translationCore-Create-BCS_.../translate/figs-euphemism/01.md

7.7 KiB

ವಿವರಣೆ

ಸಾಹಿತ್ಯದಲ್ಲಿ ಕೆಲವೊಮ್ಮೆ ಅಹಿತಕರ ಘಟನೆಗಳು, ಗಲಿಬಿಲಿಗೊಳಿಸುವ ಮಾತುಗಳು ಸಂಕೋಚಕ್ಕೆ ಗುರಿಮಾಡುವ ಸಂಗತಿಗಳು, ಸಾಮಾಜಿಕವಾಗಿ ಸಮ್ಮತವಲ್ಲದ, ಎಲ್ಲರೆದುರಿಗೆ ಹೇಳಲಾರದಂಥ ಮಾತುಗಳಿದ್ದರೆ ಅವುಗಳನ್ನು ನಯವಾದ ಮಾತುಗಳಲ್ಲಿ ತಿಳಿಸುವುದನ್ನು ಸೌಮ್ಯೋಕ್ತಿಗಳೆಂದು ಕರೆಯುತ್ತೇವೆ. ಉದಾಹರನೆಗೆ ಸಾವಿನ ಬಗ್ಗೆ ಬಹಿರಂಗವಾಗಿ ಹೇಳದೆ ಅಥವಾ ಕೆಲಸಗಳ ಬಗ್ಗೆ ಹೇಳುವಾಗ ಉಪಯೋಗಿಸಬಹುದಾದ ನಯ ನುಡಿಗಳು.

... ಅವರು ಸೌಲನು ಮತ್ತು ಅವನ ಮೂವರು ಗಂಡುಮಕ್ಕಳು ಗಿಲ್ಟೋವಾ ಬೆಟ್ಟದ ಮೇಲೆ ಬಿದ್ದಿರುವುದನ್ನು ಕಂಡರು. (1 ನೇ ಪೂರ್ವಕಾಲ ವೃತ್ತಾಂತ 10:8 ULT)

ಸೌಲ ಮತ್ತು ಅವನ ಗಂಡುಮಕ್ಕಳು "ಸತ್ತುಹೋಗಿದ್ದರು" ಎಂಬುದು ಇದರ ಅರ್ಥ. ಇದೊಂದು ಸೌಮ್ಯೋಕ್ತಿ, ಏಕೆಂದರೆ ಇಲ್ಲಿ ಮುಖ್ಯ ವಿಷಯವೆಂದರೆ ಸೌಲ ಮತ್ತು ಅವನ ಮಕ್ಕಳ ಮರಣಹೊಂದಿರುವುದನ್ನು ಆದರೆ ಅಲ್ಲಿ ಅವರು ಬಿದ್ದಿದ್ದರು ಎಂದು ಹೇಳಲಾಗಿದೆ. ಕೆಲವೊಮ್ಮೆ ಜನರು ಸಾವಿನ ಬಗ್ಗೆ ನೇರವಾಗಿ ಮಾತನಾಡಲು ಹಿಂಜರಿಯುತ್ತಾರೆ. ಏಕೆಂದರೆ ಅದೊಂದು ಅಹಿತಕರವಾದ ಅನುಭವ.

ಕಾರಣವೇನಂದರೆ ಇದೊಂದು ಭಾಷಾಂತರ ಸಮಸ್ಯೆ

ಬೇರೆ ಬೇರೆ ಭಾಷೆಗಳಲ್ಲಿ ಬೇರೆಬೇರೆ ರೀತಿಯ ಸೌಮ್ಯೋಕ್ತಿಗಳನ್ನು ಬಳಸುತ್ತಾರೆ. ಮೂಲ ಭಾಷೆಯಲ್ಲಿರುವ ಸೌಮ್ಯೋಕ್ತಿಗಳಂತೆ ಭಾಷಾಂತರಿಸುವ ಭಾಷೆಯಲ್ಲಿ ಸೌಮ್ಯೋಕ್ತಿಗಳನ್ನು ಬಳಸಲು ಸಾಧ್ಯವಾಗದಿದ್ದರೆ, ಓದುಗರಿಗೆ ಸರಿಯಾದ ಅರ್ಥ ತಿಳಿಯದೆ ಹೋಗಬಹುದು. ಬರಹಗಾರರು ಬರೆದ ಕೇವಲ ಪದಶಃ ಅರ್ಥ ತಿಳಿಯಲು ಸಾಧ್ಯವಾಗುತ್ತದೆಯೇ ಹೊರತು ಅದರ ಒಳಾರ್ಥ ತಿಳಿಯದೆ ಹೋಗಬಹುದು.

ಸತ್ಯವೇದದಲ್ಲಿನ ಉದಾಹರಣೆಗಳು

... ಅಲ್ಲಿದ್ದ ಗುಹೆಯಿತ್ತು. ಸೌಲನು ತನ್ನ ಪಾದಗಳನ್ನು ಮುಚ್ಚುವುದಕ್ಕಾಗಿ ಗುಹೆಯೊಳಗೆ ಹೋದನು. (1 ಸಮುವೇಲ 24:3 ULT)

ಮೂಲ ಓದುಗರು ಸೌಲನು ಆ ಗುಹೆಯೊಳಗೆ ತನ್ನ ಶೌಚಕಾರ್ಯಕ್ಕಾಗಿ ಹೋದನು ಎಂದು ಅರ್ಥಮಾಡಿಕೊಂಡಿದ್ದರು. ಆದರೆ ಇದನ್ನು ಬರೆದ ಲೇಖಕನು ಓದುಗರಿಗೆ ಮುಜುಗರವನ್ನು ಉಂಟುಮಾಡುವುದನ್ನಾಗಲಿ ಅಥವಾ ಗಮನವನ್ನು ಹಾಳಮಾಡುವುದನ್ನಾಗಲಿ ತಪ್ಪಿಸುವುದಕ್ಕಾಗಿ, ಸೌಲನು ಗುಹೆಯೊಳಗೆ ಏನು ಮಾಡಿದನು ಅಥವಾ ಅವನು ಅಲ್ಲಿ ಏನು ಬಿಟ್ಟು ಬಂದನು ಎಂದು ಅವನು ಅದನ್ನು ನಿರ್ದಿಷ್ಟವಾಗಿ ಹೇಳಲಿಲ್ಲ.

ಆದರೆ ಮರಿಯಳು ದೇವದೂತನಿಗೆ, “ಇದು ಹೇಗೆ ಸಾಧ್ಯ ನಾನು ಪುರುಷನನ್ನು ಅರಿತವಳಲ್ಲವಲ್ಲಾ?” ಎಂದು ಹೇಳಿದಳು. ಲೂಕ 1:34 ULT)

ನಯವಾಗಿ ಹೇಳಲು, ಮರಿಯಳು ಸೌಮ್ಯೋಕ್ತಿಯನ್ನು ಬಳಸಿ, ಆಕೆ ಇದುವರೆಗೂ ಯಾವ ಪುರುಷನ ದೈಹಿಕ ಸಂಪರ್ಕ ಮಾಡಿಲ್ಲ ಎಂದು ಹೇಳಿದಳು.

ಭಾಷಾಂತರದ ಕಾರ್ಯತಂತ್ರಗಳು

ಸೌಮ್ಯೋಕ್ತಿಗಳು ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತು ಸರಿಯಾದ ಅರ್ಥವನ್ನು ಕೊಡುವುದಾದರೆ ಅವುಗಳನ್ನೇ ಬಳಸಿರಿ. ಇಲ್ಲದಿದ್ದರೆ ಇಲ್ಲಿ ಕೊಟ್ಟಿರುವ ಕೆಲವು ಅಂಶಗಳನ್ನು ಗಮನಿಸಿರಿ:

(1) ನಿಮ್ಮ ಸಂಸ್ಕೃತಿಯಲ್ಲಿರುವ ಸೌಮ್ಯೋಕ್ತಿಯನ್ನು ಬಳಸಿರಿ.

(2) ಸೌಮ್ಯೋಕ್ತಿಯು ಅವಮಾನಕರವಾಗಿದೆ ಎಂದು ಅನ್ನಿಸುವುದಾದರೆ, ಅದರಲ್ಲಿರುವ ಮಾಹಿತಿಯನ್ನು ಸೌಮ್ಯೋಕ್ತಿಯನ್ನು ಬಳಸದೆ ಸರಳವಾಗಿ ಹೇಳಬಹುದು.

ಭಾಷಾಂತರದ ಕಾರ್ಯತಂತ್ರಗಳನ್ನು ಅನ್ವಯಿಸಿಯಿರುವ ಉದಾಹರಣೆಗಳು

(1) ನಿಮ್ಮ ಸಂಸ್ಕೃತಿಯಲ್ಲಿರುವ ಸೌಮ್ಯೋಕ್ತಿಯನ್ನು ಬಳಸಿರಿ.

… ಅಲ್ಲಿ ಗುಹೆಯಿತ್ತು. ಸೌಲನು ತನ್ನ ಪಾದಗಳನ್ನು ಮುಚ್ಚುವುದಕ್ಕಾಗಿ ಗುಹೆಯೊಳಗೆ ಹೋದನು. (1 ಸಮುವೇಲ 24:3 ULT) — ಕೆಲವು ಭಾಷೆಗಳಲ್ಲಿ ಹೀಗೆ ಸೌಮ್ಯೋಕ್ತಿಯನ್ನು ಬಳಬಹುದು:

“…ಅಲ್ಲಿ ಗುಹೆಯಿತ್ತು. ಸೌಲನು ಗುಹೆಯೊಳಗೆ ಹೋಗಿ ಅಲ್ಲಿ ಒಂದು ಗುಂಡಿಯನ್ನು ತೋಡಿದನು"

“…ಅಲ್ಲಿ ಗುಹೆಯಿತ್ತು. ಸೌಲನು ಗುಹೆಯೊಳಗೆ ಹೋದನು ಅಲ್ಲಿ ಸ್ವಲ್ಪ ಸಮಯ ಏಕಾಂತವಾಗಿದ್ದನು"

ಆದರೆ ಮರಿಯಳು ದೇವದೂತನಿಗೆ, “ಇದು ಹೇಗೆ ಸಾಧ್ಯ ನಾನು ಪುರುಷನನ್ನು ಅರಿತವಳಲ್ಲವಲ್ಲಾ?” ಎಂದು ಹೇಳಿದಳು. ಲೂಕ 1:34 ULT)

ಆದರೆ ಮರಿಯಳು ದೇವದೂತನಿಗೆ, “ ಇದು ಹೇಗೆ ನಡೆಯಲು ಸಾಧ್ಯ?, ನಾನು ಪುರುಷನೊಂದಿಗೆ ಮಲಗಿಲ್ಲವಲ್ಲಾ?" ಅಂದಳು.

(2) ಸೌಮ್ಯೋಕ್ತಿಯು ಅವಮಾನಕರವಾಗಿದೆ ಎಂದು ಅನ್ನಿಸುವುದಾದರೆ, ಅದರಲ್ಲಿರುವ ಮಾಹಿತಿಯನ್ನು ಸೌಮ್ಯೋಕ್ತಿಯನ್ನು ಬಳಸದೆ ಸರಳವಾಗಿ ಹೇಳಬಹುದು.

ಅವರು ಸೌಲನು ಮತ್ತು ಅವನ ಗಂಡು ಮಕ್ಕಳು ಗಿಲ್ಟೋವಾ ಬೆಟ್ಟದ ಮೇಲೆ ಬಿದ್ದಿರುವುದನ್ನು ಕಂಡರು. (1 ನೇ ಪೂರ್ವಕಾಲವೃತ್ತಾಂತ 10:8 ULB)

”ಅವರು ಸೌಲನು ಮತ್ತು ಅವನ ಗಂಡು ಮಕ್ಕಳು ಗಿಲ್ಟೋವಾ ಬೆಟ್ಟದ ಮೇಲೆ ಸತ್ತು ಬಿದ್ದಿರುವುದನ್ನು ಕಂಡರು."