translationCore-Create-BCS_.../translate/choose-team/01.md

12 KiB

####ಅನುವಾದ ಮಾಡುವವರ ತಂಡದ ಪ್ರಾಮುಖ್ಯತೆ.

ಸತ್ಯವೇದವನ್ನು ಭಾಷಾಂತರ ಮಾಡುವುದು ತುಂಬಾ ಜವಾಬ್ದಾರಿ ಕೆಲಸ, ಅನೇಕ ಜನರ ಶ್ರಮ ಇದಕ್ಕೆ ಅವಶ್ಯಕ. ಈ ಮಾದರಿ ಪುಸ್ತಕದಲ್ಲಿ ಸತ್ಯವೇದ ಅನುವಾದ ಮಾಡುವ ತಂಡದ ಸದಸ್ಯರಿಗೆ ಇರಬೇಕಾದ ಅನುವಾದ ಕೌಶಲ, ಜವಾಬ್ದಾರಿಗಳು, ಇವುಗಳ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.

ಕೆಲವರಿಗೆ ಅನೇಕ ಕೌಶಲಗಳು, ಜವಾಬ್ದಾರಿಗಳು ಇರುತ್ತವೆ ಆದರೆ ಕೆಲವರಿಗೆ ಕೆಲವೇ ಕೌಶಲ ಜವಾಬ್ದಾರಿ ಇರುತ್ತವೆ. ಆದರೆ ಸತ್ಯವೇದವನ್ನು ಅನುವಾದ ಮಾಡುವ ತಂಡದಲ್ಲಿ ಅವಶ್ಯವಿರುವಷ್ಟು ಕೌಶಲಪೂರ್ಣ ಜನರು ಇರುವುದು ಮತ್ತು ಈ ತಂಡವನ್ನು ಪ್ರತಿನಿಧಿಸುವುದು ಅಗತ್ಯ.

ಚರ್ಚ್ ನಾಯಕರು /ಸಭಾನಾಯಕರು

ಸತ್ಯವೇದ ಅನುವಾದ ಮಾಡುವ ಮೊದಲು ಎಲ್ಲಾ ಸಭೆಯವರನ್ನು ಜಾಲತಾಣದ (ನೆಟ್ ವರ್ಕ್) ಮೂಲಕ ಸಂಪರ್ಕಿಸಿ ಅನುವಾದ ಕಾರ್ಯದಲ್ಲಿ ಹೆಚ್ಚು ಜನರು ಭಾಗವಹಿಸಲು ಪ್ರೋತ್ಸಾಹ ನೀಡಬೇಕಿದೆ. ಸಭೆಯವರು ತಮ್ಮ ಸಭೆಯಲ್ಲಿರುವ ಅರ್ಹವ್ಯಕ್ತಿಗಳನ್ನು ಗುರುತಿಸಿ ಈ ಕಾರ್ಯಕ್ಕೆ ಕಳುಹಿಸಬೇಕು.

ಅನುವಾದಕ್ರಿಯೆಯ ಉದ್ದೇಶ, ಪ್ರಕ್ರಿಯೆಗಳ ಬಗ್ಗೆ, ಅನುವಾದ ಪ್ರಾಜೆಕ್ಟ್ ಬಗ್ಗೆ ಹೆಚ್ಚು ವಿಷಯ ತಿಳಿದುಕೊಳ್ಳುವಂತೆ, ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು, ವಿಚಾರವಿನಿಮಯಮಾಡಲು ಅನುವಾದಕರು ಸಿದ್ಧರಿರಬೇಕು.

ಅನುವಾದಕರ ಸಮಿತಿ

ಸಭೆಯಲ್ಲಿನ ಸಮಿತಿ ಅನುವಾದ ಮಾಡುವವರನ್ನು ಗುರುತಿಸಿ ಅವರ ತಂಡಮಾಡಿ ಮಾರ್ಗದರ್ಶನನೀಡಿ ವಿಚಾರತಿಳಿಸಬೇಕು. ಸಮರ್ಥರಾದ ಅನುವಾದಕರನ್ನು ಆಯ್ಕೆಮಾಡುವುದು,ಎದುರಾಗುವ ಸಮಸ್ಯೆಗಳನ್ನು ಪರಿಹರಿಸುವುದು, ಈ ಕೆಲಸ ಸಮರ್ಥ ರೀತಿಯಲ್ಲಿ ನಡೆಯಲು ಬೇಕಾದ ಆರ್ಥಿಕ ಸಹಾಯದ ಬಗ್ಗೆ ಪ್ರಾರ್ಥನೆ ಮಾಡುವುದು ಸಹ ಸಭೆಯ ಕರ್ತವ್ಯ ಎಂದು ಮನಗಾಣಬೇಕು.

ಸಭೆಯ ಮೂಲಕ ನೇಮಿಸಲ್ಪಟ್ಟ ಸಮಿತಿಯು ಮೇಲೆ ತಿಳಿಸಿರುವ ಕೆಲಸಗಳೊಂದಿಗೆ ಅನುವಾದ ಸರಿಯಾಗಿ ಆಗಿದೆಯೆ ಎಂದು ವಿಷಯ, ಪದಪ್ರಯೋಗ, ಅಕ್ಷರಬಳಕೆಯಲ್ಲಿನ ತಪ್ಪು ಮುಂತಾದವುಗಳನ್ನು ನೋಡಿ, ತಿದ್ದಿ ಸರಿಪಡಿಸಲು (2ನೇ ಮೂರನೇ ಹಂತದಲ್ಲಿ) ಸೂಕ್ತವ್ಯಕ್ತಿಗಳನ್ನು ಆಯ್ಕೆಮಾಡಬೇಕು.

ಸಮಯಬಂದಾಗ ಸಮಿತಿಯು ಭಾಷಾಂತರ ಮಾಡುವವರ ಬಗ್ಗೆ ಒಂದು ನಮೂನೆಯನ್ನು ರಚಿಸುವ ನಿರ್ಧಾರ ತೆಗೆದುಕೊಳ್ಳಬಹುದು, ಅದನ್ನು ಹೇಗೆ ವಿತರಿಸುವುದು, ಸಭೆ ಈ ಕಾರ್ಯದಲ್ಲಿ ಹೇಗೆ ತೊಡಗಿಸಿಕೊಳ್ಳಬಹುದು ಹಾಗೂ ಭಾಷಾಂತರ ವಾದ ಸತ್ಯವೇದದ ಭಾಗಗಳನ್ನು, ಲೇಖನಗಳನ್ನು ಹೇಗೆ ಉಪಯೋಗಿಸಬೇಕು ಎಂಬುದರ ಬಗ್ಗೆ ಪ್ರೋತ್ಸಾಹಿಸಿ ಪ್ರೇರಣೆ ನೀಡಬಹುದು.

ಅನುವಾದಕರು / ಭಾಷಾಂತರಗಾರರು

ಇವರು ಅನುವಾದ/ಭಾಷಾಂತರ ಮಾಡಿ ಅದರ ಕರಡು ಪ್ರತಿಗಳನ್ನು ಸಿದ್ಧಪಡಿಸುವರು. ಇವರನ್ನು ಭಾಷಾಂತರ/ಅನುವಾದ ಸಮಿತಿ ಆಯ್ಕೆ ಮಾಡುತ್ತದೆ. ಭಾಷಾಂತರ ಮಾಡುವವರು ಭಾಷಾಂತರ ಮಾಡಲು ಉದ್ದೇಶಿಸಿರುವ ಭಾಷೆಯನ್ನು ಮಾತಾಡುವ ಸ್ಥಳೀಯರಾಗಿರಬೇಕು. ಅವರಿಗೆ ಆ ಭಾಷೆಯಲ್ಲಿ ಓದುವ,ಬರೆಯುವ ಸಾಮರ್ಥ್ಯ ಮೂಲಭಾಷೆಯ ಪರಿಚಯ ಚೆನ್ನಾಗಿ ಇರಬೇಕು, ಇದರೊಂದಿಗೆ ಅವರು ಸಭೆಯಲ್ಲಿ, ಸಮುದಾಯದಲ್ಲಿ ಉತ್ತಮ ಸಂಪರ್ಕ ಹೊಂದಿದವರಾಗಿರಬೇಕು.

ಈ ಹೆಚ್ಚಿನ ಮಾಹಿತಿಗಾಗಿ [ಅನುವಾದಕರ/ ಭಾಷಾಂತರಗಾರರ ಅರ್ಹತೆಗಳು]ಲೇಖನವನ್ನು ಓದಿ ತಿಳಿಯಿರಿ. ಅನುವಾದಕರು / ಭಾಷಾಂತರಗಾರರು ಅವರಲ್ಲೇ ಒಂದು ತಂಡಮಾಡಿಕೊಂಡು ತಾವು ಅನುವಾದಿಸಿದ ಕರಡುಪ್ರತಿಯನ್ನು ಪರಸ್ಪರ ಹಂಚಿಕೊಂಡು ಪರಿಶೀಲಿಸಿ ತಿದ್ದುಪಡಿಮಾಡಬಹುದು.ಸಮುದಾಯದ ಭಾಷಾತಜ್ಞರೊಂದಿಗೆ ಇದನ್ನು ಪರಿಶೀಲಿಸಿ 2ನೇ ಮತ್ತು 3 ನೇ ಹಂತದ ಪರಿಶೀಲನಾ ಸಮಿತಿಯೊಂದಿಗೆ ಪರಿಶೀಲಿಸಿ ಸಲಹೆಗಳನ್ನು ಪಡೆಯಬಹುದು.

ಈ ಎಲ್ಲಾ ಪರಿಶೀಲನಾ ಕಾರ್ಯದ ನಂತರ ಅನುವಾದಕರು / ಭಾಷಾಂತರಗಾರರು ಅಗತ್ಯವಿರುವ ಕಡೆ ಸ್ವೀಕರಿಸಿದ ಸಲಹೆಗಳನ್ನು ಎಲ್ಲಿ ಸಮರ್ಪಕವಾಗಿ ಬಳಸಬಹುದು ಎಂಬುದನ್ನು ಗಮನಿಸಿ ಸೇರಿಸಬಹುದು. ಇದರಿಂದ ಭಾಷಾಂತರ ವಾಗಿರುವ ವಿಷಯವು ಅನೇಕ ಪರಿಶೀಲನೆಗೆ ಒಳಗಾಗಿ ಉತ್ತಮಗೊಳ್ಳುತ್ತದೆ.

ಬೆರಳಚ್ಚು ಮಾಡುವವರು /ಟೈಪ್ ಮಾಡುವವರು.

ಭಾಷಾಂತರಗಾರರು ಸ್ವತಃ ಬರೆದು ಸಿದ್ಧಪಡಿಸಿದ ಅನುವಾದದ ಕರಡುಪ್ರತಿಯನ್ನು ಕಂಪ್ಯೂಟರ್ ಅಥವಾ ಟ್ಯಾಬ್ಲೆಟ್ನಲ್ಲಿ ಅಳವಡಿಸಲು ಆಗದಿದ್ದರೆ ಸಮಿತಿಯಲ್ಲಿರುವ ಇತರ ಸದಸ್ಯರು ಇದನ್ನು ಮಾಡಬಹುದು. ಟೈಪಿಂಗ್ ಮಾಡುವವರು ಹೆಚ್ಚು ತಪ್ಪುಗಳನ್ನು ಮಾಡದೆ ಇರುವವರಾಗಿದ್ದರೆ ಒಳಿತು.

ಇವರಿಗೆ ಟೈಪ್ ಮಾಡುವಾಗ ಎಲ್ಲೆಲ್ಲಿ ಯಾವ ಲೇಖನ ಚಿಹ್ನೆಗಳನ್ನು ಭಾಷೆಯಲ್ಲಿ ಬಳಸಬೇಕು ಎಂಬುದು ತಿಳಿದಿರಬೇಕು. ಇವರು ಪರಿಶೀಲನಾ ತಂಡದವರು ಮಾಡಿದ ತಿದ್ದುಪಡಿ ಮತ್ತು ಪರಿಷ್ಕೃತ ಅಂಶಗಳನ್ನು ಪುನಃ ಟೈಪ್ ಮಾಡಿ ಅಂತಿಮಪ್ರತಿಯನ್ನು ಸಿದ್ಧಪಡಿಸಬೇಕು.

####ಅನುವಾದ /ಭಾಷಾಂತರ ಪರಿಶೀಲನಾ ತಂಡದ ಸದಸ್ಯರು

ಉದ್ದೇಶಿತ ಭಾಷೆಯಲ್ಲಿನ ಎಲ್ಲಾ ಹೊಳಹುಗಳನ್ನು ಅನುವಾದದಲ್ಲಿ /ಭಾಷಾಂತರದಲ್ಲಿ ಅನುಸರಿಸಿದ್ದಾರಾ ಎಂದು ಪರಿಶೀಲಿಸಲು ಭಾಷೆಯ ಸಮುದಾಯದಲ್ಲಿನ ಸದಸ್ಯರು ಅನುವಾದಕ್ಕೆ ಸಂಬಂಧಿಸಿದ ಭಾಷೆಯಲ್ಲಿ ಸಮರ್ಪಕವಾಗಿ ಆಗಿದೆಯೇ? ಸ್ಪಷ್ಟ ಹಾಗೂ ನ್ಯೂನತೆ ಇಲ್ಲದೆ ಆಗಿದೆಯೇ ಎಂದು ಪರಿಶೀಲಿಸುವರು.

ಮೂಲಭೂತವಾಗಿ ಇವರು ಬಾಷಾಂತರಗಾರರಾದರೂ ಸಮಿತಿಯಲ್ಲಿ ಸದಸ್ಯರಾಗಿರದೆ ಇರುವವರು ಆಗಿರಬೇಕು. ಹೀಗೆ ಸಿದ್ಧವಾದ ಪ್ರತಿಗಳನ್ನು ಇವರು ಸಮುದಾಯದ ಜನರ ಮುಂದೆ ಓದಿ,ಅನುವಾದಿಸಿದ ವಿಷಯಗಳು ಅರ್ಥವಾಗುತ್ತಿದೆಯೇ ? ಎಂದು ಪ್ರಶ್ನೆಗಳನ್ನು ಕೇಳುವುದರ ಮೂಲಕ ಖಚಿತಪಡಿಸುತ್ತಾರೆ. ಇದರ ವಿವರಣೆಗಳಿಗೆ ಇತರ [ಮಾದರಿಗಳ ವಿಧಾನಗಳನ್ನು]ಪರಿಶೀಲಿಸಿ.

ಪರಿಶೀಲಿಸುವವರು.

ಉದ್ದೇಶಿತ ಮೂಲಭಾಷೆಯಲ್ಲಿ ಸತ್ಯವೇದವನ್ನು ಓದಿ ತಿಳಿದವರು ಈ ಅನುವಾದವನ್ನು/ ಭಾಷಾಂತರವನ್ನು ಪರಿಶೀಲಿಸಿ ಸೂಕ್ಷ್ಮವಾದ ವಿಚಾರಗಳೂ ಸಹ ಸಮರ್ಪಕವಾಗಿದೆ ಎಂದು ಪರಿಶೀಲಿಸುವವರಾಗಿರಬೇಕು. ಅವರು ಉದ್ದೇಶಿತ ಮೂಲಭಾಷೆಯನ್ನು ಚೆನ್ನಾಗಿ ಓದಲು ಸಮರ್ಥರಾಗಿರಬೇಕು.

ಸತ್ಯವೇದದಲ್ಲಿನ ಎಲ್ಲಾ ಅಂಶಗಳು ಸುಲಭವಾಗಿ ಅರ್ಥವಾಗುವಂತೆ ಅನುವಾದವಾಗಿದೆಯೇ? ಸಮರ್ಪಕವಾಗಿದೆಯೇ ಎಂದು ತಿಳಿದುಕೊಳ್ಳಲು ಅದನ್ನು ಮೂಲ ಭಾಷೆಯ ಸತ್ಯವೇದದೊಂದಿಗೆ ಹೋಲಿಸಿ ನೋಡಿ ತಿಳಿಸುವರು.

ಇವರು ಅನುವಾದ /ಭಾಷಾಂತರ ಮಾಡುವುದರಲ್ಲಿ ಸಕ್ತರಾಗಿರಬೇಕು ಮತ್ತು ಈ ಪರಿಶೀಲನಾ ಕಾರ್ಯ ಮಾಡಲು ಹೆಚ್ಚಿನ ಸಮಯವಕಾಶ ಇರುವವರಾಗಿರಬೇಕು. ವಿವಿಧ ಸಭೆಗಳಲ್ಲಿನ ಸದಸ್ಯರು ಉದ್ದೇಶಿತ ಮೂಲಭಾಷೆಯನ್ನು ತಿಳಿದವರು, ಮಾತನಾಡುವವರೂ, ಅನುವಾದ /ಭಾಷಾಂತರ ಮಾಡಿದ ವಿಷಯಗಳನ್ನು ಬಳಸಿಕೊಳ್ಳುವ ಸಾಮರ್ಥ್ಯ ಉಳ್ಳವರಾಗಿರಬೇಕು.

2 ನೇ ಹಂತದ ಪರಿಶೀಲಕರು ಸ್ಥಳೀಯ ಸಭೆಯ / ಚರ್ಚಿನ ನಾಯಕರಾಗಿರಬೇಕು. 3 ನೇ ಹಂತದ ಪರಿಶೀಲಕರು ಸ್ಥಳೀಯವಾಗಿ ಇರುವ ಅನೇಕ ಚರ್ಚ್/ ಸಭೆಗಳಲ್ಲಿ ನಾಯಕರಾಗಿ, ಆ ಭಾಷೆಗಳಲ್ಲಿ ವಿಶಾಲವಾದ ಅನುಭವ ಇರುವವರಾಗಿರಬೇಕು. ಇವರೆಲ್ಲರೂ ತಮ್ಮದೇ ಆದ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಂಡವರಾದುದರಿಂದ ಇವರಿಗೆ ವಿವಿಧ ಪುಸ್ತಕಗಳು ಅಥವಾ ಅಧ್ಯಾಯಗಳನ್ನು ಹಂಚುವುದರಿಂದ ಒಬ್ಬರು/ಇಬ್ಬರಿಗೆ ಅನುವಾದ ಕಾರ್ಯದಲ್ಲಿ ಆಗುವ ಶ್ರಮವನ್ನು ಕಡಿಮೆ ಮಾಡಬಹುದು.