translationCore-Create-BCS_.../translate/bita-hq/01.md

133 lines
18 KiB
Markdown
Raw Blame History

This file contains ambiguous Unicode characters

This file contains Unicode characters that might be confused with other characters. If you think that this is intentional, you can safely ignore this warning. Use the Escape button to reveal them.

###ವಿವರಣೆ
ಸತ್ಯವೇದದಲ್ಲಿನ ಮಾನವ ದೇಹದ ಅಂಗಾಂಗಗಳನ್ನು ಮತ್ತು ಗುಣಲಕ್ಷಣಗಳನ್ನು ಕೆಲವು ಪ್ರತಿಮೆಗಳ ಮೂಲಕ ಬಳಸಿರುವುದನ್ನು ಅಕ್ಷರ ಕ್ರಮಾನುಸಾರ ಕೆಳಗೆ ಪಟ್ಟಿಮಾಡಿ ತಿಳಿಸಿದೆ.
ದೊಡ್ಡ ಅಕ್ಷರಗಳಲ್ಲಿ ಕೊಟ್ಟಿರುವ ಎಲ್ಲಾ ಪದಗಳು ಒಂದು ಉದ್ದೇಶವನ್ನು ಹೊಂದಿದೆ. ಪ್ರತಿಮೆ ಹೊಂದಿರುವ ವಾಕ್ಯದಲ್ಲಿ ಈ ಪದಗಳು ಬರಲೇಬೇಕೆಂಬ ಅಗತ್ಯವಿಲ್ಲ ಆದರೆ ಪದದ ಅರ್ಥಮಾತ್ರ ಪ್ರತಿನಿಧಿಸುತ್ತದೆ.
#### ಶರೀರ ಒಂದು ಗುಂಪು, ಜನಾಂಗವನ್ನು ಪ್ರತಿನಿಧಿಸುತ್ತದೆ.
>ನೀವು ಕ್ರಿಸ್ತನ ದೇಹ ಮತ್ತು ಒಬ್ಬೊಬ್ಬರೂ ಆತನ ಅಂಗಗಳಾಗಿದ್ದೀರಿ. (1 ಕೊರಿಂಥ 12:27 ULB)
<blockquote>ಪ್ರೀತಿಯಿಂದ ಸತ್ಯವನ್ನು ಅನುಸರಿಸುತ್ತಾ ಬೆಳೆದು, ಎಲ್ಲಾ ವಿಷಯಗಳಲ್ಲಿಯೂ ಕ್ರಿಸ್ತನ ಐಕ್ಯವನ್ನು ಹೊಂದುತ್ತಾ ಬರಬೇಕು ಆತನೇ ಶಿರಸ್ಸು. ದೇಹವೆಲ್ಲಾ ಆತನ ದೊರೆತನದಲ್ಲಿದ್ದು ತನ್ನಲ್ಲಿರುವ ಎಲ್ಲಾ ನರಗಳಿಂದ ಬಿಗಿಯಾಗಿ ಜೋಡಿಸಲ್ಪಟ್ಟು ಪ್ರತಿ ಅಂಗದಿಂದ ಅದರದರ ಶಕ್ತಿಯ ಪ್ರಕಾರ ಸಹಾಯ ಹೊಂದಿ ಪ್ರೀತಿಯಿಂದ ಐಕ್ಯವಾಗಿದ್ದು ಕ್ಷೇಮಾಭಿವೃದ್ಧಿಯನ್ನು ಹೊಂದುತ್ತೇವೆ. (ಎಫೇಸ 4:15-16 ULB) </blockquote>
ಈ ವಾಕ್ಯದಲ್ಲಿ ಕ್ರಿಸ್ತನ ದೇಹವು ಕ್ರಿಸ್ತನನ್ನು ಅನುಸರಿಸುವ ಒಂದು ಗುಂಪಿನ ಜನರನ್ನು ಕುರಿತು ಹೇಳಿದೆ.
#### ಯಾರಾದರೊಬ್ಬರ ಅಸ್ತಿತ್ವವನ್ನು ಪ್ರತಿನಿಧಿಸುತ್ತದೆ.
>“ನೀವು ನನಗೆ ಅಂಜುವುದಿಲ್ಲವೋ”, <u>ನನ್ನೆದುರಿಗೆ ನಡುಗುವುದಿಲ್ಲವೋ?</u> (ಯೆರೇಮಿಯ 5:22 ULB)
ಎದುರಿಗೆ ಇರುವುದು ಎಂದರೆ ಒಬ್ಬರ ಮುಂದೆ ಇರುವುದು, ಅಸ್ತಿತ್ವವದಲ್ಲಿರುವುದು ಎಂದು ಅರ್ಥ.
#### ಮುಖ ಎಂಬುದು ಒಬ್ಬರ ಗಮನ ನೀಡುವಿಕೆಯನ್ನು ಪ್ರತಿನಿಧಿಸುತ್ತದೆ.
>ಆದಕಾರಣ ನೀನು ಅವರನ್ನು ಸಂಬೋಧಿಸಿ ಹೀಗೆ ಹೇಳು “ ಕರ್ತನಾದ ಯೆಹೋವನು ಇಂತೆನ್ನುತ್ತಾನೆ ಇಸ್ರಾಯೇಲ್ ವಂಶದವರಲ್ಲಿ ಯಾವಯಾವನು ತನ್ನ ಗೊಂಬೆಗಳನ್ನು ಮನಸ್ಸಿನಲ್ಲಿ ನೆಲೆಗೊಳಿಸಿ ತನಗೆ ಪಾಪಕಾರಿಯಾದ ವಿಘ್ನವನ್ನು <u>ತನ್ನ ಮುಂದೆ ಇಟ್ಟುಕೊಂಡು </u>,ಪ್ರವಾದಿಯನ್ನು ಪ್ರಶ್ನೆಕೇಳುವುದಕ್ಕೆ ಅವನ ಪಾತಕಕ್ಕೆ, ಲೆಕ್ಕವಿಲ್ಲದ ಬೊಂಬೆಗಳಿಗೆ ತಕ್ಕಹಾಗೆ ಯೆಹೋವನಾದ ನಾನು ಉತ್ತರಕೊಡುವೆನು. (ಯೆಹಜ್ಕೇಲ14:4 ULB)
ಮುಖದ ಎದುರಿಗೆ ಏನನ್ನಾದರೂ ಇಡುವುದು ಎಂದರೆ ಅದರ ಕಡೆಗೆ ದೃಷ್ಟಿಸಿ ನೋಡುವುದು.ಅಥವಾ ಅದರ ಕಡೆ ಗಮನಕೊಡುವುದು ಎಂದರ್ಥ.
>ಅನೇಕರು <u>ನ್ಯಾಯಾಧಿಪತಿಯ ಕಟಾಕ್ಷವನ್ನು </u>ಕೋರುವುರು. (ಜ್ಞಾನೋಕ್ತಿಗಳು 29:26 ULB)
ಒಬ್ಬ ವ್ಯಕ್ತಿ ಒಬ್ಬನ ಮುಖವನ್ನು ನೋಡಲು ಪ್ರಯತ್ನಿಸುತ್ತಿದ್ದಾನೆ ಎಂದರೆ ಆ ವ್ಯಕ್ತಿ ಇವನ ಕಡೆ ಗಮನ ಕೊಡುತ್ತಾನೆ ಎಂದರ್ಥ.
>ದೇವರೇ <u>ಏಕೆ ವಿಮುಖನಾಗಿದ್ದೀ ?</u>ನಮಗಿರುವ ಬಾಧೆಯನ್ನು, ಹಿಂಸೆಯನ್ನು ಏಕೆ ಲಕ್ಷಿಸುವುದಿಲ್ಲ? (ದಾ.ಕೀ. 44:24 ULB)
ಯಾರ ಬಗ್ಗೆಯಾದರೂ ನಾವು ವಿಮುಖರಾದರೆ ನಾವು ಅವರನ್ನು ಅಲಕ್ಷಿಸುತ್ತಿದ್ದೇವೆ ಎಂದರ್ಥ.
#### ಮುಖ ಬಾಹ್ಯರೂಪವನ್ನು ಪ್ರತಿನಿಧಿಸುತ್ತದೆ.
>ಬರವು <u>ಲೋಕದಲ್ಲೆಲ್ಲಾ</u>ಹರಡಿಕೊಂಡಿರುವಾಗ (ಆದಿಕಾಂಡ 41:56 ULB)
<blockquote>ತನ್ನ ಸಿಂಹಾಸನಕ್ಕೆ <u>ಮರೆಯಾಗಿ ಮುಂಭಾಗದಲ್ಲಿ </u>ಮೋಡವನ್ನು ಕವಿಸಿರುವನು. (ಯೋಬ 26:9 ULB) </blockquote>
#### ಇದು ವ್ಯಕ್ತಿಯೊಬ್ಬನ ಕಾರ್ಯವನ್ನು ಅಥವಾ ಬಲವನ್ನು ಪ್ರತಿನಿಧಿಸುತ್ತದೆ.
>ಯೆಹೋವನು ಕಟ್ಟೆಯೊಡೆದ ಪ್ರವಾಹದಂತೆ ನನ್ನ ಶತ್ರುಗಳ ಮೇಲೆ ಬಿದ್ದು ಅವರನ್ನು <u>ನನ್ನ ಮುಖಾಂತರ</u> ನಾಶ ಮಾಡಿದನು. (1 ಪೂರ್ವಕಾಲ ವೃತ್ತಾಂತ 14:11 ULB)
"ನನ್ನ ಮುಖಾಂತರ ಯೆಹೋವನು ಕಟ್ಟೆಯೊಡೆದ ಪ್ರವಾಹದಂತೆ ಅವರ ಮೇಲೆ ಬಿದ್ದು ನಾಶಮಾಡಿದನು" ಎಂದರೆ.
><u>ನಿನ್ನ ಮುಖಾಂತರ</u>ನಿನ್ನ ಶತ್ರುಗಳೆಲ್ಲರೂ ನಿನಗೆ ಸಿಕ್ಕುವರು <u>ನಿನ್ನ ಬಲ ಭುಜ ಪರಾಕ್ರಮದಿಂದ</u> ನಿನ್ನನ್ನು ದ್ವೇಷಿಸುವ ಹಗೆಗಳನ್ನು ಹಿಡಿಯುವಿ. (ದಾ.ಕೀ. 21:8 ULB)
"ನಿನ್ನ ಕೈಯಿಂದಲೇ ನಿನ್ನ ಎಲ್ಲಾ ಶತ್ರುಗಳನ್ನು ಹಿಡಿಯುವಿ" ಎಂದರೆ "ನಿನ್ನ ಬಲದಿಂದಲೇ ನಿನ್ನ ಎಲ್ಲಾ ಶತ್ರುಗಳನ್ನು ಸೆರೆಹಿಡಿಯುವಿ ಎಂದು ಅರ್ಥ".
>ಇಗೋ, <u>ಯೆಹೋವನ ಹಸ್ತವು</u>ರಕ್ಷಿಸಲಾಗದಂತಹ ಮೋಟುಗೈ ಅಲ್ಲ. (ಯೆಶಾಯ59:1 ULB)
"ಆತನ ಕೈ ಮೋಟುಗೈ ಅಲ್ಲ" ಎಂದರೆ ಆತನು ಬಲಹೀನನಲ್ಲ ಎಂದರ್ಥ.
#### "ತಲೆ" ಎಂಬ ಪದ ಅರಸನನ್ನು ಪ್ರತಿನಿಧಿಸುತ್ತದೆ.ಯಾರು ಇತರರ ಮೇಲೆ ಅಧಿಕಾರವನ್ನು ಹೊಂದಿರುತ್ತಾನೋ ಅವನು.
>ಯೆಹೋವನು ಸಮಸ್ತವನ್ನು ಕ್ರಿಸ್ತನ ಪಾದಗಳ ಕೆಳಗೆ ಹಾಕಿದನು. ಇದಲ್ಲದೆ ಆತನನ್ನು <u>ಎಲ್ಲದರ ಮೇಲೆ ಇರಿಸಿ ಸಭೆಗೆ ಶಿರಸ್ಸಾಗಿ ನೇಮಿಸಿದನು </u>. ಸಭೆಯು ಆತನ ದೇಹವಾಗಿದೆ, ಎಲ್ಲವನ್ನೂ ಎಲ್ಲಾ ಸಂಬಂಧದಲ್ಲಿ ವ್ಯಾಪಿಸಿವಾತನಿಂದ ಅದು ಪರಿಪೂರ್ಣತೆಯುಳ್ಳದ್ದಾಗಿದೆ. (ಎಫೇಸ 1:22 ULB)
<blockquote>ಸ್ತ್ರೀಯರೇ, ನೀವು ಕರ್ತನಿಗೆ ಹೇಗೋ ಹಾಗೆಯೇ ನಿಮ್ಮ ನಿಮ್ಮ ಗಂಡಂದರಿಗೆ ಅಧೀನರಾಗಿರ್ರಿ. ಕ್ರಿಸ್ತನು ಸಭೆಗೆ <u>ತಲೆಯಾಗಿರುವ ಪ್ರಕಾರವೇ</u>ಗಂಡನು ಹೆಂಡತಿಗೆ <u>ತಲೆಯಾಗಿರುವನು </u>ಕ್ರಿಸ್ತನೋ ಸಭೆ ಎಂಬ ದೇಹಕ್ಕೆ ರಕ್ಷಕನಾಗಿದ್ದಾನೆ. (ಎಫೇಸ 5:22-23 ULB)</blockquote>
#### ಯಜಮಾನ ಎಂಬುವವನು ಎಲ್ಲರಿಗೂ ಪೋಷಣೆನೀಡಿ ಕಾರ್ಯತತ್ಪರರಾಗುವಂತೆ ಮಾಡುತ್ತಾನೆ.
>ಯಾರೊಬ್ಬರೂ <u>ಇಬ್ಬರು ಯಜಮಾನರಿಗೆ </u>, ಸೇವೆಮಾಡಲಾರರು.ಅವನು ಒಬ್ಬನನ್ನು ದ್ವೇಷಿಸಿ ಮತ್ತೊಬ್ಬನನ್ನು ಪ್ರೀತಿಸುವನು., ಇಲ್ಲದೆ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬನನ್ನು ತಾತ್ಸಾರ ಮಾಡುವನು. ನೀವು ದೇವರನ್ನು ಹಣವನ್ನು ಎರಡನ್ನೂ ಹೊಂದಿಕೊಂಡು ಸೇವೆ ಮಾಡಲಾರಿರಿ. (ಮತ್ತಾಯ 6:24 ULB)
ದೇವರ ಸೇವೆ ಮಾಡುವುದೆಂದರೆ ದೇವರಿಂದ ಪ್ರೇರೇಪಣೆ ಹೊಂದಿರುವುದು ಎಂದು. ಹಣದ ಸೇವೆ ಮಾಡುವುದೆಂದರೆ ಹಣದ ವ್ಯಾಮೋಹಕ್ಕೆ ಒಳಗಾಗುವುದು ಎಂದು.
#### ಹೆಸರು ಒಬ್ಬ ವ್ಯಕ್ತಿಯ ಹೆಸರನ್ನು ಪ್ರತಿನಿಧಿಸುತ್ತದೆ.
>ನಿನ್ನ ದೇವರು <u>ನಿನ್ನ ಹೆಸರಿಗಿಂತಲೂ ಸಲೋಮೋನನ ಹೆಸರನ್ನು </u>ಪ್ರಸಿದ್ಧಿಗೆ ತರಲಿ.ರಾಜ್ಯವನ್ನು ನಿನ್ನ ಕಾಲದಲ್ಲಿ ಇದ್ದುದಕ್ಕಿಂತ ಅವನ ಕಾಲದಲ್ಲಿ ಹೆಚ್ಚು ಬಲಪಡಿಸಲಿ ಎಂದು ಅವನನ್ನು ಹರಸಿದ್ದಾನೆ. 1 ಅರಸು 1:47 (ULB)
<blockquote>ಐಗುಪ್ತದಲ್ಲಿ ವಾಸವಾಗಿರುವ ಯೆಹೋದ್ಯರೇ, ನೀವೆಲ್ಲರೂ ಯೆಹೋವನ ಮಾತನ್ನು ಕೇಳಿರಿ ಯೆಹೋವನು ಇಂತೆನ್ನುತ್ತಾನೆ. ಆಹಾ <u>ಕರ್ತನಾದ ಯೆಹೋವನ ಜೀವದಾಣೆ </u>ಎಂದು <u>ನನ್ನ ಹೆಸರನ್ನು ಬಾಯಿಂದ ನುಡಿಯಲಿಕ್ಕೆ </u>ಐಗುಪ್ತದಲ್ಲಿ ಯಾವ ಯೆಹೂದ್ಯನೂ ಇನ್ನು ಇರನು ಎಂಬುದಾಗಿ ನನ್ನ ಮಹಾನಾಮದ ಮೇಲೆ ಆಣೆ ಇಟ್ಟಿದ್ದಾನೆ.…." (ಯೆರೇಮಿಯ 44:26 ULB) </blockquote>
ಒಬ್ಬ ವ್ಯಕ್ತಿಯ ಹೆಸರು ಪ್ರಸಿದ್ಧಿಯಾಗಿದೆ ಎಂದರೆ, ಆ ವ್ಯಕ್ತಿಯ ಹೆಸರು ಶ್ರೇಷ್ಠವಾಗಿದೆ ಎಂದು ಅರ್ಥ.
>ಸ್ವಾಮಿ ಕೃಪೆಮಾಡು ; ನಿನ್ನ ಸೇವಕನಾದ ನನ್ನ ಪ್ರಾರ್ಥನೆಗೂ, <u>ನಿನ್ನ ನಾಮಸ್ಮರಣೆಯಲ್ಲಿ </u>….ಆನಂದಿಸುವ ನಿನ್ನ ಭಕ್ತರ ಪ್ರಾರ್ಥನೆಗೂ ಕಿವಿಗೊಡು.ನಿನ್ನ ಸೇವಕನು ಈ ಹೊತ್ತು ಆ ಮನುಷ್ಯನ ದಯೆಗೆ ಪಾತ್ರನಾಗಿ ಕೃತಾರ್ಥನಾಗುವಂತೆ ಅನುಗ್ರಹಿಸಬೇಕೆಂದು ಪ್ರಾರ್ಥಸಿದನು. ನೆಹೆಮಿಯಾ1:11 (ULB)
ಒಬ್ಬ ವ್ಯಕ್ತಿಯ ಹೆಸರನ್ನು ಗೌರವಿಸ ಬೇಕೆಂದರೆ ಆ ವ್ಯಕ್ತಿಯನ್ನು ಗೌರವಿಸಿದಂತೆ.
#### ಹೆಸರು ಎಂಬುದು ಒಬ್ಬ ವ್ಯಕ್ತಿಯ ಪ್ರಸಿದ್ಧಿಯನ್ನು ಅಥವಾ ಜನಪ್ರಿಯತೆಯನ್ನು ಪ್ರತಿನಿಧಿಸುತ್ತದೆ.
>ಇನ್ನು ಮೇಲೆ ನನ್ನ ಪರಿಶುದ್ಧ ನಾಮವನ್ನು ನಿಮ್ಮ ಬಲಿಗಳಿಂದಲೂ ಬೊಂಬೆಗಳಿಂದಲೂ ನೀವು <u>ಅಪಕೀರ್ತಿಗೆ </u>ಗುರಿಮಾಡುವುದೇ ಇಲ್ಲ. ಯೆಹೆಜ್ಕೇಲ20:39 (ULB)
ದೇವರ ನಾಮವನ್ನು ದೂಷಿಸುವುದ /ಅಪವಿತ್ರ ಮಾಡುವುದು ಎಂದರೆ ಆತನ ಹೆಸರಿನ ಪ್ರಖ್ಯಾತಿಯನ್ನು ಅಪಖ್ಯಾತಿಗೊಳಿಸಿದಂತಾಗುವುದು. ಜನರು ಆತನ ಬಗ್ಗೆ ಯೋಚಿಸಿದಂತೆ ಪ್ರಖ್ಯಾತಗೊಳಿಸಬೇಕು.
>ನೀವು ಜನಾಂಗಗಳ ನಡುವೆ ಅಪಕೀರ್ತಿಗೆ ಗುರಿಮಾಡಿದ <u>ನನ್ನ ಘನ ನಾಮದ ಗೌರವವನ್ನು </u>ನಾನು ಕಾಪಾಡಿಕೊಳ್ಳುವೆನು.... ಯೆಹೆಜ್ಕೇಲ 36:23 (ULB)
ದೇವರ ನಾಮವನ್ನು ಪವಿತ್ರವಾಗಿಸುವುದು ಎಂದರೆ ಜನರು ದೇವರ ಹೆಸರನ್ನು ಪವಿತ್ರವೆಂದು ತಿಳಿದು ಮಹಿಮೆಪಡಿಸಬೇಕು.
>ನಿನ್ನ ಸೇವಕರಾದ ನಾವು ನಿಮ್ಮ ದೇವರಾದ ಯೆಹೋವನ <u>ನಾಮ ಮಹತ್ತಿನ ನಿಮಿತ್ತ </u>ಬಹುದೂರ ದೇಶದಿಂದ ಬಂದಿದ್ದೇವೆ. ನಮ್ಮ ಹಿರಿಯರೋ, ದೇಶನಿವಾಸಿಗಳು ಆತನು ಐಗುಪ್ತದೇಶದಲ್ಲಿ ನಡೆಸಿದ ಮಹತ್ಕಾರ್ಯಗಳ ಬಗ್ಗೆ ಹೇಳುವುದನ್ನು ಕೇಳಿದ್ದೇವೆ. (ಯೆಹೋಶುವ 9:9 ULB)
ಜನರು ಯೆಹೋವನನ್ನು ಕುರಿತು ಕೇಳಿದ ಎಲ್ಲವೂ "ಯೆಹೋವನ ನಾಮಮಹಿಮ" ಮತ್ತು ಪ್ರಖ್ಯಾತಿಯನ್ನು ಕುರಿತು ಕೇಳಿದ್ದು.
#### ಮೂಗು ಯಾವಾಗಲೂ ಕೋಪವನ್ನು ಪ್ರತಿನಿಧಿಸುತ್ತದೆ.
>ನಿನ್ನ ಗದರಿಕೆಯಿಂದಲೂ <u>ಶ್ವಾಸ ಭರದಿಂದಲೂ </u>. ಸಮುದ್ರದ ತಳವು ಕಾಣಿಸಿತು ಭೂಮಂಡಲದ ಅಸ್ತಿವಾರಗಳು ಕಾಣಿಸಿತು. (ದಾ.ಕೀ. 18:15 ULB)
<blockquote><u>ಶ್ವಾಸ ಭರದಿಂದ </u>ಸಮುದ್ರದ ತಳ ಕಾಣಿಸಿತು. (ವಿಮೋಚನಾ ಕಾಂಡ 15:8 ULB)</blockquote>
>ಆತನ <u>ಮೂಗಿನಿಂದ</u>, ಹೊಗೆಯು ಬಂತು: ಆತನ ಬಾಯಿಯಿಂದ ಅಗ್ನಿಜ್ವಾಲೆ ಹೊರಟುಸಿಕ್ಕಿದ್ದೆಲ್ಲವನ್ನೂ ದಹಿಸಿ ಕೆಂಡವನ್ನಾಗಿ ಮಾಡಿತು. (2 ಸಮುವೇಲ 22:9 ULB)
<blockquote>… ಇದು ಯೆಹೋವನ ಘೋಷಣೆ: ನಾನು ಸಿಟ್ಟಿನಿಂದ <u>ಬುಸುಗುಟ್ಟುವೆನು</u>!' (ಯೆಹಜ್ಕೇಲ38:18 ULB)</blockquote>
ಯಾರ ಮೂಗಿನಿಂದ ಹೊಗೆಯಂತೆ ಬಿಸಿಯುಸಿರು ಹೊರಬರುತ್ತದೋ ಅದು ಅವನ ಸಿಟ್ಟಿನ ತೀವ್ರತೆಯನ್ನು ತೋರಿಸುತ್ತದೆ.
#### ದುರಹಂಕಾರದ ನೋಟ- ದುರಹಂಕಾರದ ನೋಟ ದುರಭಿಮಾನವನ್ನು ಪ್ರತಿನಿಧಿಸುತ್ತದೆ.
><u>ಹಮ್ಮಿನ ಕಣ್ಣುಳ್ಳವರನ್ನು </u>ತಗ್ಗಿಸಿ ಬಿಡವನು ನೀನಲ್ಲವೋ! (ದಾ.ಕೀ 18:27 ULB)
ದುರಹಂಕಾರದ ನೋಟವುಳ್ಳ ಮನುಷ್ಯನು ದುರಭಿಮಾನದಿಂದ ಕೂಡಿರುತ್ತಾನೆ.
><u>ದೀನ ದೃಷ್ಟಿಯುಳ್ಳವನನ್ನು </u>.ದೇವರು ಮೇಲಕ್ಕೆತ್ತಿ ರಕ್ಷಿಸುವನು. (ಯೋಬ 22:29 ULB)
ದೀನ ದೃಷ್ಟಿಯುಳ್ಳ ಮನುಷ್ಯನು ನಿರಹಂಕಾರಿಯೂ, ವಿನಯಶೀಲನೂ ಆಗಿರುತ್ತಾನೆ.
#### ಎಂಬುದು ಗುಣಲಕ್ಷಣಗಳನ್ನು ಹಂಚಿಕೊಳ್ಳುತ್ತಾರೆ.
><u>ಕುತಂತ್ರದ ಮಗನ ಯೋಜನೆ ಸಾಗದು </u>. ಯಾವ ಕೆಡುಕನೂ ಅವನನ್ನು ತಗ್ಗಿಸಲಾರನು. (ದಾ.ಕೀ 89:22b ULB)
ಕುತಂತ್ರಿಯ ಮಗನು ಕುತಂತ್ರಿ.
>ಸೆರೆಹೋದವರ ನರಳಿಕೆ ನಿನ್ನ ಗಮನಕ್ಕೆ ಬರಲಿ.
><u>ಸಾಯಲಿರುವ ನಿನ್ನ ಮಕ್ಕಳನ್ನು </u>ನಿನ್ನ ಭುಜ ಮಹತ್ತಿನಿಂದ ಜೀವಂತವಾಗಿಸು. (ದಾ.ಕೀ.79:11 ULB)
ಇಲ್ಲಿ ಸಾಯಲಿರುವ ಮಕ್ಕಳು ಎಂದರೆ ಇತರರು ಕೊಲ್ಲಲು ಯೋಚಿಸಿರುವ ಜನರು.
>ನಾವೆಲ್ಲರೂ ಮೊದಲು ಅವಿಧೇಯವಾಗಿದ್ದು, ಶರೀರ ಭಾವದ ಅಧೀನರಾಗಿ ಶರೀರಕ್ಕೂ ಮನಸ್ಸಿಗೂ ಸಂಬಂಧಪಟ್ಟ ಇಚ್ಛೆಗಳನ್ನು ನೆರೆವೇರಿಸುತ್ತಾ ನಡೆದು ಇತರರಂತೆ ಸ್ವಭಾವ ಸಿದ್ಧರಾಗಿ <u>ದೇವರ ಕೋಪಕ್ಕೆ ಗುರಿಯಾದವರಾಗಿದ್ದೇವೆ.</u> (ಎಫೇಸ 2:3 ULB)
ಕೋಪಕ್ಕೆ ಗುರಿಯಾದವರು ಎಂದರೆ ದೇವರು ಅವರ ಬಗ್ಗೆ ತುಂಬಾ ಕೋಪಗೊಂಡಿದ್ದಾನೆ ಎಂದರ್ಥ.
### ಭಾಷಾಂತರ ತಂತ್ರಗಳು
([ಸತ್ಯವೇದದಲ್ಲಿನ ಕಾವ್ಯಪ್ರತಿಮೆಗಳು - ಸಾಮಾನ್ಯ ರಚನೆಗಳು ](../bita-part1/01.md) ಇದರ ಬಗ್ಗೆ ಇರುವ ಭಾಷಾಂತರ ತಂತ್ರಗಳನ್ನು ನೋಡಿ).