translationCore-Create-BCS_.../translate/figs-genericnoun/01.md

8.4 KiB

ವಿವರಣೆ

ಸಾರ್ವತ್ರಿಕ ನಾಮಪದ ಗುಚ್ಛಗಳು ಜನರನ್ನು ಅಥವಾ ವಸ್ತುಗಳನ್ನು ಕುರಿತು ಸಾಮಾನ್ಯ ಅರ್ಥದಲ್ಲಿ ಹೇಳುತ್ತದೆಯೇ ಹೊರತು ನಿರ್ದಿಷ್ಟ ವೃತ್ತಿ ಅಥವಾ ವಸ್ತುವಿನ ಬಗ್ಗೆ ಹೇಳುವುದಿಲ್ಲ. ಇಂತಹ ಪದಗಳ ಬಳಕೆ ಸತ್ಯವೇದದ “ಜ್ಞಾನೋಕ್ತಿಗಳ“ ಪುಸ್ತಕದಲ್ಲಿ ಬರುತ್ತದೆ. ಇದರಲ್ಲಿ ಬರುವ ವಿಷಯಗಳು ಜನರ ಬಗ್ಗೆ ಇರುವ ನಿಜವಾದ ವಿಷಯಗಳನ್ನು ಸಾಮಾನ್ಯೀಕರಿಸಿ ಹೇಳುವುದು.

ದಗದಗಿಸುವ ಕೆಂಡದ ಮೇಲೆ ಒಬ್ಬ ಮನುಷ್ಯನು ನಡೆದರೆ ಕಾಲುಗಳು ಸುಟ್ಟುಹೋಗುವುದಿಲ್ಲವೇ? ಅದರಂತೆಯೇ ನೆರೆಮನೆಯವನ ಹೆಂಡತಿ ಬಳಿ ಹೋಗುವವನಿಗೆ ಆಗುತ್ತದೆ; ಅವಳನ್ನು ಮುಟ್ಟಿದವನು ದಂಡನೆ ಹೊಂದದೆ ಇರಲಾರ. (ಜ್ಞಾನೋಕ್ತಿಗಳು 6:28 ULT)

ಮೇಲೆ ದಪ್ಪ ಅಕ್ಷರದಲ್ಲಿರುವ ನುಡಿಗಟ್ಟು ನಿರ್ದಿಷ್ಟವಾದ ವ್ಯಕ್ತಿಯನ್ನು ಸೂಚಿಸುವುದಿಲ್ಲ. ಅಂತಹ ತಪ್ಪಾದ ಕಾರ್ಯಗಳನ್ನು ಮಾಡುವಂಥವರನ್ನು ಸೂಚಿಸುತ್ತದೆ.

ಏಕೆಂದರೆ ಇದೊಂದು ಭಾಷಾಂತರ ಸಮಸ್ಯೆ.

ವಿವಿಧ ಭಾಷೆಗಳಲ್ಲಿ ಈ ರೀತಿ ಸಾಮಾನ್ಯೀಕರಿಸಿ ಹೇಳುವ ನಾಮಪದಗಳು ವಿವಿಧ ರೀತಿಯಲ್ಲಿ ಇವೆ. ಭಾಷಾಂತರ ಮಾಡುವವರು ಇವುಗಳನ್ನು ತಿಳಿದುಕೊಂಡು ಅವರವರ ಭಾಷೆಯಲ್ಲಿ ಸಹಜವಾಗಿ ಮೂಡಿಬರುವಂತೆ ಪದಗಳನ್ನು ಬಳಸಬೇಕು.

ಸತ್ಯವೇದಲ್ಲಿನ ಉದಾಹರಣೆಗಳು.

ಶಿಷ್ಟನು ಸಂಕಷ್ಟಗಳಿಂದ ಪಾರಾಗುವನು ದುಷ್ಟನು ಶಿಷ್ಟನಿಗೆ ಬದಲಾಗಿ ಅದರಲ್ಲಿ ಸಿಕ್ಕಿಕೊಳ್ಳುವನು. (ಜ್ಞಾನೋಕ್ತಿಗಳು 11:8 ULT)

ಇಲ್ಲೂ ಸಹ ದಪ್ಪ ಅಕ್ಷರಗಳಲ್ಲಿರುವ ನುಡಿಗಟ್ಟು ನಿರ್ದಿಷ್ಟ ವ್ಯಕ್ತಿಗಳನ್ನು ಸೂಚಿಸುವುದಿಲ್ಲ, ಆದರೆ ಒಳ್ಳೆದನ್ನು ಮಾಡುವಂಥವರನ್ನು ಸೂಚಿಸುತ್ತದೆ.

ಧಾನ್ಯವನ್ನು ಜನರಿಗೆ ಮಾರದೆ ಕೂಡಿಟ್ಟುಕೊಳ್ಳುವ ಆ ಮನುಷ್ಯನಿಗೆ ಜನರು ಶಾಪಹಾಕುತ್ತಾರೆ. (ಜ್ಞಾನೋಕ್ತಿಗಳು 11:26 ULT)

ಇದು ಕೇವಲ ಒಬ್ಬನ ಬಗ್ಗೆ ಹೇಳಿರುವ ಮಾತಲ್ಲ, ಯಾರ್ಯಾರು ಧಾನ್ಯವನ್ನು ಮಾರದೆ ಕೂಡಿಡುತ್ತಾರೋ ಅವರೆಲ್ಲರಿಗೂ ಅನ್ವಯಿಸುತ್ತದೆ.

ಯೆಹೋವನು ಒಳ್ಳೆಯ ಮನುಷ್ಯನಿಗೆ ದಯೆಯನ್ನು ದಯಪಾಲಿಸುತ್ತಾನೆ, ಆದರೆ ಕುಯುಕ್ತಿಗಳನ್ನು ಕಲ್ಪಿಸುವವನನ್ನು ಆತನು ಖಂಡಿಸುತ್ತಾನೆ. (ಜ್ಞಾನೋಕ್ತಿಗಳು12:2 ULT)

ಇಲ್ಲಿ ಬಳಸಿರುವ "ಒಳ್ಳೆಯ ಮನುಷ್ಯನು" ಒಬ್ಬನಿಗೆ ಮಾತ್ರ ಸೀಮಿತವಾಗಿಲ್ಲ ಎಲ್ಲಾ ಒಳ್ಳೆಯವರಿಗೆ ಅನ್ವಯಿಸುತ್ತದೆ. "ಕುಯುಕ್ತಿ ಮಾಡುವವನು" ಎಂಬ ಪದಗಳು ಒಬ್ಬನಿಗೆ ಮಾತ್ರ ಸೀಮಿತವಾಗಿಲ್ಲ ಕುಯುಕ್ತಿ ಮಾಡುವ ಎಲ್ಲರಿಗೆ ಅನ್ವಯಿಸುತ್ತದೆ.

ಭಾಷಾಂತರದ ತಂತ್ರಗಳು

ನಿರ್ದಿಷ್ಠ ವ್ಯಕ್ತಿಯನ್ನು ಅಥವಾ ವಸ್ತುಗಳನ್ನು ಸೂಚಿಸುವುದಕ್ಕೆ ಬದಲಾಗಿ ಜನರನ್ನು ಅಥವಾ ವಸ್ತುಗಳನ್ನು ಸಾಮಾನ್ಯವಾಗಿ ಸೂಚಿಸುವಂಥ ಪದಗಳು, ULTಯ ಪ್ರತಿಯಲ್ಲಿ ಇರುವ ರೀತಿಯ ಪದಗಳು ನಿಮ್ಮ ಭಾಷೆಯಲ್ಲಿ ಇದ್ದರೆ, ಆ ಪದಗಳನ್ನೇ ಬಳಸಿರಿ. ಇಲ್ಲದಿದ್ದರೆ, ಇಲ್ಲಿ ಕೆಲವು ತಂತ್ರಗಳನ್ನು ತಿಳಿಸಲಾಗಿದೆ.

(1) "the" "ಆ ಅಥವಾ ಅಂಥ" ಎಂಬ ಪದವನ್ನು ನಾಮಪದದ ಹಿಂದೆ ಬಳಸಿರಿ.

(2) "a" "ಆ ಅಥವಾ ಒಬ್ಬ" ಎಂಬ ಪದವನ್ನು ನಾಮಪದದ ಹಿಂದೆ ಬಳಸಿರಿ

(3) "ಯಾವ", ಎಂಬ ಪದವನ್ನು "ಯಾರಾದರೂ", "ಯಾವ ವ್ಯಕ್ತಿಯಾದರು" ಎಂದು ಬಳಸಿರಿ.

(4) "ಜನರು" ಎಂಬ ಬಹುವಚನ ರೂಪವನ್ನು ಬಳಸಿರಿ.

(5) ನಿಮ್ಮ ಭಾಷೆಯಲ್ಲಿ ಸಹಜವಾಗಿರುವ ಬೇರೆ ರೀತಿಯನ್ನು ಬಳಸಿರಿ.

ಭಾಷಾಂತರ ತಂತ್ರಗಳನ್ನು ಅಳವಡಿಸಿದ ಉದಾಹರಣೆಗಳು.

(1) "the" "ಆ ಅಥವಾ ಅಂಥ" ಎಂಬ ಪದವನ್ನು ನಾಮಪದದ ಹಿಂದೆ ಬಳಸಿರಿ.

ಯೆಹೋವನು ಒಳ್ಳೆಯ ಮನುಷ್ಯನಿಗೆ ದಯೆಯನ್ನು ದಯಪಾಲಿಸುತ್ತಾನೆ, ಆದರೆ ಕುಯುಕ್ತಿಗಳನ್ನು ಕಲ್ಪಿಸುವವನನ್ನು ಆತನು ಖಂಡಿಸುತ್ತಾನೆ. (ಜ್ಞಾನೋಕ್ತಿಗಳು12:2 ULT)

(2) "a" "ಆ ಅಥವಾ ಒಬ್ಬ" ಎಂಬ ಪದವನ್ನು ನಾಮಪದದ ಹಿಂದೆ ಬಳಸಿರಿ

ಧಾನ್ಯವನ್ನು ಜನರಿಗೆ ಮಾರದೆ ಕೂಡಿಟ್ಟುಕೊಳ್ಳುವ ಆ ಮನುಷ್ಯನಿಗೆ ಜನರು ಶಾಪಹಾಕುತ್ತಾರೆ. (ಜ್ಞಾನೋಕ್ತಿಗಳು 11:26 ULT)

"ಧಾನ್ಯವನ್ನು ಮಾರಲು ನಿರಾಕರಿಸುವ ಒಬ್ಬ ಮನುಷ್ಯನನ್ನು ಜನರು ಶಪಿಸುತ್ತಾರೆ."

(3) "ಯಾವ", ಎಂಬ ಪದವನ್ನು "ಯಾರಾದರೂ", "ಯಾವ ವ್ಯಕ್ತಿಯಾದರು" ಎಂದು ಬಳಸಿರಿ.

ಧಾನ್ಯವನ್ನು ಜನರಿಗೆ ಮಾರದೆ ಕೂಡಿಟ್ಟುಕೊಳ್ಳುವ ಆ ಮನುಷ್ಯನಿಗೆ ಜನರು ಶಾಪಹಾಕುತ್ತಾರೆ. (ಜ್ಞಾನೋಕ್ತಿಗಳು 11:26 ULT)

"ಧಾನ್ಯವನ್ನು ಮಾರಲು ನಿರಾಕರಿಸುವ ಯಾವ ಮನುಷ್ಯನನ್ನು ಜನರು ಶಪಿಸುತ್ತಾರೆ."

(4) "ಜನರು" ಎಂಬ ಬಹುವಚನ ರೂಪವನ್ನು ಬಳಸಿರಿ. (ಅಥವಾ ಈ ವಾಕ್ಯದಲ್ಲಿ ಮನುಷ್ಯರು/ ಪುರುಷರು)

ಧಾನ್ಯವನ್ನು ಜನರಿಗೆ ಮಾರದೆ ಕೂಡಿಟ್ಟುಕೊಳ್ಳುವ ಆ ಮನುಷ್ಯನಿಗೆ ಜನರು ಶಾಪಹಾಕುತ್ತಾರೆ. (ಜ್ಞಾನೋಕ್ತಿಗಳು 11:26 ULT)

"ಧಾನ್ಯವನ್ನು ಮಾರಲು ನಿರಾಕರಿಸುವ ಮನುಷ್ಯರನ್ನು ಜನರು ಶಪಿಸುತ್ತಾರೆ."

(5) ನಿಮ್ಮ ಭಾಷೆಯಲ್ಲಿ ಸಹಜವಾಗಿರುವ ಬೇರೆ ರೀತಿಯನ್ನು ಬಳಸಿರಿ.

ಧಾನ್ಯವನ್ನು ಜನರಿಗೆ ಮಾರದೆ ಕೂಡಿಟ್ಟುಕೊಳ್ಳುವ ಆ ಮನುಷ್ಯನಿಗೆ ಜನರು ಶಾಪಹಾಕುತ್ತಾರೆ. (ಜ್ಞಾನೋಕ್ತಿಗಳು 11:26 ULT)

"ಧಾನ್ಯವನ್ನು ಮಾರಲು ನಿರಾಕರಿಸುವ ಯಾರನ್ನಾದರೂ ಜನರು ಶಪಿಸುತ್ತಾರೆ."