translationCore-Create-BCS_.../translate/guidelines-ongoing/01.md

3.8 KiB

ಸತ್ಯವೇದದ ಭಾಷಾಂತರ ನಿರಂತರ ವಾಗಿ ನಡೆಯುತ್ತಿರಬೇಕು. ಮಾಡಿದ ಭಾಷಾಂತರವನ್ನು ಇತರರೊಂದಿಗೆ ಹಂಚಿಕೊಂಡು ಅವರು ಇದರ ಸಂದೇಶವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಯಿತೆ ಎಂದುನೋಡಬೇಕು. ಅವರು ನೀಡುವ ಹಿಮ್ಮಾಹಿತಿಯಿಂದ ನಿಮ್ಮ ಭಾಷಾಂತರವನ್ನು ಉತ್ತಮಪಡಿಸಬಹುದು. ಅರ್ಥಮಾಡಿಕೊಳ್ಳಲು ಸುಲಭವಾಗುವಂತೆ ಮತ್ತು ನಿಖರತೆಯನ್ನು ಹೆಚ್ಚಿಸಿ ಭಾಷಾಂತರವನ್ನು ಪುನರ್ ನಿರೂಪಿಸುವುದು ಯಾವಾಗಲು ಒಳ್ಳೆಯದು.

ಯಾರಿಗಾದರೂ ನಿಮ್ಮ ಭಾಷಾಂತರವನ್ನು ಉತ್ತಮಪಡಿಸಿಕೊಳ್ಳುವ ಒಳ್ಳೆಯ ಉದ್ದೇಶವಿದ್ದರೆ, ಭಾಷಾಂತರ ವಿಷಯವನ್ನು ಪರಿಷ್ಕರಿಸಿ ಬದಲಾವಣೆಗಳನ್ನು ಅಳವಡಿಸಬೇಕು ನೀವು ಭಾಷಾಂತರ ಸ್ಟುಡಿಯೋ ಅಥವಾ ಎಲೆಕ್ಟ್ರಾನಿಕ್ ಪಠ್ಯವನ್ನು ಪರಿಷ್ಕರಿಸುವವರು ಇದ್ದರೆ ಪರಿಷ್ಕರಣೆ ಪ್ರಕ್ರಿಯೆ ಮತ್ತು ಉತ್ತಮಗೊಳಿಸುವ ಕಾರ್ಯವನ್ನು ಮುಂದುವರಿಸಿ.

  • ಇವುಗಳ ಭಾಷಾಂತರಗಳನ್ನು ಓದಿ ಸಂಬಂಧಸಿದ ವಿಷಯಗಳಲ್ಲಿರುವ ಪ್ರಮುಖ ಅಂಶಗಳನ್ನು ಗುರುತಿಸಿ, ಪುನರ್ ವಿಮರ್ಶಿಸುವವರ ಅಗತ್ಯವಿದೆ
  • ಜನರು ಭಾಷಾಂತರವನ್ನು ಓದಿರುವರೇ, ಅಥವಾ ರೆಕಾರ್ಡ್ ಮಾಡಿರುವ ಭಾಷಾಂತರವನ್ನು ಆಲಿಸಿದ್ದಾರೆಯೇ ? ಮೂಲ ಶೋತೃಗಳ ಮೇಲೆ ಬೀರಿದ ಪರಿಣಾಮವೇ ನಿಮ್ಮ ಭಾಷಾಂತರ ಓದುವ ನಿಮ್ಮ ಸಮುದಾಯದಲ್ಲಿ ಜನರ ಮೇಲೆ ಅದೇ ಪರಿಣಾಮ ಬೀರಿದೆಯೇ ಎಂಬುದನ್ನು ತಿಳಿಯಲಿ ಇದು ಸಹಾಯ ಮಾಡುತ್ತದೆ.
  • ಭಾಷಾಂತರ ಮಾಡಿರುವುದನ್ನು ಅನೇಕ ಸಲ ತಿದ್ದುಪಡಿ ಮಾಡುವುದರಿಂದ ಇನ್ನಷ್ಟು ನಿಖರವಾಗಿ, ತಪ್ಪಿಲ್ಲದೆ, ಹೆಚ್ಚು ಸಹಜವಾಗಿ ಇರಲು ಅವಕಾವಿರುತ್ತದೆ. ಮೂಲಗ್ರಂಥದ ಅರ್ಥ ಕೆಡದಂತೆ ತಿಳಿಸುವ ಉದ್ದೇಶವನ್ನು ಯಾವಾಗಲೂ ಕಾಪಾಡಿಕೊಂಡು ಬರಬಹುದು.

ಯಾವಾಗಲೂ ನಿಮ್ಮ ಭಾಷಾಂತರವನ್ನು ಇನ್ನಷ್ಟು ನಿಖರವಾಗಿ ಮಾಡಲು ಅವಕಾಶವಿದೆ ಎಂಬುದನ್ನು ಮರೆಯಬೇಡಿ. ಈ ವಿಚಾರಗಳ ಬಗ್ಗೆ ಇತರ ಜನರೊಂದಿಗೂ ಮಾತನಾಡಿ ತಿಳಿದುಕೊಳ್ಳಿ. ಅನೇಕ ಜನರು ಇವೆಲ್ಲವೂ ಒಳ್ಳೆ ಉದ್ದೇಶಗಳು ಎಂದು ಒಪ್ಪಿಕೊಂಡಲ್ಲಿ ಭಾಷಾಂತರದಲ್ಲಿ ಬದಲಾವಣೆ ಮಾಡಬಹುದು

ಈ ರೀತಿ ಭಾಷಾಂತರ ಉತ್ತಮ, ಉತ್ತಮೋತ್ತಮ ಗೊಳ್ಳುವುದು. (ನೀವು http://ufw.io/guidelines_ongoing ಲ್ಲಿ ಈ ವಿಡಿಯೋ ಮೂಲಕ ನೋಡಿ ತಿಳಿದು ಕೊಳ್ಳಬಹುದು.)