translationCore-Create-BCS_.../translate/translate-terms/01.md

19 KiB
Raw Permalink Blame History

ಪ್ರಮುಖವಾದ ಪದಗಳನ್ನು ತಿಳಿದುಕೊಳ್ಳುವ ಬಗ್ಗೆ.

  • ಟಿಪ್ಪಣಿ: ಕೆಳಗೆ ಕೊಟ್ಟಿರುವ ವಿಶಿಷ್ಟ ಪದಗಳನ್ನು ಲೇಖನ ಪುಟಗಳಲ್ಲಿ ತಿಳಿಸಿದೆ. ಭಾಷಾಂತರಗಾರರು ಭಾಷಾಂತರ ಕೈಪಿಡಿ ಯನ್ನು ಉಪಯೋಗಿಸಲು ಇಂತಹ ಪದಗಳನ್ನು ಅರ್ಥಮಾಡಿಕೊಳ್ಳುವ ಅವಶ್ಯಕತೆ ಇದೆ.

ವಿಶಿಷ್ಟ ಪದ -ಒಂದು ಪದ ಅಥವಾ ಪದಗುಚ್ಛ,ಒಂದು ವಸ್ತು ಅಥವಾ ಒಂದು ಕ್ರಿಯೆಯನ್ನು ಕುರಿತು ತಿಳಿಸುತ್ತದೆ. ಉದಾಹರಣೆಗೆ, ಇಂಗ್ಲೀಷ್ ಭಾಷೆಯಲ್ಲಿ ' pouring ' ' ಸುರಿಸು ' ' ಹೊಯ್ಯಿ ' ಎಂಬ ಆಂಗ್ಲ ಪದ ಅರ್ಥ ಒಬ್ಬನ ಬಾಯಿಯಲ್ಲಿ "ಪಾನೀಯ." ಸುರಿಯುವುದು / ಹೊಯ್ಯುವುದು. ಒಬ್ಬ ವ್ಯಕ್ತಿಯ ಜೀವನದಲ್ಲಿ ಒಂದು ಪ್ರಮುಖ ಸ್ಥಿತ್ಯಂತರವನ್ನು ಸೂಚಿಸಲು ಅಂದರೆ ನಡೆಯುವ ಸಂಭ್ರಮ, ಆಚರಣೆ ಮುಂತಾದ ಪ್ರಮುಖ ವಿಷಯಗಳನ್ನು ಹೇಳುವಾಗ ಅಂಗೀಕಾರದ ವಿಧಿ ಎಂಬ ಪದವನ್ನು ಬಳಸುತ್ತಾರೆ. ಒಂದು ಪದ ಅಥವಾ ಒಂದು ವಿಶಿಷ್ಟ ಪದಗಳ ನಡುವಿನ ವ್ಯತ್ಯಾಸವೇನೆಂದರೆ ಒಂದು ಪದದಲ್ಲಿ ಒಂದೇಪದ, ಆದರೆ ವಿಶಿಷ್ಟ ಪದದಲ್ಲಿ ಕೆಲವೊಮ್ಮೆ ಅನೇಕ ಅಕ್ಷರಗಳು ಸೇರಿರುತ್ತವೆ.

ವಾಕ್ಯಭಾಗ -ಒಬ್ಬ ಲೇಖಕ ಅಥವಾ ಒಬ್ಬ ಮಾತುಗಾರ ಯಾವುದಾದರು ಒಂದು ಸಂಗತಿಯನ್ನು ತನ್ನ ಶ್ರೋತೃಗಳಿಗೆ ಭಾಷೆಯ ಮೂಲಕ ತಿಳಿಸುವುದು. ಲೇಖಕ ಅಥವಾ ಒಬ್ಬ ಮಾತುಗಾರ ತನ್ನ ಮನಸ್ಸಿನಲ್ಲಿ ಒಂದು ನಿರ್ದಿಷ್ಟ ಅರ್ಥವನ್ನು ಇಟ್ಟುಕೊಂಡಿದ್ದು, ವಿಷಯವನ್ನು ಖಚಿತಪಡಿಸಿಕೊಂಡು ಅದನ್ನು ಅರ್ಥವಾಗುವಂತೆ ತಿಳಿಸಲು ಭಾಷೆಯನ್ನು ಉಪಯೋಗಿಸುತ್ತಾನೆ.

ಸಂದರ್ಭ - (ಅರ್ಥಾನ್ವಯಪದ) ಒಂದು ಪ್ರಶ್ನೆಯಲ್ಲಿರುವ ಪದ ಮತ್ತು ನುಡಿಗಟ್ಟನ್ನು ಆವರಿಸಿರುವ ಪದಗಳು, ಪದಗುಚ್ಛಗಳು, ವಾಕ್ಯಗಳು ಮತ್ತು ವಾಕ್ಯಬಂಧ (ಪ್ಯಾರಾ) ವಾಕ್ಯಗಳು. ವಾಕ್ಯಭಾಗದ ಸುತ್ತ ಇರುವ ವಾಕ್ಯಗಳನ್ನು ಪರಿಶೀಲಿಸಿ ಅರ್ಥಾನ್ವಯ ಸನ್ನಿವೇಶ ಅಥವಾ ಸಂದರ್ಭವನ್ನು ಸೂಚಿಸುತ್ತದೆ. ಪ್ರತಿಯೊಂದು ಪದ ಮತ್ತು ಪದಗುಚ್ಛಗಳಲ್ಲಿ ಅರ್ಥ ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತದೆ.

ನಮೂನೆ - ಬರಹದ ಪುಟಗಳಲ್ಲಿ ಅಥವಾ ಮಾತನಾಡುವ ಸಂದರ್ಭದಲ್ಲಿ ಭಾಷೆಯ ರಚನೆ ಹೇಗೆ ಮೂಡಿ ಬರುತ್ತದೆ ಎಂಬುದನ್ನು ಸೂಚಿಸುವಂತದ್ದು. "ನಮೂನೆ" ಭಾಷೆಯಲ್ಲಿ ವ್ಯವಸ್ಥಿತವಾದ ರೀತಿಯಲ್ಲಿ ರಚನೆಯಾಗಿರುವಂತದ್ದು ಇದರಲ್ಲಿ ಪದಗಳು, ಪದಕ್ರಮಗಳು, ವ್ಯಾಕರಣ, ನುಡಿಗಟ್ಟುಗಳು ಇನ್ನೂ ಅನೇಕ ವಾಕ್ಯಭಾಗದ ಲಕ್ಷಣಗಳನ್ನು ಒಳಗೊಂಡಿರುತ್ತದೆ.

ವ್ಯಾಕರಣ - ಒಂದು ಭಾಷೆಯಲ್ಲಿ ಪದಗಳನ್ನು ಒಟ್ಟುಗೂಡಿಸಿ ಅರ್ಥಪೂರ್ಣ ವಾಕ್ಯಗಳನ್ನಾಗಿ ಮಾಡುವುದು. ಇದರಲ್ಲಿ ವಾಕ್ಯದಲ್ಲಿರುವ ಭಾಗಗಳು ಎಲ್ಲೆಲ್ಲಿ ಬರಬೇಕು ಎಂಬುದನ್ನು ತಿಳಿಸುತ್ತದೆ. ಉದಾಹರಣೆಗೆ ಕ್ರಿಯಾಪದ ವಾಕ್ಯದ ಪ್ರಾರಂಭದಲ್ಲಿ ಬರಬೇಕೇ ? ಮಧ್ಯದಲ್ಲಿ ಬರಬೇಕೇ ? ಇಲ್ಲವೇ ಕೊನೆಯಲ್ಲಿ ಬರಬೇಕೇ ? ಎಂಬುದನ್ನು ತಿಳಿಸುವಂತದ್ದು

ನಾಮಪದ - ಇದೊಂದು ವ್ಯಕ್ತಿ, ಸ್ಥಳ, ಪ್ರಾಣಿ, ವಸ್ತು ಇವುಗಳನ್ನು ಕುರಿತು ಹೇಳುವ ಪದ. proper noun/ ಅಂಕಿತ ನಾಮ ಇದು ವ್ಯಕ್ತಿಯ, ಸ್ಥಳದ ಪ್ರಾಣಿಯ ಹೆಸರನ್ನು ತಿಳಿಸುವ ಪದ. ಅಮೂರ್ತ ನಾಮಪದ: ಈ ನಾಮಪದವು ಸೂಚಿಸುವ ಪದಗಳನ್ನು ನಾವು ಸ್ಪರ್ಶಿಸಲು, ನೋಡಲು ಆಗುವುದಿಲ್ಲ. ಆದರೆ ಇವು ಅನುಭವಕ್ಕೆ ಬರುವ ಪದಗಳು ಉದಾಹರಣೆ ' ಶಾಂತಿ ', ' ಒಗ್ಗಟ್ಟು ', ' ಪ್ರೀತಿ ', ' ಸತ್ಯ ' ಇತ್ಯಾದಿ ಈ ಪದ ಒಂದು ಉದ್ದೇಶವನ್ನು ಅಥವಾ ಯಾವುದಾದರೊಂದು ಸ್ಥಿತಿಯನ್ನು ತಿಳಿಸುವಂತದ್ದು. ಕೆಲವು ಭಾಷೆಗಳಲ್ಲಿ ಈ ಅಮೂರ್ತ ನಾಮಪದ ನಾಮಪದಗಳನ್ನು ಬಳಸುವುದಿಲ್ಲ.

ಕ್ರಿಯಾಪದ - ಇದು ಕ್ರಿಯೆಯನ್ನು ಸೂಚಿಸುವ ಪದ ಉದಾಹರಣೆಗೆ ನಡೆಯುವುದು, ಬರುವುದು, ಹಾಡುವುದು, ಓದುವುದು.

ರೂಪಾಂತರ ಪದ - ಒಂದು ಪದದ ಬಗ್ಗೆ ರೂಪಾಂತರಗೊಳಿಸಿ ಹೇಳುವ ಪದ. ನಾಮಪದದ ಗುಣ ಮತ್ತು ಕ್ರಿಯಾವಾಚಕಗಳು ರೂಪಾಂತರಗುಣಗಳನ್ನು ತಿಳಿಸುವ ಪದಗಳು.

ನಾಮ ಪದ ಗುಣವಾಚಕ - ಈ ಪದವು ನಾಮಪದಗಳ ಬಗ್ಗೆ ಅಥವಾ ನಾಮಪದಗಳ ವಿವರಣೆ ನೀಡುತ್ತದೆ. ಉದಾಹರಣೆಗೆ, " ಎತ್ತರ " ಎಂಬ ನಾಮಪದದ ಗುಣವಾಚಕ ಉದಾಹರಣೆಗೆ, ನಾನು ಎತ್ತರವಾದ ಒಬ್ಬ ಮನುಷ್ಯನನ್ನು ನೋಡುತ್ತಿದ್ದೇನೆ.

ಕ್ರಿಯಾ ಪದದ ಗುಣವಾಚಕ / ಕ್ರಿಯಾವಾಚಕ - ಇದು ಕ್ರಿಯಾ ಪದದ ಬಗ್ಗೆ ಅಂದರೆ ಅದರ ಗುಣವನ್ನು, ಅದು ಹೇಗೆ ನಡೆಯುತ್ತದೆ ಎಂಬುದನ್ನು ಹೇಳುತ್ತದೆ. " ಜೋರಾಗಿ " " ಮಾತನಾಡುವ " ಕ್ರಿಯೆಯ ಬಗ್ಗೆ ಹೇಳುವಂತದ್ದು ಉದಾಹರಣೆಗೆ ಜನರ ಗುಂಪನ್ನು ಉದ್ದೇಶಿಸಿ ಆ ಮನುಷ್ಯನು ಜೋರಾಗಿಮಾತನಾಡಿದನು.

ನುಡಿಗಟ್ಟು - ಒಂದು ಭಾವನೆಯನ್ನು ವ್ಯಕ್ತಪಡಿಸಲು ಅನೇಕ ಪದಗಳನ್ನು ಮತ್ತು ವಿಭಿನ್ನವಾಗಿ ಅರ್ಥನೀಡುತ್ತದೆ. ಇದು ಒಂದು ಇಡೀ ಪದವಾಗಿ ವಿವಿಧ ಅರ್ಥಗಳಲ್ಲಿ ಅರ್ಥಮಾಡಿಕೊಳ್ಳಲು ಮತ್ತು ಪ್ರತ್ಯೇಕವಾಗಿ ಬಳಸಲು ತೊಡಗಿದಾಗ ವಿಭಿನ್ನವಾಗಿ ಅರ್ಥವಾಗುತ್ತದೆ. ಈ ನುಡಿಗಟ್ಟುಗಳನ್ನುನೇರವಾಗಿ, ಅಕ್ಷರಷಃ ಭಾಷಾಂತರಮಾಡಲು ಸಾಧ್ಯವಿಲ್ಲ ಆದರೆ ಬೇರೆ ಪದಗಳ ಅರ್ಥದೊಂದಿಗೆ ಪ್ರತ್ಯೇಕವಾಗಿ ಬಲಸಲು ಬರುವುದಿಲ್ಲ. ಉದಾಹರಣೆಗೆ, "he kicked the bucket " / " ಅವನು ಬಕೆಟನ್ನು ಕಾಲಿನಿಂದ ಒದೆದನು " ಎಂಬ ನುಡಿಗಟ್ಟು ಇಂಗ್ಲೀಷಿನಲ್ಲಿ " ಅವನು ಮರಣ ಹೊಂದಿದನು " ಎಂದು ಅರ್ಥ

ಅರ್ಥ - ಕೆಳಗೆ ಅಡ್ಡಗೆರೆಯಿಂದ ಗುರುತಿಸಿರುವ ವಾಕ್ಯಭಾಗದ ಉದ್ದೇಶ ಅಥವಾ ಪರಿಕಲ್ಪನೆ ಓದುಗರು ಮತ್ತು ಶ್ರೋತೃಗಳಿಗೆ ಅರ್ಥವಾಗುವಂತೆ ತಿಳಿಸುವಂತದ್ದು. ಒಬ್ಬ ಭಾಷಣಗಾರನು ಅಥವಾ ಬರಹಗಾರನು ಭಾಷೆಯ ವಿವಿಧ ನಮೂನೆಯನ್ನು ಬಳಸಿಕೊಂಡು ಒಂದೇ ಅರ್ಥ ಕೊಡುವ ಪದ ಬಳಸುವುದು, ಮತ್ತು ಅದೇ ಭಾಷೆಯ ನಮೂನೆ ವಿವಿಧ ಅರ್ಥಗಳ ಮೂಲಕ ಜನರು ಕೇಳುವಾಗ ಮತ್ತು ಓದುವಾಗ ವಿಭಿನ್ನವಾಗಿ ಅರ್ಥಮಾಡಿಕೊಳ್ಳಬಹುದು. ಇದರಿಂದ ನಮೂನೆ ಮತ್ತು ಅರ್ಥಗಳು ಒಂದೇ ರೀತಿ ಇರುವುದಿಲ್ಲ ಎಂದು ತಿಳಿದುಬರುತ್ತದೆ.

ಭಾಷಾಂತರ - ಮಾಡುತ್ತಿರುವ ಭಾಷೆಯಲ್ಲಿ ನಮೂನೆ / ಪ್ರಕ್ರಿಯೆಗಳನ್ನು ವ್ಯಕ್ತಪಡಿಸು ವಾಗ ಮೂಲಭಾಷೆಯಲ್ಲಿ ನಮೂನೆ ಪ್ರಕ್ರಿಯೆಗಳನ್ನು ಲೇಖಕ / ಭಾಷಣಗಾರ ವ್ಯಕ್ತಪಡಿಸಿರುವಂತೆ ಅರ್ಥಕೆಡದಂತೆ ತಿಳಿಸಬೇಕು.

ಮೂಲ ಭಾಷೆ / ಆಕರ ಗ್ರಂಥದ ಭಾಷೆ - ಭಾಷೆಯ ನಮೂನೆ ಯನ್ನು ಮೂಲಭಾಷೆಯಿಂದ ಭಾಷಾಂತರ ಮಾಡುವುದು.

ಮೂಲ ಗ್ರಂಥದ ವಾಕ್ಯ ಭಾಗ - ವಾಕ್ಯ ಭಾಗದ ಮಾದರಿಯಿಂದ ಭಾಷಾಂತರ ಮಾಡುವುದು.

ಭಾಷಾಂತರವಾಗುವ ಭಾಷೆ - ಯಾವ ಭಾಷೆಯಲ್ಲಿ ಭಾಷಾಂತರ ಮಾಡಲಾಗುತ್ತಿದೆ ಎಂಬುದು.

ಭಾಷಾಂತರವಾಗುತ್ತಿರುವ ಭಾಷೆಯ ವಾಕ್ಯಭಾಗ -ಮೂಲಭಾಷೆಯ ವಾಕ್ಯಭಾಗದಿಂದ ಒಬ್ಬ ಭಾಷಾಂತರಗಾರನು ಅಥವಾ ಭಾಷಾಂತರಗಾರಳು ಭಾಷಾಂತರ ಮಾಡುವಾಗ ಮೂಲ ಅರ್ಥ ಕೆಡದಂತೆ ಮಾಡಬೇಕು.

ಮೂಲ ಭಾಷೆ - ಸತ್ಯವೇದವನ್ನು ಪ್ರಾರಂಭದಲ್ಲಿ / ಮೊದಲು ಬರೆದ ಭಾಷೆ. ಹೊಸ ಒಡಂಬಡಿಕೆಯ ಮೂಲಭಾಷೆ ಗ್ರೀಕ್. ಹಳೆ ಒಡಂಬಡಿಕೆಯ ಬಹುಪಾಲು ಹಿಬ್ರೂ ಭಾಷೆಯಲ್ಲಿದೆ. ಹಾಗಾಗಿ ದಾನಿಯೇಲ ಮತ್ತು ಎಜ್ರಾ ಪುಸ್ತಕಗಳ ಕೆಲವು ಭಾಗಗಳ ಮೂಲಭಾಷೆ ಅರಾಮಿಕ್. ಮೂಲಭಾಷೆಯಲ್ಲಿರುವ ವಾಕ್ಯಭಾಗಗಳು ಯಾವಾಗಲೂ ನಿಖರವಾಗಿರುತ್ತದೆ., ಇದರಿಂದ ಭಾಷಾಂತರಿಸುವ ವಾಕ್ಯಭಾಗವು ನಿರ್ದಿಷ್ಟವಾಗಿರುತ್ತದೆ.

ವಿಸ್ತೃತ ಸಂಪರ್ಕವಿರುವ ಭಾಷೆ - ಒಂದು ಭಾಷೆಯನ್ನು ವಿಶಾಲವಾದ ಮತ್ತು ಹೆಚ್ಚು ಪ್ರದೇಶದಲ್ಲಿ ಮತ್ತು ಹೆಚ್ಚು ಜನರು ಮಾತನಾಡಲು ಮತ್ತು ಸಂವಹನಕ್ಕಾಗಿ ಬಳಸುವುದು. ಇಂತಹ ಭಾಷೆ ಅನೇಕರಿಗೆ ಮಾತೃ ಭಾಷೆ / ಮೊದಲ ಭಾಷೆ ಆಗಿರುವುದಿಲ್ಲ ಆದುದರಿಂದ ಆ ಪ್ರದೇಶದ ಜನರೊಂದಿಗೆ ಮಾತನಾಡಲು ತಮ್ಮ ಮಾತೃಭಾಷೆಯನ್ನು ಹೊರತುಪಡಿಸಿ ಆಯಾ ಪ್ರಾದೇಶಿಕ ಭಾಷೆಯನ್ನೇ ಉಪಯೋಗಿಸುತ್ತಾರೆ. ಕೆಲವರು ಇಂತಹ ಭಾಷೆಯನ್ನು ವ್ಯವಹಾರಿಕ ಭಾಷೆ ಎಂದು ಕರೆಯುತ್ತಾರೆ. ಸತ್ಯವೇದವನ್ನು ಭಾಷಾಂತರ ಮಾಡುವಾಗ ವ್ಯಾಪಕವಾಗಿ ಬಳಕೆಯಲ್ಲಿರುವ ಸಂಪರ್ಕಭಾಷೆಯನ್ನು ಮೂಲ ಭಾಷೆಯನ್ನಾಗಿ ಬಳಸಿಕೊಳ್ಳುತ್ತಾರೆ.

ಅಕ್ಷರಷಃ ಭಾಷಾಂತರ - ಆಕರ ಗ್ರಂಥದ ವಾಕ್ಯಭಾಗಗಳನ್ನು ಭಾಷಾಂತರ ಮಾಡುವ ಭಾಷೆ ಆಕರ ಗ್ರಂಥದಲ್ಲಿರುವ ಮಾದರಿಯನ್ನು / ನಮೂನೆಯನ್ನು ಯಥಾವತ್ತಾಗಿ ಭಾಷಾಂತರ ಮಾಡಬೇಕು.

ಅರ್ಥ ಆಧಾರಿತ ಭಾಷಾಂತರ (ಡೈನಮಿಕ್ ಭಾಷಾಂತರ) ಭಾಷಾಂತರ ಮಾಡುತ್ತಿರುವ ಭಾಷೆಗೆ ಆಕರ ಗ್ರಂಥದ ವಾಕ್ಯಭಾಗಗಳನ್ನು ಯಥಾವತ್ತಾಗಿ ಭಾಷಾಂತರಿಸುವಾಗ ನಮೂನೆ ಅಥವಾ ಮಾದರಿ ಸ್ವಲ್ಪ ಬದಲಾದರೂ ಅರ್ಥ ವ್ಯತ್ಯಾಸ ಆಗದಂತೆ ನೋಡಿಕೊಳ್ಳಬೇಕು.

Passage / ವಾಕ್ಯಭಾಗ -ಸತ್ಯವೇದದ ವಾಕ್ಯಭಾಗದಿಂದ ಆಯ್ದುಕೊಂಡ ಒಂದು ವಾಕ್ಯಭಾಗ. ಇದು ಒಂದು ಚಿಕ್ಕ ವಾಕ್ಯವಾಗಿರಬಹುದು. ಅನೇಕ ವಾಕ್ಯಗಳಿಂದ ಕೂಡಿದ ಒಂದು ಅಧ್ಯಾಯವಾಗಿರ ಬಹುದು.ಅಥವಾ ಒಂದು ಕತೆಯಾಗಿರಬಹುದು

Gateway Language / ಗೇಟ್ ವೇ ಭಾಷೆ -(GL) ಎಂಬುದು ವಿಶಾಲವಾಗಿ ಬಳಸುತ್ತಿರುವ ಸಂವಹನ, ಸಂಪರ್ಕ ಭಾಷೆ. ಇದನ್ನು ನಾವು ಎಲ್ಲಾ ಭಾಷಾಂತರ ನಿಯಮಗಳನ್ನು ಅಳವಡಿಸಿ ಮಾಡುವ ಭಾಷಾಂತರಗಳಲ್ಲಿ ಗುರುತಿಸಿ ಉಪಯೋಗಿಸುತ್ತೇವೆ. ಈ ‘ಗೇಟ್ ವೇ ಭಾಷೆ‘ ಎಲ್ಲಾ ಭಾಷೆಗಳಲ್ಲಿ ಚಿಕ್ಕ ಭಾಷೆಯಾಗಿದ್ದು ಪ್ರಪಂಚದ ಎಲ್ಲಾ ಭಾಷೆಗಳಲ್ಲೂ ವಿಷಯಗಳನ್ನು ಸುಲಭವಾಗಿ ಅರ್ಥಮಾಡಿಕೊಂಡು, ಬಳಸಲು ಅನುಕೂಲವಾಗಿ ಇರುವಂತದ್ದು.

ಇತರ ಭಾಷೆಗಳು - “ಇತರ ಭಾಷೆಗಳು“ ಎಂಬುದು ಪ್ರಪಂಚದಲ್ಲಿ ಬಳಕೆಯಾಗುತ್ತಿರುವ ಭಾಷೆ ಆದರೆ “ಗೇಟ್ ವೇ ಭಾಷೆಗಳಲ್ಲ.“ ನಾವು ಸತ್ಯವೇದದ ಭಾಷಾಂತರ ತಂತ್ರಗಳನ್ನು “ ಗೇಟ್ ವೇ ಭಾಷೆಯಲ್ಲೇ ಭಾಷಾಂತರಿಸುತ್ತೇವೆ. ಇದರಿಂದ ಜನರು ಈ ತಂತ್ರಗಳನ್ನು ಬಳಸಿ ಸತ್ಯವೇದವನ್ನು ಇತರ ಭಾಷೆಗಳಿಗೆ ಭಾಷಾಂತರಿಸುತ್ತಾರೆ.

End-user Bible - ಎಂಡ್ ಯುಸರ್ ಬೈಬಲ್ (ಬಳಕೆದಾರದ ಸತ್ಯವೇದ) ಜನರು ಭಾಷಾಂತರಿಸಿದ ಸತ್ಯವೇದ, ಇದು ತುಂಬಾ ಸರಳವಾಗಿದ್ದು ಭಾಷಾಂತರವಾದ ಭಾಷೆ ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತಾದ್ದು. ಇಂತಹ ಸತ್ಯವೇದವನ್ನೇ ಎಲ್ಲ ಸಭೆಗಳಲ್ಲಿ / ಚರ್ಚ್ ಗಳಲ್ಲಿ ಮತ್ತು ಮನೆಗಳಲ್ಲಿ ಬಳಸುತ್ತಾರೆ. ULB ಮತ್ತುUDB ಸತ್ಯವೇದಗಳನ್ನು ಭಾಷಾಂತರ ಸಾಧನಗಳನ್ನಾಗಿ ವಿಭಿನ್ನತೆಗಾಗಿ ಬಳಸುತ್ತಾರೆ. ಇವು ಯಾವುದೇ ಭಾಷೆಯಲ್ಲಿ ಸಹಜವಾಗಿ ಮತ್ತು UDB ನುಡಿಗಟ್ಟುಗಳನ್ನು, ಅಲಂಕಾರಗಳನ್ನು ಇತರ ಭಾಷಾಂತರಗಳಲ್ಲಿ ಸಹಜವಾಗಿ ಬಳಸುವಂತೆ ಇದರಲ್ಲಿ ಬಳಸುವುದನ್ನು ತಡೆಯುತ್ತದೆ. ಇಂತಹ ಭಾಷಾಂತರ ತಂತ್ರ / ಸಾಧನಗಳನ್ನು ಭಾಷಾಂತರಗಾರನು / ಳು ತನ್ನ ಭಾಷಾಂತರದಲ್ಲಿ ಬಳಸಿ end-user ಎಂಡ್ ಯೂಸರ್ ಸತ್ಯವೇದವನ್ನು ಸೃಷ್ಟಿಸಬಹುದು.

ಭಾಗವಹಿಸುವವ- ಒಂದು ವಾಕ್ಯದಲ್ಲಿ ಪಾಲುತೆಗೆದುಕೊಳ್ಳುವ ಅಥವಾ ಪಾತ್ರವಹಿಸುವವ. ಇದು ಒಬ್ಬ ಮಾಡುವ ಕೆಲಸವಿರಬಹುದು ಅಥವಾ ನಡೆಯುತ್ತಿರುವ ಕ್ರಿಯೆಯ ಪರಿಣಾಮವನ್ನು ಹೊಂದುವವನಾಗಿರಬೇಕು ಅಥವಾ ತಾನು ಆ ಕಾರ್ಯದಲ್ಲಿ ಪಾತ್ರವಹಿಸುತ್ತಿರಬಹುದು. ಈ “ಭಾಗವಹಿಸುವ“ ಎಂಬ ಪದ ಒಂದು ವಸ್ತುವಿನ ಬಗ್ಗೆಯೂ ಇರಬಹುದು ಇದು ವಾಕ್ಯದಲ್ಲಿ ನಡೆಯುವ ಕ್ರಿಯೆಯನ್ನು ನಿರ್ವಹಿಸುವ, ವೀಕ್ಷಿಸುವ ಪಾತ್ರನಿರ್ವಹಿಸಬಹುದು.

ಉದಾಹರಣೆಗೆ ಕೆಳಗಿನ ವಾಕ್ಯದಲ್ಲಿ ಅಡ್ಡಗೆರೆ ಹಾಕಿ ಗುರುತಿಸಿರುವ ವ್ಯಕ್ತಿಗಳನ್ನು / ಭಾಗವಹಿಸುವವರನ್ನು ಗಮನಿಸಿ ಜಾನ್and ಮೇರಿಒಂದುಪತ್ರವನ್ನು ಆಂಡ್ರ್ಯೂಗೆ ಕಳುಹಿಸಿದರು. ಕೆಲವೊಮ್ಮೆ ಭಾಗವಹಿಸುವವರ ಬಗ್ಗೆ ಹೇಳದಿದ್ದರೂ ಅವು ವಾಕ್ಯದಲ್ಲಿನ ಕ್ರಿಯೆಯನ್ನು ನಿರ್ವಹಿಸುವ ಭಾಗವಹಿಸುವವರೇ ಇರುತ್ತಾರೆ. ಭಾಗವಹಿಸುವವರು / ಳು ಎಂದು ತಿಳಿದುಬಿಟ್ಟರೆ ಉದಾಹರಣೆಗೆ ಕೆಳಗಿನ ವಾಕ್ಯದಲ್ಲಿ ಇಬ್ಬರು ವ್ಯಕ್ತಿಗಳ ಬಗ್ಗೆ ಮಾತ್ರ ತಿಳಿಸಿದೆ. ಆಂಡ್ರ್ಯೂಸ್ವೀಕರಿಸಿದರು ಒಂದುಪತ್ರವನ್ನು . ಜಾನ್ ಮತ್ತು ಮೇರಿ ತಿಳಿದಂತವರು ಎಂಬುದ ಸೂಚನೆ. ಕೆಲವು ಭಾಷೆಗಳಲ್ಲಿ ಹೀಗೆ ತಿಳಿದಂತವರು. ಇದ್ದರೆ ಅವರನ್ನು ನೇರವಾಗಿ ಪರಿಚಯಿಸಲಾಗುತ್ತದೆ.