translationCore-Create-BCS_.../translate/figs-abstractnouns/01.md

13 KiB

ವಿವರಣೆ

ಮನೋಭಾವಗಳು, ಗುಣಗಳು, ಸಂಗತಿಗಳು ಅಥವಾ ಪರಿಸ್ಥಿತಿಗಳನ್ನು ಸೂಚಿಸುವ ನಾಮಪದಗಳೇ ಭಾವವಾಚಕ ನಾಮಪದಗಳಾಗಿವೆ. ಈ ವಿಷಯಗಳು ಕಣ್ಣಿನಿಂದ ನೋಡುವುದಕ್ಕಾಗಲೀ, ಶಾರೀರಿಕ ಇಂದ್ರಿಯಗಳಿಂದ ಸ್ಪರ್ಶಿಸುವುದಕ್ಕಾಗಲೀ ಸಾಧ್ಯವಿಲ್ಲದಂಥ ಸಂತೋಷ, ತೂಕ, ಒಗ್ಗಟ್ಟು, ಸ್ನೇಹ, ಆರೋಗ್ಯ, ಮತ್ತು ಯುಕ್ತಿ ಎಂಬಂಥವುಗಳಾಗಿವೆ. ಇದೊಂದು ಅನುವಾದದ ಸಮಸ್ಯೆಯಾಗಿದೆ. ಏಕೆಂದರೆ ಕೆಲವು ಭಾಷೆಗಳಲ್ಲಿ ಭಾವವಾಚಕ ನಾಮಪದಗಳನ್ನು ವ್ಯಕ್ತಪಡಿಸಲು ನಿರ್ದಿಷ್ಠ ವಿಷಯಗಳನ್ನು ಬಳಸಬಹುದು, ಇನ್ನೂ ಕೆಲವು ಭಾಷೆಗಳಲ್ಲಿ ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸುವ ಬಗ್ಗೆ ಯೋಚಿಸಬೇಕಾಗಬಹುದು.

ನಾಮಪದಗಳು ಒಬ್ಬ ವ್ಯಕ್ತಿಯನ್ನು, ಸ್ಥಳವನ್ನು, ವಸ್ತುವನ್ನು ಅಥವಾ ಕಲ್ಪನೆಗಳನ್ನು ಸೂಚಿಸುವಂಥವುಗಳಾಗಿವೆ. ಭಾವವಾಚಕ ನಾಮಪದಗಳು ಕಲ್ಪನೆಗಳನ್ನು ಸೂಚಿಸುತ್ತದೆ. ಇವು ಮನೋಭಾವಗಳು, ಗುಣಗಳು, ಸಂಗತಿಗಳು, ಸನ್ನಿವೇಶಗಳು ಅಥವಾ ಈ ವಿಚಾರಗಳ ನಡುವಿನ ಸಂಬಂಧಗಳು ಆಗಿರಬಹುದು. ಇವು ನೋಡಲು, ಅಥವಾ ಶಾರೀರಿಕ ಇಂದ್ರಿಯಗಳಿಂದ ಸ್ಪರ್ಶಿಸಲು ಸಾಧ್ಯವಿಲ್ಲದಂಥಗಳಾದ ಸಂತೋಷ, ಸಮಾಧಾನ, ಸೃಷ್ಟಿ, ಒಳ್ಳೆತನ, ತೃಪ್ತಿ, ನ್ಯಾಯ, ಸತ್ಯ, ಸ್ವಾತಂತ್ರ, ದ್ವೇಷ, ಮಂದಬುದ್ದಿ, ಎತ್ತರ, ಉದ್ದ, ತೂಕ ಇತ್ಯಾದಿ.

ಸತ್ಯವೇದಾತ್ಮಕ (ಬಿಬ್ಲಿಕಲ್) ಗ್ರೀಕ್‌ ಮತ್ತು ಅಂಗ್ಲ ಭಾಷೆಗಳಂತಹ ಕೆಲವೊಂದು ಭಾಷೆಗಳು ಬಹಳಷ್ಟು ಭಾವವಾಚಕ ನಾಮಪದಗಳನ್ನು ಬಳಸುತ್ತವೆ. ಈ ಭಾವವಾಚಕ ನಾಮಪದಗಳು ಕ್ರಿಯೆಗಳಿಗೆ ಅಥವಾ ಗುಣಗಳಿಗೆ ಹೆಸರನ್ನು ನೀಡುವ ರೀತಿಯಾಗಿರುವುದ್ದರಿಂದ‌ ಈ ಭಾಷೆಗಳನ್ನು ಮಾತನಾಡುವ ಜನರು ಅವುಗಳನ್ನು ವಸ್ತುಗಳೋ ಎಂಬಂತೆ ಹೇಳಬಹುದು. ಉದಾಹರಣೆಗೆ, ಭಾವವಾಚಕ ನಾಮಪದಗಳನ್ನು ಬಳಸುವ ಭಾಷೆಗಳಲ್ಲಿ "ನಾನು ಪಾಪ ಕ್ಷಮಾಪಣೆಯನ್ನು ನಂಬುತ್ತೇನೆ" ಎಂದು ಜನರು ಹೇಳಬಹುದು. ಆದರೆ ಕೆಲವೊಂದು ಭಾಷೆಗಳು ಭಾವವಾಚಕ ನಾಮಪದಗಳನ್ನು ಹೆಚ್ಚಾಗಿ ಬಳಸುವುದಿಲ್ಲ. ಈ ಭಾಷೆಗಳಲ್ಲಿ "ಕ್ಷಮಾಪಣೆ" ಮತ್ತು "ಪಾಪ," ಎಂಬ ಎರಡು ಭಾವವಾಚಕ ನಾಮಪದಗಳು ಇಲ್ಲದಿರಬಹುದು, ಆದರೆ ಅವರು ಅದೇ ಅರ್ಥವನ್ನು ಬೇರೆ ರೀತಿಗಳಲ್ಲಿ ವ್ಯಕ್ತಪಡಿಸಬಹುದು. ಉದಾಹರಣೆಗೆ, ಅವರು ಆ ವಿಚಾರಗಳಿಗೆ ನಾಮಪದಗಳನ್ನು ಬಳಸುವ ಬದಲು ಕ್ರಿಯಾಪದಗಳನ್ನು ಬಳಸಿಕೊಂಡು, "ಜನರು ಪಾಪ ಮಾಡಿದ ಮೇಲೆ ದೇವರು ಅವರನ್ನು ಕ್ಷಮಿಸಲು ಇಚ್ಛೆಯುಳ್ಳವನಾಗಿರುತ್ತಾನೆ" ಎಂದು ಹೇಳಬಹುದು.

ಕಾರಣವೇನಂದರೆ ಇದು ಭಾಷಾಂತರದ ಸಮಸ್ಯೆಯಾಗಿದೆ

ನೀವು ಯಾವ ಬೈಬಲಿನಿಂದ ಭಾಷಾಂತರ ಮಾಡುತ್ತಿರುವಿರೋ ಅದು ಕೆಲವೊಂದು ವಿಚಾರಗಳನ್ನು ವ್ಯಕ್ತಪಡಿಸಲು ಭಾವವಾಚಕ ನಾಮಪದಗಳನ್ನು ಉಪಯೋಗಿಸಬಹುದು. ಆ ವಿಚಾರಗಳನ್ನು ವ್ಯಕ್ತಪಡಿಸಲು ನಿಮ್ಮ ಭಾಷೆಯಲ್ಲಿ ಭಾವವಾಚಕ ನಾಮಪದಗಳನ್ನು ಬಳಸದಿರಬಹುದು; ಅದಕ್ಕೆ ಬದಲಾಗಿ, ಆ ವಿಚಾರಗಳನ್ನು ವ್ಯಕ್ತಪಡಿಸಲು ಪದಗುಚ್ಛಗಳನ್ನು ಬಳಸಬಹುದು. ಇಂತಹ ಪದಗುಚ್ಛಗಳು ಬೇರೆ ರೀತಿಯ ಪದಗಳನ್ನು ಬಳಸಬಹುದು. ಅಂತಹ ಪದಗಳು ಯಾವುದೆಂದರೆ ಗುಣವಾಚಕ, ಕ್ರಿಯಾಪದಗಳು, ಕ್ರಿಯಾವಿಶೇಷಣ ಇವುಗಳನ್ನು ಭಾವವಾಚಕ ನಾಮಪದದ ಅರ್ಥವನ್ನು ವ್ಯಕ್ತಪಡಿಸಲು ಬಳಸಬಹುದು. ಉದಾಹರಣೆಗೆ, “ಅದರ ತೂಕ ಎಷ್ಟು?” "ಇದು ಎಷ್ಟು ತೂಕ ಇರಬಹುದೆಂದು ತೂಗಿ ನೋಡು?" ಅಥವಾ “ಅದು ಎಷ್ಟು ಭಾರ ಇರಬಹುದು?”

ಸತ್ಯವೇದದಲ್ಲಿನ ಉದಾಹರಣೆಗಳು

ಬಾಲ್ಯದಿಂದಲೂ ನಿನಗೆ ಪರಿಶುದ್ಧ ಗ್ರಂಥಗಳ ಪರಿಚಯವಾಗಿದೆಯಲ್ಲಾ… (2 ತಿಮೊಥೆ 3:15 ULT)

"ಬಾಲ್ಯ" ಎಂಬ ಭಾವಸೂಚಕ ನಾಮಪದವು ಒಬ್ಬ ವ್ಯಕ್ತಿ ಮಗುವಾಗಿದ್ದ ಸಮಯವನ್ನು ಸೂಚಿಸುತ್ತದೆ.

ಆದರೆ ಸಂತುಷ್ಟಿ ಸಹಿತವಾದ ದೈವಭಕ್ತಿ ದೊಡ್ಡ ಲಾಭವೇ ಆಗಿದೆ. (1 ತಿಮೊಥೆ 6:6 ULT)

"ದೈವಭಕ್ತಿ" ಮತ್ತು "ಸಂತುಷ್ಟಿ" ಎಂಬ ಭಾವಸೂಚಕ ನಾಮಪದಗಳು ಭಕ್ತಿಯುಳ್ಳವರು ಮತ್ತು ತೃಪ್ತಿಯುಳ್ಳವರು ಆಗಿರುವುದನ್ನು ಸೂಚಿಸುತ್ತದೆ. "ಲಾಭ" ಎಂಬ ಭಾವಸೂಚಕ ನಾಮಪದವು ಕೆಲವರಿಗೆ ಉಂಟಾಗುವಂಥ ಪ್ರಯೋಜನಗಳನ್ನು ಅಥವಾ ಸಹಾಯವನ್ನು ಸೂಚಿಸುತ್ತದೆ.

ಇಂದು ಈ ಮನೆಗೆ ರಕ್ಷಣೆ ಉಂಟಾಯಿತು, ಏಕೆಂದರೆ ಇವನು ಸಹ ಅಬ್ರಹಾಮನ ವಂಶಿಕನಾಗಿದ್ದಾನೆ (ಲೂಕ 19:9 ULT)

ಇಲ್ಲಿ ರಕ್ಷಣೆ ಎಂಬ ಭಾವಸೂಚಕ ನಾಮಪದವು ರಕ್ಷಿಸಲ್ಪಡುತ್ತಿರುವನು ಎಂಬುದನ್ನು ಸೂಚಿಸುತ್ತದೆ.

ಕೆಲವರು ತಡ ವಾಗಿದೆ ಎಂದು ಭಾವಿಸುವ ಪ್ರಕಾರ, ಕರ್ತನು ತನ್ನ ವಾಗ್ದಾನಗಳ ವಿಷಯದಲ್ಲಿ ತಡಮಾಡುವುದಿಲ್ಲ (2 ಪೇತ್ರ 3:9 ULT)

ತಡ ಎಂಬ ಭಾವಸೂಚಕ ನಾಮಪದವು ಮುಗಿಸಬೇಕಾದ ಕೆಲಸವನ್ನು ನಿಧಾನವಾಗಿ ಮಾಡುವಂಥದ್ದನ್ನು ಸೂಚಿಸುತ್ತದೆ.

ಆತನು ಕತ್ತಲೆಯಲ್ಲಿ ಅಡಗಿರುವ ಗುಪ್ತ ವಿಚಾರಗಳನ್ನು ಬೆಳಕಿಗೆ ತರುವನು ಮತ್ತು ಹೃದಯದ ಉದ್ದೇಶಗಳನ್ನು ಬಹಿರಂಗಪಡಿಸುವನು. (1 ಕೊರಿಂಥ 4:5 ULT)

ಉದ್ದೇಶಗಳು ಎಂಬ ಭಾವಸೂಚಕ ನಾಮಪದವು ಜನರು ಮಾಡಬೇಕೆಂದಿರುವ ಮತ್ತು ಅವುಗಳನ್ನು ಏಕೆ ಮಾಡಬೇಕೆಂದಿರುವರು ಎಂಬ ಕಾರಣಗಳನ್ನು ಸೂಚಿಸುತ್ತದೆ.

ಭಾಷಾಂತರದ ಕಾರ್ಯತಂತ್ರಗಳು

ನಿಮ್ಮ ಭಾಷೆಯಲ್ಲಿ ಭಾವವಾಚಕ ನಾಮಪದದಂತಹ ಪದಗಳು ಇದ್ದು, ಅವು ಸರಿಯಾದ ಅರ್ಥ ನೀಡುವಂತಾಗಿದ್ದರೆ ಅಂತಹ ಪದಗಳನ್ನೇ ಉಪಯೋಗಿಸಬಹುದು. ಹಾಗೆ ಬಳಸಲು ಪದಗಳು ಇಲ್ಲದಿದ್ದರೆ ಬೇರೊಂದು ಆಯ್ಕೆಯಿದೆ:

  1. ಭಾವವಾಚಕ ನಾಮಪದದ ಅರ್ಥವನ್ನು ವ್ಯಕ್ತಪಡಿಸುವಂಥ ಪದಗುಚ್ಛದೊಂದಿಗೆ ಬೇರೆ ಪದಗಳಲ್ಲಿ ವಾಕ್ಯವನ್ನು ರಚಿಸಿರಿ. ಭಾವವಾಚಕ ನಾಮಪದದ ಉದ್ದೇಶವನ್ನು ವ್ಯಕ್ತಪಡಿಸಲು ಕೆಲವೊಮ್ಮೆ ನಾಮಪದಕ್ಕೆ ಬದಲಾಗಿ ಹೊಸ ಪದಗುಚ್ಛವು ಕ್ರಿಯಾಪದವನ್ನು, ಕ್ರಿಯಾವಿಶೇಷಣವನ್ನು ಮತ್ತು ಗುಣವಾಚಕವನ್ನು ಬಳಸಬಹುದು.

ಭಾಷಾಂತರದ ಕಾರ್ಯತಂತ್ರಗಳನ್ನು ಅನ್ವಯಿಸಲಾಗಿರುವ ಉದಾಹರಣೆಗಳು

(1) ಭಾವವಾಚಕ ನಾಮಪದದ ಅರ್ಥವನ್ನು ವ್ಯಕ್ತಪಡಿಸುವಂಥ ಪದಗುಚ್ಛದೊಂದಿಗೆ ಬೇರೆ ಪದಗಳಲ್ಲಿ ವಾಕ್ಯವನ್ನು ರಚಿಸಿರಿ. ಭಾವವಾಚಕ ನಾಮಪದದ ಉದ್ದೇಶವನ್ನು ವ್ಯಕ್ತಪಡಿಸಲು ಕೆಲವೊಮ್ಮೆ ನಾಮಪದಕ್ಕೆ ಬದಲಾಗಿ ಹೊಸ ಪದಗುಚ್ಛವು ಕ್ರಿಯಾಪದವನ್ನು, ಕ್ರಿಯಾವಿಶೇಷಣವನ್ನು ಮತ್ತು ಗುಣವಾಚಕವನ್ನು ಬಳಸಬಹುದು.

ಬಾಲ್ಯದಿಂದಲೂ ನಿನಗೆ ಪರಿಶುದ್ಧ ಗ್ರಂಥಗಳ ಪರಿಚಯವಾಗಿದೆಯಲ್ಲಾ… (2 ತಿಮೊಥೆ 3:15 ULT)

ನೀನು ಚಿಕ್ಕ ಮಗುವಾಗಿದ್ದಾಗಿನಿಂದಲೂ ಪರಿಶುದ್ಧ ಗ್ರಂಥಗಳು ನಿನಗೆ ತಿಳಿದುಕೊಂಡಿದೆ.

ಆದರೆ ಸಂತುಷ್ಟಿ ಸಹಿತವಾದ ದೈವಭಕ್ತಿ ದೊಡ್ಡ ಲಾಭವೇ ಆಗಿದೆ. (1 ತಿಮೊಥೆ 6:6 ULT)

ಆದರೆ ಭಕ್ತಿಯುಳ್ಳವರು ಮತ್ತು ಸಂತೃಪ್ತಿಯುಳ್ಳವರು ಆಗಿರುವುದು ತುಂಬಾ ಲಾಭಕರವಾದುದು ಆಗಿದೆ.
ಆದರೆ ನಾವು ಭಕ್ತಿಯುಳ್ಳವರು ಮತ್ತು ಸಂತೃಷ್ಟರು ಆಗಿರುವಾಗ ನಮಗೆ ಹೆಚ್ಚು ಪ್ರಯೋಜನವಾಗುತ್ತದೆ. ಆದರೆ ನಾವು ದೇವರನ್ನು ಗೌರವಿಸಿ ವಿಧೇಯರಾಗುವಾಗ ಮತ್ತು ನಾವು ನಮಗೆ ಇರುವುದರಲ್ಲಿ ಸಂತೋಷ ಪಡುವಾಗ ನಮಗೆ ಹೆಚ್ಚು ಲಾಭವಾಗುತ್ತದೆ.

ಇಂದು ಈ ಮನೆಗೆ ರಕ್ಷಣೆ ಉಂಟಾಯಿತು, ಏಕೆಂದರೆ ಇವನು ಸಹ ಅಬ್ರಹಾಮನ ವಂಶಿಕನಾಗಿದ್ದಾನೆ (ಲೂಕ 19:9 ULT)

ಇಂದು ಈ ಮನೆಯಲ್ಲಿರುವ ಜನರು ರಕ್ಷಣೆ ಹೊಂದಿದರು… ಇಂದು ದೇವರು ಈ ಮನೆಯಲ್ಲಿರುವ ಜನರನ್ನು ರಕ್ಷಿಸಿದನು

ಕೆಲವರು ತಡ ವಾಗಿದೆ ಎಂದು ಭಾವಿಸುವ ಪ್ರಕಾರ, ಕರ್ತನು ತನ್ನ ವಾಗ್ದಾನಗಳ ವಿಷಯದಲ್ಲಿ ತಡಮಾಡುವುದಿಲ್ಲ (2 ಪೇತ್ರ 3:9 ULT)

ಕೆಲವರು ನಿಧಾನ ಮಾಡುತ್ತಾನೆ ಎಂದು ಭಾವಿಸುವ ಪ್ರಕಾರ, ಕರ್ತನು ತನ್ನ ವಾಗ್ದಾನಗಳ ವಿಷಯದಲ್ಲಿ ನಿಧಾನ ಮಾಡುವುದಿಲ್ಲ

ಆತನು ಕತ್ತಲೆಯಲ್ಲಿ ಅಡಗಿರುವ ಗುಪ್ತ ವಿಚಾರಗಳನ್ನು ಬೆಳಕಿಗೆ ತರುವನು ಮತ್ತು ಹೃದಯದ ಉದ್ದೇಶಗಳನ್ನು ಬಹಿರಂಗಪಡಿಸುವನು. (1 ಕೊರಿಂಥ 4:5 ULT)

ಕತ್ತಲೆಯಲ್ಲಿರುವ ಗುಪ್ತ ವಿಚಾರಗಳನ್ನು ಬೆಳಕಿಗೆ ತರುವನು ಮತ್ತು ಜನರು ಮಾಡಬೇಕೆಂದಿರುವ ಕಾರ್ಯಗಳನ್ನು ಮತ್ತು ಅವರು ಮಾಡಬೇಕೆಂದಿರುವುದಕ್ಕೆ ಕಾರಣವನ್ನು ಬಹಿರಂಗ ಪಡಿಸುವನು.