translationCore-Create-BCS_.../translate/translate-whatis/01.md

4.6 KiB
Raw Permalink Blame History

###ವ್ಯಾಖ್ಯೆ.

ವಿವಿದ ಭಾಷೆಗಳ ನಡುವೆ ನಡೆಯುವ ಪ್ರಕ್ರಿಯೆಯೇ ಭಾಷಾಂತರ. ಈ ಪ್ರಕ್ರಿಯೆಯನ್ನು ಮಾಡಲು ಒಬ್ಬ ವ್ಯಕ್ತಿಯ (ಭಾಷಾಂತರಗಾರನ) ಅವಶ್ಯಕತೆ ಇದೆ. ಇವರು ತಮಗೆ ಕೊಟ್ಟಿರುವ ವಾಕ್ಯಭಾಗವನ್ನು ಮೂಲ ಲೇಖಕರ ಉದ್ಧೇಶವನ್ನು ಅರ್ಥಮಾಡಿಕೊಂಡು, ಮೂಲಭಾಷೆಯಲ್ಲಿರುವ ವಿಷಯವನ್ನು ಭಾಷಾಂತರ ಮಾಡುತ್ತಿರುವ ಭಾಷೆಯಲ್ಲಿನ ಓದುಗರಿಗೆ ಸ್ಪಷ್ಟವಾಗಿ, ಪರಿಣಾಮಕಾರಿಯಾಗಿ ಅರ್ಥವಾಗುವಂತೆ ಭಾಷಾಂತರ ಮಾಡಬೇಕು ಎಲ್ಲಾ ಸಮಯದಲ್ಲೂ ಇದೇ ರೀತಿಯ ಭಾಷಾಂತರ ಮಾಡಬೇಕು. ಕೆಲವೊಮ್ಮೆಭಾಷಾಂತರದ ಉದ್ದೇಶವು ಬೇರೆಯಾಗಿದ್ದು ಮೂಲಭಾಷೆಯ ಸ್ವರೂಪವನ್ನೇ ಪುನಃ ಬರೆಯಬೇಕಾದ ಉದ್ದೇಶವನ್ನು ಹೊಂದಿರುತ್ತದೆ. ಅದನ್ನು ನಾವು ನೋಡಿಕೊಳ್ಳೋಣ ಮೂಲಭೂತವಾಗಿ ಎರಡು ರೀತಿಯ ಭಾಷಾಂತರವಿದೆ. 1. ಅಕ್ಷರಷಃ 2. ಕ್ರಿಯಾತ್ಮಕ (ಅರ್ಥಕ್ಕನುಸಾರವಾಗಿ)

ಅಕ್ಷರಷಃ ಭಾಷಾಂತರದಲ್ಲಿ ಮೂಲ ಭಾಷೆಯಲ್ಲಿ ಪದಗಳಿಗೆ ಸಮಾನವಾದ ಅರ್ಥಕೊಡುವ ಪದಗಳನ್ನು ಭಾಷಾಂತರವಾಗುತ್ತಿರುವ ಭಾಷೆಯಲ್ಲಿನ ಹುಡುಕಿ ಅರ್ಥಕೊಡುವ ಪದಗಳನ್ನು ಭಾಷಾಂತರ ಮಾಡುವುದು. ಇದರೊಂದಿಗೆ ಮೂಲ ಭಾಷೆಯ ನುಡಿಗಟ್ಟುಗಳನ್ನು ಸಹ ಸಮಾನ ಅರ್ಥಕೊಡುವ ನುಡಿಗಟ್ಟುಗಳನ್ನು ಭಾಷಾಂತರ ಮಾಡುವ ಭಾಷೆಯಲ್ಲೂ ಬಳಸಬೇಕು. ಇಂತಹ ಭಾಷಾಂತರ ಮೂಲಭಾಷೆಯ ರಚನೆಯನ್ನು ತಿಳಿದುಕೊಳ್ಳಲು ಸಹಾಯವಾಗುತ್ತದೆಯೇ ಹೊರತು ಮೂಲಭಾಷೆಯಲ್ಲಿ ಅರ್ಥಮಾಡಿಕೊಳ್ಳಲು ಓದುಗರಿಗೆ ಕಷ್ಟವಾಗಬಹುದು.

  • ಕ್ರಿಯಾತ್ಮಕ (dynamic) ಭಾಷಾಂತರದಲ್ಲಿ ಮೂಲಭಾಷೆಯ ಅರ್ಥದ ಮೇಲೆ ಆಧರಿಸಿರುತ್ತದೆ ಮತ್ತು ಸಮಾನ ಅದೇ ಅರ್ಥಕೊಡುವ ಇತರೆ ಪದಗಳನ್ನು ಉಪಯೋಗಿಸುವುದರ ಮೂಲಕ ವಾಕ್ಯದ ರಚನೆಗಳು ಓದುಗರಿಗೆ ಅರ್ಥವಾಗುವಂತೆ ಮಾಡುವಂತದ್ದು. ಕೆಲವೊಮ್ಮೆ ಇಂತಹ ಭಾಷಾಂತರ ಆಗುತ್ತಿರುವ ಭಾಷೆಯ ಓದುಗರಿಗೆ ಸುಲಭವಾಗಿ ಅರ್ಥವಾಗಲು ಸುಲಭ. ಈ ಭಾಷಾಂತರ ಕೈಪಿಡಿಯಲ್ಲಿ ಇತರ ಭಾಷೆಗಳ ಭಾಷಾಂತರದಲ್ಲಿ ಇಂತಹ ಭಾಷಾಂತರ ಮಾದರಿ ಬಳಸಬಹುದು ಎಂದು ತಿಳಿಸಿದೆ.

ULB ಅಕ್ಷರಷಃ ಭಾಷಾಂತರವನ್ನು ವಿನ್ಯಾಸಗೊಳಿಸಿದೆ, ಇದರಿಂದ ಇತರ ಭಾಷೆಯ ಭಾಷಾಂತರಗಾರರಿಗೆ ಮೂಲಭಾಷೆಯ ಸತ್ಯವೇದದ ರಚನೆಯನ್ನು ನೋಡಲು ಸಾಧ್ಯವಾಗಬಹುದು. UDB ಕ್ರಿಯಾತ್ಮಕ ಭಾಷಾಂತರ ಮಾದರಿಯಲ್ಲಿ ವಿನ್ಯಾಸಗೊಂಡಿದೆ. ಇದರಿಂದ ಇತರ ಭಾಷೆಯ ಭಾಷಾಂತರಗಾರರು ಸತ್ಯವೇದದಲ್ಲಿನ ರಚನೆ ಮತ್ತು ಪದಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಈ ಮೂಲಪ್ರತಿಗಳನ್ನು ಭಾಷಾಂತರ ಮಾಡುವಾಗ ULBಯನ್ನು ಅಕ್ಷರಷಃ ಮತ್ತು UDB ಯನ್ನು ಕ್ರಿಯಾತ್ಮಕ (dynamic) ರೀತಿಯಲ್ಲಿ ಮಾಡಿ. ಈ ಎಲ್ಲಾ ಮಾಹಿತಿಗಾಗಿ ಗೇಟ್ ವೇ ಕೈಪಿಡಿಯನ್ನು ನೋಡಿ ತಿಳಿದುಕೊಳ್ಳಿ. Gateway Language Manual.