translationCore-Create-BCS_.../translate/writing-quotations/01.md

8.8 KiB

ವಿವರಣೆ

ಯಾರಾದರೂ ಏನನ್ನಾದರೂ ಹೇಳಿದರು ಎಂದು ನಾವು ಹೇಳುವಾಗ, ಯಾರು ಈ ಮಾತುಗಳನ್ನು ಹೇಳಿದರು, ಯಾರ ಬಳಿ ಈ ಮಾತನ್ನು ಹೇಳಿದರು, ಮತ್ತು ಅವರು ಏನು ಹೇಳಿದರು ಎಂದು ತಿಳಿಸುತ್ತೇವೆ. ಯಾರು ಮಾತನಾಡಿದರು ಮತ್ತು ಯಾರೊಂದಿಗೆ ಮಾತನಾಡಿದರು ಎಂಬ ಮಾಹಿತಿಯನ್ನು ಉದ್ಧರಣ ಅಂಚು (quote margin) ಎಂದು ಕರೆಯಲಾಗುತ್ತದೆ. ಆ ವ್ಯಕ್ತಿ ಮಾತನಾಡಿದ್ದು ಉದ್ಧರಣ. (ಇದನ್ನು ಉಲ್ಲೇಖ ಎಂದೂ ಕರೆಯುತ್ತಾರೆ.) ಕೆಲವು ಭಾಷೆಯಲ್ಲಿ ಉದ್ಧರಣ ವಾಕ್ಯ ಮೊದಲು, ಕೊನೆಯಲ್ಲಿ ಅಥವಾ ಉದ್ಧರಣದ ಎರಡು ಭಾಗಗಳ ಮಧ್ಯದಲ್ಲಿ ಬರಬಹುದು.

ಉದ್ಧರಣ ಅಂಚುಗಳು ಕೆಳಗಿನ ದಪ್ಪಕ್ಷರದಲ್ಲಿದೆ.

  • ಅವಳು ಹೇಳಿದಳು, "ಊಟ ಸಿದ್ಧವಾಗಿದೆ. ಬಂದು ಊಟ ಮಾಡಿ."
  • "ಊಟ ಸಿದ್ಧವಾಗಿದೆ. ಬಂದು ಊಟ ಮಾಡಿ," ಅವಳು ಹೇಳಿದಳು.
  • “ಊಟ ಸಿದ್ಧವಾಗಿದೆ," ಅವಳು ಹೇಳಿದಳು "ಬಂದು ಊಟ ಮಾಡಿ."

ಅಲ್ಲದೆ ಕೆಲವು ಭಾಷೆಗಳಲ್ಲಿ, ಉದ್ಧರಣ ಅಂಚುಗಳು “ಹೇಳಿದರು” ಎಂಬ ಅರ್ಥ ನೀಡುವ ಒಂದಕ್ಕಿಂತ ಹೆಚ್ಚು ಕ್ರಿಯಾಪದಗಳನ್ನು ಹೊಂದಿರಬಹುದು.

ಅದರ ತಾಯಿಯು, "ಅದು ಬೇಡ, ಯೋಹಾನನೆಂದು ಹೆಸರಿಡಬೇಕು" ಎಂದು ಹೇಳಿದಳು. (ಲೂಕ 1:60 ULT)

ಯಾರಾದರೂ ಏನನ್ನಾದರೂ ಹೇಳಿದರು ಎಂದು ಬರೆಯುವಾಗ, ಕೆಲವು ಭಾಷೆಗಳು ತಲೆಕೆಳಗಾದ ಅಲ್ಪವಿರಾಮಗಳು (" ") ಎಂದು ಕರೆಯಲ್ಪಡುವ ಉದ್ಧರಣ ಚಿಹ್ನೆಗಳಿಂದ ಉಲ್ಲೇಖವನ್ನು (ಏನು ಹೇಳಲಾಯಿತು) ಹಾಕುತ್ತವೆ. ಕೆಲವು ಭಾಷೆಗಳು ಉದ್ಧರಣದ ಸುತ್ತಲೂ ಇತರ ಸಂಕೇತಗಳನ್ನು ಬಳಸುತ್ತವೆ, ಉದಾಹರಣೆಗೆ ಈ ಕೋನ ಉಲ್ಲೇಖ ಗುರುತುಗಳು (« »), ಅಥವಾ ಬೇರೆ ಯಾವುದಾದರೂ ಗುರುತುಗಳನ್ನು ಬಳಸುತ್ತವೆ.

ಕಾರಣ ಇದೊಂದು ಭಾಷಾಂತರ ಸಮಸ್ಯೆ

  • ಭಾಷಾಂತರಕಾರರು ಉದ್ಧರಣ ಚಿಹ್ನೆಗಳನ್ನು ಸ್ಪಷ್ಟವಾಗಿ ಮತ್ತು ಸಹಜವಾಗಿ ಅವರವರ ಭಾಷೆಯಲ್ಲಿ ಬಳಸಬೇಕು.
  • ಭಾಷಾಂತರಕಾರರು ಉದ್ಧರಣದಲ್ಲಿ "ಹೇಳಿದರು" ಎಂಬ ಪದಕ್ಕೆ ಸಮಾನ ಅರ್ಥ ಕೊಡುವ ಒಂದು ಅಥವಾ ಎರಡು ಪದಗಳನ್ನು ಹೊಂದಬೇಕೋ ಬೇಡವೋ ಎಂದು ನಿರ್ಧರಿಸಬೇಕು.
  • ಭಾಷಾಂತರಕಾರರು ಯಾವ ಗುರುತುಗಳನ್ನು ಉದ್ಧರಣ ವಾಕ್ಯಗಳೊಂದಿಗೆ ಬಳಸಬೇಕು ಎಂದು ನಿರ್ಧರಿಸಬೇಕು.

ಸತ್ಯವೇದದಲ್ಲಿನ ಉದಾಹರಣೆಗಳು

ಉದ್ಧರಣ ಅಂಚಿನ ಮೊದಲು ಬರುವ ಉದ್ಧರಣ

ಜಕರೀಯನು ಆ ದೂತನಿಗೆ ಹೇಳಿದನು, "ಇದು ನಡೆಯುತ್ತದೆ ಎಂಬುದನ್ನು ನಾನು ಹೇಗೆ ತಿಳಿದುಕೊಳ್ಳಲಿ? ನಾನು ಮುದುಕನು ಮತ್ತು ನನ್ನ ಹೆಂಡತಿಯೂ ದಿನ ಹೋದವಳು." (ಲೂಕ 1:18 ULT)

ಸುಂಕದವರು ಸಹ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಬಂದು, "ಗುರುವೇ, ನಾವೇನು ಮಾಡಬೇಕು?" ಎಂದು ಅವನನ್ನು ಕೇಳಲು (ಲೂಕ 3:12 ULT)

ಅವನು ಅವರಿಗೆ ಹೇಳಿದನು, "ನೇಮಿಸಿದ ಹಾಸಲಿಗಿಂತ ಹೆಚ್ಚಾಗಿ ಏನೂ ಎಳಕೊಳ್ಳಬೇಡಿರಿ." (ಲೂಕ 3:13 ULT)

ಉದ್ಧರಣದ ಅಂಚಿನ ನಂತರ ಬರುವ ಉದ್ಧರಣ

ಯೆಹೋವನು ಮನಮರುಗಿ ಈ ದರ್ಶನವು "ನೆರವೇರದು" ಎಂದು ಹೇಳಿದನು. (ಆಮೋಸ 7:3 ULT)

ಉದ್ಧರಣದ ಎರಡು ಭಾಗಗಳ ಮಧ್ಯದಲ್ಲಿ ಬರುವ ಉದ್ಧರಣ

ಆತನು ಅವರ ವಿಷಯದಲ್ಲಿ ಹೀಗೆ ಅಂದುಕೊಂಡನು "ನಾನು ಅವರಿಗೆ ವಿಮುಖನಾಗಿ" ಅವರಿಗೆ ಪ್ರಾಪ್ತವಾಗುವ ಗತಿಯನ್ನು ನೋಡುವೆನು, ಅವರು ಸತ್ಯವನ್ನು ತಿಳಿದೂ ಮಾಡದವರೂ ದ್ರೋಹಿಗಳಾದ ಮಕ್ಕಳೂ ಆಗಿದ್ದಾರೆ. (ಧರ್ಮೋಪದೇಶಕಾಂಡ 32:20 ULT)

ಇದು ಯೆಹೋವನ ನುಡಿ — ಇಗೋ ನಾನು ನನ್ನ ಜನರಾದ ಇಸ್ರಾಯೇಲರನ್ನು ಯೆಹೂದ್ಯರನ್ನು ಅವರ ದುರವಸ್ಥೆಯಿಂದ ತಪ್ಪಿಸುವ ದಿನಗಳು ಬರುವವು. (ಯೆರೇಮಿಯ 30:3a ULT)

ಭಾಷಾಂತರ ತಂತ್ರಗಳು

  1. ಎಲ್ಲಿ ಉದ್ಧರಣ ಅಂಚುಗಳನ್ನು ಹಾಕಬೇಕು ಎಂಬುದನ್ನು ನಿರ್ಧರಿಸಿ.

  2. "ಹೇಳಿದರು" ಎಂಬ ಪದಕ್ಕೆ ಸಮಾನ ಅರ್ಥಕೊಡುವ ಒಂದು ಅಥವಾ ಎರಡು ಪದಗಳನ್ನು ಬಳಸಬೇಕೆ ಎಂದು ನಿರ್ಧರಿಸಿ.

ಅನ್ವಯಿಸಲಾದ ಭಾಷಾಂತರ ಕೌಶಲ್ಯಗಳ ಉದಾಹರಣೆಗಳು

  1. ಎಲ್ಲಿ ಉದ್ಧರಣ ಅಂಚುಗಳನ್ನು ಹಾಕಬೇಕು ಎಂಬುದನ್ನು ನಿರ್ಧರಿಸಿ.

ಅವನು ಹೇಳಿದನು, "ಆದುದರಿಂದ, ನಿಮ್ಮ ಪ್ರಮುಖರು ನನ್ನೊಂದಿಗೆ ಬರಲಿ. ಆ ಮನುಷ್ಯನಲ್ಲಿ ಅನುಚಿತವಾದುದೇನಾದರೂ ಇದ್ದರೆ, ಅವನ ಮೇಲೆ ತಪ್ಪು ಹೊರಿಸಲಿ." (ಅ.ಕೃ.25:5 ULT)

"ಆದುದರಿಂದ, ಅಲ್ಲಿಗೆ ಯಾರು ಹೋಗಬೇಕಾಗಿದೆಯೋ ಅವರು ನಮ್ಮೊಂದಿಗೆ ಬರಲಿ ಎಂದು ಅವನು ಹೇಳಿದನು. ಆ ಮನುಷ್ಯನಲ್ಲಿ ಅನುಚಿತವೇನಾದರು ಇದ್ದರೆ, ಅವನ ಮೇಲೆ ತಪ್ಪು ಹೊರಿಸಲಿ."

"ಆದುದರಿಂದ, ನಮ್ಮೊಂದಿಗೆ ಬರಲು ತಕ್ಕವರು ಬರಲಿ. ಆ ಮನುಷ್ಯನಲ್ಲಿ ಅನುಚಿತವಾದುದ್ದೇನಾದರೂ ಇದ್ದರೆ, ಅವನ ಮೇಲೆ ತಪ್ಪು ಹೊರಿಸಲಿ" ಎಂದು ಅವನು ಹೇಳಿದನು.

"ಆದುದರಿಂದ, ಅಲ್ಲಿಗೆ ಯಾರು ಹೋಗಬೇಕಾಗಿದೆಯೋ ಅವನು ಹೇಳಿದನು, ಅವರು ನಮ್ಮೊಂದಿಗೆ ಅಲ್ಲಿಗೆ ಬರುತ್ತಾರೆ. ಆ ಮನುಷ್ಯನಲ್ಲಿ ಅನುಚಿತವೇನಾದರು ಇದ್ದರೆ, ಅವನ ಮೇಲೆ ತಪ್ಪು ಹೊರಿಸುತ್ತಾರೆ."

(2) "ಹೇಳಿದರು" ಎಂಬ ಪದಕ್ಕೆ ಸಮಾನ ಅರ್ಥಕೊಡುವ ಒಂದು ಅಥವಾ ಎರಡು ಪದಗಳನ್ನು ಬಳಸಬೇಕೆ ಎಂದು ನಿರ್ಧರಿಸಿ.

ಆದರೆ ಅವನ ತಾಯಿ ಅದು ಬೇಡ, ಅದರ ಬದಲು ಯೋಹಾನ ಎಂದು ಹೆಸರಿಡಬೇಕು ಎಂದು ಹೇಳಿದಳು." (ಲೂಕ1:60 ULT)

ಆದರೆ ಅವನ ತಾಯಿ ಅದು ಬೇಡ ಅದರ ಬದಲು ಯೋಹಾನ ಎಂದು ಕರೆಯಬೇಕು ಎಂದು ಉತ್ತರಿಸಿದಳು. ಅವನ ತಾಯಿ ಅವನನ್ನು ಯೋಹಾನನೆಂದು ಕರೆಯಬೇಕೆಂದಳು."

ಅವನ ತಾಯಿ ಈ ರೀತಿ ಉತ್ತರಿಸಿದಳು. "ಬೇಡ. ಅದರ ಬದಲು, ಯೋಹಾನನೆಂದು ಕರೆಯಲಾಗುತ್ತದೆ ಎಂದು ಹೇಳಿದಳು.