translationCore-Create-BCS_.../translate/figs-litotes/01.md

6.1 KiB

ವಿವರಣೆಗಳು

ಲಿಟೋಟ್ಸ್ ಇದೊಂದು ಅಲಂಕಾರ. ಇದರಲ್ಲಿ ಒಬ್ಬ ವ್ಯಕ್ತಿ ತಾನು ತಿಳಿಸಬೇಕಾದ ಒಂದು ಸಕಾರಾತ್ಮಕ ವಿಷಯದ ಅರ್ಥವನ್ನು ಎರಡು ನಕಾರಾತ್ಮಕ ಪದಗಳನ್ನು ಬಳಸಿ ಹೇಳುತ್ತಾನೆ ಅಂದರೆ ಅವನು ತಿಳಿಸಬೇಕಾದ ವಿಷಯದವನ್ನು ಎರಡು ವಿರುದ್ದಾರ್ಥ ನೀಡುವ ಪದಗಳನ್ನು ಬಳಸಿ ಹೇಳುವುದು. ನಕಾರಾತ್ಮಕ ಪದಗಳಿಗೆ ಕೆಲವು ಉದಾಹರಣೆಗಳು "ಇಲ್ಲ" "ಅದಲ್ಲ" "ಯಾರೂ/ಯಾವುದೂ ಅಲ್ಲ," ಮತ್ತು "ಯಾವಾಗಲೂ ಇಲ್ಲ.".

"ಒಳ್ಳೆಯ" ಎಂಬುದಕ್ಕೆ ವಿರುದ್ಧ ಪದ "ಕೆಟ್ಟದ್ದು". ಕೆಲವರು ಯಾವುದರ ಬಗ್ಗೆ ಯಾದರೂ ಹೇಳುವಾಗ ಕೆಲವೊಮ್ಮೆ "ಅದು ಕೆಟ್ಟದೇನಲ್ಲಾ" ಎಂಬ ಪದ ಬಳಸುತ್ತಾರೆ. ಇದರ ಅರ್ಥ ಅದು "ಒಳ್ಳೆಯದೇ" ಧ್ವನಿಸುತ್ತದೆ.

####ಏಕೆಂದರೆ ಇದೊಂದು ಭಾಷಾಂತರ ಪ್ರಕರಣ.

ಕೆಲವು ಭಾಷೆಯಲ್ಲಿ ಈ ಲಿಟೋಟ್ಸ್ ಬಳಸುವುದಿಲ್ಲ. ಇಂತಹ ಭಾಷೆ ಮಾತನಾಡುವವರಿಗೆ ಲಿಟೋಟ್ಸ್ ಬಳಸಿ ಹೇಳುವ ಮಾತುಗಳು ಸಕಾರಾತ್ಮಕ ಅರ್ಥಸೂಚಿಸುತ್ತಿವೆ ಎಂಬುದನ್ನು ಅರ್ಥಮಾಡಿಕೊಳ್ಳಲಾರರು. ಇದರ ಬದಲು ಅವರು ಈ ವಾಕ್ಯದ ಅರ್ಥ ಸಾಮರ್ಥ್ಯ ಕಳೆದು ಹೋದಂತೆ ಇಲ್ಲವೇ ಸಕಾರಾತ್ಮಕ ಅರ್ಥವು ಅರ್ಥಹೀನವಾದಂತೆ ಭಾವಿಸಬಹುದು.

ಸತ್ಯವೇದದಲ್ಲಿನ ಉದಾಹರಣೆಗಳು.

ಸಹೊದರರೇ ನಾವು ನಿಮ್ಮ ಬಳಿಗೆ ಸುಮ್ಮನೆ ವ್ಯರ್ಥವಾಗಿ ಬರಲಿಲ್ಲ . (1 ಥೆಸಲೋನಿಕ 2:1 ULB)

ಪೌಲನು ಇಲ್ಲಿ ಲಿಟೋಟ್ಸ್ ಬಳಸಿ ಅವನು ಅವರನ್ನು ಭೇಟಿಮಾಡಲು ಬಂದದ್ದು ತುಂಬಾ ಉಪಯುಕ್ತವಾದುದು ಎಂದು ಹೇಳಿದ್ದಾನೆ.

ಬೆಳಗಾದ ಮೇಲೆ ಪೇತ್ರನು ಏನಾದನೆಂದು ಸಿಪಾಯಿಗಳಲ್ಲಿಕಳವಳ ಉಂಟಾಯಿತು. (ಆ.ಕೃ. 12:18 ULB)

ಲೂಕನು ಇಲ್ಲಿ ಲಿಟೋಟ್ಸ್ ಬಳಸುವ ಮೂಲಕ ಅಲ್ಲಿ ಸಿಪಾಯಿಗಳು ಪೇತ್ರನು ಏನಾದನೆಂಬ ಬಗ್ಗೆ ಅತಿಯಾದ ಕಳವಳ ಉಂಟಾದ ಬಗ್ಗೆ ಹೇಳುತ್ತಾನೆ. ಪೇತ್ರನನ್ನು ಸೆರೆಯಲ್ಲಿ ಇಡಲಾಗಿತ್ತು, ಅಲ್ಲಿ ಸಿಪಾಯಿಗಳು ಅವನನ್ನು ಕಾವಲು ಕಾಯುತ್ತಿದ್ದರೂ ದೇವದೂತನು ಬಂದು ಪೇತ್ರನನ್ನು ಅಲ್ಲಿಂದ ಬಿಡುಗಡೆ ಮಾಡಿದನು. ಇದರಿಂದ ಅವರು ತುಂಬಾ ಹೆದರಿಕೆಯಿಂದ ಕಳವಳಗೊಂಡರು.

ಯೆಹೂದ ಸೀಮೆಯ ಬೆತ್ಲೆಹೇಮ್. ಯೆಹೂದದ ನಾಯಕರಲ್ಲಿ ನೀನು ಎಷ್ಟುಮಾತ್ರವೂ ಸಣ್ಣದಲ್ಲ. ಒಬ್ಬ ಅಧಿಪತಿಯು ನಿನ್ನಿಂದಲೇ ಹೊರಡುವನು. ಆತನು ನನ್ನ ಪ್ರಜೆಯಾದ ಇಸ್ರಾಯೇಲನನ್ನು ಆಳತಕ್ಕವನು. (ಮತ್ತಾಯ 2:6 ULB)

ಲಿಟೋಟ್ಸ್ ಅನ್ನು ಬಳಸಿ ಪ್ರವಾದಿಯು ಮುಂದೆ ಬೆತ್ಲೆಹೇಮ್ ಬಹು ಪ್ರಮುಖವಾದ ಪಟ್ಟಣವಾಗುತ್ತದೆ ಎಂದು ಹೇಳಿದ್ದಾನೆ .

ಭಾಷಾಂತರ ತಂತ್ರಗಳು.

ಲಿಟೋಟ್ಸ್ ನಿಮ್ಮ ಭಾಷೆಯಲ್ಲಿ ಸರಿಯಾಗಿ ಅರ್ಥವಾಗುವುದಾದರೆ ಅದನ್ನು ಬಳಸಿ.

  1. ನಕಾರಾತ್ಮಕ ಅರ್ಥವು ಸರಿಯಾಗಿ ಅರ್ಥವಾಗದಿದ್ದರೆ ಸಕಾರಾತ್ಮಕ ಪದವನ್ನೇ ಪರಿಣಾಮಕಾರಿಯಾಗಿ ಹೇಳಲು ಪ್ರಯತ್ನಿಸಿ.

ಭಾಷಾಂತರ ಕೌಶಲ್ಯಗಳನ್ನು ಅಳವಡಿಸಿರುವ ಬಗ್ಗೆ ಉದಾಹರಣೆಗಳು.

  1. ನಕಾರಾತ್ಮಕ ಅರ್ಥವು ಸರಿಯಾಗಿ ಅರ್ಥವಾಗದಿದ್ದರೆ ಸಕಾರಾತ್ಮಕ ಪದವನ್ನೇ ಪರಿಣಾಮಕಾರಿಯಾಗಿ ಹೇಳಲು ಪ್ರಯತ್ನಿಸಿ.

ಸಹೊದರರೇ ನಾವು ನಿಮ್ಮ ಬಳಿಗೆ ಸುಮ್ಮನೆ ವ್ಯರ್ಥವಾಗಿ ಬರಲಿಲ್ಲ , (1 ಥೆಸಲೋನಿಕ 2:1 ULB)

  • " ಸಹೊದರರೇ,ನಾನು ನಿಮ್ಮನ್ನು ಭೇಟಿ ಮಾಡಲು ಬಂದದ್ದು ತುಂಬಾ ಒಳ್ಳೆಯದಾಯಿತು ಎಂದು ನಿಮಗೆ ಚೆನ್ನಾಗಿ ಗೊತ್ತಿದೆ ."

  • ಬೆಳಗಾದ ಮೇಲೆ ಪೇತ್ರನು ಏನಾದನೆಂದು ಸಿಪಾಯಿಗಳಲ್ಲಿಕಳವಳ ಉಂಟಾಯಿತು. (ಆ.ಕೃ.12:18 ULB)

    • " ಈಗ ಬೆಳಗಾದ ಮೇಲೆ ಸಿಪಾಯಿಗಳಿಗೆ ಪೇತ್ರನು ಏನಾದನೆಂಬ ಕಳವಳ ಉಂಟಾಯಿತು
    • " ಬೆಳಗದಾಗ ಪೇತ್ರನು ಅಲ್ಲಿ ಇಲ್ಲದಿರುವುದನ್ನು ನೋಡಿದ ಸಿಪಾಯಿಗಳಿಗೆ ಅವನು ಏನಾದನೆಂದು ಕಳವಳ ಉಂಟಾಯಿತು. "