translationCore-Create-BCS_.../intro/statement-of-faith/01.md

8.2 KiB
Raw Blame History

ಈ ದಾಖಲೆಯ ಪ್ರತಿಯು ಈ ಲಿಂಕ್ ನಲ್ಲಿ http://ufw.io/faith/ದೊರೆಯುತ್ತದೆ.

ಈ ಕೆಳಗಿನ ವಿಶ್ವಾಸಾರ್ಹ ಹೇಳಿಕೆಗಳು ಹೇಳಿರುವಂತಹ ಸಂಸ್ಥೆಯ ಸದಸ್ಯರು ಮತ್ತು. ಅನಾವರಣಗೊಂಡ ಪದಗಳು ಈ ಪ್ರಾಜೆಕ್ಟ್ ಗೆ ಕೊಡುಗೆ ನೀಡಿದವರೆಲ್ಲರೂ ಒಪ್ಪಿಗೆಯನ್ನು ನೀಡಿದ್ದಾರೆ ಇದೊಂದು ಒಪ್ಪಂದ ಐತಿಹಾಸಿಕ ವಿಶ್ವಾಸ ಪ್ರಮಾಣ : ಅಪೋಸ್ತಲರ ವಿಶ್ವಾಸ ಪ್ರಮಾಣ, ನೈಸೀಯ ವಿಶ್ವಾಸ ಪ್ರಮಾಣ, ಮತ್ತು ಅತನೇಶಿಯನ್ ವಿಶ್ವಾಸ ಸೂತ್ರ ಮತ್ತು ಲೂಸಾನೆ ಒಡಂಬಡಿಕೆ.

ಕ್ರೈಸ್ತ ವಿಶ್ವಾಸವನ್ನು ಅವಶ್ಯವಿರುವ ವಿಶ್ವಾಸಗಳು ಮತ್ತು ಬಾಹ್ಯ ನಂಬಿಕೆ ಎಂದು ವಿಂಗಡಿಸಬಹುದು ಎಂದು ನಾವು ನಂಬುತ್ತೇವೆ. (ರೋಮಾಪುರದವರಿಗೆ ಬರೆದ ಪತ್ರಿಕೆ 14).

ಅವಶ್ಯವಿರುವ ನಂಬಿಕೆಗಳು.

ಯೇಸುವನ್ನು ಅನುಸರಿಸಿ ನಡೆಯುವವರ ಬಗ್ಗೆ ತೀರ್ಮಾನಿಸಲು ಅವಶ್ಯವಾದ ನಂಬಿಕೆಗಳು ಮತ್ತು ಇವುಗಳೊಂದಿಗೆ ರಾಜಿ ಮಾಡಿಕೊಳ್ಳುವುದು ಅಥವಾ ಉದಾಸೀನ ಮಾಡಲು ಸಾಧ್ಯವಿಲ್ಲ.

  • ನಮ್ಮ ನಂಬಿಕೆಯಂತೆ ಬೈಬಲ್ (ಸತ್ಯವೇದ ಸ್ಪೂರ್ತಿದಾಯಕ, ಸನ್ಮಾರ್ಗದಲ್ಲಿ ನಡೆಯುವ, ಸಂಪೂರ್ಣವಾದ, ಅಧಿಕಾರಯುತವಾದ ದೇವರ ಮಾತುಗಳನ್ನು ಒಳಗೊಂಡಿರುವಂತದ್ದು (1 ಥೆಸಲೋನಿಕ 2:13; 2 ತಿಮೋಥಿ 3:16-17).
  • ದೇವರು ಒಬ್ಬನೆ, ನಿತ್ಯ ಶಾಶ್ವತವಾಗಿ ನೆಲೆಸಿರುವವನು ತ್ರಯೇಕ ಎಂದು ನಾವು ನಂಬಿದ್ದೇವೆ. ತಂದೆ ದೇವರು, ಮಗನಾದ ಯೇಸುಕ್ರಿಸ್ತನು ಪವಿತ್ರಾತ್ಮನು ಮೂವರು ಒಬ್ಬರೇ (ಮತ್ತಾಯ ಯೋಹಾನ 10:30).
  • ನಾವು ಯೇಸುಕ್ರಿಸ್ತನ ದೈವತ್ವವನ್ನು ನಂಬುತ್ತೇವೆ (ಯೋಹಾನ 1:1-4; ಪಿಲಿಪ್ಪಿಯರು 2:5-11; 2ನೇ ಪೇತ್ರ1:1).
  • ಯೇಸುಕ್ರಿಸ್ತನ ಮಾನವೀಯತೆಯನ್ನು ನಂಬುತ್ತೇವೆ. ಆತನ ಪರಿಶುದ್ಧವಾದ ಗುಟ್ಟನ್ನು, ಆತನ ಪಾಪರಹಿತ ಜೀವನಕ್ಕಾಗಿ, ಆತನ ಪವಾಡಗಳನ್ನು, ಆತನ ರಕ್ತಧಾರೆಯಿಂದ ಪಾಪಿಗಳ ರಕ್ಷಣೆಗಾಗಿ ಜೀವತೆತ್ತವನನ್ನು, ಆತನ ಪುನರುತ್ಥಾನವನ್ನು ಮತ್ತು ಆತನ ದಿವಾರೋಹಣವನ್ನು, ತಂದೆ ದೇವರ ಬಲಪಾರ್ಶ್ವದಲ್ಲಿ ಕುಳಿತಿರುವುದನ್ನು ನಾವು ನಂಬುತ್ತೇವೆ. (ಮತ್ತಾಯ 1:18,25; 1 ಕೊರಿಂಥ 15:1-8; ಇಬ್ರಿಯಾ 4:15; ಆ.ಕೃ 1:9-11; ಆ.ಕೃ 2:22-24).
  • ಪ್ರತಿಯೊಬ್ಬ ಮನುಷ್ಯನೂ ಅಂತರ್ಗತವಾಗಿ ಪಾಪಿಯಾಗಿರುತ್ತಾನೆ ಮತ್ತು ನಿರಂತರವಾಗಿ ನರಕವನ್ನು ಹೊಂದಲು ಅರ್ಹನಾಗಿರುತ್ತಾನೆ ಎಂಬುದನ್ನು ನಂಬುತ್ತೇವೆ. (ರೋ.ಪ. 3:23; ಯೆಶಾಯ 64:6-7).
  • ಪಾಪದಿಂದ ವಿಮೋಚನೆ ಪಡೆಯುವುದೆಂದರೆ ದೇವರಿಂದ ದೊರೆಯುವ ವರ, ಇದು ಯೇಸು ಕ್ರಿಸ್ತನ ತ್ಯಾಗಪೂರ್ಣ ಮರಣ ಮತ್ತು ಆತನ ಪುನರುತ್ಥಾನದಿಂದ , ಆತನ ಕೃಪೆ ಮತ್ತು ಭರವಸೆಯಿಂದ ದೊರೆಯುತ್ತದೆಯೇ ಹೊರತು ನಮ್ಮ ಕಾರ್ಯದಿಂದಲ್ಲ ಎಂದು ನಂಬುತ್ತೇವೆ. (ಯೋಹಾನ 3:16; ಯೋಹಾನ 14:6; ಎಫೇಸ 2:8-9, ತೀತ 3:3-7).
  • ನಿಜವಾದ ನಂಬಿಕೆ ಯಾವಾಗಲೂ ಪಶ್ಚಾತ್ತಾಪ ಮತ್ತು ಪವಿತ್ರಾತ್ಮನಿಂದ ಉಂಟಾಗುವ ಪುನರುಜ್ಜೀವನ ವನ್ನು ಒಳಗೊಂಡಂತೆ ದೊರೆಯುವಂತದ್ದು ಎಂದು ನಾವು ನಂಬುತ್ತೇವೆ. (ಯಾಕೋಬ 2:14-26; ಯೋಹಾನ 16:5-16; ರೋ.ಪ. 8:9).
  • ಪವಿತ್ರಾತ್ಮನಿಂದ ಉಂಟಾದ ದೇವರ ಸೇವೆ , ಯೇಸುಕ್ರಿಸ್ತನ ಹಿಂಬಾಲಕರಲ್ಲಿ ನೆಲೆಸಿರುವ ಪವಿತ್ರಾತ್ಮನಿಂದ ಆಗುವ ಸೇವೆ ದೈವೀಕವಾದ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ ಎಂಬುದನ್ನು ನಾವು ನಂಬುತ್ತೇವೆ. (ಯೋಹಾನ 14:15-26; ಎಫೇಸ 2:10; ಗಲಾತ್ಯ 5:16-18).
  • ನಮ್ಮ ಒಡೆಯನಾದ ಯೇಸು ಕ್ರಿಸ್ತನ ಆತ್ಮೀಕ ಐಕ್ಯತೆಯಲ್ಲಿ ಎಲ್ಲಾ ವಿಶ್ವಾಸಿಗಳು ಎಲ್ಲಾ ದೇಶದವರು , ಎಲ್ಲಾ ಭಾಷೆಯವರು , ಎಲ್ಲಾ ಜನಾಂಗಗಳು ಒಂದಾಗುತ್ತಾರೆ ಎಂದು ನಾವು ನಂಬುತ್ತೇವೆ. (ಪಿಲಿಪ್ಪಿ 2:1-4; ಎಫೇಸ 1:22-23; 1 ಕೊರಿಂಥ 12:12,27).
  • ಯೇಸುಕ್ರಿಸ್ತನು ವೈಯಕ್ತಿಕವಾಗಿಯೂ, ಭೌತಿಕವಾಗಿಯೂ ಪುನಃ ಬರುತ್ತಾನೆ ಎಂಬುದನ್ನು ನಾವು ನಂಬುತ್ತೇವೆ. (ಮತ್ತಾಯ 24:30; ಆ.ಕೃ.1:10-11).
  • ರಕ್ಷಿಸಲ್ಪಟ್ಟವನು ಮತ್ತು ರಕ್ಷಿಸಲ್ಪಡದವರ ಪುನರುತ್ಥಾನದ ಬಗ್ಗೆ ನಮಗೆ ನಂಬಿಕೆ ಇದೆ. ರಕ್ಷಣೆಗೆ ಒಳಪಡದವರು, ನಿರಂತರ ನಿತ್ಯ ದಂಡನೆಗೆ ಗುರಿಯಾದವರು ಮತ್ತು ರಕ್ಷಿಸಲ್ಪಟ್ಟವರು ಪರಲೋಕದಲ್ಲಿ ನಿರಂತರ ಆಶೀರ್ವಾದಕ್ಕೆ ಒಳಗಾಗುತ್ತಾರೆ ಎಂಬುದನ್ನು ನಾವು ನಂಬುತ್ತೇವೆ. (ಇಬ್ರಿಯ 9:27-28; ಮತ್ತಾಯ 16:27; ಯೋಹಾನ 14:1-3; ಮತ್ತಾಯ 25:31-46).

ಬಾಹ್ಯ ನಂಬಿಕೆಗಳು .

ಬಾಹ್ಯ ನಂಬಿಕೆಗಳು ಸತ್ಯವೇದದಲ್ಲಿ ಬರುವ ನಂಬಿಕೆಗಳಕುರಿತಾಗಿದ್ದು ಕ್ರಿಸ್ತನಿಗೆ ನಿಷ್ಠರಾಗಿರುವ ಭಕ್ತರು ಇದನ್ನು ಒಪ್ಪದೆ ಇರಬಹುದು (ಉದಾಹರಣೆಗೆ ದೀಕ್ಷಾಸ್ನಾನ, ಕರ್ತನ ರಾತ್ರಿ ಭೋಜನ, ಕ್ರಿಸ್ತನ ಗಾಯಗಳು ಮುಂತಾದವು).

ಈ ಎಲ್ಲಾ ವಿಷಯಗಳ ಬಗ್ಗೆ ಒಪ್ಪದೆ ಇದ್ದರೂ ಅಭಿಮತರಾಗಿರುತ್ತೇವೆ ಮತ್ತು ನಾವೆಲ್ಲರೂ ಸುವಾರ್ತೆ ಸಾರುವುದರ ಮೂಲಕ ಜನರನ್ನು ಕರ್ತನ ಶಿಷ್ಯರನ್ನಾಗಿ ಮಾಡುವ ಒಂದೇ ಸಾಮಾನ್ಯ ಉದ್ದೇಶವನ್ನು ನೆರವೇರಿಸಲು ಒಪ್ಪುತ್ತೇವೆ. (ಮತ್ತಾಯ 28:18-20).