translationCore-Create-BCS_.../translate/translation-difficulty/01.md

78 lines
14 KiB
Markdown
Raw Permalink Blame History

This file contains ambiguous Unicode characters

This file contains Unicode characters that might be confused with other characters. If you think that this is intentional, you can safely ignore this warning. Use the Escape button to reveal them.

###ನಾನು ಮೊದಲು ಯಾವುದನ್ನು ಭಾಷಾಂತರಿಸಬೇಕು ?
ಭಾಷಾಂತರ ತಂಡವು ಯಾವುದನ್ನು ಮೊದಲು ಭಾಷಾಂತರಿಸಬೇಕು ಎಂಬುದನ್ನು ಒಂದು ಹಂತದಲ್ಲಿ ನಿರ್ಧಿರಿಸುತ್ತಾರೆ. ಈಗಾಗಲೇ ಅವರು ಭಾಷಾಂತರ ಮಾಡಿದ್ದರೆ ಅದರ ನಂತರ ಯಾವುದನ್ನು ಭಾಷಾಂತರಿಸಬೇಕು ಎಂದು ನಿರ್ಧರಿಸುವರು.
* ಈ ವಿಷಯದಲ್ಲಿ ಅನೇಕ ವಿಚಾರಗಳನ್ನು ಪರಿಗಣಿಸುವ ಅವಶ್ಯಕತೆ ಇದೆ.
* ಚರ್ಚ್ / ಸಭೆಗಳು ಯಾವುದನ್ನು ಭಾಷಾಂತರಿಸಬೇಕು ಎಂದು ತಿಳಿಸುತ್ತವೆ.?
* ಭಾಷಾಂತರ ತಂಡವು ಎಷ್ಟು ಅನುಭವ ಹೊಂದಿದೆ ?
* ಸತ್ಯವೇದದ ವಿಷಯಗಳು ಈ ಭಾಷೆಯಲ್ಲಿ ಎಷ್ಟು ಭಾಷಾಂತರವಾಗಿದೆ?
ಈ ಪ್ರಶ್ನೆಗಳಿಗೆ ನೀಡುವ ಉತ್ತರ ತುಂಬಾ ಮುಖ್ಯವಾದುದು. ಆದರೆ ಇವುಗಳನ್ನು ನೆನಪಿನಲ್ಲಿಡಬೇಕು.
**ಭಾಷಾಂತರ ಕ್ರಿಯೆ ಎಂಬುದು ಅನುಭವದೊಂದಿಗೆ ಬೆಳೆಯುವ ಕೌಶಲ.** ಭಾಷಾಂತರ ಕ್ರಿಯೆ ಎಂಬುದು ಒಂದು ಕೌಶಲದ ಬೆಳವಣಿಗೆ ಅದರಿಂದ ಭಾಷಾಂತರ ಮಾಡುವಾಗ ಕ್ಲಿಷ್ಟ ವಿಷಯ ಆಯ್ಕೆಮಾಡದೆ ಸರಳವಾದ ವಿಷಯವನ್ನು ಆಯ್ಕೆಮಾಡಬೇಕು. ಇದರಿಂದ ಹೊಸದಾಗಿ ಭಾಷಾಂತರ ಮಾಡಲು ಕಲಿಯುವವರಿಗೆ ಭಾಷಾಂತರ ಕೌಶಲವನ್ನು ಅಭಿವೃದ್ಧಿಪಡಿಸಿಕೊಳ್ಳಲು ಸಹಕಾರಿಯಾಗಿರುತ್ತದೆ.
### ಭಾಷಾಂತರದಲ್ಲಿನ ತೊಂದರೆಗಳು/ಅಡಚಣೆಗಳು.
ವಿಕ್ಲಿಫ್ ಸತ್ಯವೇದದ ಭಾಷಾಂತರಗಾರರು ಸತ್ಯವೇದದ ವಿವಿಧ ಪುಸ್ತಕಗಳನ್ನು ಭಾಷಾಂತರ ಮಾಡುವಾಗ ಎದುರಾಗುವ ಕ್ಲಿಷ್ಟತೆ, ಅಡಚಣೆಗಳನ್ನು ಅದರ ಪ್ರಮಾಣಕ್ಕೆ ತಕ್ಕಂತೆ ಕ್ರೋಢಿಕರಿಸಿದ್ದಾರಾ. ಅವರ ಶ್ರೇಣಿಕರಣದ ಪ್ರಕ್ರಿಯೆಯಲ್ಲಿ ಅತ್ಯಂತ ಕಷ್ಟವಾದ ಪುಸ್ತಕದ ಶ್ರೇಣಿ 05 ಎಂದು ನೀಡಿದ್ದಾರೆ. ಭಾಷಾಂತರ ಪ್ರಕ್ರಿಯೆಯಲ್ಲಿ ಸುಲಭವಾದ ಪುಸ್ತಕಕ್ಕೆ ಶ್ರೇಣಿ 01.ಎಂದು ನಿಗಧಿಪಡಿಸಿದ್ದಾರೆ. ಸಾಮಾನ್ಯವಾಗಿ ಭಾಷಾಂತರ ಮಾಡುವ ಪುಸ್ತಕದಲ್ಲಿ ಅರ್ಥಗಳು ಅಡಗಿರುವ ಭಾಗಗಳು ಮತ್ತು ದೈವಶಾಸ್ತ್ರಶಿಕ್ಷಣದ ವಿಷಯಗಳನ್ನು ಒಳಗೊಂಡಿರುವ ವಿಷಯಗಳು ಮತ್ತು ವಿಚಾರಗಳನ್ನು ಭಾಷಾಂತರಿಸಲು ಕಷ್ಟವಾಗಬಹುದು. ಕಥಾ ರೂಪದಲ್ಲಿರುವ ಪುಸ್ತಕಗಳು ಮತ್ತು ವಾಸ್ತವಿಕ ರೂಪದಲ್ಲಿರುವ ವಾಕ್ಯಭಾಗಗಳು ಭಾಷಾಂತರ ಮಾಡಲು ಸುಭವಾಗಿರುತ್ತವೆ.
####ಕ್ಲಿಷ್ಟತೆಯ 5ನೇ ಹಂತವೆಂದರೆ (ಕಷ್ಟಕರವಾದ ಭಾಷಾಂತರ).
* ಹಳೆ ಒಡಂಬಡಿಕೆಯಲ್ಲಿ
* ಯೋಬ, ಕೀರ್ತನೆಗಳು, ಯೆಶಾಯ,ಯೆರೆಮೀಯ ಮತ್ತು ಯೆಹೆಜ್ಕೇಲನ ಪ್ರವಾದನಾ ಗ್ರಂಥಗಳು.
* ಹೊಸ ಒಡಂಬಡಿಕೆಯಲ್ಲಿ
* ಪೌಲನು ಬರೆದ ಪತ್ರಗಳು ರೋಮಾಪುರದವರಿಗೆ,ಗಲಾತ್ಯದವರಿಗೆ, ಎಫೇಸದವರಿಗೆ,ಫಿಲಿಪ್ಪಿಯವರಿಗೆ, ಕೊಲೊಸ್ಸೆಯವರಿಗೆ, ಇಬ್ರಿಯರಿಗೆ.
####ಕ್ಲಿಷ್ಟತೆಯ 4ನೇ ಹಂತ
* ಹಳೆ ಒಡಂಬಡಿಕೆಯಲ್ಲಿ
* ಯಾಜಕಕಾಂಡ, ಜ್ಞಾನೋಕ್ತಿಗಳು, ಪ್ರಸಂಗಿ, ಪರಮಗೀತೆಗಳು, ಪ್ರಲಾಪಗಳು, ದಾನಿಯೇಲ ಹೋಶೇಯ, ಯೋವೇಲ, ಆಮೋಸ, ಒಬೇದ್ಯ, ಮೀಕ, ನಹೂಮ, ಹಬಕ್ಕೂಕ, ಚೆಫನ್ಯ, ಹಗ್ಗಾಯ, ಜೆಕಾರ್ಯ, ಮಲಾಕಿ.
* ಹೊಸ ಒಡಂಬಡಿಕೆಯಲ್ಲಿ
* ಯೋಹಾನ,ಪೌಲನು ಕೊರಿಂಥದವರಿಗೆ ಬರೆದ 1ಮತ್ತು2ನೇ ಪತ್ರಗಳು. ಥೆಸಲೋನಿಕದವರಿಗೆ ಬರೆದ 1ಮತ್ತು2ನೇ ಪತ್ರಗಳು. ಪೇತ್ರನು ಬರೆದ 1ಮತ್ತು2ನೇ ಪತ್ರಗಳು, ಯೋಹಾನನು ಬರೆದ ಮೊದಲ ಪತ್ರ.
####ಕ್ಲಿಷ್ಟತೆಯ 3ನೇ ಹಂತ
* ಹಳೆ ಒಡಂಬಡಿಕೆಯಲ್ಲಿ
* ಆದಿಕಾಂಡ, ವಿಮೋಚನಾಕಾಂಡ, ಅರಣ್ಯಕಾಂಡ, ಧರ್ಮೋಪದೇಶಕಾಂಡ,
* ಹೊಸ ಒಡಂಬಡಿಕೆಯಲ್ಲಿ
* ಮತ್ತಾಯ, ಮಾರ್ಕ, ಲೂಕ, ಅಪೋಸ್ತಲಕೃತ್ಯಗಳು, ಪೌಲನು ಬರೆದ ಪತ್ರಗಳು.- ತಿಮೋಥಿಗೆ ಬರೆದ 1ಮತ್ತು2ನೇ ಪತ್ರಗಳು ತೀತ, ಫಿಲೇಮೋನ, ಯಾಕೋಬ, ಯೋಹಾನನು ಬರೆದ 2-3ನೇ ಪತ್ರಗಳು, ಪ್ರಕಟಣೆ.
####ಕ್ಲಿಷ್ಟತೆಯ 2ನೇ ಹಂತ
* ಹಳೆ ಒಡಂಬಡಿಕೆಯಲ್ಲಿ
* ಯೆಹೋಶುವ, ನ್ಯಾಯಸ್ಥಾಪಕರು, ರೂತ್, 1-2ನೇ ಸಮುವೇಲ, 1-2ನೇ ಅರಸುಗಳು, 1ಮತ್ತು 2ನೇಪೂರ್ವಕಾಲ ವೃತ್ತಾಂತ, ಎಜ್ರಾ, ನೆಹೆಮಿಯಾ, ಎಸ್ತೇರ್, ಯೋನ
* ಹೊಸ ಒಡಂಬಡಿಕೆಯಲ್ಲಿ
**ಯಾವುದೂ ಇಲ್ಲ**
####ಕ್ಲಿಷ್ಟತೆಯ 1ನೇ ಹಂತ
**ಯಾವುದೂ ಇಲ್ಲ**
### ಮುಕ್ತವಾದ ಸತ್ಯವೇದದ ಕತೆಗಳು.
ಮುಕ್ತವಾದ ಸತ್ಯವೇದದ ಕತೆಗಳನ್ನು ಶ್ರೇಣಿಕೃತ ಕ್ರಿಯೆಯಲ್ಲಿ ಹಂತಗಳಲ್ಲಿ ಅಳವಡಿಸದಿದ್ದರೂ ಇವುಗಳನ್ನು ಕ್ಲಿಷ್ಟತೆಯ ಮೊದಲಹಂತದಲ್ಲಿ ಸೇರಿಸಬಹುದು. ಆದುದರಿಂದ ನೀವು ಭಾಷಾಂತರ ಮಾಡುವಾಗ ಮುಕ್ತವಾದ ಸತ್ಯವೇದದ ಕತೆಗಳ ಮೂಲಕ ಪ್ರಾರಂಭಿಸಬಹುದು. ಹೀಗೆ ಮುಕ್ತ ಸತ್ಯವೇದದ ಕತೆಗಳನ್ನು ಭಾಷಾಂತರ ಮಾಡಲು ಪ್ರಾರಂಭಿಸುವುದಕ್ಕೆ ಅನೇಕ ಒಳ್ಳೆ ಕಾರಣಗಳಿವೆ.
* ಮುಕ್ತ ಸತ್ಯವೇದದ ಕತೆಗಳು ಭಾಷಾಂತರಿಸಲು ಸುಲಭವಾಗುವಂತೆ ವಿನ್ಯಾಸಗೊಳಿಸಲಾಗಿದೆ.
* ಇದು ಬಹುಪಾಲು ಕಥನರೂಪದಲ್ಲಿದೆ.
* ಅನೇಕ ಕ್ಲಿಷ್ಟವಾದ ಪದಗುಚ್ಛಗಳು ಮತ್ತು ಪದಗಳನ್ನು ಸರಳೀಕರಿಸಲಾಗಿದೆ.
* ಭಾಷಾಂತರಗಾರರು ಇವುಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಹಾಯವಾಗುವಂತೆ ಅನೇಕ ಚಿತ್ರಗಳನ್ನು ನೀಡಲಾಗಿದೆ.
* ಮುಕ್ತ ಸತ್ಯವೇದದ ಕತೆಗಳು ಸತ್ಯವೇದಕ್ಕಿಂತ ಆಕಾರದಲ್ಲಿ ಚಿಕ್ಕದಾಗಿದ್ದು ಹೊಸ ಒಡಂಬಡಿಕೆಗಿಂತ ಚಿಕ್ಕದಾಗಿದೆ. ಇದರಿಂದ ಇದನ್ನು ಆದಷ್ಟು ಬೇಗ ಭಾಷಾಂತರಿಸಬಹುದು.
* ಇದು ಧರ್ಮಗ್ರಂಥವಲ್ಲದೆ ದೇವರ ವಾಕ್ಯ ಮತ್ತು ಸತ್ಯವೇದದ ವಾಕ್ಯಭಾಗವಾಗದೆ ಇರುವುದರಿಂದ ಭಾಷಾಂತರಗಾರರು ಯಾವ ಭಯವಿಲ್ಲದೆ ಮುಕ್ತ ಸತ್ಯವೇದದ ಕತೆಗಳನ್ನು ನಿರಾಳವಾಗಿ ಭಾಷಾಂತರ ಮಾಡುವರು.
* ಸತ್ಯವೇದವನ್ನು ಭಾಷಾಂತರ ಮಾಡುವ ಮೊದಲು ಈ ಮುಕ್ತ ಸತ್ಯವೇದದ ಕತೆಗಳನ್ನು ಭಾಷಾಂತರ ಮಾಡಿದರೆ ಭಾಷಾಂತರಗಾರರಿಗೆ ಇದೊಂದು ಉತ್ತಮರೀತಿಯಲ್ಲಿ ಭಾಷಾಂತರಿಸುವುದು. ಭಾಷಾಂತರಮಾಡಲು ತರಬೇತಿ ಹಾಗೂ ಅನುಭವ ಪಡೆದಂತೆ ಆಗುತ್ತದೆ. ಉತ್ತಮ ರೀತಿಯಲ್ಲಿ ಭಾಷಾಂತರಿಸುವರು.
* ಮುಕ್ತ ಸತ್ಯವೇದದ ಕತೆಗಳನ್ನು ಭಾಷಾಂತರಿಸುವುದರಿಂದ ಭಾಷಾಂತರಮಾಡುವ ತಂಡ ಅನುಭವಗಳಿಸುತ್ತದೆ ಅವುಗಳಲ್ಲಿ.
* ಭಾಷಾಂತರ ಮತ್ತು ಪರಿಶೀಲಿಸುವ ತಂಡವನ್ನು ಸೃಷ್ಟಿಸುವ ಅನುಭವ.
* ಭಾಷಾಂತರಮಾಡುವ ಮತ್ತು ಪರಿಶೀಲಿಸುವ ಪ್ರಕ್ರಿಯೆಯ ಅನುಭವ.
* Door43 ಭಾಷಾಂತರ ಸಾಧನಗಳನ್ನು ಬಳಸುವ ಅನುಭವ.
* ಭಾಷಾಂತರ ಸಮಸ್ಯೆಗಳನ್ನು ಪರಿಹರಿಸುವ ಅನುಭವ.
* ಚರ್ಚ್/ ಸಭೆ ಮತ್ತು ಸಮುದಾಯದ ಭಾಗವಹಿಸುವಿಕೆಯನ್ನು ಪಡೆಯುವ ಅನುಭವ.
* ಭಾಷಾಂತರಿಸಿದ್ದನ್ನು ಪ್ರಕಟಿಸುವ ಮತ್ತು ವಿತರಿಸುವ ಅನುಭವ
* ಮುಕ್ತ ಸತ್ಯವೇದದ ಕತೆಗಳು ಒಂದು ದೊಡ್ಡ ಸಾಧನವಾಗಿ ಚರ್ಚ್/ ಸಭೆಗೆ ಬೋಧಿಸುವ, ದಾರಿತಪ್ಪಿದವರಿಗೆ ಸುವಾರ್ತೆ ನೀಡುವುದು ಮತ್ತು ಸತ್ಯವೇದವನ್ನು ಭಾಷಾಂತರಿಸುವವರಿಗೆ ತರಬೇತಿ ನೀಡುವುದು.
ನೀವು ನಿಮಗೆ ಯಾವ ಕ್ರಮದಲ್ಲಿ ಭಾಷಾಂತರಿಸಲು ಅನುಕೂಲವಾಗುತ್ತದೋ ಅದನ್ನು ಅನುಸರಿಸಬಹುದು#31 (see http://ufw.io/en-obs-31) ನೋಡಿ. ಮೊದಲ ಕತೆಯನ್ನು ಭಾಷಾಂತರಿಸುವುದು ಒಳ್ಳೆಯದು ಮತ್ತು ಇದು ಚಿಕ್ಕದಾಗಿಯೂ ಅರ್ಥಮಾಡಿಕೊಳ್ಳಲು ಸುಲಭವಾಗಿಯೂ ಇದೆ.
### ಮುಕ್ತಾಯ
ಅಂತಿಮವಾಗಿ ಚರ್ಚ್/ ಸಭೆ ಯಾವುದನ್ನು ಭಾಷಾಂತರಿಸಬೇಕು ಎಂಬುದನ್ನು ನಿರ್ಧರಿಸಬೇಕಾಗುತ್ತದೆ. ಆದರೆ ಭಾಷಾಂತರಕ್ರಿಯೆ ಎಂಬುದು ಒಂದು ಕೌಶಲ, ಇದರಿಂದ ಭಾಷಾಂತರ ಮತ್ತು ಪರಿಶೀಲನೆ ಮಾಡುವ ತಂಡದವರು ಸತ್ಯವೇದವನ್ನು ಭಾಷಾಂತರಿಸಲು ಕಲಿಯುತ್ತಾರೆ. ಮುಕ್ತ ಸತ್ಯವೇದದ ಕತೆಗಳು ಈ ಕಲಿಕೆಗೆ ಪೂರಕವಾಗಿವೆ. ಈ ಮುಕ್ತ ಸತ್ಯವೇದದ ಕತೆಗಳು ಅತ್ಯಂತ ಉನ್ನತ ಮೌಲ್ಯಗಳನ್ನು ಹೊಂದಿರುವುದರಿಂದ ಸ್ಥಳೀಯ ಸಭೆಗಳಲ್ಲಿ ಬಳಸಲು ಅನುಕೂಲಕರವಾಗಿದೆ. ಆದುದರಿಂದ ಸತ್ಯವೇದ ಭಾಷಾಂತರ ಪ್ರಕ್ರಿಯೆ ಪ್ರಾರಂಭಿಸುವ ಮೊದಲು ಮುಕ್ತ ಸತ್ಯವೇದದ ಕತೆಗಳನ್ನು ಪ್ರಾರಂಭಿಸಬೇಕೆಂದು ಶಿಫಾರಸ್ಸು ಮಾಡಿದೆ.
ಮುಕ್ತ ಸತ್ಯವೇದದ ಕತೆಗಳನ್ನು ಭಾಷಾಂತರಿಸಿದ ಮೇಲೆ ಚರ್ಚ್/ ಸಭೆಗಳು ಎಲ್ಲವೂ (ಆದಿಕಾಂಡ, ವಿಮೋಚನಾಕಾಂಡ) ಅಥವಾ ಯೇಸುವಿನಿಂದ ಹೊಸ ಒಡಂಬಡಿಕೆಯ ಸುವಾರ್ತೆಗಳು ಪ್ರಾರಂಭವಾಗುತ್ತದೆ ಮತ್ತು ಅದು ಹೆಚ್ಚು ಉಪಯೋಗಕಾರಿ ಎಂಬುದು ಸ್ಪಷ್ಟವಾಗುತ್ತದೆ. ಎರಡು ವಿಷಯದಲ್ಲಿ ಸತ್ಯವೇದದ ಭಾಷಾಂತರವು ಕ್ಲಿಷ್ಟತೆಯ 2 ಮತ್ತು 3 ನೇ ಹಂತದ ಪುಸ್ತಕಗಳಿಂದ ಪ್ರಾರಂಭವಾದರೆ ಉತ್ತಮ.(ಉದಾಹರಣೆಗೆ ಆದಿಕಾಂಡ, ರೂತ್ ಮತ್ತು ಮಾರ್ಕ್) ಅಂತಿಮವಾಗಿ ಭಾಷಾಂತರತಂಡ ಪಡೆದ ಅನುಭವಗಳನಂತರ ಭಾಷಾಂತರದ ಕ್ಲಿಷ್ಟತೆಯ ಹಂತ 4 ಮತ್ತು 5ನ್ನು ಪ್ರಾರಂಭಿಸಬೇಕು ಉದಾಹರಣೆಗೆ (ಯೋಹಾನ, ಇಬ್ರಿಯ ಮತ್ತು ದಾವೀದನ ಕೀರ್ತನೆಗಳು). ಭಾಷಾಂತರ ತಂಡಗಳು ಈ ವಿವರಗಳನ್ನು ಅನುಸರಿಸಿದರೆ ಅತ್ಯಂತ ಕಡಿಮೆ ತಪ್ಪುಗಳೊಂದಿಗೆ ಉತ್ತಮ ಭಾಷಾಂತರ ಮಾಡಬಹುದು.