translationCore-Create-BCS_.../translate/figs-pronouns/01.md

8.3 KiB
Raw Blame History

###ವಿವರಣೆಗಳು

ಸರ್ವನಾಮಗಳೆಂದರೆ ನಾಮಪದದ ಬದಲು ಉಪಯೋಗಿಸುವಂತದ್ದು ಒಬ್ಬವ್ಯಕ್ತಿಯನ್ನು ಅಥವಾಒಂದು ವಸ್ತುವನ್ನು ಉದ್ದೇಶಿಸಿ ಹೇಳುವಂತದ್ದು. ಕೆಲವು ಉದಾಹರಣೆಗಳು ನಾನು, ನೀನು,ಅವನು,ಅದು, ಇದು,ಅವನ, ಯಾರೊಬ್ಬರು. ಸಾಮಾನ್ಯವಾಗಿ ಹೆಚ್ಚಿನ ಮಟ್ಟಿನ ಸರ್ವನಾಮಗಳು ವೈಯಕ್ತಿಕವಾಗಿರುತ್ತವೆ.

ವ್ಯಕ್ತಿಗತ ಸರ್ವನಾಮ.

Personal Pronouns ವ್ಯಕ್ತಿಗತ ಸರ್ವನಾಮ., ಒಬ್ಬ ವ್ಯಕ್ತಿ ತಾನು ಮಾತನಾಡುತ್ತಿರುವ ವ್ಯಕ್ತಿಯ ಬಗ್ಗೆ, ವಸ್ತುವಿನ ಬಗ್ಗೆ ಹೇಳುವ ಪದಗಳು. ಕೆಳಗಿನ ಉದಾಹರಣೆಗಳಲ್ಲಿ ವ್ಯಕ್ತಿಗತ ಸರ್ವನಾಮಗಳ ಬಗ್ಗೆ ಮಾಹಿತಿ ನೀಡುತ್ತದೆ. ಇತರ ಸರ್ವನಾಮಗಳು ಇಲ್ಲಿ ಕೆಳಗಿರುವ ಮಾಹಿತಿಗಳನ್ನು ಚೆನ್ನಾಗಿ ತಿಳಿಸುತ್ತದೆ.

####ವ್ಯಕ್ತಿ (ಪುರುಷ)

  • First Person (ಉತ್ತಮ ಪುರುಷ) ಮಾತನಾಡುವವ ಮತ್ತು ಇತರರು… (ನಾನು, ನಾವು)
  • ಮಧ್ಯಮ ಪುರುಷ ಯಾವ ವ್ಯಕ್ತಿ ಅಥವಾ ಜನರೊಂದಿಗೆ ಮಾತನಾಡುತ್ತಿದ್ದಾನೋ ಹೆಚ್ಚಿನಮಟ್ಟಿಗೆ ಇತರರು (ನೀನು).
  • ಪ್ರಥಮ ಪುರುಷ - ಮಾತನಾಡುತ್ತಿರುವವ ಮತ್ತು ಹೆಚ್ಚಾಗಿ ಇತರರ ಬಗ್ಗೆ (Third Person) ಅವನು, ಅವಳು,ಅವು, ಅವರು.

ವಚನಗಳು (ಸಂಖ್ಯಾವಾಚಕ)

  • Singular ಏಕವಚನ - ಒಂದು, ಒಬ್ಬರು ನಾನು, ನೀನು,ಅವನು,ಅದು, ಅವಳು.
  • Plural ಬಹುವಚನ ಹೆಚ್ಚು, ಒಂದಕ್ಕಿಂತ ಹೆಚ್ಚು - "We" ನಾವು, ನೀವು,ಅವರು.
  • (Dual) ದ್ವಿತ್ವ ಕೆಲವು ಭಾಷೆಯಲ್ಲಿ ಎರಡು ಸರ್ವನಾಮಗಳು ನಿರ್ದಿಷ್ಟವಾಗಿ ಇಬ್ಬರು ವ್ಯಕ್ತಿಗಳನ್ನು ಅಥವಾ ಎರಡುವಸ್ತುಗಳನ್ನು ಕುರಿತು ಹೇಳುತ್ತದೆ.

####ಲಿಂಗಗಳು

  • ಪುಲ್ಲಿಂಗ - ಅವನು
  • ಸ್ತ್ರೀ ಲಿಂಗ - ಅವಳು
  • ನಪುಂಸಕ ಲಿಂಗ ಅದು.

####ವಾಕ್ಯದಲ್ಲಿರುವ ಪದಗಳೊಂದಿಗಿನ ಸಂಬಂಧ.

  • ಕ್ರಿಯಾಪದದ ವಿಷಯ: ನಾನು, ನೀನು, ಅವನು, ಅವಳು,ಅದು, ನಾವು, ಅವರು.
  • ಕ್ರಿಯಾಪದದ ಅಥವಾ ()ಪ್ರಿಪೋಸಿಷನ್ (ಪುರವ ಪ್ರತ್ಯಯ) ಪದಗಳು ನನಗೆ, ನೀನು,ಅವನ ಅವಳ, ಅದರ, ನಮ್ಮ ನಮಗೆ, ಅವರ.
  • ನಾಮಪದದೊಂದಿಗೆ ಇರುವ ಪದಗಳು ನನ್ನ, ನಿನ್ನ ಅವನ, ಅವಳ, ಅದರ,ನಮ್ಮ, ಅವರ.
  • ನಾಮಪದ ಇಲ್ಲದೇ ಇರುವ ಪದಗಳು ನನ್ನ, ನಿಮ್ಮ, ಅವನ, ಅವಳ, ಅದರ, ಅವರ.

###ಸರ್ವನಾಮದ ಇತರ ವಿಧಗಳು

ಅನುವರ್ತಕ ಸರ್ವನಾಮ - ಅನುವರ್ತಕ ಸರ್ವನಾಮ - ಅದೇ ವಾಕ್ಯದಲ್ಲಿ ಇನ್ನೊಂದು ನಾಮಪದ ಅಥವಾ ಸರ್ವನಾಮವನ್ನು ಉದ್ದೇಶೀಸಿ ಹೇಳುವುದು ನಾನು,ನನ್ನ, ನಿಮ್ಮ, ಅವನ, ಅವಳ, ಅದರ, ಅವರ.ನಾವೆಲ್ಲರೂ, ನೀವೆಲ್ಲರೂ ಅವರೆಲ್ಲರೂ.

  • ಜಾನ್ ಅವನನ್ನು ಕನ್ನಡಿಯಲ್ಲಿ ನೋಡಿದನು ಇಲ್ಲಿ "ಅವನನ್ನು " ಎಂಬುದು ಜಾನ್ ನನ್ನು ಉದ್ದೇಶಿಸಿ ಹೇಳಿದೆ.

ಪ್ರಶ್ನಾರ್ಹ ಸರ್ವನಾಮ ಒಂದು ಪ್ರಶ್ನೆಗೆ ಕೇವಲ ಹೌದು ಅಥವಾ ಇಲ್ಲ ಎಂಬ ಉತ್ತರಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸಿ ಕೇಳುವ ಪ್ರಶ್ನೆಯ ಪದವನ್ನು ಪ್ರಶ್ನಾರ್ಥಕ ಸರ್ವನಾಮ ಎಂದು ಕರೆಯುತ್ತಾರೆ.ಉದಾ: ಯಾರು, ಯಾರಿಂದ, ಯಾವ, - ಏಕೆ, ಎಲ್ಲಿ, ಯಾವಾಗ, ಏಕೆ, ಹೇಗೆ.

  • ಈ ಮನೆಯನ್ನು ಯಾರು ಕಟ್ಟಿಸಿದರು ?

ಸಂಬಂಧಾತ್ಮಕ ಸರ್ವನಾಮ - ಸಂಬಂಧಾತ್ಮಕ ಸರ್ವನಾಮ ವಾಕ್ಯದಲ್ಲಿ ನಾಮಪದಕ್ಕೆ ಸಂಬಂಧಿಸಿದ ವಸ್ತು, ಕಾರ್ಯ ಇರುತ್ತದೆ. ವಾಕ್ಯದ ಮುಖ್ಯಭಾಗದಲ್ಲಿ ನಾಮಪದದ ಬಗ್ಗೆ ಹೆಚ್ಚು ತಿಳಿಸುತ್ತಾರೆ :

  • ಜಾನ್ ಕಟ್ಟಿಸಿದ ಆ ಮನೆಯನ್ನು ನಾನು ನೋಡಿದೆ " ಜಾನ್ ಕಟ್ಟಿಸಿದ " ಎಂಬ ಪದ ನಾನು ಯಾವ ಮನೆ ನೋಡಿದೆ ಎಂಬುದನ್ನು ತಿಳಿಸುತ್ತದೆ.
  • ಆ ಮನೆಯನ್ನು ಕಟ್ಟಿಸಿದ ಮನುಷ್ಯನನ್ನುನಾನು ನೋಡಿದ್ದೇನೆ .ಯಾರು "ಮನೆಯನ್ನು ಕಟ್ಟಿದರು" ಎಂಬ ವಾಕ್ಯ ನಾನು ಯಾವ ಮನುಷ್ಯನನ್ನು ನೋಡಿದೆ ಎಂಬುದನ್ನು ಸೂಚಿಸುತ್ತದೆ.

Demonstrative Pronouns ಪ್ರದರ್ಶಾತ್ಮಕ ಸರ್ವನಾಮ ತನ್ನೊಂದಿಗೆ ಮಾತನಾಡುತ್ತಿರುವವರ ಗಮನವನ್ನು ಸೆಳೆದು ಎಷ್ಟು ದೂರದಲ್ಲಿದೆ ಎಂದು ಬಳಸುವ ಪದಗಳು.ಉದಾಹರಣೆ : ಇದು, ಇವುಗಳು, ಅದು,ಅವುಗಳು.

  • ನೀನು ಇದನ್ನು ಇಲ್ಲಿನೋಡಿದೆಯಾ?
  • ಅಲ್ಲಿರುವವರು ಯಾರು ? ?

ಅನಿಶ್ಚಿತ ಸರ್ವನಾಮಗಳು ಅನಿಶ್ಚಿತ ಸರ್ವನಾಮಗಳು ಒಂದು ನಿರ್ದಷ್ಟ ನಾಮಪದವನ್ನು ಉದ್ದೇಶಿಸಿ ಹೇಳದೆ ಇರುವುದು, - ಯಾರು, ಯಾರೋ, ಯಾರದೋ, ಕೆಲವರು, ಯಾವುದಾದರೂ, ಕೆಲವು. ಕೆಲವೊಮ್ಮೆ. ಕೆಲವೊಮ್ಮೆ ವ್ಯಕ್ತಿಗತ ಸರ್ವನಾಮಗಳು ಸಾಮಾನ್ಯ ಮಾರ್ಗದಲ್ಲಿ ಬಳಸಲಾಗುವುದು : ನೀನು, ಅವರು, ಅವನು, ಅಥವಾ, ಅದು.

  • ಅವನಿಗೆ ಯಾರೊಂದಿಗೂ ಮಾತನಾಡುವುದು ಬೇಕಿಲ್ಲ .
  • ಯಾರೋಅದನ್ನು ಅಲ್ಲಿ ಅಳವಡಿಸಿದ್ದಾರೆ. ಆದರೆ ನನಗೆ ಅವರು ಯಾರೂ ಎಂದು ಗೊತ್ತಿಲ್ಲ
  • ಅವರುಹೇಳುವುದೇನೆಂದರೆ ನೀವುಮಲಗಿರುವ ನಾಯಿಯನ್ನು ಎಚ್ಚರಿಸಬಾರದು.

ಕೊನೆಯ ಉದಾಹರಣೆಯಲ್ಲಿ "ಅವರು" ಮತ್ತು "ನೀನು" ಸಹಜವಾಗಿ ಜನರನ್ನು ಉದ್ದೇಶಿಸಿ ಹೇಳಿರುವಂತದ್ದು.