translationCore-Create-BCS_.../translate/figs-extrainfo/01.md

7.2 KiB

ವಿವರಣೆ

ಕೆಲವೊಮ್ಮೆ ಊಹಿಸಿದ ಜ್ಞಾನ ಅಥವಾ ಸೂಚ್ಯ ಮಾಹಿತಿಯನ್ನು ಸ್ಪಷ್ಟಪಡಿಸದೇ ಇರುವುದು ಉತ್ತಮ. ಯಾವಾಗ ಇದನ್ನು ಮಾಡಬಾರದು ಎಂಬುದರ ಬಗ್ಗೆ ಈ ಪುಟವು ಸ್ವಲ್ಪ ನಿರ್ದೇಶನವನ್ನು ನೀಡುತ್ತದೆ.

ಭಾಷಾಂತರ ತತ್ವಗಳು

  • ಭಾಷಣಕಾರ ಅಥವಾ ಲೇಖಕ ಉದ್ದೇಶಪೂರ್ವಕವಾಗಿ ಕೆಲವು ವಿಚಾರಗಳನ್ನು ಅಸ್ಪಷ್ಟವಾಗಿ ಬಿಟ್ಟಿದ್ದರೆ, ಅದನ್ನು ಸರಿಪಡಿಸಲು ಪ್ರಯತ್ನಿಸದಿರಿ.
  • ಮೂಲ ಓದುಗರಿಗೆ ಭಾಷಣಕಾರ ಏನು ಅರ್ಥೈಸಿದ್ದಾನೆಂದು ಅರ್ಥವಾಗದಿದ್ದರೆ, ಇದನ್ನು ನೀವು ನಿಮ್ಮ ಓದುಗರಿಗೆ ಸ್ಪಷ್ಟವಾಗಿ ತಿಳಿಸಲು ಪ್ರಯತ್ನಿಸಿದರೆ, ಅವರಿಗೆ ಅದು ವಿಸ್ಮಯವಾಗಿ ತೋರಬಹುದು ಮತ್ತು ಮೂಲ ಓದುಗರು ಏಕೆ ಅರ್ಥಮಾಡಿಕೊಳ್ಳಲು ಆಗಲಿಲ್ಲ ಎಂದು ಯೋಚಿಸಬಹುದು.
  • ನೀವು ಊಹಿಸಿದ ಜ್ಞಾನ ಅಥವಾ ಸೂಚ್ಯ ಮಾಹಿತಿಯನ್ನು ಸ್ಪಷ್ಟವಾಗಿ ಹೇಳಲು ಪ್ರಯತ್ನಿಸಿದರೆ, ಮೂಲ ಪ್ರೇಕ್ಷಕರಿಗೆ ಆ ವಿಷಯಗಳನ್ನು ಹೇಳಬೇಕಾದ ಅಗತ್ಯವಿದೆ ಎಂದು ನಿಮ್ಮ ಓದುಗರು ಯೋಚಿಸದ ರೀತಿಯಲ್ಲಿ ಅದನ್ನು ಮಾಡಲು ಪ್ರಯತ್ನಿಸಿ.
  • ಸಂದೇಶವನ್ನು ಗೊಂದಲಗೊಳಿಸಿದರೆ ಅಥವಾ ಮುಖ್ಯ ಅಂಶ ಏನೆಂಬುದನ್ನು ಓದುಗರು ಮರೆಯಲು ಕಾರಣವಾದರೆ ಸೂಚ್ಯ ಮಾಹಿತಿಯನ್ನು ಸ್ಪಷ್ಟಪಡಿಸಬೇಡಿ.
  • ನಿಮ್ಮ ಓದುಗರು ಈಗಾಗಲೇ ಅರ್ಥಮಾಡಿಕೊಂಡಿದ್ದರೆ ಊಹಿಸಿದ ಜ್ಞಾನ ಅಥವಾ ಸೂಚ್ಯ ಮಾಹಿತಿಯನ್ನು ಸ್ಪಷ್ಟಪಡಿಸಬೇಡಿ.

ಸತ್ಯವೇದದಲ್ಲಿನ ಉದಾಹರಣೆಗಳು

ತಿಂದುಬಿಡುವಂಥದರಿಂದ ತಿನ್ನತಕ್ಕದ್ದು ದೊರಕಿತು; ಕ್ರೂರವಾದುದರಿಂದ ಮಧುರವಾದದ್ದು ಸಿಕ್ಕಿತು. (ನ್ಯಾಯಸ್ಥಾಪಕರು 14:14 ULT)

ಇದೊಂದು ಒಗಟಿನಂತಿದೆ. ಸಂಸೋನನು ಉದ್ದೇಶಪೂರ್ವಕವಾಗಿ ಈ ಒಗಟನ್ನು ತನ್ನ ಶತ್ರುಗಳು ಅರ್ಥಮಾಡಿಕೊಳ್ಳದ ರೀತಿಯಲ್ಲಿ ಅವರಿಗೆ ಹೇಳಿದನು. ತಿಂದು ಬಿಡುವಂತದ್ದು ಸಿಂಹ ಹಾಗೂ ಮಧುರವಾದುದು ಜೇನು ಎಂಬುದನ್ನು ನೀವು ನಿಮ್ಮ ಓದುಗರಿಗೆ ಸ್ಪಷ್ಟಪಡಿಸಬಾರದು.

ಯೇಸು ಅವರಿಗೆ, "ಪರಿಸಾಯರ ಮತ್ತು ಸದ್ದುಕಾಯರ ಹುಳಿಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರಿ" ಎಂದು ಹೇಳಿದನು. ಅದಕ್ಕೆ ಶಿಷ್ಯರು "ನಾವು ರೊಟ್ಟಿ ಬುತ್ತಿ ಕಟ್ಟಿಕೊಳ್ಳದೆ ಬಂದೆವಲ್ಲ" ಎಂದು ತಮ್ಮ ತಮ್ಮೊಳಗೆ ಮಾತಡಿಕೊಳ್ಳುತ್ತಿದ್ದರು … (ಮತ್ತಾಯ 16:6-7 ULT)

ಇಲ್ಲಿ ಕೆಲವು ಸಂಭಾವ್ಯ ಸೂಚ್ಯ ಮಾಹಿತಿಯ ಅರ್ಥವೇನೆಂದರೆ ಶಿಷ್ಯರು ಪರಿಸಾಯರ ಮತ್ತು ಸದ್ದುಕಾಯರ ಸುಳ್ಳುಬೋಧನೆಗಳಿಗೆ ಮರುಳಾಗದೆ ಎಚ್ಚರವಾಗಿರಬೇಕೆಂದು, ಆದರೆ ಯೇಸುವಿನ ಶಿಷ್ಯರಿಗೆ ಇದು ಅರ್ಥವಾಗಲಿಲ್ಲ. ಅವರು ಯೇಸು ನಿಜವಾದ ಹುಳಿ ರೊಟ್ಟಿಯ ಬಗ್ಗೆ ಮಾತನಾಡುತ್ತಿದ್ದಾನೆ ಎಂದುಕೊಂಡರು. ಆದುದರಿಂದ "ಹುಳಿ ರೊಟ್ಟಿ " ಎಂಬುದು ಸುಳ್ಳುಬೋಧನೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕೆಂಬುದು ಅಷ್ಟು ಸೂಕ್ತವಾದುದಲ್ಲ. ಯೇಸು ಮತ್ತಾಯ 16:11 ರಲ್ಲಿ ಯೇಸು ಹೇಳಿದ್ದನ್ನು ಕೇಳುವವರೆಗೂ ಯೇಸು ಏನು ಹೇಳುತ್ತಿದ್ದಾನೆ ಎಂದು ಶಿಷ್ಯರು ಅರ್ಥಮಾಡಿಕೊಳ್ಳಲಿಲ್ಲ.

"ನಾನು ರೊಟ್ಟಿಯ ಬಗ್ಗೆ ಮಾತನಾಡಲಿಲ್ಲ ಎಂಬುದು ನಿಮಗೆ ಹೇಗೆ ತಿಳಿಯದೆ ಹೋಯಿತು? ಎಚ್ಚರಿಕೆ ಪರಿಸಾಯರ ಮತ್ತು ಸದ್ದುಕಾಯರ ಹುಳಿಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರಿ" ಎಂದು ಅಂದನು. ಆಗ ಅವರಿಗೆ ಯೇಸು ನಿಜವಾದ ಹುಳಿಹಿಟ್ಟಿನ ಬಗ್ಗೆ ಹೇಳುತ್ತಿಲ್ಲ, ಆದರೆ ಪರಿಸಾಯರ ಮತ್ತು ಸದ್ದುಕಾಯರ ಬೋಧನೆಗಳಿಂದ ದೂರವಾಗಿದ್ದು ಎಚ್ಚರವಾಗಿರಿ ಎಂದು ಹೇಳುತ್ತಿದ್ದಾನೆ ಎಂದು ಅರ್ಥ ಮಾಡಿಕೊಂಡರು. (ಮತ್ತಾಯ 16:11-12 ULT)

ತಾನು ನಿಜವಾದ ಹುಳಿರೊಟ್ಟಿಯ ಬಗ್ಗೆ ಹೇಳಲಿಲ್ಲ, ಪರಿಸಾಯರ ಮತ್ತು ಸದ್ದುಕಾಯರ ಬೋಧನೆ ಬಗ್ಗೆ ಎಚ್ಚರವಾಗಿರಲು ಹೇಳಿದ್ದು ಎಂದು ಯೇಸು ವಿವರಿಸಿದ ನಂತರವೇ ಶಿಷ್ಯರು ಅರ್ಥಮಾಡಿಕೊಂಡರು. ಆದುದರಿಂದ ಮತ್ತಾಯ 16:6 ರಲ್ಲಿ ಸೂಚ್ಯವಾಗಿರುವ ಮಾಹಿತಿಯನ್ನು ಸ್ಪಷ್ಟವಾಗಿ ಹೇಳುವುದು ಸರಿಯಲ್ಲ.

###ಭಾಷಾಂತರ ತಂತ್ರಗಳು

ಅನುವಾದಕರು ಈ ರೀತಿಯ ಭಾಗವನ್ನು ಹೆಚ್ಚು ಸ್ಪಷ್ಟಪಡಿಸಬಾರದು ಎಂದು ನಾವು ಶಿಫಾರಸು ಮಾಡುವುದರಿಂದ, ಈ ಪುಟದಲ್ಲಿ ಯಾವುದೇ ಭಾಷಾಂತರ ತಂತ್ರಗಳಿಲ್ಲ.

ಭಾಷಾಂತರ ತಂತ್ರಗಳನ್ನು ಅಳವಡಿಸಿದ ಉದಾಹರಣೆಗಳು

ಅನುವಾದಕರು ಈ ರೀತಿಯ ಭಾಗವನ್ನು ಹೆಚ್ಚು ಸ್ಪಷ್ಟಪಡಿಸಬಾರದು ಎಂದು ನಾವು ಶಿಫಾರಸು ಮಾಡುವುದರಿಂದ, ಈ ಪುಟದಲ್ಲಿ ಯಾವುದೇ ಭಾಷಾಂತರ ತಂತ್ರಗಳನ್ನು ಅಳವಡಿಸಿಲ್ಲ.