವ ಸಲುವಾಗಿ ಹೆಚ್ಚಿನ ಪದಗಳನ್ನು ಅಥವಾ ವಾಕ್ಯಗಳನ್ನು ಆಕಸ್ಮಿಕವಾಗಿಯೋ ಸೇರಿಸಿರಬಹುದು. ಆಧುನಿಕ ಸತ್ಯವೇದಗಳು ಹಳೇ ಹಸ್ತಪ್ರತಿಗಳ ಭಾಷಾಂತರಗಳಾಗಿವೆ. ಇಂತಹ ಕೆಲವು ಆಧುನಿಕ ಸತ್ಯವೇದಗಳು ಇಂತಹ ಕೆಲವು ಹೆಚ್ಚುವರಿಯಾಗಿ ಸೇರಿಸಿದ ವಾಕ್ಯಗಳನ್ನು ಹೊಂದಿವೆ. ಸಾಮಾನ್ಯವಾಗಿ ಇಂತಹ ವಾಕ್ಯಗಳನ್ನು ULT, ಸತ್ಯವೇದದಲ್ಲಿ ಅವುಗಳನ್ನು ಅಡಿಟಿಪ್ಪಣಿಯಲ್ಲಿ ಬರೆಯಲಾಗಿರುತ್ತದೆ.

ಸತ್ಯವೇದದ ವಿದ್ವಾಂಸರು ಈ ಹಳೆಯ ಪ್ರತಿಗಳನ್ನು ಓದಿ ಅಧ್ಯಯನ ಮಾಡಿ ಒಂದರೊಡನೊಂದು ಹೋಲಿಸಿ ನೋಡಿದ್ದಾರೆ. ಆದುದರಿಂದಲೇ ಸತ್ಯವೇದದಲ್ಲಿ ಎಲ್ಲೆಲ್ಲಿ ವ್ಯತ್ಯಾಸಗಳು ಕಂಡುಬರುತ್ತದೋ ಅಲ್ಲಿ ಯಾವ ಪದಗಳು ಹೆಚ್ಚು ಸೂಕ್ತವಾಗಿ ಹೊಂದಬಹುದು ಎಂದು ಗುರುತಿಸಿದ್ದಾರೆ. ULT, ಸತ್ಯವೇದವನ್ನು ಭಾಷಾಂತರಿಸುವಾಗ ULT ಯಲ್ಲಿ ವಿದ್ವಾಂಸರು ಹೆಚ್ಚು ಸೂಕ್ತವಾಗಿದೆ ಎಂದು ಹೇಳುವ ಪದಗಳನ್ನು ಬಳಸಿದ್ದಾರೆ. ಏಕೆಂದರೆ ULT, ಸತ್ಯವೇದವನ್ನು ಬಳಸುವ ಜನರ ಬಳಿಯಲ್ಲಿ ಇತರ ಹಸ್ತಪ್ರತಿಗಳನ್ನು ಆಧರಿಸಿ ಭಾಷಾಂತರ ಮಾಡಿರುವ ಸತ್ಯವೇದಗಳು ಇರಬಹುದು. ULT ಭಾಷಾಂತರಗಾರರು ಅಡಿ ಟಿಪ್ಪಣಿಗಳಲ್ಲಿ ಅಥವಾ ಆನ್‌ಫೋಲ್ಡಿಂಗ್ ಭಾಷಾಂತರದ ಟಿಪ್ಪಣಿಗಳಲ್ಲಿ ಇವುಗಳ ನಡುವೆ ಇರುವ ವ್ಯತ್ಯಾಸಗಳನ್ನು ತಿಳಿಸಿದ್ದಾರೆ.

ULT ಯಲ್ಲಿರುವ ವಾಕ್ಯಭಾಗಗಳನ್ನು ಭಾಷಾಂತರಗಾರು ಅದೇ ರೀತಿ ಭಾಷಾಂತರ ಮಾಡಬೇಕೆಂದು ಮತ್ತು ಅದರೊಂದಿಗೆ ಹೆಚ್ಚಿನ ವಾಕ್ಯ ಮಾಹಿತಿಗಳನ್ನು ULT ಯಲ್ಲಿ ಇರುವಂತೆ ಅಡಿಟಿಪ್ಪಣಿಯಲ್ಲಿ ಬರೆಯಬೇಕೆಂದು ತಿಳಿಸಿದ್ದಾರೆ. ಆದರೆ ಸ್ಥಳೀಯ ಸಭೆಗಳು (ಚರ್ಚ್ ಗಳು) ಇಂತಹ ವಾಕ್ಯಗಳನ್ನು ಮುಖ್ಯ ವಾಕ್ಯಭಾಗಗಳಲ್ಲಿ ಸೇರಿಸಬೇಕೆಂದು ಬಯಸಿದರೆ ಭಾಷಾಂತರಗಾರರು ಅವುಗಳನ್ನು ಮುಖ್ಯ ವಾಕ್ಯಭಾಗದಲ್ಲಿ ಸೇರಿಸಿ ಅಡಿ ಟಿಪ್ಪಣಿಯಲ್ಲಿ ಅದರ ಬಗ್ಗೆ ವಿವರಣೆ ನೀಡಬಹುದು.

ಸತ್ಯವೇದದ ಕೆಲವು ಉದಾಹರಣೆಗಳು

ULTಯ ಮತ್ತಾಯ 18:10-11 ವಾಕ್ಯಭಾಗದಲ್ಲಿ 11ನೇ ವಾಕ್ಯದ ಬಗ್ಗೆ ಅಡಿ ಟಿಪ್ಪಣಿಯಲ್ಲಿ ತಿಳಿಸಲಾಗಿದೆ.

10 ಇಂತಹ ಚಿಕ್ಕವರ ವಿಷಯದಲ್ಲಿ ನಿರ್ಲಕ್ಷಿಸದಂತೆ ನೋಡಿಕೊಳ್ಳಿರಿ. ಪರಲೋಕದಲ್ಲಿರುವ ಅವರ ದೂತರು ಪರಲೋಕದಲ್ಲಿರುವ ನನ್ನ ತಂದೆಯ ಮುಖವನ್ನು ಯಾವಾಗಲೂ ನೋಡುತ್ತಲಿದ್ದಾರೆ ಎಂದು ನಿಮಗೆ ಹೇಳುತ್ತೇನೆ. 11 [1]

[1] ಅನೇಕ ಹಳೆಯ ಪ್ರತಿಗಳಲ್ಲಿ 11 ನೇ ವಾಕ್ಯದಲ್ಲಿ ಹೀಗೆಂದು ಸೇರಿಸಿದ್ದಾರೆ: ಮನುಷ್ಯಕುಮಾರನು ಕೆಟ್ಟುಹೋದುದನ್ನು ಹುಡುಕಿ ರಕ್ಷಿಸಲು ಬಂದನು.

ಯೋಹಾನ 7:53-8:11 ಅತ್ಯುತ್ತಮವಾದ ಹಳೆಯ ಹಸ್ತಪ್ರತಿಗಳಲ್ಲಿ ಇಲ್ಲ. ಅದನ್ನು ULTಯಲ್ಲಿ ಸೇರಿಸಲಾಗಿದೆ, ಆದರೆ ಅದನ್ನು ಚೌಕಟ್ಟು ಆವರಣ ಚಿಹ್ನೆಯನ್ನು ([ ]) ಪ್ರಾರಂಭದಲ್ಲಿ ಮತ್ತು ಅಂತ್ಯದಲ್ಲಿ ಹಾಕಲಾಗಿದೆ, ಮತ್ತು 11 ನೇ ವಾಕ್ಯದ ನಂತರ ಅಡಿ ಟಿಪ್ಪಣಿಯಲ್ಲಿ ತಿಳಿಸಲಾಗಿದೆ.

53 [ಅನಂತರ ಪ್ರತಿಯೊಬ್ಬನೂ ತನ್ನ ಮನೆಗೆ ಹೋದನು --- 11 "ಯಾರೂ ಇಲ್ಲ ಸ್ವಾಮಿ" ಎಂದು ಅವಳು ಹೇಳಿದಳು. ಯೇಸು, "ನಾನೂ ನಿನಗೆ ಶಿಕ್ಷೆವಿಧಿಸುವುದಿಲ್ಲ. ಹೋಗು ಇನ್ನು ಮೇಲೆ ಪಾಪ ಮಾಡಬೇಡ" ಎಂದು ಹೇಳಿದನು.] [2]

[2] ಪ್ರಾಚೀನ ಹಸ್ತಪ್ರತಿಗಳು ಯೋಹಾನ 7:53-8:11 ವಾಕ್ಯಗಳನ್ನು ಒಳಗೊಂಡಿವೆ.

ಭಾಷಾಂತರದ ಕಾರ್ಯತಂತ್ರಗಳು

ವಾಕ್ಯಭಾಗಗಳಲ್ಲಿ ವ್ಯತ್ಯಾಸಗಳು ಕಂಡುಬರುವಾಗ, ನೀವು ULT ಯಾಗನ್ನಾಗಲಿ ಅಥವಾ ನಿಮಗೆ ಲಭ್ಯವಿರುವ ಬೇರೊಂದು ಅನುವಾದವನ್ನಾಗಲಿ ಬಳಸಬಹುದು.

(1) ULT ಯಲ್ಲಿರುವ ಹಾಗೆಯೇ ವಾಕ್ಯವನ್ನು ಭಾಷಾಂತರಿಸಿರಿ ಮತ್ತು ULT ನೀಡುವ ವಿವರವನ್ನು ಅಡಿ ಟಿಪ್ಪಣಿಯಲ್ಲಿ ಬಳಸಿರಿ.

(2) ಬೇರೊಂದು ಅನುವಾದದಲ್ಲಿರುವ ಹಾಗೆ ವಾಕ್ಯಭಾಗಗಳನ್ನು ಭಾಷಾಂತರಿಸಬಹುದು. ಇಂತಹ ಸಂದರ್ಭದಲ್ಲಿ ಅಡಿಟಿಪ್ಪಣಿಯಲ್ಲಿ ಬದಲಾಯಿಸಿ ಅದಕ್ಕೆ ಹೊಂದಿಕೊಳ್ಳುವಂತೆ ಬರೆಯಿರಿ.

ಭಾಷಾಂತರದ ಕಾರ್ಯತಂತ್ರಗಳನ್ನು ಅನ್ವಯಿಸಿರುವ ಉದಾಹರಣೆಗಳು

ಭಾಷಾಂತರದ ಕಾರ್ಯತಂತ್ರಗಳನ್ನು ಮಾರ್ಕ 7:14-16 ಗೆ ULT ಅನ್ವಯಿಸಲಾಗಿದೆ, 16ನೇ ವಾಕ್ಯ ಇದರ ಬಗ್ಗೆ ಅಡಿಟಿಪ್ಪಣಿಯಲ್ಲಿ ನೀಡಲಾಗಿದೆ.

14 ಆತನು ಪುನಃ ಜನರ ಗುಂಪನ್ನು ಹತ್ತಿರಕ್ಕೆ ಕರೆದು ಹೇಳಿದ್ದೇನಂದರೆ, "ನೀವೆಲ್ಲರೂ ನನ್ನ ಮಾತನ್ನು ಕೇಳಿರಿ ಮತ್ತು ಅರ್ಥಮಾಡಿಕೊಳ್ಳಿರಿ. 15 ಹೊರಗಿನಿಂದ ಮನುಷ್ಯನೊಳಕ್ಕೆ ಹೋಗಿ ಅವನನ್ನು ಹೊಲೆಮಾಡುವಂತದ್ದು ಒಂದೂ ಇಲ್ಲ. ಆದರೆ ಮನುಷ್ಯನೊಳಗಿಂದ ಹೊರಡುವವುಗಳೇ ಮನುಷ್ಯನನ್ನು ಹೊಲೆಮಾಡುವಂತದ್ದಾಗಿದೆ." 16 [1]

[1] ಕೆಲವು ಪ್ರಾಚೀನ ಹಸ್ತಪ್ರತಿಗಳಲ್ಲಿ 16ನೇ ವಾಕ್ಯವು ಇದೆ. ಕೇಳುವುದಕ್ಕೆ ಕಿವಿಯುಳ್ಳ ಮನುಷ್ಯನು, ಕೇಳಿಸಿಕೊಳ್ಳಲಿ.

(1) ULT ಯಲ್ಲಿರುವ ಹಾಗೆಯೇ ವಾಕ್ಯವನ್ನು ಭಾಷಾಂತರಿಸಿರಿ ಮತ್ತು ULT ನೀಡುವ ವಿವರವನ್ನು ಅಡಿ ಟಿಪ್ಪಣಿಯಲ್ಲಿ ಬಳಸಿರಿ.

14 ಆತನು ಪುನಃ ಜನರ ಗುಂಪನ್ನು ಹತ್ತಿರಕ್ಕೆ ಕರೆದು ಹೇಳಿದ್ದೇನಂದರೆ, "ನೀವೆಲ್ಲರೂ ನನ್ನ ಮಾತನ್ನು ಕೇಳಿರಿ ಮತ್ತು ಅರ್ಥಮಾಡಿಕೊಳ್ಳಿರಿ. 15 ಹೊರಗಿನಿಂದ ಮನುಷ್ಯನೊಳಕ್ಕೆ ಹೋಗಿ ಅವನನ್ನು ಹೊಲೆಮಾಡುವಂತದ್ದು ಒಂದೂ ಇಲ್ಲ. ಆದರೆ ಮನುಷ್ಯನೊಳಗಿಂದ ಹೊರಡುವವುಗಳೇ ಮನುಷ್ಯನನ್ನು ಹೊಲೆಮಾಡುವಂತದ್ದಾಗಿದೆ." 16 [1]

[1] ಕೆಲವು ಪ್ರಾಚೀನ ಪ್ರತಿಗಳಲ್ಲಿ 16ನೇ ವಾಕ್ಯವು ಇದೆ. ಕೇಳುವುದಕ್ಕೆ ಕಿವಿಯುಳ್ಳ ಮನುಷ್ಯನು, ಕೇಳಿಸಿಕೊಳ್ಳಲಿ.

(2) ಬೇರೊಂದು ಅನುವಾದದಲ್ಲಿರುವ ಹಾಗೆ ವಾಕ್ಯಭಾಗಗಳನ್ನು ಭಾಷಾಂತರಿಸಬಹುದು. ಇಂತಹ ಸಂದರ್ಭದಲ್ಲಿ ಅಡಿಟಿಪ್ಪಣಿಯಲ್ಲಿ ಬದಲಾಯಿಸಿ ಅದಕ್ಕೆ ಹೊಂದಿಕೊಳ್ಳುವಂತೆ ಬರೆಯಿರಿ.

14 ಆತನು ಪುನಃ ಜನರ ಗುಂಪನ್ನು ಹತ್ತಿರಕ್ಕೆ ಕರೆದು ಹೇಳಿದ್ದೇನಂದರೆ, "ನೀವೆಲ್ಲರೂ ನನ್ನ ಮಾತನ್ನು ಕೇಳಿರಿ ಮತ್ತು ಅರ್ಥಮಾಡಿಕೊಳ್ಳಿರಿ. 15 ಹೊರಗಿನಿಂದ ಮನುಷ್ಯನೊಳಕ್ಕೆ ಹೋಗಿ ಅವನನ್ನು ಹೊಲೆಮಾಡುವಂತದ್ದು ಒಂದೂ ಇಲ್ಲ. ಮನುಷ್ಯನೊಳಗಿಂದ ಹೊರಡುವವುಗಳೇ ಮನುಷ್ಯನ್ನು ಹೊಲೆಮಾಡುವಂತಾದ್ದು.16 ಕೇಳುವುದಕ್ಕೆ ಕಿವಿಯುಳ್ಳ ಮನುಷ್ಯನು, ಕೇಳಿಸಿಕೊಳ್ಳಲಿ." [1]

[1] ಕೆಲವು ಪ್ರಾಚೀನ ಪ್ರತಿಗಳಲ್ಲಿ 16ನೇ ವಾಕ್ಯವಿಲ್ಲ.