translationCore-Create-BCS_.../translate/guidelines-historical/01.md

11 KiB
Raw Blame History

(ಈ ವೀಡಿಯೋ ನೋಡಿ) " ಸತ್ಯವೇದದ ಭಾಷಾಂತರ ಸಂಸ್ಕೃತಿ " http://ufw.io/trans_culture.)

ಐತಿಹಾಸಿಕ ವ್ಯಾಖ್ಯಾನ ಭಾಷಾಂತರ ಐತಿಹಾಸಿಕ ಘಟನೆಗಳನ್ನು ಸಂಭವಗಳನ್ನು, ವಿಷಯಗಳನ್ನು ನಿಖರವಾಗಿ ತಿಳಿಸುವುದು. ಜನರಿಗೆ ತಿಳಿಸಬೇಕೆಂದಿರುವ ನಿರ್ದಿಷ್ಟ, ನಿಖರವಾದ ಮಾಹಿತಿಗೆ ಹೆಚ್ಚಿನ ಮಾಹಿತಿಯನ್ನು ನೀಡಬೇಕು. ಏಕೆಂದರೆ ಮೂಲ ವಿಷಯಕ್ಕೆ ಸಂಬಂಧಿಸಿದಂತೆ ಮೂಲ ಸಹೃದಯರಂತೆ ಬೇರೆ ಸನ್ನಿವೇಶ ಮತ್ತು ಸಂಸ್ಕೃತಿಯಿಂದ ಬಂದ ಜನ ಸ್ವೀಕರಿಸದೆ ಇರಬಹುದು.

ಐತಿಹಾಸಿಕ ವಿಚಾರಗಳನ್ನುನಿರ್ದಿಷ್ಟ ಹಾಗೂ ನಿಖರವಾಗಿ ತಿಳಿಸಲು ನೀವು 2 ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು.

  1. ಸತ್ಯವೇದವೂ ಒಂದು ಐತಿಹಾಸಿಕ ದಾಖಲೆ. ಸತ್ಯವೇದದಲ್ಲಿ ಇರುವ ಘಟನೆಗಳು ನಿಜವಾಗಲೂ ನಡೆದ ಘಟನೆಗಳು ಮತ್ತು ಇವುಗಳನ್ನು ಸತ್ಯವೇದವು ವಿವಿಧ ಸಮಯದಲ್ಲಿ ಐತಿಹಾಸಿಕವಾಗಿ ನಡೆದ ಘಟನೆಗಳನ್ನು ವಿವರವಾಗಿ ವಿವರಿಸುತ್ತದೆ. ಆದುದರಿಂದ ನೀವು ಸತ್ಯವೇದವನ್ನು ಭಾಷಾಂತರಿಸುವಾಗ ಈ ಘಟನೆಗಳು ನಿಜವಾಗಿ ನಡೆದವು ಎಂಬುದನ್ನು ತಿಳಿಸಬೇಕು. ಮತ್ತು ನೀವು ಇವುಗಳನ್ನು ಯಾವುದೇ ಬದಲಾವಣೆ ಮಾಡದೆ ವಿಷಯವನ್ನು ಹಾಗೇ ಉಳಿಸಬೇಕು.

  2. ಸತ್ಯವೇದದಲ್ಲಿ ಬರುವ ಪುಸ್ತಕಗಳು ಒಂದು ನಿರ್ದಿಷ್ಟ ಸಮಯದಲ್ಲಿ ನಡೆದ ಐತಿಹಾಸಿಕ ಘಟನೆ ಹಾಗೂ ಒಂದು ನಿರ್ದಿಷ್ಟ ಸಂಸ್ಕೃತಿಯ ಜನರೊಂದಿಗೆ ಬೆಳೆದ ಇತಿಹಾಸ. ಅಂದರೆ ಸತ್ಯವೇದದಲ್ಲಿರುವ ವಿಚಾರಗಳು ಮೂಲ ಶ್ರೋತೃಗಳಿಗೆ, ತುಂಬಾ ಸ್ಪಷ್ಟವಾಗಿ ಸತ್ಯೇದವನ್ನು ವಿವಿಧ ಸಾಂಸ್ಕೃತಿಕ ಹಿನ್ನಲೆಯಲ್ಲಿನ ಶೋತೃಗಳಿಗೆ ಅರ್ಥವಾಗುವುದಿಲ್ಲ, ಸಮಯದಲ್ಲಿ ಓದುವುದರಿಂದ ಅವರಿಗೆ ಮೊದಲ ಓದುಗರಿಗೆ ಸ್ಪಷ್ಟವಾಗಿ ಅರ್ಥವಾದಷ್ಟು ಸ್ಪಷ್ಟವಾಗಿ ಅರ್ಥವಾಗದೇ ಉಳಿಯಬಹುದು. ಏಕೆಂದರೆ ಇದು ಬರಹಗಾರರು ಮತ್ತು ಓದುಗರಿಗೆ ಅನೇಕ ವಿಚಾರಗಳು ಮತ್ತು ಪದ್ಧತಿಗಳು ಪರಿಚಯವಿರುವುದರಿಂದ ಬರಹಗಾರನು ಪ್ರತಿಯೊಂದನ್ನು ವಿವರವಾಗಿ ವಿವರಿಸಬಲ್ಲ. ಬೇರೆ ಸಮಯ ಸನ್ನಿವೇಶ ಮತ್ತು ಸಂಸ್ಕೃತಿಯಿಂದ ಬಂದಿದ್ದರೆ ಇವುಗಳ ಪರಿಚಯ ನಮಗೆ ಇರುವುದಿಲ್ಲ. ಆದುದರಿಂದ ಯಾರಾದರೂ ಬಂದು ನಮಗೆ ಇವುಗಳ ಪರಿಚಯ ಮಾಡಬೇದಾದ ಅವಶ್ಯಕತೆ ಇರುತ್ತದೆ. ಇಂತಹ ಮಾಹಿತಿಗಳನ್ನು ಸಂಶಯವಿಲ್ಲದ (ನಂಬಿಕೆಗೆ ಅರ್ಹವಾದ) ಮಾಹಿತಿ ಎಂದು ಕರೆಯುತ್ತಾರೆ. (ನೋಡಿ ಗಳಿಸಿದ ಜ್ಞಾನ ಮತ್ತು ವಿಶ್ವಾಸಪೂರ್ಣ ಮಾಹಿತಿ”)

ಭಾಷಾಂತರಗಾರರಾಗಿ ನೀವು ಐತಿಹಾಸಿಕ ಭಾಷಾಂತರವನ್ನು ನಿಖರವಾಗಿ ಮಾಡಬೇಕಿದೆ, ಆದರೆ ಕೆಲವೊಮ್ಮೆ ಓದುಗರಿಗೆ ಸರಿಯಾಗಿ ಅರ್ಥವಾಗಲು, ಪರಿಣಾಮಕಾರಿಯಾಗಿ ಪ್ರಭಾವ ಬೀರಲು ಅನುಕೂಲಕರವಾಗಿರುವಂತೆ ಭಾಷಾಂತರ ಮಾಡಬೇಕು.

  • ಉದಾಹರಣೆ ಆದಿಕಾಂಡ 12:16 ರಲ್ಲಿ ಒಂಟೆಗಳ ಕುರಿತಾಗಿ ನೋಡಬಹುದು. ಪ್ರಪಂಚದ ಯಾವ ದೇಶಗಳಲ್ಲಿ ಈ ಪ್ರಾಣಿಯ ಪರಿಚಯವಿಲ್ಲದಿದ್ದಲ್ಲಿ ಅದರ ವಿವರಣೆಯನ್ನು ನೀಡತಕ್ಕದ್ದು. ಇದನ್ನು ಅಡಿಟಿಪ್ಪಣಿ ಅಥವಾ ಅನುವಾದ ಪದಗಳ ಶಬ್ದ ಸಂಗ್ರಹ ಪಟ್ಟಿಯಲ್ಲಿ ಸೇರಿಸತಕ್ಕದ್ದು.

ವಿವರಗಳು ಸಂಕ್ಷಿಪ್ತವಾಗಿ ಇರುವವರೆಗೂ ಮತ್ತು ಓದುಗರನ್ನು ಅದರ ಮುಖ್ಯ ಉದ್ದೇಶದಿಂದ ಬೇರೆಡೆಗೆ ಸೆಳೆಯದಿರುವವರೆಗೂ ಕೆಲವರ ವಿವರಗಳನ್ನು ಪಠೄದಲ್ಲಿ ಸೆರಿಸಬಹುದು.

  • ಉದಾಹರಣೆ: ಹೊಸ ಒಡಂಬಡಿಕೆಯ ಬರಹಗಾರರು ಹಳೇ ಒಡಂಬಡಿಕೆಯ ಕೆಲವು ಸಂಗತಿಗಳನ್ನು ವಿವರಿಸದಿದ್ದರೂ ಅದರ ಕುರಿತಾಗಿ ಬರೆದಿದ್ದಾರೆ. ಜನರು ಅದನ್ನು ಅರ್ಥ ಮಾಡಿಕೊಳ್ಳಬಲ್ಲರು ಎಂಬುದೇ ಅದಕ್ಕೆ ಕಾರಣ. ಆದರೆ ಬೇರೆ ಸ್ಥಳ ಹಾಗೆ ಬರೆ ಸಮಯದಲ್ಲಿನ ಜನರಿಗೆ ಕೆಲವು ಬಾರಿ ಇವುಗಳ ವಿವರಣೆ ಬಹಳ ಅಗತ್ಯ.

ULT ಮತ್ತು UST ಅನುವಾದಗಳ 1 ಕೊರಿಂಥ 10:1 ರ ವಾಕ್ಯವನ್ನು ಹೋಲಿಸಿ ನೋಡೋಣ.

"ಸಹೋದರರೇ, ಮುಂದಿನ ಸಂಗತಿಗಳಲ್ಲಿ ನೀವು ಲಕ್ಷವಿಡಬೇಕೆಂದು ನಾನು ಅಪೇಕ್ಷಿಸುತ್ತೇನೆ. ಅದೇನೆಂದರೆ ನಮ್ಮ ಪಿತೃಗಳೆಲ್ಲರೂ ಮೇಘದ ನೆರಳಿನಲ್ಲಿ ಇದ್ದರು, ಅವರೆಲ್ಲರೂ ಸಮುದ್ರವನ್ನು ದಾಟಿಹೋದರು..” (ULT) ಅನುವಾದ

“ನನ್ನ ಸಹೋದರರೇ ಮತ್ತು ಸಹೋದರಿಯರೇ, ಬಹಳ ವರ್ಷಗಳ ಹಿಂದೆ ನಮ್ಮ ಯೆಹೂದ್ಯರಾದ ಪೂರ್ವಿಕರು ಕೆಂಪು ಸಮುದ್ರವನ್ನು ದಾಟುವಾಗ ತಮ್ಮ ಪ್ರಯಾಣದ ಸಮಯದಲ್ಲಿ ತಮ್ಮನ್ನು ಮೋಡದೋಪಾದಿಯಲ್ಲಿ ಕಾಪಾಡಿ ಮುನ್ನಡೆಸಿದ ದೇವರನ್ನು ಹಿಂಬಾಲಿಸುತ್ತಿದ್ದರು” (UST)

UST ಅನುವಾದ ಅನೇಕ ಸಂಗತಿಗಳನ್ನು ಸ್ಪಷ್ಟವಾಗಿ ವಿವರಿಸುತ್ತದೆ” “ನಮ್ಮ ಪಿತೃಗಳು ಮೇಘದ ನೆರಳಿನಲ್ಲಿದ್ದರು” ಎಂಬ ವಾಕ್ಯ ದೇವರು ಯೆಹೂದ್ಯರಾದ ಪಿತೃಗಳನ್ನು ಮೇಘದೋಪಾದಿಯಲ್ಲಿ ನಡೆಸಿದನು ಎಂದು ತಿಳಿಸುತ್ತದೆ. “ನಮ್ಮ ಪಿತೃಗಳು ಸಮುದ್ರವನ್ನು ದಾಟಿದರು” ಎಂಬ ಮಾತು ಅವರು ಕೆಂಪು ಸಮುದ್ರವನ್ನು ದಾಟಿದ ಸಂಗತಿಯ ಕುರಿತಾಗಿದೆ. UST ಅನುವಾದಕರು ಈ ಚಾರಿತ್ರಿಕ ಸಂಗತಿಗಳನ್ನು ಸ್ಪಷ್ಟವಾಗಿ ವಿವರಿಸಬೇಕೆಂದು ತಿರ್ಮಾನಿಸಿ ಹೀಗೆ ಅನುವಾದ ಮಾಡಿದ್ದಾರೆ. ಹಳೇ ಒಡಂಬಡಿಕೆಯ ಕುರಿತು ಹೆಚ್ಚು ಮಾಹಿತಿಯನ್ನು ತಿಳಿಯದ ಜನರನ್ನು ಗಮನದಲ್ಲಿ ಇಟ್ಟುಕೊಂಡು ಈ ರೀತಿಯಾದ ಸ್ಪಷ್ಟ ಅನುವಾದ ಮಾಡತಕ್ಕದ್ದು.

ನಿಮ್ಮ ಸಮುದಾಯದ ಜನರು ವಾಕ್ಯ ಭಾಗಗಳನ್ನು ಅರ್ಥ ಮಾಡಿಕೊಳ್ಳುವಂತೆಕೆಲವಾರು ಸ್ಪಷ್ಟವಾದ ವಿವರಗಳನ್ನು ಸೇರಿಸತಕ್ಕದ್ದು.

ಸಂದೇಶದಲ್ಲಿ ಅಡಗಿರುವ ನಿಖರವಾದ ಐತಿಹಾಸಿಕ ಸಂಗತಿಗಳನ್ನು ಹಾಗೆಯೇ ಉಳಿಸಿಕೊಳ್ಳಿರಿ. ಸತ್ಯವೇದ ಬರೆಯಲಾದ ಸಮಯದಲ್ಲಿ ನಡೆಯದ ಘಟನೆಯನ್ನು ಅಥವಾ ಆ ಸಮಯದಲ್ಲಿ ಇಲ್ಲದ ವಸ್ತುಗಳನ್ನು ನಿಮ್ಮ ಬರಹದಲ್ಲಿ ಉಪಯೋಗಿಸಿ ನಿಮ್ಮ ಅನುವಾದವನ್ನು ಆಧುನಿಕ ದಿನದ ಘಟನೆಯ ಹಾಗೆ ತೋರಿಸಬೇಡಿರಿ.

ನೆನೆಪಿನಲ್ಲಿಡಿ

  • ಐತಿಹಾಸಿಕ ಪಠೄವನ್ನು ನಿಜವೆನ್ನುವ ಹಾಗೆ ತೋರಿಸಿ. ಮೂಲ ಸಂದೇಶ, ಐತಿಹಾಸಿಕ ಘಟನೆಗಳು ಮತ್ತು ಸಾಂಸ್ಕೃತಿಕ ಹಿನ್ನೆಲೆಗಳು ಮೂಲ ಪ್ರತಿಯಲ್ಲಿ ಇರುವ ಹಾಗೆಯೇ ಇರಬೇಕು. ಉದಾಹರಣೆಗೆ, ಘಟನೆಗಳು ಬೇರೆ ಸ್ಥಳಗಳಲ್ಲಿ ಬೇರೆ ಸಮಯದಲ್ಲಿ ನಡೆದಿದೆ ಎಂದು ತೋರಿಸದ ರೀತಿಯಲ್ಲಿ ಅನುವಾದ ಇರಬೇಕು.
  • ಮೂಲ ಲೇಖಕ ಯಾವ ಅರ್ಥವನ್ನು ತಿಳಿಯಪಡಿಸಲು ಬಯಸುತ್ತಿದ್ದಾನೆ ಎಂದು ನಿಮ್ಮ ಅನುವಾದ ಓದಲಿರುವ ಜನರು ಅರ್ಥಮಾಡಿಕೊಳ್ಳುವ ಹಾಗೆ ಸಂದೇಶವನ್ನು ಸರಿಯಾಗಿ ತಿಳಿಸಿರಿ.
  • ಬೇರೆ ಸಂಸ್ಕೃತಿ ಬೇರೆ ಬೇರೆ ಸಂದರ್ಭದಲ್ಲಿ ಇರುವ ಜನರು ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾಗ ಅವಶ್ಯವಿದ್ದಲ್ಲಿ ಆಗ ಮಾತ್ರ ಹೆಚ್ಚಿನ ವಿವರಗಳನ್ನು ನೀಡಿರಿ.