translationCore-Create-BCS_.../translate/translate-retell/01.md

5.1 KiB

###ಪದಗಳ ಅರ್ಥವನ್ನು ಪುನಃ ಹೇಳುವುದು ಹೇಗೆ?

ಕೆಳಗೆ ಕೆಲವು ಸಲಹೆಗಳನ್ನು ಅನುಸರಿಸುವ ಕ್ರಮ ನೀಡಿದೆ. ಭಾಷಾಂತರ ಮಾಡುವವರು, ಸಹಜವಾದ, ಅರ್ಥವಾಗುವಂತಹ, ನಿರ್ದಿಷ್ಟವಾಗಿ ಭಾಷಾಂತರ ಮಾಡಲು ಸಹಾಯಮಾಡುವುದೇ ಈ ಸಲಹೆಗಳ ಉದ್ದೇಶವಾಗಿದೆ. ಸಾಮಾನ್ಯವಾಗಿ ಎಲ್ಲಾ ಭಾಷಾಂತರಗಾರರು ಮಾಡುವ ತಪ್ಪು ಏನೆಂದರೆ ಭಾಷಾಂತರ ಆಗುತ್ತಿರುವ ಭಾಷೆಯಲ್ಲಿನ ವಾಕ್ಯಭಾಗಗಳನ್ನು ಭಾಷಾಂತರ ಮಾಡುವಾಗ ಸಾಮಾನ್ಯವಾದ ರೂಪವನ್ನು ಉಪಯೋಗಿಸದೆ ಇರುವುದು. ಈ ಹಂತಗಳನ್ನು ಭಾಷಾಂತರ ಮಾಡುವಾಗ ಬಳಸಿದರೆ ಭಾಷಾಂತರಗಾರರು ಹೆಚ್ಚು ಸರಳವಾದ ಹಾಗೂ ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುವ ಭಾಷಾಂತರವನ್ನು ನೀಡಲು ಶಕ್ತನಾಗುತ್ತಾನೆ.

  1. ಮೊದಲು ಮೂಲಭಾಷೆಯಲ್ಲಿನ ವಾಕ್ಯಭಾಗಗಳನ್ನು ಚೆನ್ನಾಗಿ ಓದಿ ಈ ವಾಕ್ಯಭಾಗಗಳು ಒಂದು ಪ್ಯಾರವಾಗಿರಬಹುದು ಅಥವಾ ಕತೆಯಲ್ಲಿ ನಡೆದ ಸನ್ನಿವೇಶವಾಗಿರಬಹುದು ಅಥವಾ ಒಂದು ಇಡೀ ಭಾಗವಾಗಿರಬಹುದು. (ಸತ್ಯವೇದದ ಕೆಲವು ಕಡೆ ಒಂದು ಶೀರ್ಷಿಕೆಯಿಂದ ಇನ್ನೊಂದು ಶೀರ್ಷಿಕೆಯವರೆಗೆ ಇರುತ್ತದೆ). ಇನ್ನು ಕೆಲವು ಕ್ಲಿಷ್ಟವಾದ ವಾಕ್ಯಭಾಗದಲ್ಲಿ ಒಂದು ಅಥವಾ ಎರಡು ವಾಕ್ಯಗಳಾಗಿರಬಹುದು.

  2. ಮೂಲಭಾಷೆಯಲ್ಲಿನ ವಾಕ್ಯಭಾಗಗಳನ್ನು ನೋಡದೆ ಭಾಷಾಂತರ ಮಾಡುವ ಭಾಷೆಯಲ್ಲಿ ಪದಷಃ ವಾಕ್ಯಭಾಗವನ್ನು ಪುನರ್ ಉಚ್ಚರಿಸಬೇಕು. ಹೀಗೆ ಹೇಳುವ ಸಂದರ್ಭದಲ್ಲಿ ಕೆಲವು ವಿಷಯ ಮರೆತುಹೋದರೂ ಕೊನೆಯವರೆಗೂ ನಿಮಗೆ ನೆನಪಿರುವುದನ್ನು ಹೇಳಬಹುದು.

  3. ಮತ್ತೊಮ್ಮೆ ಮೂಲಭಾಷೆಯ ವಾಕ್ಯಭಾಗವನ್ನು ನೋಡಿರಿ. ಈಗ ಭಾಷಾಂತರ ಮಾಡುತ್ತಿರುವ ಭಾಷೆಯಲ್ಲಿ ಪುನಃ ಹೇಳಲು ಪ್ರಾರಂಭಿಸಿ.

  4. ಈಗ ಮತ್ತೊಮ್ಮೆ ಮೂಲಭಾಷೆಯ ವಾಕ್ಯಭಾಗವನ್ನು ಗಮನದಿಂದ ನೋಡಿ, ನೀವು ಹೇಳಲು ಮರೆತ ಪದಗಳನ್ನು, ವಾಕ್ಯಗಳನ್ನು ಪುನಃ ನೋಡಿ ಈಗ ಭಾಷಾಂತರ ಮಾಡುತ್ತಿರುವ ಭಾಷೆಯಲ್ಲಿ ನೆನಪಿನಲ್ಲಿರುವ ವಿಚಾರವನ್ನು ಪುನಃ ಹೇಳಿ.

  5. ನೀವು ನೆನಪಿಸಿಕೊಂಡು ಪುನಃ ಹೇಳಿದ ಇಡೀ ವಾಕ್ಯಭಾಗವನ್ನು ಬರೆಯಿರಿ.

  6. ಬರೆದಾದ ಮೇಲೆ ಮೂಲಭಾಷೆಯ ವಾಕ್ಯಭಾಗವನ್ನು ಪರಿಶೀಲಿಸಿ ಯಾವುದಾದರೂ ಅಂಶಗಳನ್ನು ಬರೆಯಲು ಮರೆತಿರುವಿರಾ ಎಂದು ಪರಿಶೀಲಿಸಿ ಮರೆತ ವಿಚಾರಗಳು ವಾಕ್ಯದ ಸೂಕ್ತವಾದ ಸ್ಥಳದಲ್ಲಿ ಸರಳವಾಗಿರುವಂತೆ ಸೇರಿಸಿ.

  7. ನಿಮಗೇನಾದರೂ ಮೂಲಭಾಷೆಯಲ್ಲಿ ಅರ್ಥವಾಗದಿದ್ದರೆ ಭಾಷಾಂತರ ಮಾಡುತ್ತಿರುವ ಭಾಷೆಯಲ್ಲಿ ಅದನ್ನು ಹಾಗೆಯೇ ಬರೆದು[ಅರ್ಥವಾಗಲಿಲ್ಲ] ಎಂದು ಬರೆಯಿರಿ ಮತ್ತು ಉಳಿದ ವಾಕ್ಯಭಾಗವನ್ನು ಬರೆಯಲು ತೊಡಗಿ.

  8. ಈಗ ನೀವು ಬರೆದದ್ದನ್ನು ಓದಿ. ನೀವು ಬರೆದಿರುವುದು ನಿಮಗೆ ಸರಿಯಾಗಿ ಅರ್ಥವಾಗುತ್ತದೋ ಇಲ್ಲವೋ ಓದಿ ನೋಡಿ. ಯಾವ ವಾಕ್ಯಗಳನ್ನು ಉತ್ತಮಪಡಿಸಿ ಬರೆಯಬೇಕೆಂದು ಗುರುತಿಸಿ.

  9. ಮುಂದುವರೆದು ಮುಂದಿನ ಭಾಗವನ್ನು ನೋಡಿ. ಮೂಲಭಾಷೆಯಲ್ಲಿ ಮತ್ತೊಮ್ಮೆ ಓದಿ. 2 ಹಂತದಿಂದ ೮ ನೆ ಯ ಹಂತದ ವರೆಗಿನ ಸಲಹೆಗಳನ್ನು ಸರಿಯಾದ ರೀತಿಯಲ್ಲಿ ಪಾಲಿಸಿ.

ಕೃತಜ್ಞತೆ: ಅನುಮತಿಯಿಂದ ಬಳಸುವುದು.© 2013, SIL International, Sharing Our Native Culture, p. 59.