translationCore-Create-BCS_.../translate/guidelines-church-approved/01.md

7.6 KiB
Raw Blame History

ಚರ್ಚ್ / ಸಭೆಯಿಂದ ಮಾನ್ಯತೆ ಪಡೆದ ಭಾಷಾಂತರ.

ಉತ್ತಮವಾದ ಭಾಷಾಂತರದ ಮೂರು ಮುಖ್ಯ ಗುಣಗಳು ಯಾವುವೆಂದರೆ ಸ್ಪಷ್ಟವಾಗಿರಬೇಕು (ಸ್ಪಷ್ಟ ಭಾಷಾಂತರ ಮಾಡುವುದು ನೋಡಿ, ಸಹಜವಾದ (ಸಹಜವಾದ ಭಾಷಾಂತರ ಮಾಡುವುದು ನೋಡಿ), ಮತ್ತು ನಿರ್ದಿಷ್ಟ (ನಿರ್ದಿಷ್ಟ ವಾದ ಭಾಷಾಂತರ ಮಾಡುವುದು ನೋಡಿ). ಈ ಮೂರೂ ಇಲ್ಲದಿದ್ದರೆ ಭಾಷಾಂತರ ಮಾಡುವಾಗ ಅದು ಪದಗಳು ಮತ್ತು ಪದಗುಚ್ಛಗಳ ಮೇಲೆ ಪರಿಣಾಮ ಬೀರುತ್ತದೆ ಬಾಧಿಸಲ್ಪಡುತ್ತವೆ. ಭಾಷಾಂತರ ಮಾಡುವಾಗ ಈ ಮೂರರಲ್ಲಿ ಒಂದು ಇಲ್ಲದೆ ಪದಗಳನ್ನು ಬಳಸಿ ಅದನ್ನು ಮರುಜೋಡಣೆ ಮಾಡುವಾಗ ಖಂಡಿತವಾಗಿಯೂ ಸಮಸ್ಯೆಯನ್ನು ಉಂಟುಮಾಡುತ್ತವೆ, ಉತ್ತಮ ಭಾಷಾಂತರ ಆಗಲಾರದು. ನಾಲ್ಕನೇ ಗುಣಲಕ್ಷಣವೆಂದರೆ ಚರ್ಚ್ / ಸಭೆಯ ಸಮ್ಮತಿ ಪಡೆದ ಪದಗಳನ್ನು ಉಪಯೋಗಿಸಿರುವ ಬಗ್ಗೆ ಅಷ್ಟೇನೂ ಗಮನ ಕೊಡದೆ ಪ್ರಕ್ರಿಯೆಗಳ ಬಗ್ಗೆ ಗಮನ ಕೊಡುತ್ತದೆ.

ಭಾಷಾಂತರದ ಗುರಿ.

ಸತ್ಯವೇದ ವಾಕ್ಯಭಾಗಗಳನ್ನು ಭಾಷಾಂತರ ಮಾಡುವ ಉದ್ದೇಶ ಅತ್ಯುತ್ತಮ ಗುಣಮಟ್ಟದ ಭಾಷಾಂತರ ಮಾಡುವ ಗುರಿ. ಮಾತ್ರವಲ್ಲದೇ, ಮಾಡಿರುವ ಭಾಷಾಂತರದ ಗುಣಮಟ್ಟವನ್ನು ಚರ್ಚ್ / ಸಭೆಯವರು ಸಮ್ಮತಿಸಿ ಮಾನ್ಯತೆ ನೀಡಿ ಸಭೆಯಲ್ಲಿ ಬಳಸುವ ಒಲವು ತೋರಿಸಬೇಕು. ಅತ್ಯುತ್ತಮ ಭಾಷಾಂತರ ಸ್ಪಷ್ಟ, ಸಹಜ.ನಿರ್ದಿಷ್ಟವಾಗಿರಬೇಕು. ಚರ್ಚ್ / ಸಭೆಯಲ್ಲಿ ಬಳಸುವ ಭಾಷಾಂತರ ಸಭೆಯವರ ಒಲವು ಮತ್ತು ಸಮ್ಮತಿಯನ್ನು ಪಡೆಯಲೇಬೇಕು.

ಚರ್ಚ್ / ಸಭೆಯ ಮಾನ್ಯತೆ / ಸಮ್ಮತಿಪಡೆಯುವಂತಹ ಭಾಷಾಂತರವನ್ನು ಹೇಗೆ ಮಾಡುವುದು?

ಚರ್ಚ್ / ಸಭೆಯ ಮಾನ್ಯತೆ / ಸಮ್ಮತಿಪಡೆಯುವಂತಹ ಭಾಷಾಂತರ ಪರಿಶೀಲಿಸಿ ವಿತರಿಸುವ ಪ್ರಕ್ರಿಯೆಯನ್ನು ಒಳಗೊಂಡಿದೆ. ಚರ್ಚ್ / ಸಭೆಯ ಕಾರ್ಯಜಾಲಗಳು ಇಂತಹ ಪ್ರಕ್ರಿಯೆಯಲ್ಲಿ ಕ್ರಿಯಾತ್ಮಕವಾಗಿ ತೊಡಗಿಸಿಕೊಂಡರೆ ಭಾಷಾಂತರಗಳಿಗೆ ಹೆಚ್ಚಿನ ಮಾನ್ಯತೆ ದೊರೆಯುತ್ತದೆ.

ಯಾವುದೇ ಸತ್ಯವೇದದ ಭಾಷಾಂತರ ಕಾರ್ಯವನ್ನು ಪ್ರಾರಂಭಿಸುವ ಮೊದಲು ಚರ್ಚ್ ನ ಕಾರ್ಯಜಾಲವು ಎಷ್ಟು ಸಾಧ್ಯವೋ ಅಷ್ಟು ಚರ್ಚ್ ಗಳನ್ನು ಈ ಪ್ರಕ್ರಿಯೆಯಲ್ಲಿ ಭಾಗಿಗಳಾಗುವಂತೆ ನೋಡಿಕೊಳ್ಳಬೇಕು ಮತ್ತು ಅವರವರ ಚರ್ಚ್ ಗಳಲ್ಲಿ ಇರುವ ಸೂಕ್ತ ಜನರನ್ನು ಭಾಷಾಂತರ ತಂಡದಲ್ಲಿ ಸೇರಿಸಿ ಭಾಷಾಂತರ ಕಾರ್ಯವನ್ನು ಬಲಪಡಿಸಿ ಉತ್ತಮ ಭಾಷಾಂತರ ಮಾಡಲು ಸಹಕರಿಸಬೇಕು. ಅಂತಹ ವ್ಯಕ್ತಿಗಳೊಂದಿಗೆ ಮಾತನಾಡಿ ಅವರ ಅಭಿಪ್ರಾಯಗಳನ್ನು, ಸಲಹೆಗಳನ್ನು ಪಡೆದು ಭಾಷಾಂತರ ಕಾರ್ಯ ಯೋಜನೆಯ ಗುರಿ ಮತ್ತು ಪ್ರಕ್ರಿಯೆಗಳನ್ನು ಸಬಲಗೊಳಿಸಬೇಕು.

ಚರ್ಚ್ / ಸಭೆ ಈ ಭಾಷಾಂತರ ಕಾರ್ಯದಲ್ಲಿ ನೇರವಾಗಿ ಸಕ್ರಿಯವಾಗಿ ಭಾಗವಹಿಸಿ ಮುನ್ನಡೆಸಬೇಕು. ಸಹಕಾರಿಯಾಗಿರಬೇಕು ಎಂದೇನೂ ಇಲ್ಲ.ಆದರೆ ಯಾರು ಈ ಭಾಷಾಂತರ ಕಾರ್ಯವನ್ನು ಕೈಗೊಳ್ಳುತ್ತಾರೋ ಅವರ ಬಗ್ಗೆ ದೃಢೀಕರಣವನ್ನು ಚರ್ಚ್ ನ ಕಾರ್ಯಜಾಲವು ನೀಡಬೇಕು. ವಿಶೇಷವಾಗಿ ಈ ಭಾಷಾಂತರ ಪ್ರಕ್ರಿಯೆ ಪ್ರಾರಂಭವಾಗುವ ಮೊದಲೇ ಕಾರ್ಯಗತವಾಗಬೇಕು.

ಚರ್ಚ್ / ಸಭೆಯ ಮಾನ್ಯತೆ ಮತ್ತು ಪರಿಶೀಲನೆಯ ಹಂತಗಳು.

ಭಾಷಾಂತರವನ್ನು ಚರ್ಚ್ / ಸಭೆಯ ಮಾನ್ಯತೆ ಪಡೆಯುವುದು. ಪರಿಶೀಲನಾ ಹಂತದಲ್ಲಿ ಸ್ಪಷ್ಟವಾಗಿ ಪ್ರತಿಬಿಂಬಿತವಾಗುತ್ತದೆ. ಚರ್ಚ್ / ಸಭೆಯ ಮಾನ್ಯತೆ ಸಿಗಬೇಕೆಂದರೆ ಪರಿಶೀಲನಾ ಕಾರ್ಯದಲ್ಲಿ ವಿವರವಾದ ಭಾಷಾಂತರಕ್ಕೆ ಹಂತಗಳನ್ನು ಹೊಂದುವ ಅಗತ್ಯವಿದೆ.

  • ಮೊದಲ ಹಂತ - ಸಭೆ ಅಥವಾ ಚರ್ಚ್ ನಿಂದ ಮಾನ್ಯತೆ ಪಡೆದ ಭಾಷಾಂತರ ತಂಡ ಭಾಷಾಂತರವನ್ನು ಪರಿಶೀಲಿಸಿ ಸಮ್ಮತಿಸಿ ಮಾನ್ಯತೆ ನೀಡಬೇಕು.
  • ಎರಡನೇ ಹಂತ ಸ್ಥಳೀಯ ಚರ್ಚ್ / ಸಭೆಯ ನಾಯಕರು ಮತ್ತು ಸಭಾಪಾಲಕರು ಈ ಭಾಷಾಂತರವನ್ನು ಸಮ್ಮತಿಸಿ ಮಾನ್ಯತೆ ನೀಡಬೇಕು
  • ಮೂರನೇ ಹಂತ ಹೀಗೆ ಅನೇಕ ಸಭೆ /ಚರ್ಚ್ ಗಳಿಂದ ಭಾಷಾಂತರಕ್ಕೆ ಮಾನ್ಯತೆ ಪಡೆಯಬೇಕು.

ಪ್ರತಿಯೊಂದು ಹಂತದಲ್ಲೂ ಈ ಭಾಷಾಂತರ ಪ್ರಕ್ರಿಯೆಯನ್ನು ಮನ್ನಡೆಸುವವರು ಪ್ರತಿಯೊಂದು ಅಭಿಪ್ರಾಯವನ್ನು ಭಾಗವಹಿಸುವಿಕೆಯನ್ನು ಚರ್ಚ್ ನ ಕಾರ್ಯ ಜಾಲಗಳು ಪ್ರೋತ್ಸಾಹಿಸಿ ಸ್ವೀಕರಿಸ ಬೇಕು. ಹೀಗೆ ಅನೇಕ ಚರ್ಚ್ ಗಳ ಭಾಗವಹಿಸುವಿಕೆಯಿಂದ ಭಾಷಾಂತರ ಪ್ರಕ್ರಿಯೆ ಉತ್ತಮಗೊಳ್ಳುವುದರೊಂದಿಗೆ ಚರ್ಚ್ ಗೆ ಭಾಷಾಂತರದ ಹೊಣೆಗಾರಿಕೆಯನ್ನು ವಿತರಿಸಿ ವಹಿಸಿದಂತಾಗುತ್ತದೆ. ಇಂತಹ ಎಲ್ಲಾ ಪ್ರಕ್ರಿಯೆಗಳಿಂದ ಭಾಷಾಂತರಕ್ಕೆ ಯಾವುದೇ ಅಡೆತಡೆಗಳು ಬರುವುದಿಲ್ಲ.ಮತ್ತು ಚರ್ಚ್ ನಿಂದ ಸಬಲತೆಯನ್ನು,ಪ್ರೋತ್ಸಾಹ, ಪ್ರೇರಣೆಯನ್ನು ಪಡೆದಂತಾಗುತ್ತದೆ.